Latest Updates
-
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ
2-11-2018: ಶುಕ್ರವಾರದ ದಿನ ಭವಿಷ್ಯ
ಶುಕ್ರವಾರದ ದಿನ ಲಕ್ಷ್ಮಿ ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಮಹಾಲಕ್ಷ್ಮಿಎಂದೂ ಕರೆಯಲಾಗುತ್ತದೆ. ಪ್ರತಿವರ್ಷ ಶುಕ್ರವಾರದಂದು ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ಆಚರಿಸುವ ಪದ್ದತಿಯಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಕೂಡ ವಿಶೇಷ ಪೂಜೆಗಳನ್ನು ಲಕ್ಷ್ಮಿಪೂಜೆ ಎಂದು ಆಚರಿಸಲಾಗುತ್ತದೆ.
"ಶ್ರೀ" ಅಕ್ಷರವನ್ನು ಸೇರಿಸಿ ಶ್ರೀ ಲಕ್ಷ್ಮಿ, ಶ್ರೀ ಮಹಾಲಕ್ಷ್ಮಿಎಂದೂ ಬಳಸಲಾಗುತ್ತದೆ. ಶ್ರೀ ಎಂಬುದು ಸಿರಿ ಪದದ ತತ್ಸಮ ರೂಪ. ಸಿರಿ ಅಂದರೆ, ಸಂಪತ್ತು, ಐಶ್ವರ್ಯದ ಅಧಿದೇವತೆ ಎಂದು ಸೂಚಿಸಲು ಇದನ್ನು ಸೇರಿಸಲಾಗುತ್ತದೆ. ಲಕ್ಷ್ಮಿಯನ್ನು ಅನಂತ ಹೆಸರುಗಳಿಂದ ಕರೆಯುತ್ತಾರೆ. ಆದಿಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ , ಗಜಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ, ಧನಲಕ್ಷ್ಮಿ.ಲಕ್ಷ್ಮಿಯನ್ನು ಕಮಲದ (ಪದ್ಮ) ಹೂವಿಗೆ ಬಹಳವಾಗಿ ಸಂಪರ್ಕ ಕಲ್ಪಿಸಲಾಗುತ್ತದೆ.
ಆಕೆಯ ಹಲವಾರು ಹೆಸರುಗಳು ಆ ಹೂವಿಗೆ ಸಂಬಂಧಿಸಿದ್ದಾಗಿವೆ.ಪದ್ಮಪ್ರಿಯ,ಪದ್ಮ ಮಾಲಾಧಾರ ದೇವಿ, ಪದ್ಮಮುಖಿ, ಪದ್ಮಾಕ್ಷಿ, ಪದ್ಮಹಸ್ತೆ, ಪದ್ಮಸುಂದರಿ, ಭಾರ್ಗವಿ,(ಋಷಿ ಭೃಗುವಿನ ಮಗಳ ಅವತಾರ). ಶುಕ್ರವಾರದ ದೇವಿಯಾದ ಶ್ರೀ ಭಾರ್ಗವಿ ಲಕ್ಷ್ಮಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ
ನಿಮ್ಮದೇ ಆದ ವಾಹನ ಖರೀದಿಗೂ ಮುನ್ನ ಉತ್ತಮ ತಿಳುವಳಿಕೆ ಇರುವವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ. ಮಾತನಾಡುವಾಗ ಆದಷ್ಟು ಎಚ್ಚರ ವಹಿಸಿ, ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಹೊಸ ಕೆಲಸಗಳನ್ನು ಹುಡುಕುವವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವಕೃಪೆಯಿಂದ ಶುಭಫಲ ಉಂಟಾಗುವುದು. ಸ್ನೇಹಿತರು ಸಹಾಯಕೋರಿ ಬರಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.ವ್ಯವಹಾರ ನಿಮಿತ್ತ ಮಾಡಲಿರುವ ಪ್ರಯಾಣ ಲಾಭದಾಯಕವಾಗಲಿದೆ. ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಸಿಗಲಿದೆ. ಬಂಧುಗಳೊಡನೆ ಅನಾವಶ್ಯಕ ವಾಗ್ವಾದ ಬೇಡ. ಆದಾಯದ ಮೂಲಗಳು ಹೆಚ್ಚಲಿವೆ. ಅಂತೆಯೇ ಖರ್ಚಿನ ದಾರಿಯು ಅಧಿಕವಾಗಿದೆ.ಅದೃಷ್ಟ ಸಂಖ್ಯೆ:2

