Latest Updates
-
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ
3-11-2018: ಶನಿವಾರದ ದಿನ ಭವಿಷ್ಯ
ಶನಿವಾರದ ದಿನ ಹನುಮಂತ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ. ವಾಯುಪುತ್ರ,ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತುರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.ಹನುಮಂತನ ಅನೇಕ ಹೆಸರುಗಳು ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ, ಹನುಮ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ, ಕೇಸರಿ ನಂದನ, ಹನುಮಂತ, ರಾಮದೂತ, ದಾಸರಲ್ಲಿ ಶ್ರೇಷ್ಟ ಭಕ್ತ, ಅಂಜನಸುತ.ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ, ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ.

ಇಂಥ ಸಾಮರ್ಥ್ಯಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ. ಶನಿವಾರದ ದಿನ ಅಂಜನಿಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807.

ಮೇಷ
ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಮನೆಯ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ನಂತರ ನೀವು ತೀರ್ಮಾನ ಕೈಕೊಂಡಲ್ಲಿ ಎಲ್ಲರೂ ನಿಮ್ಮ ತೀರ್ಮಾನವನ್ನು ಒಪ್ಪುವ ಸಾಧ್ಯತೆ ಇರುತ್ತದೆ. ಆದರೆ ಒಬ್ಬರ ವಿಚಾರ ಮತ್ತೊಬ್ಬರ ಬಳಿ ಹೇಳದಿರಿ.ತುಂಬಾ ಎಚ್ಚರಿಕೆಯಿಂದ ಸಂಘಟನೆಯನ್ನು ನಡೆಸಿ. ಇದರ ಮುಂದಾಳತ್ವವನ್ನು ನೀವೇ ವಹಿಸುವುದು ಒಳ್ಳೆಯದು. ಇದರಿಂದ ಜನರು ಸಂತಸಗೊಂಡು ನಿಮ್ಮನ್ನು ಆದರಿಸಿ ಗೌರವ ತೋರುವರು. ಆಹಾರ-ವಿಹಾರದಲ್ಲಿ ನಿಯಮತೆಯನ್ನು ಕಾಪಾಡಿಕೊಳ್ಳಿ.ಹಿರಿಯರು ಮತ್ತು ಬಂಧುಗಳಿಂದ ಉತ್ತಮವಾದ ಬೆಂಬಲ ಲಭ್ಯವಾಗಲಿದೆ. ಇಡೀ ದಿನ ಉಲ್ಲಾಸದಿಂದ ಇರುವಿರಿ. ಮಕ್ಕಳು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸುವರು. ಬರಬೇಕಾಗಿದ್ದ ಬಾಕಿ ಹಣ ಕೈ ಸೇರುವುದು.
ಅದೃಷ್ಟ ಸಂಖ್ಯೆ:2

ವೃಷಭ
ಸದಾ ಕಾಲವು ನಿಮ್ಮನ್ನು ಜನರು ಮಾತನಾಡಿಸಬೇಕು. ಪ್ರತಿಯೊಂದು ಕ್ರಿಯೆಗೂ ಶಹಾಬಾಸ್‌ಗಿರಿ ಕೊಡಬೇಕೆಂಬ ಮನೋಭೂಮಿಕೆಯಿಂದ ಹೊರಬನ್ನಿ. ಏಕೆಂದರೆ ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸಲು ಶಕ್ಯವಿಲ್ಲ. ನಿಮ್ಮಲ್ಲಿನ ತಪ್ಪನ್ನು ತಿದ್ದುವವರನ್ನು ಗೌರವಿಸಿ.ಕುಟುಂಬದ ಹಿರಿಯ ಸದಸ್ಯರ ನಿರೀಕ್ಷೆಗೆ ವಿರುದ್ಧವಾಗಿ ನಿಮ್ಮ ಜೀವನ ಕ್ರಮವನ್ನು ಅನುಸರಿಸದಿರಿ. ಹೀಗೆ ಮಾಡಿದಲ್ಲಿ ವಿನಾಕಾರಣ ನೀವು ನಿಷ್ಟೂರಕ್ಕೆ ಒಳಗಾಗುವಿರಿ ಮತ್ತು ನಿಮ್ಮ ಬಗ್ಗೆ ಇತರೆಯವರು ತೋರುವ ಗೌರವ ಕಡಿಮೆ ಆಗುವುದು.ಕೆಲಸ ಕಾರ್ಯಗಳಲ್ಲಿ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗದೆ ಪರದಾಟ ಉಂಟಾಗುವ ಸಾಧ್ಯತೆ ಇರುತ್ತದೆ. ವಿಷ್ಣುವಿನ ಆರಾಧನೆಯನ್ನು ಮಾಡುವುದು ಮತ್ತು ವಿಷ್ಣು ದೇವಾಲಯಕ್ಕೆ ತುಳಸೀ ಮಾಲೆಯನ್ನು ನೀಡುವುದು ಒಳ್ಳೆಯದು.
ಅದೃಷ್ಟ ಸಂಖ್ಯೆ:1

