For Quick Alerts
ALLOW NOTIFICATIONS  
For Daily Alerts

  ತಾನು ಕಷ್ಟದಲ್ಲಿದ್ದರೂ, ಇತರರಿಗೆ ಸಹಾಯ ಮಾಡುವ ರಾಶಿಯವರು...

  By Manohar Shetty
  |

  ಸಾಮಾನ್ಯವಾಗಿ ವ್ಯಕ್ತಿ ತಾನು ಅನುಭವಿಸಿದ ನೋವು ನಲಿವುಗಳಿಂದ ಜೀವನದ ಪಾಠವನ್ನು ಅರಿಯುತ್ತಾನೆ. ಸೂಕ್ತ ಅನುಭವದ ಹಿನ್ನೆಲೆಯಲ್ಲಿಯೇ ಇತರರಿಗೂ ಸಹಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾನೆ. ಆದರೆ ಕೆಲವು ವ್ಯಕ್ತಿಗಳು ಒಬ್ಬ ವ್ಯಕ್ತಿಗೆ ಸಹಾಯ ಮಾಡಬೇಕು ಎಂದಾದರೆ ಅವರಿಂದ ಏನು ಲಾಭ? ಎನ್ನುವುದನ್ನು ಯೋಚಿಸುತ್ತಾರೆ. ಹಾಗೊಮ್ಮೆ ವ್ಯಕ್ತಿಯಿಂದ ಯಾವುದೇ ಪ್ರಯೋಜನ ದೊರೆಯುವುದಿಲ್ಲ ಎಂದಾದಾಗ ಅವರಿಗೆ ಸಹಾಯ ಮಾಡಲು ನಿರಾಕರಿಸುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಜೊತೆಗೆ ತಮ್ಮ ಸಮಯವನ್ನು ಇನ್ನೊಬರಿಗಾಗಿ ವ್ಯಯಿಸಲು ಇಷ್ಟಪಡುವುದಿಲ್ಲ.

  ಕೆಲವರು ಮಾತ್ರ ತಮ್ಮ ಸ್ವಭಾವದಲ್ಲಿ ಅತ್ಯುತ್ತಮ ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ. ತಮ್ಮ ಸ್ಥಿತಿ ಏನೇ ಆಗಿದ್ದರೂ ಸಹ ಇತರರಿಗೆ ಸಹಾಯ ಮಾಡಲು ಸದಾ ಮುಂದಾಗಿರುತ್ತಾರೆ. ತಮ್ಮಲ್ಲಿ ಸಹಾಯ ಕೇಳಿ ಬಂದವರಿಗೆ ಅಥವಾ ಯಾವುದೋ ಕೆಲಸವನ್ನು ಮಾಡಿಕೊಡಬೇಕು ಎಂದು ಕೇಳಿಕೊಂಡವರಿಗೆ ಅವರು "ಇಲ್ಲಾ" ಎನ್ನುವ ಶಬ್ದವನ್ನು ಹೇಳುವುದೇ ಇಲ್ಲ. ಇಂತಹವರಿಂದಲೇ ಇಂದಿಗೂ ಸಮಾಜದಲ್ಲಿ ಒಳ್ಳೆಯ ತನ ಇದೆ ಎಂದರೆ ತಪ್ಪಾಗಲಾರದು. ಇಂತಹ ಸ್ವಭಾವವು ವ್ಯಕ್ತಿಯಲ್ಲಿ ಅಡಗಿರಲು ಕಾರಣ ರಾಶಿಚಕ್ರ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ಕೆಲವು ಸೀಮಿತ ರಾಶಿಚಕ್ರದವರು ಮಾತ್ರ ಇತರರ ಅನುಕೂಲಕ್ಕೆ ಅಥವಾ ಸಹಾಯಕ್ಕೆ ನಿಲ್ಲುತ್ತಾರೆ ಎಂದು ಹೇಳಲಾಗುವುದು. ನಿಮಗೂ ನಿಮ್ಮ ರಾಶಿಚಕ್ರದ ಬಗ್ಗೆ ತಿಳಿದುಕೊಳ್ಳಬೇಕು ಅಥವಾ ಸಹಾಯಕರ ಪಟ್ಟಿಯಲ್ಲಿ ನೀವು ನಿಲ್ಲುತ್ತೀರಾ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಓದಿ... 

