Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
21-11-2018: ಬುಧವಾರದ ದಿನ ಭವಿಷ್ಯ
ಬುಧವಾರದ ದಿನ ಪುರಾಣಗಳ ಪ್ರಕಾರ ಗಣಪತಿ ಶಿವ ಪಾರ್ವತಿಯರ ಮಗ. ಕೇವಲ ಪಾರ್ವತಿಯ ಮುದ್ದುಮಗನೆನ್ನುವುದೇ ಹೆಚ್ಚು ಸಮರ್ಪಕವೆನಿಸುತ್ತದೆ. ಏಕೆಂದರೆ ಅವಳ ಸ್ನಾನ ಚೂರ್ಣದಿಂದ ಈತ ಮೈದಾಳಿ, ಅವಳ ಸ್ನಾನಜಲದೊಂದಿಗೆ ಗಂಗಾಮುಖವನ್ನು ಸೇರಿ. ಅಲ್ಲಿ ಗಜಮುಖಳಾದ ಮಾಲಿನಿಯೆಂಬ ದೇವತೆಯ ಗರ್ಭವನ್ನು ಸೇರಿ ಚತುರ್ಭುಜ ಮತ್ತು ಪಂಚಗಜಮುಖಗಳಿಂದ ಜನಿಸಿದನಂತೆ.

ಗಣೇಶನನ್ನು "ಓಂಕಾರ" ಎಂದು ಕರೆಯಲಾಗುತ್ತದೆ. ವಿಘ್ನ ವಿನಾಶಕ ವಿನಾಯಕನನ್ನು ನೆನೆಯುತ್ತಾ ಈ ದಿನಗದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807.

ಮೇಷ
ನಿಮ್ಮ ಮನಸ್ಸಿಗೆ ಆನಂದವಾದ ಸಂಗತಿ ದೊರೆಯುವುದು. ನಿಮ್ಮ ವ್ಯವಹಾರಗಳಿಗೆ ಬೆಂಬಲ ನೀಡುವ ಪಕ್ಕಾ ವ್ಯವಹಾರಸ್ಥರೇ ನಿಮಗೆ ದೊರೆಯುವರು. ಹಾಗಾಗಿ ಸ್ವಲ್ಪ ನೆಮ್ಮದಿಯ ವಾತಾವರಣ ಮೂಡುವುದು. ನೆರೆಹೊರೆಯವರ ಪ್ರಶಂಸೆಗೆ ಪಾತ್ರರಾಗುವಿರಿ. ಜನಪ್ರಿಯತೆಯಿಂದ ಮನಸ್ಸು ಪ್ರಫುಲ್ಲವಾಗುವುದು. ಮಕ್ಕಳ ಮದುವೆ ವಿಚಾರದಲ್ಲಿ ಒಂದು ನಿರ್ಣಾಯಕ ಹಂತ ತಲುಪಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಆರ್ಥಿಕ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ದೀರ್ಘಕಾಲಿನ ಹಣ ಹೂಡಿಕೆಗೆ ಸಕಾಲವಲ್ಲ. ವಿದೇಶಿ ಬಂಡವಾಳ ತೊಡಗಿಸಿ ಮಾಡುವ ವಹಿವಾಟಿಗೆ ಅವಸರ ಬೇಡ.
ಅದೃಷ್ಟ ಸಂಖ್ಯೆ:2

ವೃಷಭ
ಹತ್ತಿರದವರಿಂದಲೇ ಮೋಸ ಹೋಗಿ ಮನಸ್ಸಿಗೆ ಆಘಾತವಾಗುವ ಸಂಭವವಿದೆ. ಈ ಬಗ್ಗೆ ಎಚ್ಚರದಿಂದ ಇರಿ. ಯಾರನ್ನೇ ಆಗಲಿ ದಿಢೀರನೇ ನಂಬದಿರಿ. ಗುರುವಿನ ಕೃಪೆಯಿಂದ ಹೆಚ್ಚಿನ ಹಾನಿ ಆಗುವುದಿಲ್ಲ. ವಂಶಪಾರಂಪರ‍್ಯದಿಂದ ಬಂದ ವೃತ್ತಿಯಲ್ಲಿ ಗೌರವ ಕೀರ್ತಿ ಪಡೆಯುವಿರಿ. ಸಾಮಾಜಿಕ ಮತ್ತು ರಾಜಕೀಯವಾಗಿ ಗುರುತಿಸಿಕೊಳ್ಳುವಿರಿ. ಗುರುವಿನ ಸ್ತೋತ್ರ ಪಠಿಸಿ. ಗುರು ಹಿರಿಯರ ಅಶೀರ್ವಾದ ಪಡೆಯಿರಿ.
ನಿಮ್ಮನ್ನು ಬೆಸ್ತು ಬೀಳಿಸುವ ಸಾಧ್ಯತೆಗಳು ಹೇರಳವಾಗಿವೆ. ಹಾಗಾಗಿ ಅನಗತ್ಯ ವಿಷಯಗಳ ಬಗ್ಗೆ ಹೆಚ್ಚು ಕುತೂಹಲ ಬೆಳಸಿಕೊಳ್ಳದಿರಿ. ದಿನನಿತ್ಯದ ಕಾಯಕದಲ್ಲಿ ತಲ್ಲೀನರಾದಲ್ಲಿ ಹೆಚ್ಚಿನ ತೊಂದರೆ ಇಲ್ಲ.
ಅದೃಷ್ಟ ಸಂಖ್ಯೆ:1

