Latest Updates
-
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ
4-11-2018: ಭಾನುವಾರದ ದಿನ ಭವಿಷ್ಯ
ಭಾನುವಾರದ ಪ್ರತಿದಿನ ಸೂರ್ಯದೇವನ ಆರಾಧನೆ ಮಾಡಿ ಸುಖ-ಶಾಂತಿಯನ್ನು ಪಡೆಯಿರಿ.ಕತ್ತಲನ್ನು ದೂರ ಮಾಡಿ ಬೆಳಕನ್ನು ನೀಡುವವನು ಸೂರ್ಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಪಟ್ಟ ನೀಡಲಾಗಿದೆ. ಪ್ರತಿದಿನ ಸೂರ್ಯದೇವನ ಆರಾಧನೆ ಮಾಡುವುದ್ರಿಂದ ಮಾನ-ಸನ್ಮಾನ, ಗೌರವ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಪ್ರತಿದಿನ ಸೂರ್ಯ ದೇವನ ಪೂಜೆ ಮಾಡುವುದ್ರಿಂದ ಮನಸ್ಸಿನಲ್ಲಿ ನೆಮ್ಮದಿ ಸೃಷ್ಟಿಯಾಗುತ್ತದೆ. ಸೂರ್ಯದೇವನ ಪೂಜೆ ಮಾಡುವುದ್ರಿಂದ ವ್ಯಕ್ತಿ ರೋಗಮುಕ್ತನಾಗಿ ಶಕ್ತಿವಂತನಾಗ್ತಾನೆ.ಭಾನುವಾರ ಸೂರ್ಯ ನಮಸ್ಕಾರ, ಪ್ರದಕ್ಷಿಣಿ, ಸೂರ್ಯ ಮಂತ್ರ ಪಠಣ ಮಾಡುವುದ್ರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ.

ಸೂರ್ಯ ದೇವನಿಗೆ ಪೂಜೆ ಮಾಡುವ ವೇಳೆ ತಲೆಯನ್ನು ನೆಲಕ್ಕೆ ತಾಗಿಸುವುದ್ರಿಂದ ಎಲ್ಲ ಪಾಪಗಳು ನಾಶವಾಗುತ್ತವೆ.ಸೂರ್ಯ ದೇವನ ಪೂಜೆ ಜೊತೆಗೆ ತನು-ಮನದಿಂದ ಪರಿಕ್ರಮ ಮಾಡಿದ್ರೆ ರೋಗ ನಿವಾರಣೆಯಾಗುತ್ತದೆ. ಬರಿ ಕಾಲಿನಲ್ಲಿ ಆರಾಧನೆ ಮಾಡಿದ್ರೆ ಫಲ ಜಾಸ್ತಿ.
ನಿರಂತರ ಸೂರ್ಯ ದೇವನ ಪೂಜೆ ಮಾಡುವುದ್ರಿಂದ ಭಯ ದೂರವಾಗಿ ವ್ಯಕ್ತಿ ಬಲಶಾಲಿಯಾಗ್ತಾನೆ.ಸೂರ್ಯ ದೇವನ ಪೂಜೆಯಿಂದ ವಂಚನೆ, ಕೋಪ, ಅಹಂ, ದುರಾಸೆ, ಕೆಟ್ಟ ಆಲೋಚನೆಗಳು ದೂರವಾಗುತ್ತವೆ.ಭಗವಾನ್ ಸೂರ್ಯದೇವನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ
ನಿಮ್ಮ ಮುಂದಿರುವ ಜವಾಬ್ದಾರಿ ಬಹು ಮಹತ್ತರವಾದದ್ದು. ಅದನ್ನು ನೀವು ಸಲೀಸಾಗಿ ನಿಭಾಯಿಸುವಿರಿ. ಅಕ್ಕಪಕ್ಕದವರು, ನಿಮ್ಮ ಸ್ನೇಹಿತರು ಇದನ್ನು ಕಂಡು ಆಶ್ಚರ್ಯ ಚಕಿತರಾಗುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ತೋರುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರಿಂದಲೇ ಅಸಹಕಾರ ಮನೋಭಾವನೆ ವ್ಯಕ್ತವಾಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.ಗುರು-ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ವಾದ ಸ್ಪರ್ಧೆಯಲ್ಲಿ ಜಯವಾಗಲಿದೆ. ವಿದ್ಯಾಬುದ್ಧಿಯಲ್ಲಿ ಯಶಸ್ಸು ಸಿಗಲಿದೆ. ಮಧ್ಯಾಹ್ನದ ನಂತರ ಶಿರೋವೇದನೆ ಬರುವ ಸಾಧ್ಯತೆ ಇದೆ. ಕೌಟುಂಬಿಕ ವಿರಸ ತೋರುವುದು.
ಅದೃಷ್ಟ ಸಂಖ್ಯೆ:2