ಮಿಥುನ
ಸಾಮಾಜಿಕವಾಗಿ ನೀವು ಗುರುತಿಸಲ್ಪಡುವಿರಿ. ನೀವು ಅದ್ಭುತವೂ ವಿಶೇಷವೂ ಆದಂತಹ ಕಾಂತಿಯ ಶಕ್ತಿಯಾಗಿ ಆದರಿಸಲ್ಪಡುವಿರಿ. ಇದು ದೈವವು ನಿಮ್ಮ ಮೇಲೆ ತೋರಿದ ಔದಾರ್ಯವೆಂದು ಭಾವಿಸಿ. ಅಹಂಕಾರ ಪಡದಿರಿ.ಕೆಲಸದ ಬಗೆಗಿನ ಸಂದರ್ಶನವು ಉತ್ತಮ ರೀತಿಯಲ್ಲಿ ಆಗುವುದು. ಸಂದರ್ಶನದ ಫಲಿತಾಂಶವು ನಿಮ್ಮ ಜೀವನದ ದಿಕ್ಕನ್ನೆ ಧನಾತ್ಮಕವಾಗಿ ಬದಲಿಸುವ ಶಕ್ತಿಯನ್ನು ಹೊಂದಿರುತ್ತದೆ. ಸಂತೋಷದ ದಿನವಾಗಿರುತ್ತದೆ.
ಚಂಚಲತೆ ಸ್ವಭಾವವುಳ್ಳ ನೀವು ಯಾರೊಟ್ಟಿಗಾದರೂ ಮಾತಾಡಿದರೆ ಏನು ತಿಳಿದುಕೊಳ್ಳವರೋ ಎಂಬ ಸೂಕ್ಷ್ಮ ಪ್ರವೃತ್ತಿಯವರು. ಹಾಗಾಗಿ ಜನರೇ ನಿಮ್ಮನ್ನು ನೋಯಿಸುವರು. ಅವರಿಗೆ ಪ್ರತ್ಯುತ್ತರ ಕೊಡಲು ಅಸಹಾಯಕರಾಗಿ ನೋವನ್ನು ಅನುಭವಿಸುವಿರಿ.
ಅದೃಷ್ಟ ಸಂಖ್ಯೆ:2

ಕಟಕ
ನಿಜವಾದ ಅಂತಃಕರಣಶೀಲರಾದ ನೀವು ಪರರ ಕಷ್ಟಕ್ಕೆ ಮರುಗಿ ಸಹಾಯ ನೀಡುವಿರಿ. ಇದರಿಂದ ಜನರು ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನು ತಾಳುವರು. ನಿಮ್ಮನ್ನು ಗೌರವಿಸಲು ಬಂದ ವ್ಯಕ್ತಿಗಳೊಂದಿಗೆ ಸೌಜನ್ಯದಿಂದ ಮಾತನಾಡಿ.ಆರೋಗ್ಯದ ವಿಚಾರದಲ್ಲಿ ತೂಗುಯ್ಯಾಲೆಯ ರೀತಿಯ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವುದು. ಹನುಮಾನ್ ಚಾಲೀಸ್ ಪಠಿಸುವುದು ಒಳ್ಳೆಯದು.ಸಾಂಸಾರಿಕವಾದ ಬಿಕ್ಕಟ್ಟುಗಳನ್ನು ಆಂತರಿಕವಾಗಿಯೇ ಪರಿಹಾರ ಮಾಡಿಕೊಳ್ಳುವುದು ಒಳಿತು. 'ಸಂಸಾರ ಗುಟ್ಟು ವ್ಯಾಧಿ ರಟ್ಟು' ಎನ್ನುವ ನಾಣ್ನುಡಿಯನ್ನು ಅರಿತು ಬಾಳಿ. ಇಲ್ಲದಿದ್ದಲ್ಲಿ ಸಮಾಜದಲ್ಲಿ ನಿಮಗೆ ಗೌರವ ಕಡಿಮೆ ಆಗುವುದು.
ಅದೃಷ್ಟ ಸಂಖ್ಯೆ:6