ಮಿಥುನ
ಬಂಧುಗಳ ಜತೆ ಈ ಹಿಂದೆ ಮಾಡಿದ ಹಣಕಾಸಿನ ವ್ಯವಹಾರದಿಂದಾಗಿ ಮನಸ್ತಾಪ ಬರುವ ಸಾಧ್ಯತೆ ಇದೆ. ಇಬ್ಬರೂ ಹಿರಿಯರ ಸಮ್ಮುಖದಲ್ಲಿ ಕುಳಿತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಿ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ಎಲ್ಲಾ ಕೆಲಸಗಳು ಕೊನೆಯ ಹಂತದವರೆಗೂ ಬಂದು ಕೊನೆ ಹಂತದಲ್ಲಿ ನಿರಾಶೆಯನ್ನುಂಟು ಮಾಡುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗತಿಗಳು ನಿಮ್ಮ ಪರವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಜಾಣತನದಿಂದ ವರ್ತಿಸಿ, ಮೋಸ ಹೋಗುವ ಜನರು ಇರುವಾಗ ಮೋಸ ಮಾಡುವ ಜನರು ಬಹಳಷ್ಟು ಮಂದಿ ಇರುತ್ತಾರೆ. ಹಾಗಾಗಿ ನೇರಾನೇರ ವ್ಯವಹಾರದಲ್ಲಿ ಪಾಲ್ಗೊಳ್ಳಿ. ದಿಢೀರನೆ ಶ್ರೀಮಂತರಾಗಬೇಕೆಂಬ ಬಯಕೆಯಿಂದ ಅನ್ಯರ ಬಳಿ ಹಣ ಹೂಡದಿರಿ.
ಅದೃಷ್ಟ ಸಂಖ್ಯೆ:2

ಕಟಕ
ಶಿಸ್ತುಳ್ಳ ಮನುಜಂಗೆ ಶಿವನೂ ತಲೆಬಾಗುತ್ತಾನೆ. ಅಂತೆಯೇ ಈಗಿನ ಗ್ರಹಗತಿಗಳು ನಿಮ್ಮ ಜೀವನದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಹಾಗಾಗಿ ನವಗ್ರಹಗಳಿಗೆ ಶರಣಾಗಿ ಕಾರ್ಯ ಪ್ರವೃತ್ತರಾಗಿ. ಯಾಕೋ ನಾನು ಬಯಸಿದ್ದು ಒಂದೂ ಆಗುತ್ತಿಲ್ಲ ಎನ್ನುವ ಭಾವ ಮನೆ ಮಾಡಿದಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಗುರುವು ತನ್ನ ಬೆಂಬಲ ಹಿಂಪಡೆದಿರುವುದರಿಂದ ಹೀಗಾಗುವುದು ಸಹಜ. ಶರಣಾಗತವತ್ಸಲ ಭಗವಂತನ ಮೊರೆಹೋಗಿ.
ಸುತ್ತಿ ಬಳಸಿ ಹೋಗುವ ದಾರಿಯನ್ನು ಕೈಬಿಡಿ. ತಾಳ್ಮೆಯಿಂದ ಇದ್ದರೆ ನೇರ ದಾರಿ ಸಿಗಲಿದೆ. ಇದರಿಂದ ಮನಸ್ಸಿಗೂ ಮುದ ನೀಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟ ಸಂಖ್ಯೆ:9

