Latest Updates
-
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು!
20-11-2018: ಮಂಗಳವಾರದ ದಿನ ಭವಿಷ್ಯ
ಮಂಗಳವಾರದ ದಿನ ಕಾಳಿಯು ಕಾಲ ಮತ್ತು ಪರಿವರ್ತನೆಯ ದೇವತೆ. ಕಾಳಿಯು ಭಗವಂತ ಶಿವನ ಜೊತೆಗಾರ್ತಿಯಾಗಿ ಪ್ರತಿನಿಧಿಸಲ್ಪಡುತ್ತಾಳೆ. ಶಿವನ ಶರೀರದ ಮೇಲೆ ಕಾಳಿ ನಿಂತಿರುತ್ತಾಳೆ. ದುರ್ಗಾ, ಭದ್ರಕಾಳಿ, ಸತಿ, ರುದ್ರಾಣಿ,ಪಾರ್ವತಿ ಮತ್ತು ಚಾಮುಂಡಾ ಮುಂತಾದ ಇನ್ನೂ ಅನೇಕ ಹಿಂದೂ ದೇವತೆಗಳ ಜೊತೆಗೂ ಆಕೆಯ ಸಂಬಂಧವಿದೆ.

ದಶ ಮಹಾವಿದ್ಯಾಗಳು, ಹತ್ತು ಭೀಕರ ತಾಂತ್ರಿಕ ದೇವಿಯರಲ್ಲಿ ಆಕೆ ಮುಂಚೂಣಿಯಲ್ಲಿದ್ದಾಳೆ.ದೇವಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807

ಮೇಷ
ಹಿರಿಯರು ನಿಮಗೆ ಅತ್ಯವಶ್ಯವಾದ ಸಲಹೆಯನ್ನು ನೀಡುವರು. ಅವರ ಸಲಹೆಯಂತೆ ನೀವು ನಡೆದುಕೊಂಡರೆ ಅತ್ಯಂತ ಸಂತೋಷದಿಂದ ದಿನ ಕಳೆಯುವಿರಿ. ಇದರಿಂದ ಮನಸ್ಸು ನಿರಾಳವಾಗುವುದು.ದೈಹಿಕ ನಿಶ್ಯಕ್ತಿಯು ನಿಮ್ಮಲ್ಲಿ ಉದಾಸೀನ ಭಾವನೆಯನ್ನುಂಟು ಮಾಡುವುದು. ವೈದ್ಯರ ಸಲಹೆ ಇಲ್ಲದೆ ತೆಗೆದುಕೊಂಡ ಸ್ವಯಂ ವೈದ್ಯಕೀಯ ನಿಮ್ಮನ್ನು ನಿತ್ರಾಣ ಮಾಡುವುದು. ಸೂಕ್ತ ವೈದ್ಯರನ್ನು ಭೇಟಿ ಮಾಡಿ ಉತ್ತಮ ಔಷಧಿ ತೆಗೆದುಕೊಳ್ಳಿ. ಭವಿಷ್ಯತ್ತಿನ ವಿಚಾರಗಳ ಕುರಿತು ಸೂಕ್ತವಾದ ನಿರ್ಣಯವನ್ನು ನೀವು ತೆಗೆದುಕೊಳ್ಳುವಿರಿ. ಇದಕ್ಕೆ ಹಿರಿಯರ ಆಶೀರ್ವಾದವೂ ಇದ್ದು ನೀವು ಅಂದುಕೊಂಡ ಕಾರ್ಯಗಳು ಕೈಗೂಡುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟ ಸಂಖ್ಯೆ:1

