5-11-2018: ಸೋಮವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು

ಸೋಮವಾರದ ದಿನ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಚಂದ್ರನು ಹನ್ನೆರಡು ರಾಶಿಯಲ್ಲೂ ಪ್ರಭಾವಬೀಳುತ್ತಾನೆ. ಚಂದ್ರನು ಒಬ್ಬ ದೇವತೆ ಮತ್ತು ನವ ಗ್ರಹಗಳಲ್ಲಿಯೂ ಒಬ್ಬನು. ಸಮಾನಾರ್ಥಕವಾಗಿ ಚಂದ್ರ ನನ್ನು ಸೋಮ ಎಂದು ಸೂಚಿಸಲಾಗುತ್ತದೆ. ಇಂದು, ಅತ್ರಿಸುತ, ಸಚಿನ, ತಾರಾಧಿಪ ಮತ್ತು ನಿಶಾಕರ ಚಂದ್ರನ ಕೆಲವು ಇತರ ಹೆಸರುಗಳು.ಚಂದ್ರನನ್ನು ಯುವ ಮತ್ತು ಸುಂದರ, ಎರಡು ಬಾಹುಗಳಿರುವವನು, ಮತ್ತು ಗದೆ ಹಾಗೂ ಕಮಲವನ್ನು ಹೊತ್ತಿರುವವನು ಎಂದು ವರ್ಣಿಸಲಾಗುತ್ತದೆ.

ಹಿಂದೂ ಪುರಾಣದಲ್ಲಿ, ಚಂದ್ರನು ಬುಧನ ತಂದೆ. ಚಂದ್ರನು ದಕ್ಷನ ೨೭ ಪುತ್ರಿಯರನ್ನು ಮದುವೆಯಾಗಿದ್ದಾನೆ, ಇವರಿಂದಲೇ ಹಿಂದೂ ಜ್ಯೋತಿಷ್ಯದಲ್ಲಿನ ನಕ್ಷತ್ರಗಳನ್ನು ಹೆಸರಿಸಲಾಗಿದೆ.ಸೋಮ ಮತ್ತು ಇಂದು ಎಂದು ಕರೆಯಲ್ಪಡುವ ಚಂದ್ರನಿಂದ ಹಿಂದೂ ಪಂಚಾಂಗದಲ್ಲಿನ ಒಂದು ವಾರದ ಹೆಸರಾದ ಸೋಮವಾರ ಮತ್ತು ಇಂದುವಾಸರಮ್ (ಸಂಸ್ಕೃತ) ಹುಟ್ಟಿಕೊಂಡಿವೆ. ಚಂದ್ರನ ಇತರ ಹೆಸರುಗಳು ಸೋಮ, ತಿಂಗಳು, ಶಶಿ, ಇಂದು, ಭೂಮಿಯ ಉಪಗ್ರಹ, ಚಂದಿರ, ತಂಗದಿರ.ಚಂದ್ರನಿಗೆ ಅಧಿಪತಿ ಮಹೇಶ್ವರ. ಧರ್ಮಸ್ಥಳದ ಮಂಜುನಾಥನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ

