Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ಖುಷಿಯಾಗಿಲ್ಲದೇ ಇರಲು ಕಾರಣವನ್ನು ನಿಮ್ಮ ರಾಶಿಯೇ ತಿಳಿಸುತ್ತೆ
ಪ್ರತಿ ರಾಶಿಯವರಿಗೂ ತಮ್ಮ ಬೇಸರಕ್ಕೆ ಒಂದೊಂದು ಕಾರಣವಿರುತ್ತೆ. ಜೋತಿಷ್ಯ ಶಾಸ್ತ್ರಜ್ಞರು ಹೇಳುವ ಪ್ರಕಾರ ತನ್ನದೇ ಆದ ವಿಶಿಷ್ಟ ಕಾರಣಗಳಿಂದಾಗಿ ಪ್ರತಿ ರಾಶಿಯವರಿಗೂ ಬೇಸರ ಕಾಡುತ್ತೆ. ಉದಾಹರಣೆಗೆ ಮೇಷ ರಾಶಿಯವರು ಯಾವಾಗಲೂ ಎಷ್ಟು ಹೇಳಿದರೂ ಬದಲಾಗದ ವ್ಯಕ್ತಿಗಳಿಂದಾಗಿ ಹಿಂಸೆಗೊಳಗಾಗುತ್ತಾರೆ ಮತ್ತು ಬೇಸರ ಪಟ್ಟುಕೊಳ್ಳುತ್ತಾರೆ.
ಯಾರಾದರೂ ಅವರನ್ನು ಯಾವುದೋ ಕಾರಣಕ್ಕೆ ಕ್ಷಮಿಸದೇ ಇದ್ದಲ್ಲಿ ಇವರು ಬೇಸರಿಸಿಕೊಳ್ಳುತ್ತಾರೆ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ. ಹೀಗೆ ಪ್ರತಿಯೊಬ್ಬರು ಬೇಸರಿಸಿಕೊಳ್ಳುವುದು ಮತ್ತು ಸಂತೋಷದಿಂದ ಇರುವುದಕ್ಕೆ ಅವರ ರಾಶಿಫಲವೇ ಕಾರಣವಾಗುತ್ತೆ. ಆ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ...

ಮೇಷ – ಮಾರ್ಚ್ 21 –ಎಪ್ರಿಲ್ 19
ಯಾರ ಬದಲಾಗುವುದಿಲ್ಲವೋ ಅಂತಹ ವ್ಯಕ್ತಿಗಳಿಂದಾಗಿ ಮೇಷ ರಾಶಿಯವರು ಕಿರಿಕಿರಿಗೆ ಒಳಗಾಗುತ್ತಾರೆ ಮತ್ತು ಅಂತವರಿಂದಾಗಿ ಅಥವಾ ಇತರರಿಂದಾಗಿ ಕ್ಷಮೆ ಇಲ್ಲದಂತಾದಾಗ ಮೇಷ ರಾಶಿಯವರಿಗೆ ಸಿಕ್ಕಾಪಟ್ಟೆ ಬೇಸರವಾಗುತ್ತೆ ಮತ್ತು ತಮ್ಮನ್ನ ತಾವು ಒತ್ತಡಕ್ಕೆ ನೂಕಿಕೊಳ್ಳುತ್ತಾರೆ. ಇದರಿಂದ ಹೊರಬರಲು ಮೇಷ ರಾಶಿಯವರು ಪ್ರಯತ್ನಿಸಬೇಕಾಗುತ್ತದೆ. ಆದರೆ ಮತ್ತೆ ಸಮತೋಲನ ಕಾಯ್ದುಕೊಳ್ಳುವ ಸಾಮರ್ಥ್ಯ ಮೇಷ ರಾಶಿಯವರಿಗೆ ಇದೆ

