Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
24-11-2018: ಶನಿವಾರದ ದಿನ ಭವಿಷ್ಯ
ಶನಿವಾರದ ದಿನ ಈ ಲೋಕದ ಸಮಸ್ತ ಜನರಿಗೆ ಶನಿಕಾಟ ತಪ್ಪಿದ್ದಲ್ಲ ಎಂಬುದು ನಿಶ್ಚಿತವಾದ ಮಾತು. ಹೇಗೆಂದರೆ ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷವಿರುತ್ತಾನೆ. ಹೀಗಾಗಿ ಎಲ್ಲ 12 ರಾಶಿಗಳ ಚಕ್ರವನ್ನು ಪೂರ್ತಿ ಸುತ್ತಿ ಬರಲು ಶನಿಗೆ 30 ವರ್ಷ ಕಾಲ ಹಿಡಿಯುತ್ತದೆ. ಶನಿಯು ಮಂದಗತಿಯಲ್ಲಿ ಚಲಿಸುವವನಾಗಿದ್ದು, ಶನಿಯ ಹುಟ್ಟಿನ ವಿಷಯ, ಅವನ ಕೌಟುಂಬಿಕ ವಿಷಯ, ಪಂಚಮ ಶನಿಕಾಟ, ಅಷ್ಟಮ ಶನಿಕಾಟ ಇನ್ನಿತರ ಸಕಲ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ನಿಮಗೆ ನೀಡಲಾಗುವುದು.ಸಂಕಟ ಬಂದಾಗ ವೆಂಕಟರಮಣ ಎನ್ನುವ ಜನರಿಗೆ ಶನಿಯು ಕಾಟ ಕೊಡಲಾರಂಭಿಸಿದ ಮೇಲೆಯೇ ಗೊತ್ತಾಗುವುದು ನಮಗೆ ಶನಿಕಾಟ ಶುರುವಾಗಿದೆಯಂದು.
ಏಕೆಂದರೆ ಶನಿಯ ಕಾಟ ಎಷ್ಟಿರುತ್ತದೆಯೆಂದರೆ ಬದುಕಲೂ ಆಗುವುದಿಲ್ಲ ಸಾಯವುದಕ್ಕೂ ಆಗುವುದಿಲ್ಲ ಅಂತ ಪರಿಸ್ಥಿತಿ ನಿರ್ಮಾಣ ಮಾಡಿ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತಾನೆ. ಇದಕ್ಕೇನೇ ಸಾಡೇಸಾತಿ ಶನಿಕಾಟ ಎನ್ನುವರು.ಸಾಡೇಸಾತಿ ಎಂದರೇನೇ ಎಷ್ಟೋ ಜನ ಭಯ ಬೀಳುತ್ತಾರೆ. ಹೌದು, ಸಾಡೇಸಾತಿ ಕಾಡಾಟದಲ್ಲಿ ಅವರು ಅನುಭವಿಸಿದ ಕಷ್ಟಗಳನ್ನು ಕೇಳಿದರೇನೇ ಮೈ ನಡುಕ ಬರುತ್ತದೆ. ಹನ್ನೆರಡು ರಾಶಿಗಳಲ್ಲೂ ಸಂಚರಿಸುವ ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷವಿರುತ್ತಾನೆ. ಆದರೆ ಇವನ ವಿಶೇಷವೆಂದರೆ ತಾನಿದ್ದ ರಾಶಿಯ ಹಿಂದೆ ಮತ್ತು ಮುಂದಿನ ರಾಶಿಗಳಲ್ಲೂ ಎರಡೂವರೆ ವರ್ಷದಂತೆ ತನ್ನ ಫಲಗಳನ್ನು ನೀಡುತ್ತಿರುತ್ತಾನೆ. ಇದರಿಂದ ಶನಿವಾರವು ಶನಿ ದೈವವನ್ನು ಆರಾಧಿಸುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ಶಾ ಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807