ವೃಷಭ
ಹಿಂದಿನಿಂದಲೂ ಬಂದ ಕುಟುಂಬದ ಸಂಪ್ರದಾಯ ವಿಧಾನಗಳನ್ನು ನಾಜೂಕಾಗಿ ನಿರ್ವಹಿಸಿ. ಒತ್ತಡಗಳಿಗೆ ಅಲ್ಪ ವಿರಾಮ ದೊರೆಯಲಿದೆ. ನಿಮಗೆ ಬರಬೇಕಾಗಿದ್ದ ಹಣವು ನಿಮ್ಮ ಕೈ ಸೇರುವುದು.ವಿವಾಹ ಅಪೇಕ್ಷೆಯುಳ್ಳವರಿಗೆ ಖಂಡಿತವಾಗಿಯೂ ಆತುರ ಸಲ್ಲದು. ಕಾದಷ್ಟು ಕಣಕರುಚಿ ಎನ್ನುವಂತೆ ಇನ್ನು ಸ್ವಲ್ಪದಿನ ಕಾಯುವುದರಿಂದ ಉತ್ತಮ ಜೀವನ ಸಂಗಾತಿಯು ದೊರೆಯುವರು. ಕಾರ್ಯಭಾರವನ್ನು ತುಸು ಕಡಿಮೆ ಮಾಡಿಕೊಳ್ಳಿ. ಅತಿ ಕಾರ್ಯಭಾರವು ಅನಾರೋಗ್ಯಕ್ಕೆ ಕಾರಣವಾಗುವುದು. ಅನಿರೀಕ್ಷಿತ ಪ್ರಯಾಣದಿಂದಾಗಿ ಕುಲದೇವತಾ ದರ್ಶನವಾಗುವುದು. ಹಳೆಯ ಸ್ನೇಹಿತರಿಂದ ಸಕಾಲಿಕ ನೆರವು ದೊರೆಯಲಿದೆ.
ಅದೃಷ್ಟ ಸಂಖ್ಯೆ:1

ಮಿಥುನ
ಅನೇಕ ದಿನಗಳ ಸ್ನೇಹವನ್ನು ಒಂದೇ ಒಂದು ಮಾತು ಹಾಳು ಮಾಡುವ ಸಾಧ್ಯತೆ ಉಂಟಾಗುವುದು. ಹಾಗಾಗಿ ಮಾತನಾಡುವಾಗ ಆದಷ್ಟು ಎಚ್ಚರವಹಿಸಿ. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು.ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ನಿಮಗೆ ಹೆಚ್ಚಿನದಾದ ಹೆಸರಿದೆ. ನಿಮ್ಮ ಬರವಣಿಗೆಗಳು ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಅನುಕೂಲ ಕಂಡು ಬರುವುದು.ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಈ ಮುಂಚೆ ಬರೆದ ಪರೀಕ್ಷೆಯ ಫಲಿತಾಂಶವು ಬರುವ ಸಾಧ್ಯತೆ ಇರುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು, ಮನಸ್ಸಿನ ಶಾಂತಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ.ಅದೃಷ್ಟ ಸಂಖ್ಯೆ:2