ವೃಷಭ
ಯಾವುದರಲ್ಲಿ ವಿಶ್ವಾಸ, ಆಸಕ್ತಿ ಇರುವುದೋ ಅಲ್ಲಿ ಕಾರ್ಯ ನಿರ್ವಹಿಸುವುದು ಒಳ್ಳೆಯದು. ಇಲ್ಲವೆ ಗುಡ್ಡಕ್ಕೆ ಮಣ್ಣು ಹೊರುವಂತಹ ವ್ಯರ್ಥ ಪ್ರಯತ್ನವಾಗುವುದು. ಕಾರ್ಯ ಹಮ್ಮಿಕೊಳ್ಳುವ ಮುನ್ನ 2 ಬಾರಿ ಚಿಂತಿಸಿ. ಧಾರ್ಮಿಕ ಕಾರ್ಯಗಳೆಲ್ಲವೂ ಮುಗಿದು ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂಬ ನಿಮ್ಮ ಇಚ್ಛೆ ಕೈಗೂಡುವುದು. ಮನೆ ಮಂದಿಯೊಂದಿಗೆ ಸಂತೋಷದ ಕ್ಷ ಣಗಳನ್ನು ಕಳೆಯುವಿರಿ. ಹಿಂದಿನ ದಿನಕ್ಕಿಂತ ಹೆಚ್ಚು ಹಣ ಸಂದಾಯವಾಗಲಿದೆ. ಸವಾಲುಗಳನ್ನು ಎದುರಿಸದೆ ಗೆಲುವು ಅಸಾಧ್ಯ. ಅಂತಹ ಗೆಲುವು ರಸಹೀನವಾಗಿರುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮಹತ್ತರ ಕಾರ್ಯ ಮಾಡಲು ಕಂಕಣ ಬದ್ಧರಾಗುವಿರಿ. ನಿಮ್ಮ ಪ್ರಯತ್ನಕ್ಕೆ ಭಗವಂತ ಮತ್ತು ಸ್ನೇಹಿತರು ಸಹಾಯಹಸ್ತ ನೀಡುವರು.
ಅದೃಷ್ಟ ಸಂಖ್ಯೆ:2

ಮಿಥುನ
ಪ್ರತಿದಿನವೂ ನಿಮಗೆ ಒಂದು ರೀತಿಯ ಅಗ್ನಿಪರೀಕ್ಷೆ. ಪುಟಕ್ಕಿಟ್ಟ ಬಂಗಾರದಂತೆ ಪ್ರತಿಬಾರಿಯೂ ನೀವು ಜಯಶೀಲರಾಗಿ ಬರುವಿರಿ. ಆದಷ್ಟು ನೀವು ಜವಾಬ್ದಾರಿಯನ್ನು ಅರಿತು ಲೋಕದ ವ್ಯವಹಾರದಲ್ಲಿ ಮುನ್ನುಗ್ಗುವುದು ಒಳಿತು.ಏನೇ ಅಡೆತಡೆಗಳು ಬಂದರೂ ವೃದ್ಧ ಮಾತಾಪಿತರ ಇಲ್ಲವೆ ಗುರುಗಳನ್ನು ಶರಣು ಹೊಂದಿ. ಅವರು ನಿಮಗೆ ಕಷ್ಟದಿಂದ ಹೊರ ಬರಲು ಸಹಕಾರ ನೀಡುವರು. ಹಣಕಾಸು ಸಕಾಲದಲ್ಲಿ ಬರುವುದು. ಪ್ರತಿಯೊಂದು ವಿಚಾರಕ್ಕೂ ಕನಿಷ್ಟ 2 ಮುಖಗಳಿರುತ್ತವೆ. ಹಾಗಾಗಿ ಆ ಎರಡೂ ವಿಚಾರಗಳನ್ನು ಅರಿತು ಯಾವ ಸಂದರ್ಭದಲ್ಲಿ ಏನನ್ನು ಪ್ರಯೋಗಿಸಬೇಕು ಎಂಬುದು ನಿಮಗೆ ಗೊತ್ತಾಗುವುದು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.
ಅದೃಷ್ಟ ಸಂಖ್ಯೆ:1