ಮೇಷ
ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ. ಭಯಪಡದೆ ಇಂತಹ ಜನರನ್ನು ದೂರ ಇಡುವುದು ಒಳ್ಳೆಯದು. ಸಂಗಾತಿಯ ಸಕಾಲಿಕ ಎಚ್ಚರಿಕೆ ಮಾತನ್ನು ಆಲಿಸಿ ಮತ್ತು ಪಾಲಿಸಿ. ಇದರಿಂದ ಶುಭವಾಗುವುದು.ಕೆಲವು ದಿನಗಳಿಂದ ಬರಲಿಲ್ಲವಲ್ಲ ಎಂದು ತಿಳಿದುಕೊಂಡ ಹಣದ ಬಾಬ್ತನ್ನು ನಿರಾಯಾಸವಾಗಿ ಸ್ವೀಕರಿಸುವಿರಿ. ಇದರಿಂದ ನೀವು ಮಾಡಿದ ಸಾಲದ ತೀರುವಳಿಗೆ ಸಹಾಯವಾಗುವುದು.ಮಕ್ಕಳ ಮೂಲಕವಾಗಿ ಹೊಸ ಆಸ್ತಿ, ನಿವೇಶನ ಇತ್ಯಾದಿ ಹೊಂದಲು ಕಾಲ ಕೂಡಿ ಬರುವುದು. ಇದರಿಂದ ಮನೆಯ ಸದಸ್ಯರು ಹರ್ಷಿತರಾಗುವರು. ಗೆಳೆಯರು ಇಲ್ಲವೆ ಆತ್ಮೀಯರು ನಿಮಗೆ ಸಹಾಯಹಸ್ತ ನೀಡುವರು.
ಅದೃಷ್ಟ ಸಂಖ್ಯೆ:2

ವೃಷಭ
ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಈ ದಿನ ನಿಮಗೆ ಅನುಕೂಲವಾಗಿದೆ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ ಮತ್ತು ನಿಮ್ಮ ಮನಸ್ಸಿಗೆ ಒಪ್ಪುವ ವಾಹನವನ್ನು ಖರೀದಿ ಮಾಡುವಿರಿ. ತೋಟಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನಿಮ್ಮ ಪರಿಶ್ರಮ ಹಾಗೂ ಬಂಡವಾಳ ಸಫಲತೆಯನ್ನು ಹೊಂದುವುದು. ಹಣಕಾಸಿನ ವಿಷಯದಲ್ಲಿ ಚಾಣಾಕ್ಷ ಮತಿಗಳಾದ ನೀವು ವ್ಯವಹಾರದಲ್ಲಿ ಕುಶಲತೆಯಿಂದ ಇರುವಿರಿ.ನಿಮ್ಮ ಸೀದಾಸಾದಾ ಗುಣ ನಿಮ್ಮನ್ನು ಎಲ್ಲರೂ ಗೌರವಾದರಗಳಿಂದ ಕಾಣುವಂತೆ ಮಾಡುವುದು. ಒಂದು ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುವುದರಿಂದ ಮನಸ್ಸು ನಿರಾಳವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.
ಅದೃಷ್ಟ ಸಂಖ್ಯೆ:1

ಮಿಥುನ
ನೀವು ನಂಬಿದ್ದ ನಿಮ್ಮ ಹತ್ತಿರದವರು ನಿಮಗೆ ಬೇಸರವಾಗುವಂತೆ ನಿಮ್ಮ ವಿರುದ್ಧ ವೈರ ಸಾಧಿಸುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಮಕ್ಕಳ ಕಲರವ ನಿಮಗೆ ಹೆಚ್ಚಿನ ಸಂತೋಷವನ್ನುಂಟು ಮಾಡುವುದು. ಸುಮ್ಮನೆ ಹತ್ತಿರದವರೊಬ್ಬರನ್ನು ಎದುರು ಹಾಕಿಕೊಳ್ಳುವ ಭಯವಿರುತ್ತದೆ. ಹಾಗಾಗಿ ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸದೆ ಇರುವುದು ಒಳ್ಳೆಯದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಬಡವರಿಗೆ ಆಹಾರವನ್ನು ನೀಡಿ.ತುಂಬಾ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವೊಂದು ಇಂದಿನ ಶ್ರಮದಿಂದಾಗಿ ಸುಖಾಂತ್ಯ ಕಾಣುವುದು. ಹಿರಿಯರ ಆಶೀರ್ವಾದ ಪಡೆದು ಕಾರ್ಯವನ್ನು ಆರಂಭಿಸಿ ದಿನದ ಅಂತ್ಯದ ವೇಳೆಯಲ್ಲಿ ಸಿಹಿ ಸುದ್ದಿ ಕೇಳುವಿರಿ.
ಅದೃಷ್ಟ ಸಂಖ್ಯೆ:2

