Latest Updates
-
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ!
25-11-2018: ಭಾನುವಾರದ ದಿನ ಭವಿಷ್ಯ
ಭಾನುವಾರದ ದಿನ ಸೂರ್ಯೋದಯದಿಂದ ದಿನ, ಎಂದಿನ ಕೆಲಸಗಳು ಪ್ರಾರಂಭ. ಕೆಲಸಗಳಿಂದಲೇ ಜೀವನ. ಆದುದರಿಂದ ಕೆಲಸಕ್ಕೆ ಕಾರಕ ಸೂರ್ಯ. ಇದರಿಂದ ಸೂರ‍್ಯನು ಉದ್ಯೋಗಕಾರಕನಾದನು.

ಮನುಷ್ಯನಿಗೆ ಬದುಕುವ ಶಕ್ತಿ ಕೊಡುವವನೇ ದೇವರು. ಅಂತಹ ಶಕ್ತಿ ಕೊಡುವವನು ಈ ಸೂರ್ಯ. ನಾವು ಜೀವಿಸುತ್ತಿರುವ ಪ್ರಕೃತಿಯೇ ಆ ಸೂರ್ಯನದು. ನಮ್ಮ ದರ್ಶನ ನಮಗಾಗಬೇಕೆಂದರೆ ಸೂರ್ಯ ಬೇಕು. ನಾವು ಜ್ಞಾನಿಗಳಾಗುತ್ತ ಹೋದಂತೆ ನಂಬಿಕೆಯ ರೀತಿಯನ್ನೂ ಬದಲಾಯಿಸಿಕೊಂಡಿದ್ದೇವೆ. ಹಿಂದಿನವರು ಸೌರಮಂಡಲದ ಬಗ್ಗೆ ತಿಳಿದಿರದಿದ್ದರೂ ಸೂರ್ಯನನ್ನು ನಮಿಸಿ ಪೂಜಿಸುತ್ತಿದ್ದರು. ಸದಾ ಸನ್ನಡತೆಯಲ್ಲಿಯೇ ಜೀವಿಸಲು ಯೋಚಿಸುತ್ತಿದ್ದರು.ಪ್ರತ್ಯಕ್ಷ ದೈವನಾಗಿರವುದರಿಂದ ಭಾಸ್ಕರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807

ಮೇಷ
ಸುಮ್ಮನೆ ನಿರೀಕ್ಷೆ ಇಟ್ಟುಕೊಂಡು ಕೂರುವುದಕ್ಕಿಂತ ಇತರೆ ಕಾರ್ಯಗಳಲ್ಲಿ ಮಗ್ನವಾಗುವುದು ಉತ್ತಮ. ತಾನು ಮಾಡುವುದು ಒಳ್ಳೆಯದು, ಮಗ ಮಾಡುವುದು ಹಾನಿ ಎಂಬ ಮಾತಿದೆ. ಹಾಗಾಗಿ ನೀವೇ ಖುದ್ದಾಗಿ ಕೆಲಸ ಕಾರ್ಯ ಮಾಡುವುದು ಒಳ್ಳೆಯದು.ಸಮುದ್ರದಲ್ಲಿ ಅಲೆಗಳು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಅಲೆ ನಿಂತ ಮೇಲೆ ಸಮುದ್ರ ಸ್ನಾನ ಮಾಡುತ್ತೇನೆ ಎಂದರೆ ಆಗುವುದಿಲ್ಲ. ಆ ಅಲೆಗಳ ಮಧ್ಯೆಯೇ ಸ್ನಾನ ಮಾಡುವಂತೆ ನಿತ್ಯ ಜೀವನ ಜಂಜಾಟದ ನಡುವೆ ಭಗವಂತನನ್ನು ಆರಾಧಿಸುವುದು ಒಳ್ಳೆಯದು. ಕೇವಲ ಕೃತ್ರಿಮ ಮಾತುಗಳಿಂದಲೇ ನಿಮ್ಮನ್ನು ಹಣಿಯಲು ಕೆಲವರು ಕಾದಿರುವರು. ಇದರಿಂದ ಪಾರಾಗಲು ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು.
ಅದೃಷ್ಟ ಸಂಖ್ಯೆ:2