ಮೇಷ

ನಿಮ್ಮ ನಡೆನುಡಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಪರ್ಕಿಸುವ ಮತ್ತು ಸಂವಹನ ನಡೆಸುವ ಕ್ರಿಯೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.ವ್ಯಕ್ತಿಯ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಹಣಕಾಸಿನ ಸಹಾಯ ಮಾಡದಿರಿ. ಕೊಟ್ಟ ಹಣ ನಿಮಗೆ ವಾಪಸ್ಸು ಬರದೇ ಹೋಗುವ ಸಾಧ್ಯತೆ ಇರುತ್ತದೆ. ಯಾವುದಕ್ಕೂ ಸಂಗಾತಿಯ ಸಲಹೆಯನ್ನು ಈ ವಿಷಯದಲ್ಲಿ ಕೇಳಿ ಪಡೆಯಿರಿ.ದೂರದ ಸಂಬಂಧಿಗಳಾಗಲಿ, ಹಳೆಯ ಸ್ನೇಹಿತರಾಗಲಿ ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇರುವುದು. ಅವರಿಗೆ ಅಗತ್ಯವಾದ ಸಲಹೆ-ಸಹಕಾರಗಳನ್ನು ನೀಡಿ ಸಂತೋಷ ಪಡಿಸುವಿರಿ. ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ನಿಮ್ಮ ದ್ವಂದ್ವ ನಿಲುವಿನ ವಿಚಾರಧಾರೆಯಿಂದ ನಿಮ್ಮನ್ನು ಇತರೆಯವರು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಏಕಾಗ್ರತೆಗಾಗಿ ಪರಮಶಿವನ ಧ್ಯಾನ ಮಾಡಿರಿ. ಯಾರೊಟ್ಟಿಗೂ ಅನಾವಶ್ಯಕ ಮಾತುಗಳನ್ನು ಆಡದಿರಿ.ತೀರ ಸನಿಹದಲ್ಲೇ ಇದ್ದ ಯಶಸ್ಸು ದೂರ ದೂರಕ್ಕೆ ಹೋಗುತ್ತಿದೆ ಎಂದು ಅನಿಸುತ್ತದೆ. ಅದಕ್ಕೆ ಗುರುವಿನ ಅವಕೃಪೆಯೇ ಕಾರಣ. ಮನೆಯ ಹಿರಿಯರ ಸಲಹೆ ಸೂಚನೆಯಂತೆ ಮುನ್ನಡೆಯಿರಿ. ಇದರಿಂದ ಅನುಕೂಲವಾಗುವುದು.ಯಾರನ್ನು ದಿಢೀರನೆ ನಂಬಲು ಹೋಗದಿರಿ. ಅಂತೆಯೇ ನಿಮ್ಮ ಕಾರ್ಯ ಯೋಜನೆಗೆ ಸಹಾಯಕವಾಗುವ ವಿಷಯವನ್ನು ಖಂಡಿತವಾಗಿ ಪರಿಶೀಲಿಸಿ. ಮನೆಯ ಸದಸ್ಯರೊಡನೆ ಮತ್ತು ನೆರೆಹೊರೆಯ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಳ್ಳುವುದು ಕ್ಷೇಮ.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಕಾಲಚಕ್ರದ ಉರುಳುವಿಕೆಯ ದೆಸೆಯಿಂದ ಕೆಲವು ಕಾರ್ಯಗಳು ದಿಢೀರನೆ ಯಶಸ್ಸನ್ನು ಬದಲಾವಣೆಯನ್ನು ತಂದುಕೊಡುವುದು. ಇದರಿಂದ ಮಾನಸಿಕ ನೆಮ್ಮದಿ ಸಂತೋಷವುಂಟಾಗುವುದು. ಮಡದಿ ಮಕ್ಕಳ ಸಂಭ್ರಮಕ್ಕೆ ಕಾರಣವಾಗುವುದು.ಕನಸ್ಸಿನಲ್ಲಿ ಕಂಡ ವಿಚಾರಗಳಿಗೂ ಈಗ ನಡೆಯುವ ವಿಚಾರಗಳಿಗೂ ತಾಳೆ ಆಗುತ್ತಿರುವುದು ನಿಮಗೆ ಸೋಜಿಗವನ್ನುಂಟು ಮಾಡುವುದು. ಕೆಲವು ಸಂದರ್ಭದಲ್ಲಿ ಮುಂದಾಗುವ ವಿಚಾರಗಳನ್ನು ಭಗವಂತನು ಕನಸ್ಸಿನ ರೂಪದಲ್ಲಿ ತೋರುವನು.ಕಾರ್ಯಾರಂಭದ ಮುನ್ನವೇ ನಾನು ಸೋಲಬಹುದು ಎಂಬ ಭಯವನ್ನು ನೀವು ಬಿಡುವುದು ಒಳ್ಳೆಯದು. ಭಗವಂತನ ನಾಮಸ್ಮರಣೆಯೊಂದಿಗೆ ಕಾರ್ಯವನ್ನು ಆರಂಭಿಸಿ ನಿಮ್ಮ ಸದೀಚ್ಛೆಯಂತೆ ಭಗವಂತನು ಕರುಣೆ ತೋರುವರು.ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಸಿಟ್ಟನ್ನು ಈದಿನ ನಿಯಂತ್ರಿಸಿಕೊಳ್ಳುವುದು ಅನಿವಾರ್ಯ. ಗ್ರಹಗಳು ಇಂದು ನಿಮ್ಮನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ ಶಿಕ್ಷಿಸಲು ಕಾದಿವೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿರಿ.ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಆಗಬೇಕೆಂಬ ದಿಶೆಯಲ್ಲಿ ನೀವು ಹಲವು ಷೇರು ವ್ಯವಹಾರಗಳಲ್ಲಿ ಹಣ ಹೂಡುವಿರಿ. ನಿಮ್ಮ ದೂರದೃಷ್ಟಿಯಂತೆ ಖರೀದಿಸಿದ ಷೇರುಗಳ ಮೌಲ್ಯ ಹೆಚ್ಚಾಗುವ ಸಂಭವವಿರುತ್ತದೆ.ಎಲ್ಲಾ ಕಾರ್ಯ-ಕಲಾಪಗಳಲ್ಲಿ ಸೋಲು ಕಾಣುತ್ತಿರುವ ಈ ಸಂದರ್ಭದಲ್ಲಿ ಸಕಲ ನಿರ್ವಿಘ್ನದಾಯಕನಾದ ಚೇತೋಹಾರಿ ಮಹಾಗಣಪನ ಆರಾಧಿಸಿ. ಆತನ ಕೃಪೆಯಿಂದ ನಿಮ್ಮ ಕಾರ್ಯಗಳು ಕೈಗೂಡುವುದು.