ವೃಷಭ
ಕೆಲವು ತೀರ್ಮಾನಗಳನ್ನು ತಕ್ಷ ಣದಲ್ಲಿ ತೆಗೆದುಕೊಳ್ಳಲು ಬರುವುದಿಲ್ಲ. ನಿಮ್ಮ ಮನದ ವಿಚಾರಗಳನ್ನು ಮನೆಯ ಹಿರಿಯರ ಬಳಿ ಚರ್ಚಿಸಿ ಕಾರ್ಯ ಆರಂಭಿಸುವುದು ಒಳ್ಳೆಯದು. ಮಾತು ಮಿತವಾಗಿರಲಿ.ಉದ್ಯೋಗದ ವಿಚಾರದಲ್ಲಿ ಹೊಸ ಒಪ್ಪಂದ ಏರ್ಪಡುವುದು. ಬಂದ ನೂತನ ಕೆಲಸವನ್ನು ಒಪ್ಪಿಕೊಳ್ಳುವುದು ಒಳ್ಳೆಯದು. ಕೌಟುಂಬಿಕವಾಗಿ ನಿಮಗೆ ಸಹಾಯ ಹಸ್ತ ದೊರೆಯುವುದು.ಕೆಲಸ ಕಾರ್ಯಗಳಲ್ಲಿ ಉದಾಸೀನತೆ ತೋರದಿರಿ. ಸಣ್ಣಪುಟ್ಟ ಜ್ವರಾದಿಗಳು ಕಾಡುವ ಸಾಧ್ಯತೆ ಇದೆ. ಸೂಕ್ತ ವೈದ್ಯಕೀಯದಿಂದ ಪರಿಹಾರ ದೊರೆಯಲಿದೆ. ದೂರದ ಪ್ರಯಾಣವನ್ನು ಹಮ್ಮಿಕೊಳ್ಳಬೇಕಾಗುವುದು. ಆರ್ಥಿಕ ತೊಂದರೆ ಕಡಿಮೆ ಇರುತ್ತದೆ.
ಅದೃಷ್ಟ ಸಂಖ್ಯೆ:1

ಮಿಥುನ
ಸ್ವಲ್ಪ ನಿರಾಸೆಯ ವಾತಾವರಣ ಎದುರಾಗುವುದು. ಹಣಕಾಸಿನ ಚಿಂತೆ ಇರುವುದಿಲ್ಲ. ಮೇಲಧಿಕಾರಿಗಳು ನಿಮ್ಮ ಕಾರ್ಯ ತತ್ಪರತೆಯನ್ನು ಮನತುಂಬಿ ಹೊಗಳುವರು.
ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಡೆ-ನುಡಿ ಇರಲಿ. ಅನಗತ್ಯವಾದ ವಿವಾದಗಳಲ್ಲಿ ಸಿಲುಕದಿರಿ.
ದೂರದ ಊರಿನಿಂದ ಬರುವ ವಾರ್ತೆಯು ನಿಮ್ಮ ಮನಸ್ಸನ್ನು ಅರಳಿಸುವುದು. ಬಂಧು ಬಳಗದವರ ಭೇಟಿ ಆಗುವ ಸಂಭವವಿದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಉದ್ಯೋಗ-ದಂಧೆಗಳಲ್ಲಿ ಉತ್ಕರ್ಷ ಕಂಡುಬರುವುದು.
ಅದೃಷ್ಟ ಸಂಖ್ಯೆ:2

ಕಟಕ
ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವುದು. ಇದರಿಂದ ನಿಮಗೆ ನೂತನ ಅನುಭವವಾಗುವುದು. ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಕಾರವನ್ನು ನೀಡುವರು. ನಿಮ್ಮ ಕುಲದೇವತೆಯ ಪ್ರಾರ್ಥನೆ ಮಾಡಿ.ಸಕಲ ಕಾರ್ಯಗಳಲ್ಲಿ ಮುನ್ನಡೆ ಸಿಗಲಿದೆ. ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ದೂರ ಸಂಚಾರದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಬಂಧು ಬಾಂಧವರು ನಿಮಗೆ ನೆರವಾಗುವರು.ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಕಂಡು ಬರುವುದು. ಕೌಟುಂಬಿಕ ಸೌಖ್ಯ, ಕಾರ್ಯಸಿದ್ಧಿ ಆಗುವುದು. ಆನಂದದಾಯಕ ಸಂಗತಿ. ಮಿತ್ರಪ್ರೇಮ, ದೈವಾನುಕೂಲತೆಯಿಂದ ಜನಾನುಕೂಲತೆ ದೊರೆಯುವುದು.
ಅದೃಷ್ಟ ಸಂಖ್ಯೆ:6