ವೃಷಭ
ಯಾಕಾದರೂ ಈ ಕೆಲಸಕ್ಕೆ ಕೈ ಹಾಕಿದೆನೋ ಎಂಬ ನಿರಾಸೆ ಬೇಡ. ದೈವದ ಅನುಗ್ರಹದಿಂದ ಸಿದ್ಧಿ ದೊರೆಯುವುದು. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ನಿಮ್ಮ ಮನಸ್ಸಿಗೆ ಮುದ ನೀಡುವರು.ನೀವು ಪರೋಪಕಾರಿ ಎಂದು ಹಲವಾರು ಬಾರಿ ಸಾಬೀತಾದ ವಿಷಯ. ಅಂತೆಯೆ ನೀವು ಹಮ್ಮಿಕೊಳ್ಳುವ ಕೆಲಸ ಕಾರ್ಯಗಳಿಗೆ ಇತರರು ಸಹಕಾರ ನೀಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹೊಯ್ದಾಟದ ದಾರಿಗಳೇ ಎದುರಿಗೆ ಬಂದು ನಿಲ್ಲುತ್ತವೆ. ಗಟ್ಟಿ ಮನಸ್ಸಿನಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಮನೋಕಾಮನೆಗಳು ಬೇಗನೆ ಕಾರ್ಯರೂಪಕ್ಕೆ ಬರುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟ ಸಂಖ್ಯೆ:1

ಮಿಥುನ
ಮನಸ್ಸಿನ ಸಂತಸವನ್ನು ನಿಯಂತ್ರಿಸಿಕೊಳ್ಳಿ. ಕೆಟ್ಟ ದೃಷ್ಟಿಯ ಜನ ಎಲ್ಲವನ್ನೂ ಹಾಳು ಮಾಡುವರು. ಶ್ರೀ ರಾಘವೆಂದ್ರ ಸ್ವಾಮಿಯನ್ನು ಮನಸಾ ಸ್ಮರಿಸಿ. ಕೆಲವು ವಿಚಾರಗಳಲ್ಲಿ ಸಹೋದರನ ಸಹಕಾರ ಬಯಸುವುದು ಒಳ್ಳೆಯದು.ಸುಮ್ಮನೆ ಗಾಳಿಗೆ ಗುದ್ದಿ ಮೈ ನೋಯಿಸಿಕೊಳ್ಳದಿರಿ. ಧನಾತ್ಮಕ ಚಿಂತನೆಗಳಿಂದ ನಿಶ್ಚಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.ಮನೆಯ ಬಂಧುಬಾಂಧವರು ಇಲ್ಲವೆ ಆತ್ಮೀಯ ಸ್ನೇಹಿತರೆ ನಿಮ್ಮನ್ನು ವಿರೋಧಿಸುವರು. ದೈವಕೃಪೆಯಿಂದ ಎಲ್ಲವೂ ಒಳಿತಾಗುವುದು. ಬಡವರಿಗೆ ಆಹಾರ ಕೊಡಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.
ಅದೃಷ್ಟ ಸಂಖ್ಯೆ:2

ಕಟಕ
ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂಬಂತೆ ಸದಾ ಶ್ರೀಹರಿಯನ್ನು ನೆನೆಯಿರಿ. ಸದ್ಯದ ಪರಿಸ್ಥಿತಿಯಲ್ಲಿ ಭಗವಂತನೇ ನಿಮ್ಮ ಸಹಾಯಕ್ಕೆ ಬರುವರು. ವೃತ್ತಿಯಲ್ಲಿನ ಕಿರಿಕಿರಿ ನಿವಾರಣೆಗಾಗಿ ಮಾತಾ ದುರ್ಗಾದೇವಿಯನ್ನು ಸ್ಮರಿಸಿ.
ಸಮೃದ್ಧಿಯ ದಿನಗಳನ್ನು ಕಂಡ ನಿಮಗೆ ತೊಳಲಾಟವಾಗುವುದು. ಆದರೂ ಧೈರ್ಯದಿಂದ ಎದುರಿಸಿ. ದೈವಕೃಪೆ ಅಪಾರವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ನಿಮ್ಮ ಮುಂದೆ ನಿಮ್ಮಂತೆ ಮಾತನಾಡಿ ಹಿಂದುಗಡೆಯಿಂದ ನಿಮ್ಮ ಬಗ್ಗೆ ಕುಹಕ ಮಾತನಾಡುವ ಮಂದಿ ಬಗ್ಗೆ ಜಾಗೃತರಾಗಿ. ಸ್ವಂತ ಒಡಹುಟ್ಟಿದವರು ಇಲ್ಲವೆ ನಿಮ್ಮ ಮಕ್ಕಳೆ ಶತ್ರುಗಳಂತೆ ವರ್ತಿಸುವರು ತಾಳ್ಮೆ ಇರಲಿ.
ಅದೃಷ್ಟ ಸಂಖ್ಯೆ:4