ಸಿಂಹ
ಪದೇ ಪದೆ ಸೋಲುಗಳು ಎಂಬ ನಿರಾಶಾವಾದದಿಂದ ದಿನ ಆರಂಭಿಸದಿರಿ. ಎಲ್ಲದಕ್ಕೂ ಕಾಲನಾಮಕ ಪರಮಾತ್ಮ ಕಾರಣನಾದ್ದರಿಂದ ಆತನನ್ನು ಅನನ್ಯ ಭಕ್ತಿಯಿಂದ ಭಜಿಸಿ. ಒಳಿತಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಯಶಸ್ಸಿಗೆ ಅಡ್ಡಮಾರ್ಗ ಎಂಬುದಿಲ್ಲ. ನೇರವಾದ ಮಾರ್ಗದಿಂದ ಯಶಸ್ಸು ಹೊಂದುವಿರಿ. ಇದರಿಂದ ನಿಮ್ಮ ಪ್ರತಿಭೆಗೆ ಹೆಚ್ಚಿನ ಪ್ರಶಂಸೆಗಳು ಕೇಳಿ ಬರುವವು.ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎಂಬುದು ಜನಜನಿತವಾಗಿದೆ. ಹಾಗಾಗಿ ನೀವು ನಿಮ್ಮ ವಿಚಾರಗಳನ್ನು ಪರರ ಮುಂದೆ ಹೇಳುವಾಗ ಎರಡು ಬಾರಿ ಚಿಂತಿಸಿ ವಿಚಾರಗಳನ್ನು ಮಂಡಿಸಿ. ಇಲ್ಲದೆ ಇದ್ದಲ್ಲಿ ವೃಥಾ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ.
ಅದೃಷ್ಟ ಸಂಖ್ಯೆ:8

ಕನ್ಯಾ
ಐಷಾರಾಮಿ ಜೀವನ ಸಾಗಿಸುವ ಕನಸಿರಲಿ. ಆದರೆ ಅದಕ್ಕೆ ಶ್ರಮದ ಬೆವರಿನ ಹನಿ ಹರಿಸಿದಾಗ ಮಾತ್ರ ಸುಖ ದೊರೆಯುವುದು. ಒಂದು ದೃಢ ನಿರ್ಧಾರದಿಂದ ಕಾರ್ಯ ಪ್ರವೃತ್ತರಾಗಿ. ಒಳಿತಾಗುವುದು.ನೀವು ಜೀವನದ ಮಧುರವಾದ ಕ್ಷ ಣಗಳನ್ನು ಕಾಣುವಿರಿ. ವೈಯಕ್ತಿಕ ಹಾಗೂ ಕೌಟುಂಬಿಕವಾಗಿ ಉನ್ನತ ಸ್ಥಾನಕ್ಕೆ ಏರಲು ನಿಮಗೆ ವಿಫುಲ ಅವಕಾಶಗಳು ದೊರೆಯುತ್ತವೆ. ತಾಯಿ ವರ್ಗದವರ ಆರೋಗ್ಯದ ಕಡೆ ಗಮನ ನೀಡಿ.ಹೊಸ ಉತ್ಸಾಹದೊಂದಿಗೆ ಕೆಲಸ ಆರಂಭ ಮಾಡುವಿರಿ. ಆದರೆ ಹಿಂದಿನ ಅನುಭವಗಳ ಸಾಧಕ ಬಾಧಕಗಳನ್ನು ಅರಿತು ಮುಂದುವರೆಯುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಅದೃಷ್ಟ ಸಂಖ್ಯೆ:9

ತುಲಾ
ಸಾಫಲ್ಯತೆಗಳು ಒಂದೇ ಏಟಿಗೆ ಸಿಗಬೇಕೆಂಬ ನಿಮ್ಮ ಯೋಜನೆ ಸಾಧುವಾದರೂ ಅದಕ್ಕೆ ಪೂರಕವಾದ ಕ್ರಿಯಾಶೀಲತೆ ರೂಢಿಸಿಕೊಳ್ಳಿ. ಮಕ್ಕಳು ಮತ್ತು ಮಡದಿ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಕಷ್ಟದಲ್ಲಿರುವವರಿಗೆ ಪುಕ್ಕಟೆ ಸಲಹೆ ಕೊಡುವವರು ಅನೇಕ ಮಂದಿ. ಆದರೆ ನಿಮ್ಮ ಕಷ್ಟಕ್ಕೆ ಮರುಗಿ ಸಹಕಾರ ನೀಡುವ ಜನ ವಿರಳ. ಆದರೆ ದೈವದ ಅನುಗ್ರಹದಿಂದ ನಿಮಗೆ ಒಳಿತಾಗುವುದು. ಕಷ್ಟ ಬಂದಾಗ ವೆಂಕಟರಮಣನನ್ನು ಧ್ಯಾನಿಸುವುದು ಸಹಜ. ಅಂತೆಯೆ ಭಗವಂತನು ಸಹ ತನ್ನ ಭಕ್ತರನ್ನು ಕೈಬಿಡುವುದಿಲ್ಲ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ವಿಷ್ಣು ಮಂದಿರಕ್ಕೆ ತುಳಸಿ ಮಾಲೆ ಅರ್ಪಿಸಿ.
ಅದೃಷ್ಟ ಸಂಖ್ಯೆ:4