  ಮೀನ

  ಮೀನ

  ಈ ರಾಶಿಯ ವ್ಯಕ್ತಿಗಳು ಅತ್ಯುತ್ತಮ ಸ್ವಭಾವವನ್ನು ಹೊಂದಿದವರು ಎಂದು ಹೇಳಬಹುದು. ತಮಗೆ ತಿಳಿದಿರಲಿ ಅಥವಾ ತಿಳಿಯದೇ ಇರುವ ವ್ಯಕ್ತಿಗಳಾಗಿರಲಿ ಎಲ್ಲರಿಗೂ ಸದಾ ಸಹಾಯ ಮಾಡಲು ಮುಂದಾಗಿರುತ್ತಾರೆ ಎನ್ನಲಾಗುವುದು. ಇವರು ಅಸಹಾಯಕ ಸ್ಥಿತಿಯಲ್ಲಿ ಇರುವವರಿಗೆ ಸಹಾಯ ಮಾಡದೆ ಇದ್ದರೆ ಅದು ಅಪರಾಧವಾಗುತ್ತದೆ ಎಂದು ಭಾವಿಸುತ್ತಾರೆ. ಇವರು ತಾವು ಮಾಡುವ ಸಹಾಯದಿಂದ ಯಾವುದೇ ರೀತಿಯ ಲಾಭವನ್ನು ಬಯಸುವುದಿಲ್ಲ. ಸಹಾಯ ಕೇಳಿ ಬಂದವರಿಗೆ ಇಲ್ಲ ಎನ್ನುವ ಶಬ್ದವನ್ನು ಸಹ ಇವರು ಹೇಳುವುದಿಲ್ಲ ಎನ್ನಲಾಗುವುದು.

  MostRead:ಇದು ಕೆಮ್ಮಿನ ಔಷಧ- ಒಂದೇ ದಿನದಲ್ಲಿ ಕೆಮ್ಮು ಮಂಗಮಾಯ!

  ಕನ್ಯಾ

  ಕನ್ಯಾ

  ಈ ರಾಶಿಚಕ್ರದವರು ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಇವರನ್ನು ಸಹಾಯ ಮಾಡುವ ಅತ್ಯುತ್ತಮ ಗೆಳೆಯ ಎಂದು ಸಹ ಪರಿಗಣಿಸಬಹುದು. ಇವರು ಇತರರಿಗೆ ಒಳ್ಳೆತನದಿಂದಲೇ ಲಾಭವನ್ನು ತಂದುಕೊಡಲು ಮುಂದಾಗುತ್ತಾರೆ. ಇತರರಿಗೆ ಸಹಾಯ ಮಾಡುವುದು ಎಂದರೆ ಇವರಿಗೊಂದು ಸಂತೋಷದ ವಿಚಾರವಾಗಿರುವುದು. ಹಾಗಾಗಿಯೇ ಈ ರಾಶಿಚಕ್ರದವರು ಮೂರನೇ ವ್ಯಕ್ತಿಗೂ ಸಹ ಅತ್ಯುತ್ತಮ ಸ್ನೇಹಿತನಾಗಬಹುದು. ಇವರು ತಾವು ಕಷ್ಟದಲ್ಲಿದ್ದರೂ ಸಹ ಇತರರಿಗೆ ಸಹಾಯ ಮಾಡಲು ಮುಂದಾಗುವ ಉತ್ತಮ ಗುಣವನ್ನು ಹೊಂದಿರುತ್ತಾರೆ.

  ಕರ್ಕ

  ಕರ್ಕ

  ಈ ರಾಶಿಚಕ್ರದವರು ತಮ್ಮ ಸುತ್ತಲಲ್ಲಿ ಇರುವ ವ್ಯಕ್ತಿಗಳಿಗೆ ಸದಾ ಒಳಿತನ್ನು ಬಯಸುತ್ತಾರೆ. ಕೆಲವರು ಇವರ ಒಳ್ಳೆತನವನ್ನು ತಮ್ಮ ಲಾಭಕ್ಕೆ ಅಥವಾ ಸ್ವಾರ್ಥಕ್ಕೆ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ. ಈ ರಾಶಿಚಕ್ರದವರು ಅತ್ಯಂತ ಸಂವೇದನಾಶೀಲರು ಎಂದು ಹೇಳಬಹುದು. ಇವರ ಈ ಗುಣವೇ ಇತರರಿಗೆ ಅಧಿಕ ಪ್ರಮಾಣದಲ್ಲಿ ಸಹಾಯ ಮಾಡಲು ಸಹಕರಿಸುವುದು. ಇತರರಿಗೆ ಸಹಾಯ ಮಾಡುವುದನ್ನು ಇವರು ದೈನಂದಿನ ದಿನಚರಿಯಂತೆ ಕಾಣುವರು.