ಸಿಂಹ
ಸರ್ರನೆ ಯಾರ ಬಗೆಗೂ ನಿಮ್ಮ ಪ್ರತಿಕ್ರಿಯೆ ತಿಳಿಸದಿರಿ. ನಿಮ್ಮ ಸುತ್ತಮುತ್ತಲು ಹಿತಶತ್ರುಗಳೇ ತುಂಬಿ ಕೊಂಡಿರುವರು. ನಿಮ್ಮ ನಿಧಾನ ನಡೆ ಮತ್ತು ಯೋಚಿಸಿ ಮಾತನಾಡುವ ಪರಿಯು ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗುವುದು. ಮಹತ್ತರ ವಿಷಯವೊಂದನ್ನು ತಿಳಿಯುವಿರಿ. ಎಲ್ಲದಕ್ಕೂ ಕೋಲೆ ಬಸವನಂತೆ ಒಪ್ಪಿಗೆ ಸೂಚಿಸದಿರಿ. ನನ್ನಿಂದ ಈ ಕೆಲಸ ಆಗುವುದಿಲ್ಲ ಎನ್ನುವ ದಿಟ್ಟ ನಿಲುವನ್ನು ತಿಳಿಸಿ. ಇಲ್ಲದೆ ಇದ್ದಲ್ಲಿ ಅನಗತ್ಯ ತೊಂದರೆಯನ್ನು ಎದುರಿಸಬೇಕಾಗುವುದು.
ತಂದೆಗೆ ಸಂಬಂಧಿಸಿದ ಸ್ಥಿರಾಸ್ತಿಯೊಂದರ ಬಗೆಗಿನ ಹೊಸ ಮಾಹಿತಿಗಳು ಕುಟುಂಬದ ಹಿರಿಯರೊಬ್ಬರಿಂದ ಲಭ್ಯವಾಗಲಿದೆ. ಇದು ನಿಮಗೆ ಪೂರಕವಾಗಿದ್ದು ಮುಂದಿನ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗುವುದು.
ಅದೃಷ್ಟ ಸಂಖ್ಯೆ:6

ಕನ್ಯಾ
ಹೋಟೆಲ್, ರತ್ನವ್ಯಾಪಾರಿಗಳು ಇಲ್ಲವೆ ಔಷಧ ವ್ಯವಹಾರದಲ್ಲಿರುವವರು ಸರ್ಕಾರಿ ಅಧಿಕಾರಿಗಳಿಂದ ದಿಢೀರನೆ ತಪಾಸಣೆಯನ್ನು ಎದುರಿಸಬೇಕಾಗುವುದು. ಸೂಕ್ತ ಲೆಕ್ಕಪತ್ರ ಮತ್ತು ಸ್ಥಳದ ಶುಚಿತ್ವದ ಕಡೆ ಗಮನ ಹರಿಸಿ. ಆದಾಗ್ಯೂ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ. ಬಹುದಿನಗಳ ನಂತರ ಜೀವನದಲ್ಲಿ ನೆಮ್ಮದಿಯ ಮತ್ತು ಸಂತೋಷದ ದಿನಗಳನ್ನು ಕಾಣುವಿರಿ. ನಿಮ್ಮ ಮೇಲೆ ಇದ್ದ ಅಪವಾದಗಳಲ್ಲಿ ಹುರುಳಿಲ್ಲ ಎಂದು ಸಾಬೀತು ಆಗುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.ಹರ್ಷಕ್ಕೆ ಕಾರಣವಾಗುವ ವಿಚಾರ ಬಲಯುತವಾಗಿದ್ದು ನಿಮ್ಮ ಬದುಕಿನ ದಾರಿಯನ್ನೆ ಬದಲಿಸಲು ಅವಕಾಶ ಕೂಡಿ ಬರುತ್ತದೆ. ಮನೆಗೆ ನೂತನ ಸದಸ್ಯನ ಆಗಮನದ ಸಂಭ್ರಮ ಗರಿಗೆದರುವುದು.
ಅದೃಷ್ಟ ಸಂಖ್ಯೆ:4