ವೃಶ್ಚಿಕ
ಹೋರಾಟದಲ್ಲಿ ಗುರುತಿಸಿಕೊಳ್ಳುವ ಜವಾಬ್ದಾರಿ ಬರಬಹುದು. ಸಾಧಕ ಬಾಧಕಗಳನ್ನು ಚಿಂತಿಸಿ ಜವಾಬ್ದಾರಿಯನ್ನು ವಹಿಸಿಕೊಳ್ಳಿ ಮತ್ತು ವಹಿಸಿಕೊಂಡ ಕೆಲಸದಲ್ಲಿ ಯಶಸ್ಸು ಹೊಂದುವಿರಿ. ಅತಿಥಿಗಳ ಆದರಾತಿಥ್ಯದಲ್ಲಿ ದಿನದ ಬಹುಪಾಲು ಕಳೆಯುವ ಸಾಧ್ಯತೆಗಳು ಇರುತ್ತದೆ. ಅದರ ಸಂಗಡ ನಿಮ್ಮ ವೈಯಕ್ತಿಕ ಆಗುಹೋಗುಗಳ ಕಡೆಯೂ ಲಕ್ಷ್ಯ ಕೊಡುವುದು ಒಳ್ಳೆಯದು. ಖರ್ಚು ಹೆಚ್ಚಾಗುವ ಸಂಭವವಿದೆ.ಹೊಸ ಹೊಸ ಸಾಹಸಗಳಿಗೆ ಕೈಹಾಕುವುದರಿಂದ ಅದರಲ್ಲಿ ಯಶಸ್ಸನ್ನು ಕಾಣುವಿರಿ. ಬಂಧು ಬಾಂಧವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಒಳಿತಾಗುವುದು.
ಅದೃಷ್ಟ ಸಂಖ್ಯೆ:6

ಧನುಸ್ಸು
ಮನಸ್ಸಿನಲ್ಲಿ ಭಯಗೊಂಡು ಜ್ವರಗೊಂಡು ಸತ್ತ ಎಂಬ ವ್ಯಾಕರಣ ಸೂತ್ರ ನೆನಪಿರಲಿ. ಜೀವನದಲ್ಲಿ ಭಯಪಟ್ಟರೆ ಹೆದರಿಸುವವರು ಜಾಸ್ತಿ ಜನ ಸಿಗುತ್ತಾರೆ. ನೀವು ಘರ್ಜಿಸಿದರೆ ಅವರು ಸುಮ್ಮನಾಗುವರು.ಉಪಾಯದಿಂದ ಅಪಾಯ ತಪ್ಪಿಸಿಕೊಳ್ಳಿ ಎಂಬ ಮಾತು ಚಾಲ್ತಿಯಲ್ಲಿದೆ. ಅಂತೆಯೇ ಭಗವಂತ ನೀಡಿದ ಬುದ್ಧಿ ಚಾತುರ‍್ಯದಿಂದ ಅಪಾಯ ಸನ್ನಿವೇಶವನ್ನು ಲೀಲಾಜಾಲವಾಗಿ ಎದುರಿಸುವಿರಿ. ಆಹಾರ ವಿಹಾರದ ವಿಚಾರದಲ್ಲಿ ಕ್ರಮತೆ ರೂಢಿಸಿಕೊಳ್ಳಿ. ಉದರಶೂಲೆಗೆ ಸಂಬಂಧಪಟ್ಟಂತೆ ತೊಂದರೆ ಎದುರಿಸಬೇಕಾಗುವುದು. ಮಾತಾ ದುರ್ಗಾದೇವಿ ಮಂತ್ರ ಪಠಿಸಿ.
ಅದೃಷ್ಟ ಸಂಖ್ಯೆ:2