ವೃಷಭ – ಎಪ್ರಿಲ್ 20 – ಮೇ 20
ವೃಷಭ ರಾಶಿಯವರು ವರ್ತಮಾನದಲ್ಲಿ ಬದುಕುವುದಕ್ಕಿಂತ ಹೆಚ್ಚಾಗಿ ಭೂತ ಕಾಲದಲ್ಲಿ ಬದುಕುವುದೇ ಹೆಚ್ಚು.ಇಂದು ನೀವು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೀರೋ ಅದಕ್ಕೆ ಭೂತಕಾಲದಲ್ಲಿ ನಿಮ್ಮ ಜೀವನದಲ್ಲಿ ಬಂದು ಹೋದ ಯಾವುದೋ ವ್ಯಕ್ತಿ ಕಾರಣವಾಗಿರಬಹುದು. ಆದರೆ ಅವರನ್ನೇ ನೆನದು , ಅವರನ್ನು ಮಿಸ್ ಮಾಡಿಕೊಂಡಂತೆ ಭಾವಿಸಿ ಯಾವಾಗಲೂ ನೊಂದುಕೊಳ್ಳುವುದು ಈ ರಾಶಿಯವರ ಸ್ವಭಾವ.

ಮಿಥುನ-ಮೇ 21 ಜೂನ್ 20
ಜೀವಂತವಾಗಿ ತಿನ್ನುವಿಕೆ ಎಂದು ಹೇಳುತ್ತೀವಲ್ಲ ಅಂತಹ ಭಾವನೆ ಇವರದ್ದು.ಖುಷಿ ಅನ್ನುವುದು ಬಹುಕಾಲದವರೆಗೆ ಇರುವುದು ಎಂದು ಭಾವಿಸುತ್ತಾರೆ. ಏನಾದ್ರೂ ಊಹಿಸಲು ಅಸಾಧ್ಯವಾದದ್ದು ಆಗಬೇಕೆಂದು ಬಯಸುವವರು ಇವರು. ಇದೇ ಕಾರಣಕ್ಕೆ ಯಾವಾಗಲೂ ಸಂತೋಷವನ್ನು ನಿಮಗೆ ನೀವೇ ಕಳೆದುಕೊಂಡು ಬಿಡುತ್ತೀರಿ. ಕಷ್ಟವನ್ನು ಮೊದಲೇ ಯೋಚಿಸುವ ಸ್ವಭಾವ ನಿಮ್ಮದು ಹಾಗಾಗಿ ಆದಷ್ಟು ನೀವು ಸಂತೋಷವಾಗಿಯೇ ಇರುತ್ತೀರಿ. ವರ್ತಮಾನದಲ್ಲಿರುವುದಕ್ಕಿಂತ ಭವಿಷ್ಯವನ್ನು ಹೆಚ್ಚು ಯೋಚಿಸುವವರು ನೀವು.

ಕರ್ಕಾಟಕ- ಜೂನ್ 21- ಜುಲೈ 22
ಬೇರೆಯವರ ಬಗೆಗಿನ ಕಾಳಜಿಯೇ ಹೆಚ್ಚು. ನಿಮ್ಮ ಬಗ್ಗೆ ನೀವು ಕಾಳಜಿ ತೆಗೆದುಕೊಳ್ಳುವುದು ಬಹಳ ವಿರಳ. ನಿಮ್ಮ ಅಗತ್ಯವನ್ನೇ ನೀವು ಮರೆತು ನಿಮ್ಮವರಿಗಾಗಿ ನೀವು ಬದುಕಿ ಬಿಡುತ್ತೀರಿ. ಆದರೆ ನೀವು ಅರ್ಥೈಸಿಕೊಳ್ಳಬೇಕು ಯಾವುದು ಮೊದಲು ಯಾವುದು ನಂತ್ರ ಅನ್ನುವುದರ ಬಗ್ಗೆ. ನೀವು ನಿಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಶುರು ಮಾಡಿದರೆ ಸುಖವಾಗಿರಲು ಸಾಧ್ಯ. ಬೇರೆಯವರದ್ದನ್ನೇ ಯೋಚಿಸಿ ನಿಮ್ಮ ತಲೆ ಹನ್ನೆರಡಾಣೆ ಆಗಿ ಸಂತೋಷ ಕಳೆದುಕೊಳ್ಳುವಂತಾಗಿರುತ್ತೆ ಅನ್ನೋದು ನೆನಪಿರಲಿ