ತುಲಾ
ಅರಸನನ್ನು ಕಂಡು ತನ್ನ ಪುರುಷನನ್ನು ಮರೆತ ಮಹಿಳೆಯಂತೆ ಯಾರೋ ನಿಮಗೆ ಸಹಾಯ ಮಾಡುವರೆಂದು ಭಾವಿಸಿ ಇದ್ದ ಅಲ್ಪಸ್ವಲ್ಪ ಹಣವನ್ನು ಖರ್ಚು ಮಾಡುವುದು ಸರಿಯಲ್ಲ. ಮನೆಯ ಹಿರಿಯರ ವಿಚಾರಗಳಿಗೆ ಗೌರವ ಕೊಡಿ. ನಿಮ್ಮ ದಾರಿ ಸುಗಮವಾಗಿಲ್ಲ. ಬಸವಳಿಯುವಂತೆ ಕಲ್ಲುಮುಳ್ಳುಗಳೇ ದಾರಿ ತುಂಬಾ ಹರಡಿವೆ. ಆದಾಗ್ಯೂ ತಾಳ್ಮೆ ಮತ್ತು ಅನುಭವಗಳ ದೃಷ್ಟಿಯಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಉತ್ತಮವಲ್ಲ. ಉಸಿರು ಕಟ್ಟಿಸುವ ವಾತಾವರಣ ಇರುತ್ತದೆ. ಕುಲದೇವರ ಪ್ರಾರ್ಥನೆಯೊಂದಿಗೆ ಮನೆಯಿಂದ ಹೊರಡಿ. ಸಹೋದ್ಯೋಗಿಗಳೊಡನೆ ಅನಗತ್ಯ ಚರ್ಚೆ ಬೇಡ. ಕುಲದೇವರನ್ನು ಸ್ಮರಣೆ ಮಾಡಿ. ಹೆಚ್ಚಿನ ತೊಂದರೆ ಆಗುವುದಿಲ್ಲ.
ಅದೃಷ್ಟ ಸಂಖ್ಯೆ:8

ವೃಶ್ಚಿಕ
ಕೆಲವು ಅನಪೇಕ್ಷಿತ ಅತಿಥಿಗಳು ನಿಮ್ಮ ಕೆಲಸ ಕಾರ್ಯಗಳಲ್ಲಿ ಮೂಗು ತೂರಿಸಿ ಕಿರಿಕಿರಿಯನ್ನುಂಟು ಮಾಡುವ ಸಾಧ್ಯತೆ ಇರುವುದು. ಅವರನ್ನು ನಯವಾದ ಮಾತುಗಳಿಂದ ದೂರ ಇಡುವುದು ಒಳ್ಳೆಯದು. ನಿಮ್ಮ ಬಹು ಅಮೂಲ್ಯವಾದ ಕಡತವೊಂದನ್ನು ಅಪಹರಿಸಲು ಕೆಲವರು ಸಂಚು ಹೂಡಿರುವರು. ಹಾಗಾಗಿ ಅಂತಹ ಮುಖ್ಯವಾದ ಕಡತವನ್ನು ಜೋಪಾನವಾಗಿಟ್ಟುಕೊಳ್ಳಿ. ಇಲ್ಲವೆ ಅದನ್ನು ಹಿರಿಯ ಅಧಿಕಾರಿಗೆ ಕೊಟ್ಟಿರುವೆ ಎಂದು ಅವರನ್ನು ಸಾಗಹಾಕಿ.ವಿರೋಧಿಗಳನ್ನು ಉದ್ರೇಕಗೊಳಿಸುವ ಕೆಲಸಕ್ಕೆ ಕೈಹಾಕದಿರಿ. ಒಂದು ಮಹತ್ತರ ಕಾರ್ಯ ಆಗಲು ಸ್ನೇಹಿತನ ಸಹಾಯವನ್ನು ಪಡೆಯಿರಿ. ಬರೀ ಒಣ ಮಾತಿನಿಂದ ಕಾರ್ಯವನ್ನು ನಿರ್ವಹಿಸಲು ಆಗುವುದಿಲ್ಲ.
ಅದೃಷ್ಟ ಸಂಖ್ಯೆ:9