ಸಿಂಹ
ನಿಮ್ಮಲ್ಲಿ ಅಡಗಿರುವ ಅಪರೂಪವಾದ ಶಕ್ತಿ, ಚೈತನ್ಯಗಳು ಅನ್ಯರನ್ನು ನಿಮ್ಮತ್ತ ಸೆಳೆಯಲು ಸಹಕಾರಿಯಾಗುವುದು. ಅಂತರಂಗದಲ್ಲಿನ ದುಗುಡ, ದುಮ್ಮಾನಗಳನ್ನು ಅದುಮಿಟ್ಟುಕೊಂಡು ಹೊರಜಗತ್ತಿನಲ್ಲಿ ನಗುವಿನ ಮುಖವಾಡವನ್ನು ಧರಿಸುವಿರಿ.ಕೌಟುಂಬಿಕ ವಲಯದಲ್ಲಿ ಕಿರಿಕಿರಿಯಾಗುವ ವಾದವಿವಾದಗಳನ್ನು ತಪ್ಪಿಸಿಕೊಳ್ಳಲು ತಾಳ್ಮೆ ರೂಢಿಸಿಕೊಂಡರೆ ಒಳ್ಳೆಯದು. ಕ್ರಮಭರಿತ ಅಥವಾ ಶಿಸ್ತುಬದ್ಧ ನಿಮ್ಮ ಜೀವನವು ಇತರರಿಗೆ ಮಾದರಿಯಾಗಿ ನಿಲ್ಲುವುದು.ನಿಮ್ಮ ವಿಚಾರದಲ್ಲಿ ಈ ದಿನದ ಬೆಳವಣಿಗೆಗಳು ಧನಾತ್ಮಕವಾಗಿ ಮೂಡಿಬರುವುದು. ಹಾಗಾಗಿ ನಿಮಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಬರುವವು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ ಮತ್ತು ಬೆಳೆದು ನಿಂತ ಮಗನ ಮನಸ್ಸನ್ನು ನೋಯಿಸದಿರಿ.
ಅದೃಷ್ಟ ಸಂಖ್ಯೆ:9

ಕನ್ಯಾ
ಅಯ್ಯೋ ಪಾಪ ಎಂದರೆ ಆಯುಷ್ಯ ಕಡಿಮೆ ಆಗುವಂತಹ ಸಂದರ್ಭವಿದೆ. ಪರರ ಕಷ್ಟಕ್ಕೆ ಮರುಗಿ ದಾನಶೂರ ಕರ್ಣನಂತೆ ಇದ್ದುದೆಲ್ಲವನ್ನು ಪರರಿಗೆ ಹಂಚುವ ಔದಾರ್ಯದಿಂದ ಕೆಲಕಾಲ ಹಿಂದೆ ಸರಿಯುವುದು ಒಳ್ಳೆಯದು.ತಾಳ್ಮೆ ಹಾಗೂ ನಿಮ್ಮ ಸೂಕ್ಷ್ಮ ಮತಿಯು ಹೊಸದೇ ಆದ ಅನುಪಮ ಅವಕಾಶವೊಂದನ್ನು ತಂದು ಕೊಡುವುದು. ಇದರಿಂದ ಮನೆಯಲ್ಲಿಯೂ ಮತ್ತು ಹೊರಗಿನ ಸಮಾಜದಲ್ಲಿಯೂ ಹೆಸರನ್ನು ತಂದುಕೊಡುವುದು.ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಹೊಸ ಸಮಸ್ಯೆಯೊಂದು ಸೃಷ್ಟಿ ಆಗುವುದು. ಸಹೋದ್ಯೋಗಿಗಳ ಜೊತೆಯಲ್ಲಿ ಕುಳಿತು ಸಮಸ್ಯೆಯ ಗಂಭೀರತೆಯನ್ನು ಚರ್ಚಿಸಿ. ಪರಿಹಾರ ದೊರೆಯುವುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ಅದೃಷ್ಟ ಸಂಖ್ಯೆ:6