ಕಟಕ
ನಿಮ್ಮ ಕೈಕೆಳಗೆ ಇರುವ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಬೆಂಬಲಿಸುವ ಮೂಲಕ ಕಾರ್ಯಗಳಲ್ಲಿ ಬದಲಾವಣೆ ತಂದರೆ ಒಳಿತಾಗುವುದು. ಇಲ್ಲವೆ ಅದೇ ನೌಕರರು ತಿರುಗಿ ಬೀಳುವರು.ನಿರಂತರವಾದ ಯಶಸ್ಸನ್ನು ಹೊಂದಲು ಬೇಕಾಗುವ ಸಕಲ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಮನೆಯಲ್ಲಿನ ಸಣ್ಣಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಕಂಡುಬರುವುದು. ನಿಮ್ಮ ಗಮನಕ್ಕೆ ಬಾರದಂತೆ ನಿಮ್ಮ ವಿಚಾರಧಾರೆಗಳನ್ನು ನಕಲು ಮಾಡುವ ಜನರಿಂದ ತೊಂದರೆ ಅನುಭವಿಸಬೇಕಾಗುವುದು. ಆಂಜನೇಯ ಸ್ತೋತ್ರವನ್ನು ಪಠಿಸಿ. ಒಳಿತಾಗುವುದು.
ಅದೃಷ್ಟ ಸಂಖ್ಯೆ:4

ಸಿಂಹ
ಕೆಲಸದ ಸ್ಥಳದಲ್ಲಿ ಬಾಸ್‌ನಿಂದ ಪ್ರಶಂಸೆ ಪಡೆಯುವುದಕ್ಕೆ ಅವಕಾಶ ಅಧಿಕವಾಗಿದೆ. ಇದರಿಂದ ಮುಂದಿನ ಪದೋನ್ನತಿಗೆ ದಾರಿ ನಿರಾಳವಾಗುವುದು. ನಿಮ್ಮ ಕಾಯಕದಲ್ಲಿ ನಿಷ್ಠೆಯನ್ನು ತೋರಿ. ಭಗವಂತನ ಆಶೀರ್ವಾದ ನಿಮ್ಮ ಮೇಲೆ ಇರುವುದು.ಅತಿ ಸೂಕ್ಷ್ಮಮತಿಗಳಾದ ನಿಮಗೆ ಕೆಲವು ವಿಚಾರಗಳನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಅಂತೆಯೆ ಒಂದು ಪ್ರಸಂಗವು ನಿಮ್ಮ ಚಿತ್ತ ಕ್ಷೋಭೆಯನ್ನು ಕದಡುವುದು. ಮಾತಾ ದುರ್ಗಾದೇವಿಯನ್ನು ಅನನ್ಯ ಭಜಿಸಿ. ಯಾರು ಏನೇ ಅನ್ನಲಿ, ಬಿಡಲಿ ನಿಮ್ಮ ಕಾರ್ಯವನ್ನು ನೀವು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಇದು ನಿಮ್ಮನ್ನು ಇಚ್ಛಿತ ಗುರಿಕಡೆಗೆ ಕರೆದುಕೊಂಡು ಹೋಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ನಿಮಗೆ ಸಂತಸ ನೀಡುವುದು.
ಅದೃಷ್ಟ ಸಂಖ್ಯೆ:6