ಕಟಕ
ವೃತ್ತಿಯಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಹಾಗಾಗಿ ವೃತ್ತಿಯಲ್ಲಿ ಹೊಸ ಗಳಿಕೆಯು ಲಭ್ಯವಾಗಲಿದೆ. ಹೊಸ ವಸ್ತುಗಳನ್ನು ಖರೀದಿ ಮಾಡಲು ನೂತನ ಅವಕಾಶ ಕೂಡಿ ಬರುವುದು.ನಿಮ್ಮ ಸಾಧನೆಗೆ ತಕ್ಕ ಗೌರವ ಆದರಗಳು ಸಿಗುವ ಸಾಧ್ಯತೆಗಳಿವೆ. ಜನರನ್ನು ವಿಶ್ವಾಸಕ್ಕೆ ಪಡೆದು ಅವರಿಂದ ಕಾರ್ಯ ಮಾಡಿಸಿಕೊಳ್ಳುವಿರಿ. ಕಚೇರಿಯಲ್ಲಿನ ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು. ನಿಮ್ಮ ನಿರೀಕ್ಷೆಗೆ ಸರಿಹೊಂದುವ ಬಾಳಸಂಗಾತಿಯ ಆಯ್ಕೆಯ ಬಗೆಗೆ ಸಾಫಲ್ಯತೆ ಪಡೆಯಲು ಅವಕಾಶಗಳಿವೆ. ಹೆಚ್ಚಿನ ಲಾಭಾಂಶ ಪಡೆಯಲು ಆಂಜನೇಯ ಸ್ತೋತ್ರ ಪಠಿಸಿ.ಅದೃಷ್ಟ ಸಂಖ್ಯೆ:4

ಸಿಂಹ
ಪದೋನ್ನತಿಗೆ ಕಾರಣವಾಗುವ ಅನೇಕ ವಿಚಾರಗಳು ಅದೃಷ್ಟವಶಾತ್ ನಿಮ್ಮ ಪ್ರಬಲ ಅಸ್ತ್ರಗಳಾಗಿವೆ. ಇವು ನಿಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ಮಾಡಲು ಸಹಕಾರಿಯಾಗುವುವು.ಬಾಳ ಪಯಣದ ಸಂದರ್ಭದಲ್ಲಿ ಶುಭಕ್ಕೆ ಮುನ್ನುಡಿ ಬರೆಯುವ ದಿನವಾಗಿದೆ. ಭಗವಂತನ ಆಶೀರ್ವಾದ ನಿಮ್ಮ ಮೇಲಿದೆ. ಉಷ್ಣ ಸಂಬಂಧಿ ತೊಂದರೆಗಳ ನಿವಾರಣೆಗಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.ಯಾರನ್ನೋ ಮೆಚ್ಚಿಸುವುದಕ್ಕಾಗಿ ನಿಮ್ಮತನವನ್ನು ಬಿಡಲು ಮುಂದಾಗುವಿರಿ. ನಿಮ್ಮ ನಾಯಕನನ್ನು ಆರಿಸುವಲ್ಲಿ ನಿಮ್ಮ ಆತ್ಮಸಾಕ್ಷಿಗೆ ತಕ್ಮಂತೆ ನಡೆದುಕೊಳ್ಳಿ. ಇದರಿಂದ ಸಮಾಜದಲ್ಲಿ ಗೌರವ, ಮನ್ನಣೆ ದೊರೆಯುವುವು. ಅದೃಷ್ಟ ಸಂಖ್ಯೆ:5