ಸಿಂಹ
ನಿಮ್ಮ ಆತ್ಮವಿಶ್ವಾಸ ಬಲು ದೊಡ್ಡದು. ಆದರೆ ಹುಂಬುತನದಿಂದ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ಹಾಗಾಗಿ ಜಾಗ್ರತೆ ಅಗತ್ಯ. ಅತ್ಯಂತ ನಂಬಿದ ಸ್ನೇಹಿತರೇ ಕೈಕೊಡುವ ಸಂದರ್ಭವಿರುತ್ತದೆ.ಕಾಡುತ್ತಿದ್ದ ಆತಂಕಗಳೆಲ್ಲ ಮರೆಯಾಗುವುದು. ಸಾಮಾಜಿಕವಾಗಿ ಹೆಚ್ಚಿನ ಪ್ರತಿಷ್ಠೆ ದೊರೆಯುವುದು. ಆಸ್ತಿ ಖರೀದಿಗೆ ಸಂಬಂಧಿಸಿದ ಮಾತುಕತೆಗಳು ಫಲಪ್ರದವಾಗುವುದು. ವ್ಯವಹಾರವು ಸುಲಲಿತವಾಗುವುದು.ಸಮಯಾನುಸಾರ ಕಾರ್ಯಗಳು ನೆರವೇರುತ್ತವೆ. ಹಣಕಾಸಿನ ಒತ್ತಡ ಕಡಿಮೆ ಆಗುವುದು. ಬಂಧು ಬಳಗದವರ ಭೇಟಿ ಮಾಡುವಿರಿ. ಸುವಾರ್ತೆ ಕೇಳುವಿರಿ. ಬೆಲೆ ಬಾಳುವ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ.
ಅದೃಷ್ಟ ಸಂಖ್ಯೆ:6

ಕನ್ಯಾ
ಸರ್ಕಾರಿ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದರಿಂದ ನಿಮಗೆ ಬಹು ಬೇಸರವುಂಟಾಗುವ ಸಾಧ್ಯತೆ ಇದೆ. ತಾಳ್ಮೆ ಕಳೆದುಕೊಳ್ಳದಿರಿ. ಕಚೇರಿಯಲ್ಲಿ ಎಲ್ಲರೂ ಸಮಾನರು ಎಂಬ ಭಾವನೆಯನ್ನು ರೂಢಿಸಿಕೊಳ್ಳಿ.ನಿಮಗೆ ಬರಬೇಕಾಗಿದ್ದ ಹಣವು ಇಂದು ನಿಮ್ಮ ಕೈಸೇರುವ ನಿರೀಕ್ಷೆ ಇದೆ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಪರಾಕ್ರಮ ಕೆಲಸ-ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು.
ಸಕಾಲದಲ್ಲಿ ಪ್ರಮುಖ ಕೆಲಸಗಳನ್ನು ಮುಗಿಸಬೇಕೆಂದರೂ ಈ ದಿನ ವಿಳಂಬ ತೋರುವುದು. ಗಣಪತಿಯ ಪ್ರಾರ್ಥನೆಯೊಂದಿಗೆ ದಿನಚರಿಯನ್ನು ಆರಂಭಿಸಿರಿ ಒಳಿತಾಗುವುದು. ಸಂತೋಷಕರ ಸುದ್ದಿಗಳನ್ನು ಕೇಳುವಿರಿ.
ಅದೃಷ್ಟ ಸಂಖ್ಯೆ:1