ಕನ್ಯಾ
ಹಳೆಯ ವ್ಯಾಜ್ಯಗಳು ನಿಮ್ಮನ್ನು ಬಳಲಿಸುತ್ತವೆ. ಶಾಂತಿಯಿಂದ ಇರಿ. ಮಾತು ಮಾತಿಗೂ ಆಣೆ ಪ್ರಮಾಣಗಳನ್ನು ಮಾಡದಿರಿ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವಂತೆ ಮೌನವಾಗಿರಿ.ನಿಮ್ಮ ಗುರಿಯನ್ನು ಬೆನ್ನುಹತ್ತಿ ಸೋತಿದ್ದೀರಿ ಎನ್ನುವ ಬಳಲಿಕೆ ಬೇಡ. ಮುನ್ನುಗ್ಗಿರಿ, ಜಯಶೀಲರಾಗುವಿರಿ. ಪತ್ನಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸಿ ಮತ್ತು ಅದರಂತೆ ಕಾರ್ಯ ಪ್ರವೃತ್ತರಾಗುವುದರಿಂದ ಒಳಿತಾಗುವುದು. ಬಹುರೂಪಿಯಾದ ಮತ್ತು ಅತ್ಯಂತ ಕರುಣಾಮಯಿಯಾದ ಭಗವಂತನ ಅನುಗ್ರಹ ನಿಮ್ಮ ಮೇಲಿರುವುದರಿಂದ ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ಮನೆಗೆ ನೂತನ ಸದಸ್ಯರ ಸೇರ್ಪಡೆ ಸಾಧ್ಯತೆ ಇರುವುದು.
ಅದೃಷ್ಟ ಸಂಖ್ಯೆ:8

ತುಲಾ
ನಿಮ್ಮ ಮಾತಿಗೆ ಬೆಲೆಯುಂಟು ಎಂಬುದು ಒಳ್ಳೆಯದೇ. ಆದರೆ ಜನ ಒಂದೇ ರೀತಿಯಾಗಿ ಚಿಂತಿಸುವುದಿಲ್ಲ. ಹಾಗಾಗಿ ಮೇಲ್ನೋಟಕ್ಕೆ ನಿಮ್ಮಂತೆ ಇದ್ದರೂ ಅವರ ಒಳ ವಿಚಾರಧಾರೆಗಳು ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುವುದೇ ಆಗಿರುತ್ತದೆ. ಎಷ್ಟೇ ರೀತಿಯ ಜನರು ನಿಮ್ಮ ಮೇಲೆ ಪರಿಣಾಮ ಬೀರಿರಬಹುದು. ಆದರೆ ಇತ್ತೀಚೆಗೆ ಪರಿಚಯವಾದ ಗಣ್ಯರ ಮಾತು ನಿಮ್ಮ ನಿಜ ಜೀವನಕ್ಕೆ ಹತ್ತಿರವಾದಂತೆ ಅನಿಸುತ್ತಿರುವುದರಿಂದ ಅವರ ಬಗ್ಗೆ ಗೌರವ ಆದರಗಳು ಹೆಚ್ಚಾಗುವವು.ದಿಢೀರನೆ ನಿರ್ಧಾರ ತಳೆಯುವುದು ಒಳ್ಳೆಯದಲ್ಲ. ಯಾವುದಕ್ಕೂ ಹಿಂದುಮುಂದು ಯೋಚಿಸಿ ಕಾರ್ಯಪ್ರವೃತ್ತರಾಗಿ. ಶನಿ ಮಹಾತ್ಮರ ಸನ್ನಿಧಾನದಲ್ಲಿ ಎಳ್ಳೆಣ್ಣೆ ದಾನ ಮಾಡಿ. ಬಡವರಿಗೆ ಆಹಾರ ನೀಡಿ.
ಅದೃಷ್ಟ ಸಂಖ್ಯೆ:8

ವೃಶ್ಚಿಕ
ನಿಮ್ಮ ಹತ್ತಿರದ ಜನರು ವಿನಾಕಾರಣ ಜಗಳಗಳಿಗೆ ಮುಂದಾಗುವ ಸಂಭವವಿರುತ್ತದೆ. ಬೇಸರ ಪಡಬೇಡಿ. ಜೀವನದ ಪ್ರತಿ ಘಟನೆಯೂ ನಿಮಗೆ ಒಂದು ಉತ್ತಮ ಪಾಠವನ್ನು ಕಲಿಸುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಮಾತೃಸ್ವರೂಪಿಯಾದ ಶ್ರೀ ದುರ್ಗಾಮಾತೆಯನ್ನು ಅನನ್ಯ ಭಜಿಸಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು ಮತ್ತು ಮೇಲಧಿಕಾರಿಗಳು ನಿಮ್ಮ ಮೇಲೆ ಅಪಾರ ಪ್ರೀತಿ ವಾತ್ಸಲ್ಯ ತೋರುವರು.ದೂರದೂರಿನ ಬಂಧುಗಳಿಂದ ಕಿರಿಕಿರಿಯ ಮಾತುಗಳು ಎದುರಾಗುವ ಸಂಭವ ಇದೆ. ನೀವು ಮಾಡದೇ ಇರುವ ತಪ್ಪಿಗೆ ಮೂದಲಿಸಿಕೊಳ್ಳುವ ಸಂದರ್ಭ ಇರುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ನೀಡದೆ ದೇವರ ಪ್ರಾರ್ಥನೆ ಮಾಡಿ.
ಅದೃಷ್ಟ ಸಂಖ್ಯೆ:6