ಕನ್ಯಾ
ಶಾಂತರಾಗಲು ನಿಮಗೆ ಹೆಚ್ಚಿನ ಸಮಯ ಬೇಕಾಗುವುದು. ಎದುರಾಳಿಗಳು ಮಾತನಾಡಿದ ರೀತಿ ನಿಮ್ಮ ಮನಸ್ಸಿನಲ್ಲಿ ಕ್ರೋಧವನ್ನು ಹುಟ್ಟುಹಾಕಿದೆ. ಕ್ರೋಧದಿಂದ ಕ್ರೋಧವನ್ನು ಸೋಲಿಸಲು ಆಗುವುದಿಲ್ಲ. ಆದಷ್ಟು ಸಹನೆ, ಪ್ರೀತಿ, ವಾತ್ಸಲ್ಯಗಳನ್ನು ರೂಢಿಸಿಕೊಳ್ಳಿ. ದುಡುಕು ಮಾತುಗಳು ಸಾಕು. ದುಡುಕಿನಿಂದ ಹಲವು ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಸ್ನೇಹಿತರೊಂದಿಗೆ ವಿರಸ ಸೂಕ್ತವಲ್ಲ. ಪ್ರತಿ ದಿನವೂ ಒಂದೇ ತರಹ ಇರುವುದಿಲ್ಲ. ತಾಳ್ಮೆಯನ್ನು ಕಾಪಾಡಿಕೊಳ್ಳಿ.ವಿವೇಕದ ವಿಚಾರವು ಶ್ರೀಮಂತಿಕೆಗಿಂತ ಘನವಾದುದು. ಇದರ ಅರಿವು ನಿಮಗೆ ಲಭ್ಯವಾಗಲಿದೆ. ದೂರ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಬೀದಿಬದಿಯ ಆಹಾರವನ್ನು ಸೇವಿಸದೆ ಇರುವುದು ಒಳ್ಳೆಯದು.ಅದೃಷ್ಟ ಸಂಖ್ಯೆ:6

ತುಲಾ
ನಿನ್ನೆಯ ಸೋಲನ್ನು ಮರೆಯಲಾಗದೆ ಪರಿತಪಿಸುತ್ತಿರುವಿರಿ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ನಿನ್ನೆಯ ಸೋಲು ಇಂದಿನ ಗೆಲುವಿಗೆ ಕಾರಣವಾಗುವುದು. ಹಿರಿಯರ ಆಶೀರ್ವಾದ ಪಡೆಯಿರಿ. ಅಗತ್ಯಕ್ಕೆ ತಕ್ಕಷ್ಟು ಹಣವನ್ನು ಖರ್ಚು ಮಾಡಿ.ಅನ್ಯರ ಮಾತುಗಳನ್ನು ಶಾಂತಚಿತ್ತದಿಂದ ಕೇಳಿಸಿಕೊಳ್ಳಿ. ಯಾರನ್ನೂ ಉದಾಸೀನ ಮಾಡದಿರಿ. ಕೆಲವೊಮ್ಮೆ ನಮಗೆ ಯಾರಿಂದ ಒಳಿತಾಗುವುದಿಲ್ಲ ಎಂದು ಭಾವಿಸಿದ್ದೇವೋ ಅಂತಹವರ ನೆರವು ಸಹಕಾರವನ್ನು ಕೇಳಬೇಕಾಗುವುದು. ಆಳಾಗಿ ದುಡಿವ ವ್ಯಕ್ತಿ ಅರಸನಾಗಿಯೂ ಬಾಳಬಲ್ಲ. ಅಂತೆಯೇ ಸದ್ಯದ ಗ್ರಹಸ್ಥಿತಿಯಿಂದ ನೀವು ಸಮಾಜದಲ್ಲಿ ಕನಿಷ್ಠರು ಎಂದಾದರೂ ಮುಂದೆ ನೀವೇ ರಾಜನಾಗಿ ಮೆರೆಯುವ ಕಾಲ ಬರುತ್ತದೆ. ಚಿಂತೆ ಮಾಡಬೇಡಿ ಚಿನ್ಮಯನಿದ್ದಾನೆ.ಅದೃಷ್ಟ ಸಂಖ್ಯೆ:5