ಅದೃಷ್ಟ ಸಂಖ್ಯೆ:9

 ಸಿಂಹ

ಸಿಂಹ

ನಿಮ್ಮ ಸುತ್ತಮುತ್ತಲಿನ ಇಷ್ಟಕಷ್ಟಗಳನ್ನು ನೀವು ಜಾಣತನದಿಂದ ಅರ್ಥ ಮಾಡಿಕೊಳ್ಳುವಿರಿ. ಮತ್ತು ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುವುದು.ಪದೇ ಪದೇ ಬರುವ ನಿಮ್ಮ ಮುಂಗೋಪದಿಂದಾಗಿ ನಿಮ್ಮ ಸಂಗಾತಿಯ ಜೊತೆಯಲ್ಲಿ ಘರ್ಷಣೆ ಉಂಟಾಗುವುದು. ನಂತರ ಅದು ಮನಃಸ್ತಾಪಕ್ಕೆ ತಿರುಗುವುದು. ಸಿಟ್ಟು ಮನುಜನ ಮೊದಲ ಶತ್ರು. ಅದರಿಂದ ಅನೇಕ ಅನಾಹುತಗಳು ಆಗದಂತೆ ಎಚ್ಚರ ವಹಿಸಿ.ಭಗವಂತನ ಆಟ ಬಲ್ಲವರಾರು ಒಮ್ಮೆ ಸುಖವನ್ನು ಕೊಡುವನು ಮತ್ತೊಮ್ಮೆ ದುಃಖವನ್ನುಂಟು ಮಾಡುವನು. ಅಂತೆಯೇ ಈ ದಿನ ನಿಮ್ಮನ್ನು ಗೌರವಿಸುವ ಅಭಿಮಾನಿಗಳ ಪ್ರಶಂಸೆಯು ನಿಮ್ಮನ್ನು ಹುರಿದುಂಬಿಸುವುದು. ಮುಂದಿನ ಕಾರ್ಯಗಳಿಗೆ ನಾಂದಿ ಆಗುವುದು.ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ಭಗವಂತನ ಕೃಪೆ ನಿಮ್ಮ ಮೇಲಿರುವುದರಿಂದ ನಿಮಗೆ ಒದಗಿ ಬರುವ ಅಪವಾದಗಳಿಂದ ಮುಕ್ತರಾಗುವಿರಿ. ಮತ್ತು ನಿಮ್ಮ ಸಹಪಾಠಿಗಳು ಮತ್ತು ಸಹೋದ್ಯೋಗಿಗಳ ನಡುವೆ ಗೌರವವನ್ನು ಸಂಪಾದಿಸುವಿರಿ.ಯಾರು ಹಿತವರು ಮೂವರೊಳಗೆ ಎಂಬ ಮಾತಿನ ಆಂತರ್ಯ ತಿಳಿಯಲು ಬಹಳ ಪ್ರಯತ್ನ ಪಡುವಿರಿ. ಆದರೆ ಯಾವುದೇ ದೃಢ ನಿರ್ಧಾರ ತಳೆಯುವಲ್ಲಿ ವಿಫಲರಾಗುವಿರಿ. ಮೂವರು ಗಣ್ಯವ್ಯಕ್ತಿಗಳ ಸಂಘರ್ಷ ನಿಮ್ಮನ್ನು ಚಿಂತೆಗೆ ಈಡು ಮಾಡುವುದು.ನಿಮ್ಮನ್ನು ಎದುರಿಗೆ ಹಾಡಿ ಹೊಗಳುವವರೇ ನಿಮ್ಮನ್ನು ಮಟ್ಟಹಾಕಲು ಒಳಸಂಚು ರೂಪಿಸುವರು. ದುಷ್ಮನ್‌ ಕಹಾ ಹೇ ಅಂತ ನೋಡಿದರೆ ಬಗಲ್‌ ಮೇ ಹೇ ಎನ್ನುವಂತಹ ಸ್ಥಿತಿ ನಿರ್ಮಾಣವಾಗುವುದು. ಯಾವುದಕ್ಕೂ ಸನ್ನದ್ಧರಾಗಿರಿ.ಅದೃಷ್ಟ ಸಂಖ್ಯೆ:9