ಸಿಂಹ - ಜುಲೈ 23- ಅಗಸ್ಟ್ 23
ನಿಮ್ಮ ತಪ್ಪಿನಿಂದಲೇ ಎಲ್ಲವೂ ಎಡವಟ್ಟಾಗಿರುವುದು. ಎಲ್ಲವೂ ಸಮತೋಲನ ಕಳೆದುಕೊಂಡಿರುವುದು, ನೀವೋಬ್ಬರು ಸರಿಯಾಗಿ ಇದ್ದಿದ್ದರೆ ಎಲ್ಲವೂ ಸರಿಯಾಗಿ ಇರುತ್ತಿತ್ತು ಅಂತ ಭಾವಿಸುವವರು ಸಿಂಹ ರಾಶಿಯವರು. ನಿಮ್ಮ ತಪ್ಪೇ ಅಲ್ಲದಿದ್ದರೂ ನಿಮ್ಮ ಭಾವನೆ ನಿಮ್ಮನ್ನ ದೋಷಿಯನ್ನಾಗಿಸುತ್ತೆ ಮತ್ತು ಬೇಸರಕ್ಕೆ ಕಾರಣವಾಗುವಂತೆ ಮಾಡುತ್ತೆ

ಕನ್ಯಾ- ಅಗಸ್ಟ್ 24- ಸೆಪ್ಟೆಂಬರ್ 23
ಎಲ್ಲದರಲ್ಲೂ ಪರಿಪೂರ್ಣತೆ ಬಯಸುವವರು ಇವರು. ಹಾಗಾಗಿ ಅವರ ಲಿಮಿಟ್ಸ್ ಎಷ್ಟು ಸಾಧ್ಯವೋ ಅಷ್ಟು ಪರ್ಫೆಕ್ಟ್ ಆಗಿರಲು ಪ್ರಯತ್ನಸುತ್ತಲೇ ಇರುತ್ತಾರೆ. ಹೆಚ್ಚು ಒಳ್ಳೆಯದಾಗಲೂ ಏನಾದರೂ ಮಾಡಬೇಕು ಅನ್ನುವ ತುಡಿತವೇ ಹೆಚ್ಚಿರುತ್ತೆ. ಅದು ಸಾಧ್ಯವಾಗದೇ ಇದ್ದಲ್ಲಿ, ಇವರು ಬಯಸಿದ ಲೆವೆಲ್ ಗೆ ಇವರಿಗೆ ತಲುಪಲು ಸಾಧ್ಯವಾಗದೇ ಇದ್ದಲ್ಲಿ ನೊಂದುಕೊಳ್ಳುವ ಸ್ವಭಾವ ಕನ್ಯಾ ರಾಶಿಯವರದ್ದು.

ತುಲಾ -ಸೆಪ್ಟೆಂಬರ್ 24- ಅಕ್ಟೋಬರ್ 23
ಪ್ರಸಿದ್ಧಿ ಹೊಂದಿದ, ಇವರಿಗಿಂತ ಮೇಲಿನವರನ್ನು ನೋಡುವುದೇ ಇವರ ಸ್ವಭಾವ. ಬೇರೆಯವರನ್ನು ನೋಡಿ ಅವರಂತೆ ನಾನಾಗಲೂ ಸಾಧ್ಯವಾಗಲಿಲ್ಲವಲ್ಲ ಅನ್ನುವುದೇ ಇವರ ಕೊರಗು,.ಒಬ್ಬೊಬ್ಬರದ್ದು ಒಂದೊಂದು ದಾರಿ. ಆದರೆ ಅವರು ಹೋದ ದಾರಿಯೇ ಸರಿ, ನಾನು ಹೋದ ದಾರಿ ತಪ್ಪು ಎಂದು ಭಾವಿಸಿ ಯಾವಾಗಲೂ ಕೊರಗುತ್ತಲೇ ಇರುವ ಜಾಯಮಾನದವರು ತುಲಾ ರಾಶಿಯವರು. ಒಮ್ಮೆ ನೀವೇ ಯೋಚಿಸಿ ಬೇರೆಯವರ ಖುಷಿಯನ್ನು ನೋಡುತ್ತಲೇ ನಿಮ್ಮ ಎಷ್ಟು ಖುಷಿಯನ್ನು ಹಾಳು ಮಾಡಿಕೊಂಡಿದ್ದೀರಿ ಎಂದು.