ತುಲಾ
ನಿಮ್ಮೊಳಗಿನ ಸೂಕ್ಷ್ಮ ಅಹಂಕಾರದ ಕುರಿತಾಗಿ ಪರಾಮರ್ಶೆಯನ್ನು ಮಾಡಿಕೊಳ್ಳಿ. ಎಲ್ಲಾ ಖಾರಕ್ಕಿಂತ ಅಹಂಕಾರ ಹೆಚ್ಚು ಖಾರ ಎಂಬ ಅನುಭವದ ಮಾತು ನಿಮಗೆ ಬಿಸಿ ಮುಟ್ಟಿಸುವುದು. ಉತ್ತಮರಾದ ಸ್ನೇಹಿತರ ಸಲಹೆಯನ್ನು ಪಡೆಯಿರಿ.ಲಂಗುಲಗಾಮಿಲ್ಲದ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಕಾರ್ಯೋನ್ಮುಖರಾಗಿ. ಕೂಡಿಟ್ಟ ಹೊನ್ನು ಕರಗಿ ಹೋಗುವ ಸಾಧ್ಯತೆ ಇರುತ್ತದೆ. ಸಾಲಮಾಡಿ ಜೀವನ ನಡೆಸುವ ಹಂತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ. ಆದಷ್ಟು ಪ್ರಾಮಾಣಿಕ ಜೀವನ ನಡೆಸಿ.ಉದಾಸೀನತೆಯೇ ಅಧೋಗತಿಗೆ ಮೂಲ ಎಂದರು ಹಿರಿಯರು. ಹಾಗಾಗಿ ಹಿರಿಯರ ಮಾತನ್ನು ಉಡಾಫೆತನದಿಂದ ತಿರಸ್ಕರಿಸಿದಲ್ಲಿ ಸೋಲನ್ನು ಕಾಣುವಿರಿ. ಸದ್ಯದ ಪರಿಸ್ಥಿತಿ ಉತ್ತಮವಾಗಿಲ್ಲದಿರುವಾಗ ಚಿಕ್ಕಮಗುವು ಹೇಳಿದ ಮಾತನ್ನು ಕೇಳಬೇಕಾದೀತು.
ಅದೃಷ್ಟ ಸಂಖ್ಯೆ:2

ವೃಶ್ಚಿಕ
ನಂಬಿಕೆಯೆ ದೇವರು. ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ಎಂಬ ದಾಸವಾಣಿಯನ್ನು ನಿಮ್ಮ ವ್ಯಾಪಾರ, ವ್ಯವಹಾರದ ಬಂಡವಾಳ ಮಾಡಿಕೊಳ್ಳಿ. ಹಾಗಾಗಿ ಕೆಲಸಗಾರರನ್ನು ನಂಬಿ. ಮತ್ತು ಅವರೂ ಕೂಡಾ ನಿಮ್ಮನ್ನು ನಂಬುವಂತೆ ಮಾಡಿ.ನೀವು ಹಮ್ಮಿಕೊಂಡಿರುವ ಕಾರ್ಯಗಳು ಜನಮನ್ನಣೆ ಗಳಿಸುವುದು. ಇದರಿಂದ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಗುರುತಿಸಿಕೊಳ್ಳುವಿರಿ. ನಿಮ್ಮನ್ನು ಭಾವಿ ನಾಯಕನೆಂದು ಗುರುತಿಸಿ ಗೌರವಿಸುವ ಸಂದರ್ಭ ಎದುರಾಗುವುದು. ಬಂದ ಅವಕಾಶಗಳನ್ನು ಬಿಡಬೇಡಿ.ಮುನ್ನುಗ್ಗುವ ಮಾರ್ಗದಲ್ಲಿ ಕಾಲಿಡುವ ಕಡೆಯಲ್ಲೆಲ್ಲ ಮುಳ್ಳುಗಳೇ ಎದುರಾಗುವುದು. ಮುಳ್ಳಿನಿಂದ ರಕ್ಷ ಣೆ ಹೊಂದಲು ಪಾದರಕ್ಷೆ ಧರಿಸುವಂತೆ ನಿಮ್ಮ ವಿರೋಧಿಗಳನ್ನು ಮಟ್ಟಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುವುದು.
ಅದೃಷ್ಟ ಸಂಖ್ಯೆ:1