ತುಲಾ
ಅವಿವಾಹಿತರು ಹಾಗೂ ಪ್ರೇಮಿಗಳಿಗೆ ಉತ್ತಮ ದಿನ. ಕೆಲವರಿಗೆ ಮದುವೆ ಪ್ರಸ್ತಾಪಗಳು ಎದುರಾಗುವುದು. ಪ್ರೇಮಿಗಳನ್ನು ಒಂದು ಮಾಡಲು ಮನೆಯವರು ಸ್ನೇಹಿತರು ಪ್ರಾಮಾಣಿಕ ಪ್ರಯತ್ನ ಮಾಡುವರು.ನೀವು ಅಂದುಕೊಂಡಿದ್ದನ್ನೆಲ್ಲಾ ಸಾಧಿಸುವಿರಿ. ಕೌಟುಂಬಿಕ ವ್ಯಾಜ್ಯವೊಂದು ದಿಢೀರ್ ಇತ್ಯರ್ಥವಾಗುವುದು. ಹಣಕಾಸಿನ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ನಿಮ್ಮ ಹೆಚ್ಚಿನ ಸಮಯವನ್ನು ಸಂಶೋಧನೆಯಲ್ಲಿ ಕಳೆಯುವುದರಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ಮಹತ್ತರವಾದದ್ದು ಪಡೆಯುವಿರಿ. ಮೇಲಧಿಕಾರಿಗಳ ಪ್ರಶಂಸೆಗೂ ಪಾತ್ರರಾಗುವಿರಿ. ಆರ್ಥಿಕ ಸಮಸ್ಯೆ ಇರುವುದಿಲ್ಲ.
ಅದೃಷ್ಟ ಸಂಖ್ಯೆ:9

ವೃಶ್ಚಿಕ
ಹೆದರುತ್ತ ಕುಳಿತರೆ ಕೆಲಸ ಆಗುವುದಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ನೆನಪಿಸಿಕೊಂಡು ಕಾರ್ಯ ಪ್ರವೃತ್ತರಾಗಿರಿ. ಸಂತೋಷದ ಕೂಟಗಳಿಗೆ ಹಣ ಖರ್ಚು ಮಾಡುವ ಪ್ರಮೇಯ ಒದಗಿ ಬರುವುದು. ವ್ಯವಹಾರ ಮಾಡುವಾಗ ಯೋಚಿಸಿ ಮಾತನಾಡಿ. ಬಾಯಿ ತಪ್ಪಿ ಆಡಿದ ಮಾತಿಗೆ ಹೆಚ್ಚಿನ ಪಶ್ಚಾತ್ತಾಪ ಪಡಬೇಕಾಗುವುದು. ಹಮ್ಮಿಕೊಂಡ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು.ಬಂಧು-ಮಿತ್ರರ ಭೇಟಿ. ಕ್ಷುಲ್ಲಕ ವಿಚಾರಗಳಿಗೆ ಮನಸ್ತಾಪವಾಗುವ ಸಾಧ್ಯತೆ ಇರುವುದು. ಜಾಣ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿರಿ. ಆಂಜನೇಯ ಸ್ತೋತ್ರ ಪಠಿಸುವುದು ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಅದೃಷ್ಟ ಸಂಖ್ಯೆ:3

ಧನಸ್ಸು
ನಿಮ್ಮ ಬಾಯಿ ದೊಡ್ಡದು. ಅಂದರೆ ಮಾತುಗಳಿಗೆ ಲಗಾಮಿಲ್ಲ. ಸಿಕ್ಕಾಪಟ್ಟೆ ಮಾತನಾಡಿಯೇ ಸಮಸ್ಯೆಗಳನ್ನು ತಂದುಕೊಳ್ಳುವ ಸಾಧ್ಯತೆ ಇರುತ್ತದೆ. ಕುಲದೇವತಾ ಪ್ರಾರ್ಥನೆ ಮತ್ತು ಪ್ರಾಣಾಯಾಮದ ಮೂಲಕ ಮನಸ್ಸನ್ನು ನಿಯಂತ್ರಿಸಿ.ಆತ್ಮಸ್ಥೈರ್ಯವೇ ಪ್ರಮುಖ ಅಸ್ತ್ರ ಮತ್ತು ಶಕ್ತಿ. ಎದುರಾಳಿಗಳು ನಿಮ್ಮತ್ತ ಆರೋಪಗಳ ಪಟ್ಟಿಯನ್ನೆ ತಂದರೂ ನೀವು ಶಾಂತವಾಗಿ ಎಲ್ಲದಕ್ಕೂ ಸಮಂಜಸ ಉತ್ತರ ಕೊಡುವ ಮೂಲಕ ಅವರ ಮನಸ್ಸನ್ನು ಗೆಲ್ಲುವಿರಿ.
ಕುಟುಂಬದಲ್ಲಿ ಶುಭ ಸಮಾಚಾರ ಕೇಳುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಹಣಕಾಸಿನ ಮುಗ್ಗಟ್ಟು ನಿವಾರಣೆ ಆಗಲಿದೆ. ಅಮೂಲ್ಯ ವಸ್ತುವಿನ ಖರೀದಿ-ವಿಕ್ರಿಯಿಂದ ಲಾಭವುಂಟಾಗುವುದು.
ಅದೃಷ್ಟ ಸಂಖ್ಯೆ:4