ವೃಷ್ಚಿಕ-ಅಕ್ಟೋಬರ್ 24- ನವೆಂಬರ್ 22
ಒಂದೇ ಬಟ್ಟಲಿಗೆ ಎಲ್ಲವನ್ನೂ ಸುರಿದುಕೊಳ್ಳುವ ಪ್ರವೃತ್ತಿ ವೃಶ್ಚಿಕ ರಾಶಿಯವರದ್ದು. ಇರೋದು ಎರಡು ಕೈ ವರ್ತಿಸೋದು 10 ಕೈಗಳಿರುವವರಂತೆ ಹಾಗೆ ಯಾವಾಗಲೂ ಮಲ್ಟಿ ಟಾಸ್ಟ್ಕಿಂಗ್ ಮಾಡುತ್ತಲೇ ಇರುತ್ತಾರೆ. ಯಾವಾಗ ಅದು ಮಾಡಲು ಅಶಕ್ತರಾಗುತ್ತಾರೋ ಆಗ ಇವರ ಸಂತೋಷ ಟುಸ್ ಪಟಾಕಿಯಂತಾಗುತ್ತೆ. ಒಂದೇ ಸಮಯಕ್ಕೆ ಹತ್ತು ಹಲವು ವಿಚಾರಗಳನ್ನು ಯೋಚಿಸುತ್ತಲೇ ಇರುವುದು ಮತ್ತು ಅದರ ಬಗ್ಗೆ ಚರ್ಚಿಸುತ್ತಲೇ ಇರುವ ಗುಣ ಇವರದ್ದು. ಇವರ ಅಸಂತೋಷಕ್ಕೆ ಕಾರಣವಾಗುವುದೇ ಇವರ ಮಲ್ಟಿ ಟಾಸ್ಟ್ಕಿಂಗ್ ಪ್ರವೃತ್ತಿ.

ಧನು -ನವೆಂಬರ್ 23 -ಡಿಸೆಂಬರ್ 22
ನೀವು ನಿಮ್ಮ ಜೀವನದಲ್ಲಿ ಏನು ಮಾಡಬೇಕು ಅನ್ನುವ ಗುರಿ ಹೊಂದಿರದೇ ಇರುವುದೇ ನಿಮ್ಮ ಬಹುದೊಡ್ಡ ಸಮಸ್ಯೆ.,ಲಕ್ಷಕ್ಕೂ ಅಧಿಕ ಪ್ರಶ್ನೆಗಳು ನಿಮ್ಮ ತಲೆಯೊಳಗೆ ಗಿರಕಿ ಹೊಡೆಯುತ್ತಿರುತ್ತೆ ಮತ್ತು ಅದರ ಉತ್ತರಕ್ಕಾಗಿ ನೀವು ಹಂಬಲಿಸುತ್ತಿರುತ್ತೀರಿ. ಆದರೂ ನೆನಪಿರಲಿ ಸರಿಯಾದ ಮಾರ್ಗವೇ ಗೊತ್ತಿಲ್ಲದೆ ನಡೆದರೆ ಸುಮ್ಮನೆ ಸಾಗುತ್ತಿರಬೇಕಾಗುತ್ತೆ. ಇದೇ ಕಾರಣಕ್ಕೆ ನೀವು ಬೇಸರಿಸಿಕೊಳ್ಳಬೇಕಾಗುತ್ತದೆ.