ತುಲಾ

ತುಲಾ

ಪದೇ ಪದೇ ನಿಮ್ಮ ವಿರುದ್ಧದ ಮಾತುಗಳು ಕೇಳಿಸುವುದು. ಅದನ್ನು ಕೇಳಿ ನಕ್ಕುಬಿಡಿ. ನೀವು ಬದಲಾಗಿರುವ ವಿಚಾರ ಅವರಿಗೆ ತಿಳಿದಿಲ್ಲ. ಅಥವಾ ಹಿಂದಿನ ದಿನಗಳ ಸ್ವಭಾವವನ್ನು ಮೆಲುಕು ಹಾಕಿದರೆ ನಿಮಗೇ ನಗುಬರುವ ಸಂಭವವಿದೆ.ಇಬ್ಬರ ಜಗಳ ಮೂರನೆಯವರಿಗೆ ಲಾಭ. ಎನ್ನುವಂತೆ ನಿಮ್ಮ ಕಚೇರಿಯಲ್ಲಿನ ದಿಗ್ಗಜರ ಭಿನ್ನಾಭಿಪ್ರಾಯವು ನಿಮಗೆ ವರವಾಗಿ ಪರಿಣಮಿಸುವುದು. ಇದರಿಂದ ನಿಮ್ಮ ಕಾರ್ಯ ಸುಲಲಿತವಾಗುವುದು.

ಬಹುದಿನಗಳ ಕನಸು ಭಾವನಾತ್ಮಕ ಸಂಬಂಧದಿಂದ ನನಸಾಗುವುದು. ಅನಿರೀಕ್ಷಿತವಾಗಿ ಹೊಸದೇ ಆದ ಆಲೋಚನೆಯು ನಿಮ್ಮನ್ನು ಹೊಸ ಕಾರ್ಯಕ್ಕೆ ಪ್ರೇರೇಪಿಸುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ದೊರೆಯುವುದು.

ಅದೃಷ್ಟ ಸಂಖ್ಯೆ:6

ವೃಶ್ಚಿಕ

ವೃಶ್ಚಿಕ

ನಿಮ್ಮ ಅನೇಕ ರೀತಿಯ ತಾಂತ್ರಿಕ ಪರಿಜ್ಞಾನವು ಪರಿಪಕ್ವವಾಗುತ್ತಿರುವ ಈ ಸಂದರ್ಭದಲ್ಲಿ ನೀವು ಅದನ್ನು ನಿಭಾಯಿಸಲು ಹಣದ ಅಡಚಣೆ ಆಗುವುದು. ನಿಮ್ಮ ಆಪ್ತ ಗೆಳೆಯರೆ ನಿಮಗೆ ಇಂದು ಸಹಾಯ ಮಾಡಲು ಹಿಂಜರಿಯುವರು.ಸಿಟ್ಟಿನ ಭರದಲ್ಲಿ ಮೂಗು ಕೊಯ್ದುಕೊಂಡರೆ ಪುನಃ ಜೋಡಿಸಲು ಆಗುವುದಿಲ್ಲ. ಕೆಲಸ ಕಾರ್ಯಗಳು ನಿಮ್ಮಂತೆ ಆಗುತ್ತಿಲ್ಲ ಎಂದು ದುಡುಕಿ ಪರರನ್ನು ನೋಯಿಸದಿರಿ. ಆದಷ್ಟು ತಾಳ್ಮೆಯಿರಲಿ. ತಾಳಿದವನು ಬಾಳಿಯಾನು ಎಂಬ ಸೂತ್ರಕ್ಕೆ ಶರಣಾಗಿ.ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡ ಹಾಗೆ ಇಂದಿನ ಪರಿಸ್ಥಿತಿ. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ನೀವು ಪರರಿಗೆ ಉಪಕಾರ ಆಗಲಿ ಎಂದು ಬುದ್ಧಿಮಾತು ಹೇಳಿದರೆ ಅದು ವ್ಯರ್ಥವಾಗುವುದು. ವ್ಯರ್ಥವಾಗುವ ಇಂತಹ ಕಾರ್ಯಗಳಿಗೆ ಕೈ ಹಾಕಬೇಡಿ.ಅದೃಷ್ಟ ಸಂಖ್ಯೆ:4