ಧನುಸ್ಸು
ಅನವಶ್ಯಕವಾದದ್ದನ್ನು ಬಿಟ್ಟು, ಸದ್ಯದ ಪರಿಸ್ಥಿತಿಗೆ ಬೇಕಾಗಬಹುದಾದ ಪದಾರ್ಥಗಳನ್ನು ಮಾತ್ರ ಖರೀದಿ ಮಾಡಿ. ಹಣದ ಉಳಿತಾಯಕ್ಕಾಗಿ ಹಾಕಿದ ಶ್ರಮ ಅಸಫಲತೆ ಕಾಣುವುದು.ಯಾವುದೇ ಕಾರಣಕ್ಕೂ ಬೇರೊಬ್ಬರ ಜತೆಯಲ್ಲಿ ವಾಗ್ವಾದ ಮಾಡುವುದಕ್ಕೆ ಹೋಗಬೇಡಿ ಅದು ನಿಮಗೆ ಅಷ್ಟು ಶುಭವಲ್ಲ. ಆಂಜನೇಯ ಸ್ತೋತ್ರ ಪಠಿಸಿ. ಸಹೋದರರೊಂದಿಗೆ ವೈಮನಸ್ಸು ಬೆಳೆಯಲು ಕಾರಣವಾಗುವುದು. ಅದನ್ನು ಮೂಲದಲ್ಲಿಯೇ ಕತ್ತರಿಸಿ ಹಾಕಿ.ಜನರ ಮನಸ್ಸು ಗೆಲ್ಲುವಂತಹ ಕೆಲಸವೊಂದನ್ನು ಮಾಡುವಿರಿ. ಹಾಗಾಗಿ ಆ ಕೆಲಸ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ನಿಮಗೆ ಖುಷಿ ತಂದುಕೊಡುವುದು.
ಅದೃಷ್ಟ ಸಂಖ್ಯೆ:8

ಮಕರ
ಸದಾ ಚಿಂತೆಯಲ್ಲಿದ್ದು ಎಲ್ಲಾ ಕಳೆದುಕೊಂಡ ಭಾವ ಬೇಡ. ಧೈರ್ಯವಾಗಿ ಮುನ್ನುಗ್ಗಿ ಕಾರ‍್ಯ ಸಾಧಿಸಿ. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ನೀವಾಡುವ ಮಾತಿನಿಂದ ವಿರಸ ಉಂಟಾಗುವ ಸಾಧ್ಯತೆ ಇದೆ. ತಾಳ್ಮೆಯಿಂದಿರಿ.ಆಂಜನೇಯ ಸ್ವಾಮಿಯನ್ನು ಆರಾಧಿಸಿ, ಆನಂದವನ್ನು ಹೊಂದಿ. ಸಂಜೆಯ ವೇಳೆಗೆ ಮನದ ಅಭಿಲಾಷೆಗಳಿಗೆ ಉತ್ತಮ ಸಿದ್ಧಿ ದೊರೆಯುವುದು. ಹಣದ ಸಂಕಷ್ಟವನ್ನು ಎದುರಿಸುವಿರಿ.ಮನೆಯ ಸದಸ್ಯರೊಡನೆ ಹೆಚ್ಚಿನ ಸಮಯವನ್ನು ಕಳೆಯಿರಿ. ಇದರಿಂದ ಉಭಯರಿಗೂ ಒಳಿತಾಗುವುದು. ಕರಿದ ಪದಾರ್ಥಗಳ ಅತಿಯಾದ ಸೇವನೆಯಿಂದ ದೂರವಿರಿ. ಶೀತಬಾಧೆ, ನಿಶ್ಯಕ್ತಿ ಕಾಡುವುದು.
ಅದೃಷ್ಟ ಸಂಖ್ಯೆ:6