ವೃಶ್ಚಿಕ
ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ನಿಮ್ಮ ಧೈರ್ಯವೇ ನಿಮ್ಮ ಎಲ್ಲಾ ಕೆಲಸಗಳಲ್ಲೂ ವಿಜಯ ಪತಾಕೆಯನ್ನು ಹಾರಿಸಲು ನೆರವಾಗುವುದು. ಕೆಲವರಿಗೆ ಕೆಲಸದಲ್ಲಿ ಬಡ್ತಿ ಮೂಲಕ ಸಂತಸವುಂಟಾಗುವುದು.ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಮಹಾ ಪರಾಕ್ರಮಶಾಲಿಯಾದ ಆಂಜನೇಯ ಸ್ವಾಮಿಯ ಮಂದಿರಕ್ಕೆ ಭೇಟಿ ಕೊಡಿ. ಸಾಧ್ಯವಾದಲ್ಲಿ ವೀಳ್ಯದೆಲೆ ಸರವನ್ನು ಭಗವಂತನಿಗೆ ಅರ್ಪಿಸಿ ನಿಮ್ಮ ಕಾರ್ಯ ಸಾಧುವಾಗುವುದು.ರಾಜಕಾರಣಿಗಳಿಗೆ ಬಿಕ್ಕಟ್ಟುಗಳು ನಿಶ್ಚಿತ. ನಿಮ್ಮನ್ನು ವಿರೋಧಿಸುವವರ ಎದುರು ನಿಮ್ಮ ದೌರ್ಬಲ್ಯವನ್ನು ಪ್ರದರ್ಶಿಸದಿರಿ. ಅವಿವೇಕದ ಕೂಗಾಟದಿಂದ ಕೆಡುಕಿಗೆ ದಾರಿ ಆಗುವ ಸಂದರ್ಭವಿರುತ್ತದೆ.ಅದೃಷ್ಟ ಸಂಖ್ಯೆ:8

ಧನುಸ್ಸು
ನಿಮ್ಮ ವಹಿವಾಟಿನ ತೊಂದರೆಗಳನ್ನು ದೂರ ಮಾಡಿಕೊಳ್ಳಲು ಪಾಲುದಾರರ ಜೊತೆ ಮುಕ್ತ ಮಾತುಕತೆಗಳನ್ನು ನಡೆಸಿ. ಇದರಿಂದ ನಿಮ್ಮ ಗೌರವಕ್ಕೆ ಚ್ಯುತಿ ಬರುವುದಿಲ್ಲ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಸುಮ್ಮನೆ ಮತ್ತೊಬ್ಬರಿಗೆ ಅನುಕಂಪ ತೋರಿ ಹಣದ ಸಹಾಯ ಮಾಡದಿರಿ. ನಿಮ್ಮ ಹೃದಯ ವೈಶಾಲ್ಯವನ್ನು ಇತರರು ದುರುಪಯೋಗ ಪಡಿಸಿಕೊಳ್ಳುವರು. ಇದರಿಂದ ಮಾನಸಿಕ ಚಿಂತೆಗಳು ಹೆಚ್ಚು ಕಾಡುತ್ತವೆ.ದೂರದ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಜಾಸ್ತಿಯಾಗಿದೆ. ಬದಲಾವಣೆ ಈಗ ಅನಿವಾರ್ಯ ವಾಗಿರುತ್ತದೆ. ಬೇರೊಂದು ಕಡೆ ವರ್ಗ ಆಗುವ ಜಾಗ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ:4