ಧನಸ್ಸು
ನಿಮ್ಮ ಪಾಲುಗಾರಿಕೆ ವ್ಯವಹಾರದಲ್ಲಿ ಅತಿ ಹೆಚ್ಚಿನ ಲಾಭಾಂಶವನ್ನು ನಿರೀಕ್ಷಿಸಬಹುದು. ಪಾಲುದಾರರು ನಿಷ್ಠೆಯಿಂದ ಬಂದ ಲಾಭಾಂಶದಲ್ಲಿ ನಿಮ್ಮ ಪಾಲನ್ನು ನೀಡುವರು. ಇದರಿಂದ ಮುಂದಿನ ವ್ಯವಹಾರಗಳು ಸುಗಮವಾಗುವುದು.ಕೆಲ ಗ್ರಹಗಳ ಪ್ರಭಾವ ನಿಮ್ಮ ಮೇಲೆ ಹಲವು ರೀತಿಯಲ್ಲಿ ಆಗುವ ಸಾಧ್ಯತೆ ಇದೆ. ವಾಹನಗಳನ್ನು ಓಡಿಸುವಾಗ ಎಚ್ಚರ ಪಾಲಿಸುವುದು ಒಳ್ಳೆಯದು. ಪ್ರಯಾಣ ಮಾಡುವಾಗ ಮೊಬೈಲ್ ಉಪಯೋಗಿಸದೆ ಇರುವುದು ಒಳ್ಳೆಯದು.ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡುವಿರಿ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಕಾರ್ಯವನ್ನು ವೀಕ್ಷಿಸಿ ಬೆನ್ನು ಚಪ್ಪರಿಸುವವರು ಕಡಿಮೆ. ಆದಾಗ್ಯೂ ದೈವದ ಮೊರೆ ಹೋಗಿ. ಮನಸ್ಸಿನ ದುಗುಡಗಳು ಕಡಿಮೆ ಆಗುವುದು.
ಅದೃಷ್ಟ ಸಂಖ್ಯೆ:9

ಮಕರ
ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎನ್ನುವಂತೆ ನಿಮ್ಮ ಮನೆಗೆ ಲಕ್ಷ್ಮೀಯ ಆಗಮನವಾಗುವುದು. ದುಡಿದ ಹಣದಲ್ಲಿ ಸ್ವಲ್ಪ ಭಾಗ ದಾನ ಧರ್ಮ ಮಾಡಿದಲ್ಲಿ ನಿಮಗೂ ನಿಮ್ಮ ಕುಟುಂಬಕ್ಕೂ ಒಳಿತಾಗುವುದು.ದೂರ ದೇಶದ ಪ್ರಯಾಣದ ಕುರಿತು ಚಿಂತಿಸುತ್ತಿದ್ದರೆ ವೀಸಾ ಅನುಮತಿಗಾಗಿ ಅರ್ಜಿ ಹಾಕಿಕೊಳ್ಳುವುದು ಒಳ್ಳೆಯದು. ದೈವಕೃಪೆಯಿಂದ ನಿಮ್ಮ ಕೆಲಸಗಳು ಸುಗಮವಾಗುವುದು.ಮಕ್ಕಳ ವಿಚಾರದಲ್ಲಿ ಹರ್ಷದಾಯಕವಾದ ಮತ್ತು ಹೆಮ್ಮೆ ಪಡುವಂತಹ ವಿಚಾರಗಳು ನಿಮ್ಮನ್ನು ತಲುಪಿ ಸಂತೋಷ ಸಾಗರದಲ್ಲಿ ತೇಲುವಿರಿ. ಹಣಕಾಸಿನ ಪರಿಸ್ಥಿತಿ ಸುಧಾರಣೆ ಆಗುವುದರಿಂದ ಹೆಚ್ಚು ಉತ್ಸಾಹಶಾಲಿಗಳಾಗುವಿರಿ.
ಅದೃಷ್ಟ ಸಂಖ್ಯೆ:6