ಮಕರ -ಡಿಸೆಂಬರ್ 23- ಜನವರಿ 20
ಹೆಚ್ಚಿನ ಸಂದರ್ಬದಲ್ಲಿ ಏಕಾಂಗಿ ಭಾವನೆ ಇವರನ್ನು ಕಾಡುತ್ತೆ.ಭೂತಕಾಲದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹೆಣಗಾಡಿರುತ್ತೀರಿ, ಅದೆಷ್ಟೋ ಜನರಿಗೆ ದಾರಿದೀಪವೂ ಆಗಿರುತ್ತೀರಿ. ಆದರೂ ಅವರ್ಯಾರೂ ನಿಮ್ಮನ್ನು ನೆನೆಯುವುದಿಲ್ಲ ಅನ್ನುವುದು ನಿಮ್ಮ ಕೊರಗು., ನಿಮಗೆ ಪ್ರೀತಿಯ ಅಗತ್ಯವಿದೆ ಆದರೆ ಕೊಡುವವರು ಯಾರು ಅನ್ನುವುದೇ ನಿಮ್ಮ ಪ್ರಶ್ನೆ. ಈ ಪ್ರಶ್ನೆಯ ಉತ್ತರವೇ ನಿಮ್ಮ ಕೊರಗು.ಭಯದಿಂದಲೇ ನಿಮ್ಮನ್ನು ನೀವು ಅಡಗಿಸಿಟ್ಟುಕೊಳ್ಳುವುದಕ್ಕಿಂತ ನಿಮ್ಮನ್ನು ನೀವು ಹೊರ ಜಗತ್ತಿಗೆ ಗುರುತಿಸಿಕೊಳ್ಳುವಂತೆ ಮಾಡಿಕೊಳ್ಳುವುದು ಸೂಕ್ತ..

ಕುಂಭ -ಜನವರಿ20- ಫೆಬ್ರವರಿ 18
ಹೊರ ಪ್ರಪಂಚದ ಯಾವುದೋ ಪಬ್ಲಿಸಿಟಿ ನಿಮ್ಮನ್ನ ಉತ್ತುಂಗಕ್ಕೆ ಕೊಂಡೊಯ್ಯುವುದಿಲ್ಲ. ನೀವು ನಿಮ್ಮೊಳಗೆ ಸಂತೋಷವನ್ನು ಕಂಡುಕೊಳ್ಳಬೇಕು. ಸಂತೋಷವನ್ನು ಇನ್ನೊಂದರಲ್ಲಿ ಹುಡುಕಲು ಹೊರಟರೆ ಸಂತೋಷ ಖಂಡಿತ ಸಿಗುವುದಿಲ್ಲ. ಕುಂಭ ರಾಶಿಯವರದ್ದು ಅದೇ ಪರಿಸ್ಥಿತಿ. ಸಂತೋಷಕ್ಕಾಗಿ ಊರೂರು ಅಲೆಯುತ್ತಾರೆ. ಕಂಡಕಂಡಲ್ಲಿ ಹುಡುಕುತ್ತಾರೆ. ಅವರಲ್ಲೇ ಇರುವ ಸಂತೋಷವನ್ನು ಮರೆತು ಬಿಡುತ್ತಾರೆ.

ಮೀನ- ಫೆಬ್ರವರಿ 19 –ಮಾರ್ಚ್ 20
ಹೈಸ್ಕೂಲ್ ನಿಂದ ಹಲವು ಸ್ನೇಹಿತರನ್ನು ಕಳೆದುಕೊಂಡು ಬಿಟ್ಟಿದ್ದೇನೆ ಅನ್ನೋದು ಇವರ ಕೊರಗು,. ಆದರೆ ನಿಮಗೆ ವಯಸ್ಸಾದಂತೆ ನಿಮ್ಮ ಗೆಳೆಯರು ಬ್ಯೂಸಿಯಾಗುತ್ತಾರೆ ಮತ್ತು ನೀವು ಏಕಾಂಗಿತನವನ್ನು ಎದುರಿಸುವಂತಾಗುತ್ತೆ. ಇದೇ ನಿಮ್ಮ ಬಹುದೊಡ್ಡ ಕೊರಗು.ಆದರೆ ನೆನಪಿರಲಿ ನಿಮ್ಮ ಸ್ನೇಹಿತರು ನಿಮ್ಮನ್ನ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಅನ್ನುವುದು ಅಸತ್ಯ. ಅದು ಕೇವಲ ನಿಮ್ಮ ಭಾವನೆ ಅಷ್ಟೇ. ನಿಮ್ಮ ನಿಮ್ಮ ಪರಿಸ್ಥಿತಿಯನ್ನು ಮತ್ತು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡುವುತ್ತಿದ್ದೀರಿ ಅಷ್ಟೇ..



Click it and Unblock the Notifications