ಕಟಕ
ಆಹಾರದ ಕುರಿತಾಗಿ ಅಸಡ್ಡೆ ನಿರ್ಲಕ್ಷ್ಯವನ್ನು ತೋರದಿರಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಏರು-ಪೇರು ಆಗುವ ಸಾಧ್ಯತೆ ಇದೆ. ಮನೆ ವೈದ್ಯರ ಸಲಹೆಪಡೆಯಿರಿ. ಆದಷ್ಟು ವಿಶ್ರಾಂತಿ ಪಡೆಯುವುದು ಒಳ್ಳೆಯದು.ಸಾಂಸಾರಿಕ ಗೊಂದಲಗಳು ಕಡಿಮೆಯಾಗಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಆರೋಗ್ಯದಲ್ಲಿ ತುಸು ಏರು-ಪೇರಾಗುವುದು. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಪರಿಶ್ರಮದಲ್ಲಿಯೇ ಹಿತ ಕಾಣುವ ನಿಮಗೆ ಯಶಸ್ಸು ನಿಶ್ಚಿತ. ಮತ್ತು ಅದರ ಫಲವನ್ನು ಶೀಘ್ರದಲ್ಲಿಯೇ ಕಂಡುಕೊಳ್ಳುವಿರಿ. ಕೆಲವೊಮ್ಮೆ ನಿಮ್ಮ ಅತಿಯಾದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇರುವುದು. ಕುಟುಂಬದಲ್ಲಿ ಒಮ್ಮತ ಮೂಡುವುದು.ಅದೃಷ್ಟ ಸಂಖ್ಯೆ:4

ಸಿಂಹ
ನಿಮಗೆ ನಿಮ್ಮ ಸ್ನೇಹಿತರು ಸಹಾಯ ಹಸ್ತ ನೀಡುವರು. ಹಾಗಾಗಿ ಗೆಳೆಯರೆ ನಿಜವಾದ ಆಸ್ತಿ ಎನಿಸಿಕೊಳ್ಳುವರು. ಉದಾಸೀನ ಪ್ರವೃತ್ತಿಯನ್ನು ಬಿಟ್ಟರೆ ಒಳ್ಳೆಯದು.ಮನೆಯ ಮಕ್ಕಳ ವಿಚಾರದಲ್ಲಿ ಉದಾಸೀನ ಮಾಡುವುದರಿಂದ ಕುಲಕ್ಕೆ ಕಳಂಕ ಬರುವ ಸಾಧ್ಯತೆ ಇದ್ದು, ಮಕ್ಕಳನ್ನು ಕರೆದು ಈ ಬಗ್ಗೆ ಬುದ್ಧಿವಾದವನ್ನು ಹೇಳುವುದು ಒಳ್ಳೆಯದು. ಮನಸ್ಸಿಗೆ ಒಗ್ಗದ ಜವಾಬ್ದಾರಿಗಳನ್ನು ಹೊರಬೇಡಿ.ಮನೆಯಲ್ಲಿ ಬಹಳ ದಿನಗಳ ಮೇಲೆ ಸಂತಸದ ವಾತಾವರಣ ಮೂಡಿ ಬರಲಿದೆ. ಮಂಗಳ ಕಾರ್ಯಗಳಿಗೆ ಸಿದ್ಧತೆ ನಡೆಯಲಿದೆ. ಬಂಧುಗಳೊಡನೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸುದೀರ್ಘ ಚರ್ಚೆ ನಡೆಯಲಿದೆ.ಅದೃಷ್ಟ ಸಂಖ್ಯೆ:6