ಮಕರ
ಒಟ್ಟೊಟ್ಟಿಗೆ ಹಲವು ಕೆಲಸಗಳು ಹೆಗಲೇರುವುದರಿಂದ ವಿಶ್ರಾಂತಿಗೆ ಸಂಚಕಾರ ಬರಲಿದೆ. ಸಾಧ್ಯವಾದಷ್ಟು ಸಂಭಾಳಿಸಿಕೊಂಡು ಹೋಗಲು ಪ್ರಯತ್ನಿಸಿ. ಆರ್ಥಿಕ ಮುಗ್ಗಟ್ಟು ಎದುರಾಗುವುದು.ಅಪಾತ್ರರಿಗೆ ಧಾರಾಳವಾಗಿ ಖರ್ಚು ಮಾಡುತ್ತೀರೆಂದು ಮನೆಯಲ್ಲಿ ಆಕ್ಷೇಪ ಮಾಡುವರು. ಕೌಟುಂಬಿಕವಾಗಿ ಸೌಹಾರ್ದ ಮಾತುಕತೆಗಳು ನಡೆಯುವವು. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಹಮ್ಮಿಕೊಂಡ ಕಾರ್ಯದಲ್ಲಿ ಅರ್ಧ ಯಶಸ್ಸು ಉಂಟಾಗುವುದು. ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.
ಅದೃಷ್ಟ ಸಂಖ್ಯೆ:4

ಕುಂಭ
ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವವು. ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸುವುದು ಒಳ್ಳೆಯದು. ವೈಯಕ್ತಿಕ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ನಡೆಯುವವು.ಮಹತ್ವದ ಕೆಲಸಕ್ಕೆ ನಿಯೋಜಿಸಲ್ಪಡುವಿರಿ. ಮೇಲಧಿಕಾರಿಗಳ ಕರುಣೆ ನಿಮ್ಮ ಮೇಲಿರುವುದರಿಂದ ನೀವು ಮಾಡುವ ತಪ್ಪನ್ನು ಕ್ಷ ಮಿಸುವರು. ಸಹೋದರರೊಡನೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವಿರಿ.
ನೀವು ಈ ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ. ಮುಖ್ಯ ಕೆಲಸವೊಂದಕ್ಕೆ ಹೆತ್ತವರ ನೆರವು ದೊರೆಯಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಅದೃಷ್ಟ ಸಂಖ್ಯೆ:2

ಮೀನ
ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆಗಳು ದಟ್ಟವಾಗಿವೆ. ವರ್ಗ ಆಗಬಹುದು. ಆಪ್ತರೊಂದಿಗೆ ಸಮಾಲೋಚನೆ ನಡೆಸದೇ ಮುಂದಡಿ ಇಡುವುದು ಜಾಣತನದ ಲಕ್ಷ ಣವಲ್ಲ. ಕೌಟುಂಬಿಕವಾಗಿ ನೆಮ್ಮದಿಯ ದಿನ.ಮಹತ್ವದ ಕೆಲಸಗಳನ್ನು ಕೈಗೆತ್ತಿಕೊಳ್ಳದಿರುವುದೇ ಒಳ್ಳೆಯದು. ಏಕೆಂದರೆ ಈ ದಿನ ಹಮ್ಮಿಕೊಂಡ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಕುಲದೇವರ ಪ್ರಾರ್ಥನೆಯನ್ನು ತಪ್ಪದೆ ಮಾಡಿ. ಸಾಧಕವಲ್ಲದ ಸಾಧ್ಯತೆಗಳು ನಿಮ್ಮತ್ತ ತಿರುಗುತ್ತವೆ. ಸಾಮಾಜಿಕವಾಗಿ ನಿಮ್ಮ ಮಾನ-ಪ್ರತಿಷ್ಠೆಗಳು ವೃದ್ಧಿಗೊಳ್ಳುವುದು. ನೀವು ಬಯಸಿದ ಕಾರ್ಯ ಇಂದು ನೆರವೇರುವುದು.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