ಮಕರ
ನಿಮ್ಮ ಪರಿಸರದ ಜನರು ನಿಮ್ಮ ಬುದ್ಧಿ ಶಕ್ತಿಯನ್ನು ಕೊಂಡಾಡುವರು. ಮಕ್ಕಳು ನಿಮಗೆ ಸಂತಸ ನೀಡುವ ಸಾಧ್ಯತೆ ಇದ್ದು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆರ್ಥಿಕ ಸ್ಥಿತಿ ದಿನದಿನಕ್ಕೆ ಬಿಗಡಾಯಿಸುತ್ತಿರುವುದರಿಂದ ಕೆಲವು ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಮನೆಯಲ್ಲಿ ಸಂಗಾತಿಯ ಮಾತುಗಳಿಗೂ ಬೆಲೆ ಕೊಟ್ಟರೆ ಒಳ್ಳೆಯದು.
ಪರಮಾಪ್ತರೊಬ್ಬರಿಂದ ಆಶ್ಚರ್ಯಕರವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಇದರಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ
ಅದೃಷ್ಟ ಸಂಖ್ಯೆ:4

ಕುಂಭ
ಬದುಕಿನ ಎಲ್ಲಾ ಹಾದಿಗಳು ಮುಚ್ಚಿಹೋಗಿವೆ ಎಂಬ ತಲ್ಲಣ ಬೇಡ. ಅದಷ್ಟು ಒಂಟಿಯಾಗಿ ಇರದೆ ನಿಮ್ಮನ್ನು ಇಷ್ಟಪಡುವ ಸ್ನೇಹಿತರೊಂದಿಗೆ ಮಾತನಾಡಿ. ಇದರಿಂದ ನಿಮ್ಮಲ್ಲಿ ನವ ಚೈತನ್ಯ ಮೂಡುತ್ತದೆ.ಕೆಲಸದ ಒತ್ತಡದ ನಡುವೆ ಊಟದ ಕಡೆಗೂ ಗಮನ ಹರಿಸುವುದು ಒಳ್ಳೆಯದು. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಹಾಗಂತ ದೇಹಕ್ಕೆ ಶ್ರಮ ಮಾಡಿಕೊಂಡು ದುಡಿಯುವುದು ಒಳ್ಳೆಯದಲ್ಲ.
ಎಲ್ಲಾ ಸಂದರ್ಭದಲ್ಲೂ ಕೇವಲ ಮಾತಿನಿಂದ ಕೆಲಸವಾಗಲಾರದು. ಶ್ರಮ ವಹಿಸಿ ದುಡಿದಾಗಲಷ್ಟೆ ಪ್ರತಿಫಲ ಸಿಗುತ್ತದೆ. ನಿಮ್ಮ ಪರವಾಗಿ ಇತರರು ಕೆಲಸ ಮಾಡುತ್ತಾರೆಂಬ ಆಶಾವಾದ ಹುಸಿಯಾಗಲಿದೆ.
ಅದೃಷ್ಟ ಸಂಖ್ಯೆ:2

ಮೀನ
ಕಠಿಣ ಪರಿಶ್ರಮ ಬಿಟ್ಟರೆ ಅನ್ಯ ಮಾರ್ಗವಿಲ್ಲ. ಎಲ್ಲವೂ ನೀವು ಕೂತಲ್ಲಿಯೇ ದೊರೆಯಬೇಕೆಂದರೆ ಸಿಗಲಾರದು. ಹಾಗಾಗಿ ಹೊರಗೆ ತಿರುಗಾಡಿ ಜ್ಞಾನಾರ್ಜನೆ ಮಾಡಿಕೊಳ್ಳಿ. ಅಂತೆಯೇ ಧನಾರ್ಜನೆಯನ್ನೂ ಮಾಡಿಕೊಳ್ಳಿ.
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಈಗ ನಿಮಗೆ ಒಳ್ಳೆಯ ಕಾಲವಿದೆ. ಉದಾಸೀನ ಮಾಡದೆ ಬಂದ ಉತ್ತಮ ಅವಕಾಶವನ್ನು ಉಪಯೋಗಿಸಿಕೊಂಡು ಮುಂದುವರೆಯಿರಿ. ನಿಮ್ಮ ಸಲಹೆ ಸೂಚನೆಗಳು ನಿಮ್ಮ ಬಾಸ್‌ಗೆ ಇಷ್ಟವಾಗುವ ಕಾರಣ ನಿಮಗೆ ಹೆಚ್ಚು ಸಂತೋಷವಾಗುವುದು. ಇದರಿಂದ ನಿಮ್ಮ ಹೆಸರು ವಿದೇಶದಲ್ಲಿ ಪ್ರಕಟವಾಗುವ ಪುಸ್ತಕದಲ್ಲಿ ಪ್ರಕಟಗೊಳ್ಳುವುದು.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