ಕನ್ಯಾ
ಲಲಿತಕಲೆ, ಸಂಗೀತ ನೃತ್ಯಗಳಲ್ಲಿ ಆಸಕ್ತಿ ಹೊಂದಿರುವಂಥವರು ಹೆಚ್ಚಿನ ಹೆಸರನ್ನು ಕೀರ್ತಿಯನ್ನು ಪಡೆಯುವರು. ಮಗನು ಮಾಡಲ್ಪಟ್ಟ ಸಾಲದ ಬಾಧೆಯು ಕಡಿಮೆ ಆಗುತ್ತಾ ಹೋಗುತ್ತಿರುವುದು ಸಂತಸ ನೀಡಿದೆ.ಸ್ನೇಹಿತರು ಸಹಾಯಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ನಿರುದ್ಯೋಗಿ ಮಗನಿಗೆ ಸಾಧಾರಣ ವೇತನದ ನೌಕರಿಯು ದೊರೆಯುವ ಸಾಧ್ಯತೆ ಇರುತ್ತದೆ. ಮಿತಿಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿ.ಬರಲಿರುವ ಸಮಸ್ಯೆಗಳನ್ನು ಸಾವಧಾನ ಚಿತ್ತದಿಂದ ಎದುರಿಸಿ. ಗಾಬರಿಯಿಂದ ಗೊಂದಲ ಮಾಡಿಕೊಂಡಲ್ಲಿ ಸಮಸ್ಯೆಗಳು ಬೆಳೆಯುತ್ತಾ ಹೋಗಬಹುದೇ ವಿನಃ ಪರಿಹಾರ ವಾಗಲಾರವು. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಕಂಡು ಬರುವುದು. ಅದೃಷ್ಟ ಸಂಖ್ಯೆ:6

ತುಲಾ
ಧನ ಸಂಪಾದನೆಗಾಗಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವಿರಿ ಮತ್ತು ಆ ನಿಟ್ಟಿನಲ್ಲಿ ಯಶಸ್ಸನ್ನು ಹೊಂದುವಿರಿ. ಗುರುಹಿರಿಯರ ಸಂಗಡ ಉತ್ತಮ ಸೌಹಾರ್ದತೆಯನ್ನು ಇಟ್ಟುಕೊಳ್ಳಿ.ಸ್ವತಂತ್ರವಾಗಿ ಬಂಡವಾಳ ಹೂಡಿ ವ್ಯವಹಾರ ಆರಂಭಿಸಲು ಸಕಾಲವಲ್ಲ. ಮತ್ತೊಬ್ಬರ ಪಾಲುದಾರಿಕೆಯೊಂದಿಗೆ ಆರಂಭಿಸುವುದು ಉತ್ತಮ. ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಆದರೆ ನಿಮ್ಮ ಯೋಜನೆಯಂತೆ ಕಾರ್ಯರೂಪಕ್ಕೆ ತನ್ನಿ.ಸಮಾಜದ ಸೇವೆ ನಿಮ್ಮಿಂದ ವಿಶೇಷವಾಗಿ ನಡೆದು ಸಮಾಜದಲ್ಲಿ ಮನ್ನಣೆಗಳಿಸುವಿರಿ. ಅನೇಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಬೇಕಾಗುವುದು. ಸರ್ಕಾರದಿಂದ ಬರಬೇಕಾಗಿದ್ದ ಧನ ಸಹಾಯ ಇಷ್ಟರಲ್ಲೇ ನಿಮ್ಮ ಕೈ ಸೇರಲಿದೆ.
ಅದೃಷ್ಟ ಸಂಖ್ಯೆ:9

ವೃಶ್ಚಿಕ
ಜಾಗತಿಕ ವ್ಯವಹಾರ ತಜ್ಞರು, ಪತ್ರಿಕೋದ್ಯಮಿಗಳು ಹೆಚ್ಚಿನ ಚಾತುರ್ಯವನ್ನು ತೋರುವರು. ಹಾಗಾಗಿ ಇವರುಗಳಿಗೆ ಹೆಚ್ಚಿನ ಸೌಲಭ್ಯ ದೊರಕುವುದು. ಆಂಜನೇಯ ಸ್ತೋತ್ರವನ್ನು ಪಠಿಸಿ.ಸಮಯ ಪ್ರಜ್ಞೆಯಿಂದ ವ್ಯವಹರಿಸಿ. ಸ್ನೇಹಿತರೊಂದಿಗೆ ಮೋಜನ್ನು ಅನುಭವಿಸುವಿರಿ. ನಿಮ್ಮ ಕೆಲಸಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರ ಇರುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ.ವೈಯಕ್ತಿಕ ಕೆಲಸಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ನೌಕರಿ ಬದಲಾವಣೆ ಸಧ್ಯಕ್ಕೆ ಬೇಡವೇ ಬೇಡ. ಆದಷ್ಟು ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಆಂಜನೇಯ ಸ್ಮರಣೆ ಮಾಡಿ. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಕಂಡು ಬರುವುದು.
ಅದೃಷ್ಟ ಸಂಖ್ಯೆ:6