ಧನುಸ್ಸು
ನಿಮ್ಮ ಯೋಜನೆಗಳಲ್ಲಿ ಪರಿಶ್ರಮ ಇರಲಿ. ನಿಧಾನವಾದರೂ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಇದಕ್ಕೆ ಪೂರಕವಾಗಿ ಹಿರಿಯರ ಆಶೀರ್ವಾದ ನಿಮಗಿರುವುದು. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು. ನಿಮ್ಮ ಸುತ್ತಮುತ್ತಲೂ ನಿಮ್ಮ ಆರಾಧಿಸುವ, ವಿರೋಧಿಸುವ ಜನರು ಇದ್ದೇ ಇರುತ್ತಾರೆ. ಅವರ ನಿಜವಾದ ಮುಖವಾಡ ತಿಳಿಯದೆ ನೀವು ಎಲ್ಲಾ ವಿಷಯವನ್ನು ಬಹಿರಂಗ ಪಡಿಸುವುದರಿಂದ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಜೀವನ ರಥ ಸಾಗಿಸಲು ಗಂಡು ಹೆಣ್ಣು ಅವಶ್ಯಕ. ಆದರೆ ರಥ ಸಾಗಿಸಲು ಪರ ಪುರುಷರ ಅಥವಾ ಪರಸ್ತ್ರೀಯ ಸಹಾಯ ಪಡೆಯುವುದು ಅಪಚಾರವಾಗುವುದು. ಈ ಬಗ್ಗೆ ವಿವೇಚನೆಯಿಂದ ವರ್ತಿಸಿ.
ಅದೃಷ್ಟ ಸಂಖ್ಯೆ:9

ಮಕರ
ಉಗುರಿನಲ್ಲಿ ಹೋಗುವ ಕೆಲಸಗಳಿಗೆ ಕೊಡಲಿ ಹಿಡಿಯುವ ವ್ಯರ್ಥ ಶ್ರಮ ಕೈಬಿಡಿ. ಅನಗತ್ಯವಾದ ಸಂಶಯವೇ ನಿಮ್ಮ ಕಾರ್ಯಹಾನಿಗೆ ಕಾರಣವಾಗುವುದು. ಧನಾತ್ಮಕವಾಗಿ ಚಿಂತಿಸಿ ಧನ್ಯತೆ ಹೊಂದಿ.ಅಂಗೈ ಹುಣ್ಣಿಗೆ ಕನ್ನಡಿ ಬೇರೆ ಎನ್ನುವಂತೆ ನಿಮ್ಮ ಸುತ್ತಮುತ್ತಲಿನ ಜನರಿಂದಲೇ ನಿಮ್ಮ ಕಾರ್ಯವಾಗುತ್ತಿರುವಾಗ ಅದಕ್ಕಾಗಿ ರಾಜಕಾರಣಿಯ ಸಹಾಯ ಪಡೆಯುವುದು ಸೂಕ್ತವಲ್ಲ. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಇದೆ.ನೀವು ಧಾರಾಳತನವೇ ನಿಮಗೆ ತೊಂದರೆಯನ್ನುಂಟು ಮಾಡುವುದು. ಒಳ್ಳೆಯತನಕ್ಕೂ ಒಂದು ಮಿತಿ ಉಂಟು. ಆ ಮಿತಿಯನ್ನು ಅರಿತು ಸಮಾಜದಲ್ಲಿ ವರ್ತಿಸಿ. ಇದರಿಂದ ಮಡದಿ ಮಕ್ಕಳು ಸಂತಸ ಪಡುವರು.
ಅದೃಷ್ಟ ಸಂಖ್ಯೆ:2