ಧನಸ್ಸು

ಧನಸ್ಸು

ಆಳು ಮಾಡಿದ್ದು ಹಾಳು ಎನ್ನವು ಗಾದೆ ಮಾತನ್ನು ನೆನಪಿಗೆ ತರುವ ಘಟನೆ ಇಂದು ಜರುಗುವುದು. ಹಾಗಾಗುವ ಮುನ್ನ ನೀವೇ ಆ ಕೆಲಸವನ್ನು ಮಾಡಲು ತೊಡಗಿದಲ್ಲಿ ಯಶಸ್ಸು ದೊರೆಯುವುದು. ಕಾರ್ಯ ಒತ್ತಡದಲ್ಲಿ ಪರರಿಗೆ ವಹಿಸಿದ ಕೆಲಸವು ಪೂರ್ಣ ಗೊಳ್ಳುವುದಿಲ್ಲ.ಮಕ್ಕಳ ತುಂಟತನ ವಿಪರೀತವಾಗುವುದು. ಮನೆಯಲ್ಲಿರುವುದು ಕಷ್ಟ ಎನಿಸುವ ಸಾಧ್ಯತೆ ಇರುತ್ತದೆ. ಸಂಜೆ ಪ್ರಶಾಂತ ವಾತಾವರಣದಲ್ಲಿ ಕೆಲಕಾಲ ಏಕಾಂತವಾಗಿ ಕಳೆಯಿರಿ. ಮನಸ್ಸು ಪ್ರಫುಲ್ಲವಾಗುವುದು.ಅನಿರೀಕ್ಷಿತ ಬೆಳವಣಿಗೆಯೊಂದು ನಿಮ್ಮ ದಿನದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಸಾಧ್ಯವಾದರೆ ಈ ದಿನ ವಿಷ್ಣುವಿನ ಸ್ತೋತ್ರ ಪಠಿಸಿ ಮತ್ತು ಹೆಸರುಕಾಳನ್ನು ದಾನ ಮಾಡಿ.

ಅದೃಷ್ಟ ಸಂಖ್ಯೆ:9

ಮಕರ

ಮಕರ

ಒಂದನ್ನು ಪಡೆಯಲು ಮತ್ತೊಂದರ ತ್ಯಾಗದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಈದಿನ ಮುಷ್ಟಿಕಾಳು ಚೆಲ್ಲಿ ಮೂಟೆ ಕಾಳನ್ನು ಬಾಚಿಕೊಳ್ಳುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸು ಸಾಧಿಸಲು ಹಣವು ನೀರಿನಂತೆ ಖರ್ಚಾಗುವುದು. ಈ ಬಗ್ಗೆ ಬೇಸರ ಬೇಡ.ಉದ್ಯೋಗವನ್ನು ಉಳಿಸಿಕೊಳ್ಳುವ ಸಲುವಾಗಿ ಅನೇಕ ರೀತಿಯ ಕಸರತ್ತುಗಳನ್ನು ನಡೆಸುವಿರಿ. ಇದರಿಂದ ಕೊಂಚಮಟ್ಟಿನ ಪ್ರಯೋಜನ ಕಂಡುಬರುವುದು. ಇನ್ನು ಸ್ವಲ್ಪ ಕಾಲ ಇದ್ದ ಸ್ಥಳದಲ್ಲಿಯೇ ಕೆಲಸವನ್ನು ಮುಂದುವರೆಸುವಿರಿ.ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ದೊರೆಯುವುದು. ಕೆಲವರು ತಮ್ಮ ಕಚೇರಿಯಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಕೆಲಸಕ್ಕೆ ರಾಜೀನಾಮೆ ನೀಡುವಂತಹ ಸಂದರ್ಭ ಒದಗಿ ಬರುವುದು. ಯಾವುದಕ್ಕೂ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.