ಧನಸ್ಸು
ಆಡಳಿತ ವಿಚಾರಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ಬಗ್ಗೆ ಚಿಂತನೆ ನಡೆಸುವಿರಿ. ಇದಕ್ಕೆ ಕೆಲವರ ವಿರೋಧವಿದ್ದರೂ ಅಂತಿಮ ತೀರ್ಮಾನ ನಿಮ್ಮದಾಗಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಅನುಭವಿಗಳ ಸಲಹೆಪಡೆದು ಷೇರು ಬಜಾರಿನಲ್ಲಿ ಹಣ ಹೂಡುವುದು ಒಳಿತು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವಿಸಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವರು.ತಂದೆಯಿಂದ ಬಂದ ಬಳುವಳಿಯಾದ ಕುಲಕಸುಬನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಹೋಗಬೇಡಿ. ಆದಾಯಕ್ಕೆ ಸದ್ಯಕ್ಕೆ ಕತ್ತರಿ ಬಿದ್ದರೂ ಮುಂದಿನ ದಿನಗಳಲ್ಲಿ ಒಳಿತಾಗುವುದು. ಹಿರಿಯರ ಸಕಾಲಿಕ ಎಚ್ಚರಿಕೆಯ ಮಾತುಗಳು ನಿಮಗೆ ದಾರಿದೀಪವಾಗುವುದು.
ಅದೃಷ್ಟ ಸಂಖ್ಯೆ:2

ಮಕರ
ಆಸ್ತಿ ಖರೀದಿಯ ಬಗ್ಗೆ ಮರು ಪರೀಶಿಲನೆ ನಡೆಸುವುದರಿಂದ ಅನುಕೂಲವಾಗುವುದು. ನಿಮ್ಮ ಮನದ ಇಷ್ಟದಂತೆ ಕಾರ್ಯಗಳು ಕೈಗೂಡುವುದರಿಂದ ಮಾನಸಿಕ ನೆಮ್ಮದಿಯನ್ನು ಹೊಂದುವಿರಿ.ಆದಾಯಕ್ಕೆ ಹೊಸ ಹೊಸ ದಾರಿ ಕಂಡಂತೆ ಖರ್ಚಿಗೂ ಕೂಡಾ ಹೊಸ ದಾರಿ ಕಾಣಲಿವೆ. ಖರ್ಚಿನ ಬಾಬ್ತಿಗೆ ಕಡಿವಾಣ ಹಾಕಲು ಪ್ರಯತ್ನಿಸದಿದ್ದಲ್ಲಿ ಕೂಡಿಟ್ಟ ಗಂಟು ಕೂಡಾ ಕರಗುವ ಸಾಧ್ಯತೆ ಇದೆ. ಸೋಮಾರಿತನ ಹಾನಿ ಮಾಡುವುದು. ಹಲವು ಸನ್ನಿವೇಶಗಳಿಂದಾಗಿ ಮಾನಸಿಕ ಚಂಚಲತೆ ಕಾಡುವುದು. ಸಂಬಂಧಪಡದ ಭೂವಿವಾದದ ಒತ್ತಡದಿಂದಾಗಿ ಬಳಲಿಕೆ ಉಂಟಾಗುವುದು. ಗುರು-ಹಿರಿಯರ ಸಲಹೆಯನ್ನು ಸ್ವೀಕರಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಅದೃಷ್ಟ ಸಂಖ್ಯೆ:9