ಮಕರ
ಹಿರಿಯರು ನಡೆಸಿದ ಆದರ್ಶ ಜೀವನ, ನಿಮ್ಮ ಬದುಕಿಗೆ ದಾರಿದೀಪವಾಗಲಿದೆ. ಅಂತೆಯೇ ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ ಮತ್ತು ನಿಮ್ಮ ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ಹರಿಸುವುದು ಉತ್ತಮ.ತಿಳಿದವರಿಗೆ ಹೆಚ್ಚಿನ ಸಲಹೆ ಸೂಚನೆಗಳು ಬೇಡ ಎಂಬುದು ಸರಿಯಾದರೂ ಮಕ್ಕಳಿಗೆ ಸೂಕ್ತ ಸಲಹೆಗಳನ್ನು ನೀಡಬಹುದಾಗಿದೆ. ಆಂಜನೇಯ ಸ್ತೋತ್ರವನ್ನು ಪಠಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬ ಗಾದೆ ಮಾತಿದೆ. ಅಂತೆಯೇ ನಿಮ್ಮ ಕಾರ್ಯಗಳು ನೆರವೇರಬೇಕೆಂದರೆ ನಿಮ್ಮ ಶತ್ರುಗಳ ಸಹಾಯವನ್ನು ಪಡೆಯಬೇಕಾಗುವುದು. ಈ ಬಗ್ಗೆ ಹಿಂಜರಿಕೆ ಬೇಡ.
ಅದೃಷ್ಟ ಸಂಖ್ಯೆ:9

ಕುಂಭ
ರಾಜಕೀಯ ನೇತಾರರು ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಹು ಎಚ್ಚರಿಕೆಯಿಂದ ಇರಬೇಕು. ಅನವಶ್ಯಕವಾಗಿ ಅಪವಾದಗಳನ್ನು ಎದುರಿಸಬೇಕಾಗುವುದು.ಸರ್ವ ಶಕ್ತಳಾದ ದುರ್ಗಾಮಾತೆಯನ್ನು ಆರಾಧಿಸಿ. ದೇವಿ ದೇವಸ್ಥಾನಕ್ಕೆ ಹುರುಳಿಕಾಳನ್ನು ದಾನ ಮಾಡುವುದರಿಂದ ಕಾರ್ಯಗಳು ಸುಗಮವಾಗುವುವು. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು. ಬೆಟ್ಟಿಂಗ್, ಜೂಜು, ರೇಸು ಇತ್ಯಾದಿಗಳಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಾದು ನೋಡಿ, ಮುಂದಿನ ದಿನಗಳಲ್ಲಿ ಒಳಿತಾಗುವುದು. ಅಧಿಕ ಸುತ್ತಾಟದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸಿ.ಅದೃಷ್ಟ ಸಂಖ್ಯೆ:2

ಮೀನ
ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ ಉಂಟಾಗುವುದು. ಸಂಬಂಧಿಕರೊಂದಿಗೆ ಸುದೀರ್ಘ ಸಮಾಲೋಚನೆಯಿಂದ ನಿಮ್ಮ ಸಮಸ್ಯೆಗೆ ಪರಿಹಾರದೊರೆಯುವುದು.ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವಿರಿ. ತಾಂತ್ರಿಕ ಇಲಾಖೆಯ ಕಂಪ್ಯೂಟರ್ ವಿಭಾಗದವರಿಗೆ ಭತ್ಯೆಯಲ್ಲಿ ಹೆಚ್ಚಳ ಕಂಡು ಬರುವುದು. ರಾಜಕೀಯದಲ್ಲಿರುವವರಿಗೆ ಉತ್ತಮ ಕಾಲ.ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ ಪ್ರಯತ್ನಗಳು ಫಲ ನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಹಾಯ, ಸಲಹೆ ಕೋರಿ ಬರುವವರಿಗೆ ಸಹಾಯ ಮಾಡಿ.ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807, ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