ಅದೃಷ್ಟ ಸಂಖ್ಯೆ:1

ಕುಂಭ

ಕುಂಭ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬುದು ಸರ್ವಕಾಲಿಕ ಸತ್ಯ. ಹಾಗಾಗಿ ಈದಿನ ಗುರುವಿನ ಅನುಗ್ರಹ ಹಿರಿಯರ ಆಶೀರ್ವಾದ ಪಡೆಯುವುದು ಒಳ್ಳೆಯದು.ನಿಮ್ಮದೇ ಆದ ಯೋಜನೆಗಳಿಗೆ ಅರ್ಥಪೂರ್ಣ ಸಿದ್ಧಿ ಇದೆಯಾದರೂ ಹಿರಿಯರ ಸಲಹೆಗಳನ್ನು ಪಾಲಿಸಿದಲ್ಲಿ ಇನ್ನು ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಎಲ್ಲರಿಗೂ ಒಳ್ಳೆಯವರಾಗುವುದು ಅಷ್ಟು ಸುಲಭವಲ್ಲ. ನಿಮ್ಮ ಯೋಜನೆಗಳು ಯಾವಾಗಲೂ ವಿಶೇಷತೆಯಿಂದಲೇ ಕೂಡಿರುತ್ತವೆ. ಹಾಗಾಗಿ ನೀವು ಬೇರೆಯವರಿಗಿಂತ ಬೇಗನೆ ಜಯಶಾಲಿಗಳು ಆಗುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ:2

ಮೀನ

ಮೀನ

ಒಂಟಿತನ ನಿಮ್ಮನ್ನು ಕಾಡುವುದು. ಒಂದು ರೀತಿಯ ಕೆಲಸ ಕಾರ್ಯಗಳಲ್ಲಿನ ಹಿನ್ನಡೆಯಿಂದಾಗಿ ಮನೆಯಿಂದ ಹೊರಗೆ ಹೋಗಲಾರದೆ ಗೃಹಬಂಧನಕ್ಕೆ ಒಳಪಟ್ಟಂತೆ ಆಗುವುದು. ನಿಮ್ಮ ಯೋಜನೆಗಳ ಬಗ್ಗೆ ಪುನರ್‌ ಪರಿಶೀಲಿಸುವುದು ಒಳ್ಳೆಯದು.ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಬಂದ ಜನರಿಗೆ ಸಾಂತ್ವನ ನೀಡುತ್ತಾ ಬಂದಿರುವ ನೀವು ನಿಮ್ಮನ್ನು ಪುನರೂಪಿಸಿಕೊಳ್ಳುತ್ತ ಬರುವಿರಿ. ಇದರಿಂದ ನಿಮ್ಮ ಗೌರವ ಘನತೆ ಸಮಾಜದಲ್ಲಿ ಹೆಚ್ಚಾಗುವುದು. ಗೊತ್ತಿದ್ದು ಗೊತ್ತಿದ್ದು ಅಯೋಗ್ಯರ ಸಂಗಡ ನಿಮ್ಮ ಮುಂದಿನ ಕಾರ್ಯ ರೂಪರೇಷೆಗಳ ವಿಚಾರವನ್ನು ಪ್ರಸ್ತಾಪಿಸದಿರಿ. ಇದರಿಂದ ನಿಮಗೆ ಮುಂದೊಂದು ದಿನ ತೊಂದರೆಯಾಗುವುದು. ಕೆಲಕಾಲ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಹೊರಗೆಡಹದಿರಿ.ಅದೃಷ್ಟ ಸಂಖ್ಯೆ:1 ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-5-November-2018

Know what astrology and the planets have in store for you today. Choose your zodiac sign and read the details...
Story first published: Monday, November 5, 2018, 10:13 [IST]
X
Desktop Bottom Promotion