ಕುಂಭ
ಕಚೇರಿ ಕೆಲಸ ಕಾರ್ಯಗಳಲ್ಲಿ ನೀವು ತೋರುವ ಶ್ರದ್ಧೆ ಮತ್ತು ನಿಮ್ಮ ಮೇಲೆ ಮೇಲಧಿಕಾರಿಗಳ ಕೃಪಾಕಟಾಕ್ಷ ಕಂಡು ಇತರೆಯವರು ಅಸೂಯೆ ಪಡುವರು. ನಿಮ್ಮನ್ನು ಮಣಿಸಲೆಂದೆ ನಿಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುವರು. ಈ ಬಗ್ಗೆ ತಲೆಕೆಡಿಸಿಕೊಳ್ಳದಿರಿ.ಈ ದಿನ ಮತ್ತೊಮ್ಮೆ ನಿಮ್ಮ ಬುದ್ಧಿಚಾತುರ‍್ಯದ ಪ್ರದರ್ಶನವಾಗುವುದು. ಇದರಿಂದ ನಿಮ್ಮ ಮೇಲಧಿಕಾರಿಗಳು ಸಂತುಷ್ಟರಾಗುವರು. ನಿಮಗೆ ಸರ್ಕಾರದಿಂದ ಬರಬೇಕಾಗಿದ್ದ ಸೌಲಭ್ಯಗಳು ಬೇಗನೆ ಬರುವಂತೆ ಒತ್ತಡ ತರುವರು.ಹೊಸ ವಹಿವಾಟೊಂದರ ವಿಚಾರಗಳ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸುವಿರಿ. ನೀವು ನೀಡುವ ಸಲಹೆಯು ಸೂಕ್ತ ವಾದುದೆಂದು ಪರಿಗಣಿಸಿ. ಅದನ್ನು ಕಾರ್ಯರೂಪಕ್ಕೆ ತರುವರು. ಇದರಿಂದ ಕಚೇರಿ ವಾತಾವರಣದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.
ಅದೃಷ್ಟ ಸಂಖ್ಯೆ:2

ಮೀನ
ನಿಮ್ಮ ಮೇಲೆ ನಿಜವಾದ ಅಂತಃಕರಣದಿಂದ ಮಿಡಿಯುವ ಜನರ ಭೇಟಿ ಆಗುವುದು. ಇದರಿಂದ ನಿಮಗೆ ಮಾನಸಿಕ ಧೈರ್ಯ-ಸ್ಥೈರ್ಯ ಬರುವುದು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ಸಾಹ ತೋರುವಿರಿ.'ಮನೆಗೆದ್ದು ಮಾರುಗೆಲ್ಲು' ಎನ್ನುವರು ಹಿರಿಯರು. ಅಂತೆಯೇ ಮನೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಅತ್ಯಂತ ಹರ್ಷದಿಂದ ಬಾಳುವಿರಿ. ಮನಸ್ಸಿನ ದುಗುಡಗಳು ಕಾಣೆ ಆಗುವುದು. ಕುಲದೇವರನ್ನು ಭಜಿಸಿ.
ಮುನ್ನುಗ್ಗುವ ವ್ಯಕ್ತಿಯನ್ನು ಕೀಟಲೆ ಮಾಡಿ ಅವನಿಗೆ ಅಡೆತಡೆ ಉಂಟು ಮಾಡಲು ಕಿತಾಪತಿ ಜನರು ನಿಮ್ಮ ಸುತ್ತಮುತ್ತಲಿನಲ್ಲಿರುವರು. ಅವರ ಹಾವಭಾವ ಮತ್ತು ಮಾತುಕತೆಗೆ ಉತ್ತರ ಕೊಡದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಯಶಸ್ಸು ನಿಮ್ಮದಾಗುವುದು.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