ಕುಂಭ
ಸ್ನೇಹಿತರ ಮೂಲಕವೇ ಕೆಲಸಗಳು ಆಗುತ್ತವೆ ಎಂಬ ನಿಯಮವಿಲ್ಲ. ನಿಮ್ಮ ಪ್ರಯತ್ನವೂ ಸಾಕಷ್ಟು ಬೇಕು. ವ್ಯಾಪಾರ ವ್ಯವಹಾರದಲ್ಲಿ ಆದಷ್ಟು ಪಾರದರ್ಶಕತೆ ರೂಢಿಸಿಕೊಳ್ಳಿ. ರಾಜಕಾರಣಿಗಳು ತಮ್ಮ ಮನದ ಇಚ್ಛೆಯನ್ನು ಬಹಿರಂಗ ಪಡಿಸುವ ಮೂಲಕ ತಮ್ಮ ಕಾರ್ಯಗಳನ್ನು ಈಡೇರಿಸಿಕೊಳ್ಳಬಹುದಾಗಿದೆ. ಇದೊಂದು ರಾಜಕೀಯ ಕಣ್ಣೋರೆಸುವ ತಂತ್ರವಾದರೂ ಮುಂದೆ ಅನುಕೂಲವಾಗುವುದು.ಸ್ವಚ್ಛ ಮನೆಯು ಸ್ವಚ್ಛ ಮನಸ್ಸಿನ ಸಂಕೇತವಾಗಿರುವುದು. ಆದರೆ ಮನೆಯನ್ನು ಒಪ್ಪ ಓರಣವಾಗಿ ಇಟ್ಟುಕೊಳ್ಳಲು ಆಲಸ್ಯತನ ಅಡ್ಡ ಬರುತ್ತದೆ. ಇದರಿಂದ ಹೊರಬನ್ನಿ. ಆಂಜನೇಯ ಸ್ತೋತ್ರ ಪಠಿಸಿ.
ಅದೃಷ್ಟ ಸಂಖ್ಯೆ:2

ಮೀನ
ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವರು. ಅಂತೆಯೇ ಈಗ ಗ್ರಹಗಳ ಬಲ ಇಲ್ಲದೆ ಒತ್ತಡ ಜೀವನ ನಡೆಸುತ್ತಿರುವ ನಿಮಗೆ ಸಾಲಗಾರರು ಹೆಚ್ಚಿನ ತಲೆ ನೋವು ಉಂಟು ಮಾಡುವರು.ಬಹುಜನರಿಗೆ ಪ್ರಿಯರಾಗಿದ್ದೀರಿ. ಆದರೆ ತುಸುವಾದರೂ ನಿಷ್ಠುರತೆ ಬೆಳೆಸಿಕೊಳ್ಳದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ. ನಿಮ್ಮತನವನ್ನು ಕಾಯ್ದುಕೊಳ್ಳಲು ಕೆಲವರಿಂದ ಅಂತರ ಕಾಯ್ದುಕೊಳ್ಳಿ. ಮನದ ಸಂಕಲ್ಪ ಸಾಧಿಸಿಕೊಡುವ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ. 54 ಇಲ್ಲವೆ 100 ಕಪ್ಪು ವೀಳ್ಯೆದೆಲೆ ಸರವನ್ನು ಆಂಜನೇಯನಿಗೆ ಅರ್ಪಿಸಿ. ಗುರುಗಳನ್ನು ಮನಸಾ ಸ್ಮರಿಸಿ.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