  ಧನು

  ಧನು

  ಈ ರಾಶಿಯ ವ್ಯಕ್ತಿಗಳು ತಮ್ಮ ಸುತ್ತಲಲ್ಲಿ ಇರುವ ವ್ಯಕ್ತಿಗಳನ್ನು ಅತ್ಯಂತ ಖುಷಿಯಲ್ಲಿ ಇಡಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಇವರು ತಮ್ಮ ವೈಯಕ್ತಿಕ ವಿಚಾರಗಳನ್ನು ತ್ಯಾಗ ಮಾಡಲು ಸಿದ್ಧರಾಗುವರು. ನೀವು ಧನು ರಾಶಿವರ ಸ್ನೇಹಿತರು ಅಥವಾ ನಿಮ್ಮ ಮನೆಯಲ್ಲಿ ಧನು ರಾಶಿವರು ಇದ್ದಾರೆ ಎಂದರೆ ನೀವು ಅತ್ಯಂತ ಅದೃಷ್ಟವಂತರು ಎಂದು ತಿಳಿದುಕೊಳ್ಳಬಹುದು. ಅನೇಕರು ಅಗತ್ಯ ವಿದ್ದಾಗ ಇವರಿಗೆ ಅವಲಂಬಿತರಾಗಿ ಬದುಕುವರು. ಇತರರಿಗಾಗಿ ಕೆಲಸ ಮಾಡುವ ಅಥವಾ ಸಹಾಯ ಮಾಡುವ ಪರಿಯು ಧನು ರಾಶಿಯ ವ್ಯಕ್ತಿಗಳಿಗೆ ಕೆಲವೊಮ್ಮೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸವನ್ನುಂಟುಮಾಡುವುದು.

  MOST READ:ಬೆಳಗ್ಗೆ ನೆನೆಸಿಟ್ಟ ಒಣದ್ರಾಕ್ಷಿಯನ್ನು ಸೇವಿಸಿದರೆ-ಬರೋಬ್ಬರಿ 10 ಆರೋಗ್ಯ ಪ್ರಯೋಜನಗಳಿವೆ

  ತುಲಾ

  ತುಲಾ

  ತುಲಾ ರಾಶಿಯಲ್ಲಿ ಜನಿಸಿದ ಹುಡುಗ ಅಥವಾ ಹುಡುಗಿ ಯಾರೇ ಇರಲಿ ಅವರು ಉದಾರ ಗುಣವನ್ನು ಹೊಂದಿದವರಾಗಿರುತ್ತಾರೆ. ಸದಾ ಸಮತೋಲನದ ಜೀವನವನ್ನು ನಿರ್ವಹಿಸುವ ಇವರು ಸಿಹಿ ಸ್ವಭಾವವನ್ನು ಹೊಂದಿರುತ್ತಾರೆ. ಅಡಚಣೆಯಲ್ಲಿರುವವರಿಗೆ ಸಾಕಷ್ಟು ಸಹಾಯ ಮಾಡುವ ಮೂಲಕ ಅತ್ಯುತ್ತಮ ಸ್ನೇಹಿತರೂ ಆಗಬಹುದು ಇವರು. ತಮ್ಮ ಸುತ್ತಲಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗುವರು. ಇವರು ತಾವು ಯಾವುದೇ ವೈಯಕ್ತಿಕ ಸಮಸ್ಯೆಯನ್ನು ಹೊಂದಿದ್ದರೂ ಸಹ, ಸಹಾಯ ಕೇಳಿ ಬಂದವರಿಗೆ ಯಾವುದೇ ಬಗೆಯ ಚಿಂತನೆ ನಡೆಸದೆ ಸಹಾಯ ಮಾಡಲು ಮುಂದಾಗುತ್ತಾರೆ. ಜೊತೆಗೆ ಅವರ ಕೆಲಸಗಳನ್ನು ಪೂರೈಸುತ್ತಾರೆ.

  English summary

  Zodiac Signs That Cannot Say a No

  As zodiac sign of a person can never be changed, his/her original nature remains unaltered as well. Some zodiac signs specifically make people too nice for others, for which these people can never say a NO to, even if they realize that they are being taken for granted. The date of birth of a person decides his/her zodiac sign and thus it is better to simply have some knowledge about the zodiac signs that produce the most sweet-natured people in this world.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more