ಕುಂಭ
ಧ್ವನಿಯಲ್ಲಿ ಗಾಂಭೀರ್ಯವಿರಲಿ. ವ್ಯಾಪಾರ ವ್ಯವಹಾರದ ವಿಷಯದಲ್ಲಿ ದುಡುಕಿ ನಿರ್ಧಾರ ತಳೆಯವುದು ಸೂಕ್ತವಲ್ಲ. ಆಕಾಶಕ್ಕೆ ಏಣಿ ಹಾಕದೆ ಹಾಸಿಗೆ ಇದ್ದಷ್ಟು ಕಾಲು ಚಾಚಿ. ಹಣದ ವ್ಯವಹಾರದಲ್ಲಿ ಕೈಹಿಡಿತ ಮಾಡುವುದು ಒಳ್ಳೆಯದು. ಕೆಲಸದ ಸ್ಥಳದಲ್ಲಿ ಹಲವು ಕಿರಿಕಿರಿಗಳನ್ನು ಎದುರಿಸುವಿರಿ. ಆ ಕಿರಿಕಿರಿಯನ್ನು ಮನೆಗೆ ತಂದು ಮನೆಯವರ ಮೇಲೆ ರೇಗಾಡದಿರಿ. ಮನಸ್ಸಿನ ಶಾಂತತೆಗಾಗಿ ಶಿವ ಪಂಚಾಕ್ಷ ರಿ ಮಂತ್ರವನ್ನು ಜಪಿಸಿ. ಬಡವರಿಗೆ ಆಹಾರ ನೀಡಿ. ಹೃದಯ ವೈಶಾಲ್ಯತೆ ಇರುವ ಮನುಜನಿಗೆ ಭಗವಂತ ಸಹಾಯ ಮಾಡುತ್ತಾನೆ. ಹಾಗಾಗಿ ಈ ಹಿಂದೆ ಆಗದೆ ಇದ್ದ ಕೆಲಸವು ದೈವಾನುಕೂಲತೆಯಿಂದ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.
ಅದೃಷ್ಟ ಸಂಖ್ಯೆ:2

ಮೀನ
ಸದ್ಯದ ಗ್ರಹಸ್ಥಿತಿಗಳು ಉತ್ತಮವಿಲ್ಲ. ಹಗ್ಗವೆಂದು ತುಳಿದದ್ದು ಹಾವಾಗಿ ಕಚ್ಚುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಹತ್ತರ ಕಾರ್ಯಗಳನ್ನು ಮುಂದೂಡುವುದು ಒಳ್ಳೆಯದು. ಆರೋಗ್ಯದ ಕಡೆ ಗಮನ ಹರಿಸಿ. ಭಗವಂತನು ನಿಮ್ಮ ಜೀವನದಲ್ಲಿ ಬಯಸಿದ್ದೆಲ್ಲವನ್ನು ನೀಡುತ್ತಿರುವನು. ಹಾಗಾಗಿ ಆತನ ಕಾರುಣ್ಯವನ್ನು ಕೊಂಡಾಡುತ್ತ ವಿನೀತ ಭಾವದಿಂದ ಇರಿ. ಒಂದು ವೇಳೆ ಅಹಂಕಾರ ತೋರಿದಲ್ಲಿ ಸರ್ವ ಚಿತ್ತಾರ ಮಸಿ ನುಂಗಿತು ಎನ್ನುವಂತೆ ಆಗುವುದು. ಮಾತಿನ ಭರದಲ್ಲಿ ಆಡಿದ ಒಂದು ಮಾತು ನಿಮ್ಮನ್ನು ಪೇಚಿಗೆ ಸಿಲುಕಿಸಲಿದೆ. ಹಾಗಾಗಿ ಅದನ್ನು ಅನ್ಯರು ಗುರುತಿಸುವುದಕ್ಕಿಂತ ಮುಂಚೆಯೆ ತಿದ್ದಿಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ಗೌರವ ಹೆಚ್ಚಾಗುವುದು.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