ಕುಂಭ
ನಿಮ್ಮ ಕೈಕೆಳಗಿನ ಕೆಲಸಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ನೀವು ಸ್ವೀಕರಿಸಿದ ಸಿವಿಲ್ ಪ್ರಾಜೆಕ್ಟ್ಗಳನ್ನು ಸಕಾಲದಲ್ಲಿ ಮುಗಿಸಿಕೊಡಲು ಅನುಕೂಲವಾಗುವುದು. ಗ್ರಾಹಕರೊಂದಿಗೆ ಸೌಹಾರ್ದಯುತವಾಗಿ ಮಾತನಾಡುವುದು ಕ್ಷೇಮ.ಅನೇಕ ಸಮಸ್ಯೆಗಳಿಂದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲಾ ರೀತಿಯ ಸಹಾಯಗಳನ್ನು ಸ್ವೀಕರಿಸಿ.ಉದ್ಯೋಗಕ್ಕೆ ಸಂಬಂಧಪಟ್ಟಂತೆ ಲಾಭಗಳು ಹೆಚ್ಚಿದಷ್ಟೇ ಕಾರ್ಯ ಒತ್ತಡಗಳು ನಿಮ್ಮ ಮೇಲೆ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಶಾಂತಚಿತ್ತತೆ ಕಾಪಾಡಿಕೊಳ್ಳಿ. ಪ್ರಸಂಗ ಬಂದಲ್ಲಿ ಸ್ನೇಹಿತರ ಸಲಹೆ ಸಹಾಯ ಪಡೆಯಿರಿ.ಅದೃಷ್ಟ ಸಂಖ್ಯೆ:2

ಮೀನ
ನಿಮ್ಮ ಸೇವೆಯ ರೀತಿನೀತಿಗಳಿಂದ ಸಂತೋಷಗೊಂಡ ಹಿರಿಯರಿಂದ ವಿಶೇಷವಾದ ಲಾಭವೊಂದು ಬರಲಿದೆ. ಸಾಧ್ಯವಾದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬನ್ನಿ, ಬಡವರಿಗೆ ಸಹಾಯ ಮಾಡಿ.ಸತತ ಪರಿಶ್ರಮವೇ ಯಶಸ್ಸಿನ ಗುಟ್ಟೆಂದು ಚೆನ್ನಾಗಿ ಅರಿತಿರುವ ನಿಮಗೆ ಯೋಗ್ಯ ಪ್ರತಿಫಲ ದೊರೆಯುವುದು. ಕಾರ್ಯ ಒತ್ತಡ ಎಷ್ಟೇ ಇದ್ದರೂ ಕೂಡಾ ಮನಸ್ಥಿತಿಯನ್ನು ಕಳೆದುಕೊಳ್ಳದೆ ಇರುವ ನಿಮ್ಮ ಮನೋಧೈರ್ಯವನ್ನು ಇತರರು ಮೆಚ್ಚುವರು.ಎಲ್ಲವನ್ನೂ ನಿಭಾಯಿಸಬಲ್ಲೆನೆಂಬ ಅತಿಯಾದ ಆತ್ಮವಿಶ್ವಾಸ ಬೇಡ. ಮಕ್ಕಳು ತಮ್ಮ ನಡವಳಿಕೆಯಿಂದ ಹಿರಿಯರಿಗೆ ಮುಜುಗರವನ್ನುಂಟು ಮಾಡುವರು. ಕಾರ್ಯ ಒತ್ತಡದ ನಡುವೆಯೂ ಪರರಿಗೆ ಉಪಕಾರವನ್ನು ಮಾಡುವಿರಿ. ಅದೃಷ್ಟ ಸಂಖ್ಯೆ:1
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp



Click it and Unblock the Notifications











