19-10-2018: ಶುಕ್ರವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು

19-10-2018- ಶುಕ್ರವಾರದ ದಿನ ಭವಿಷ್ಯ | Boldsky

ನವದುರ್ಗಿ ದೇವಿಯು ಈ ಶುಕ್ರ ವಾರದ ಅಧಿದೇವತೆ. ನವದುರ್ಗಿಯ ದೇವಿಯ ಆರಾಧನೆ ಮಾಡುವುದರಿಂದ ಈ ಶುಕ್ರವಾರದ ಮೂಲ ಗುಣಗಳನ್ನು ಮೈಗೂಡುತ್ತವೆ.

your daily horoscope-19-october-2018

ಇನ್ನು ಈ ಎಲ್ಲಾ ಆದಿಶಕ್ತಿಯನ್ನು ಇವತ್ತಿನ ಸಂಪತ್ತಿನ ದೇವತೆ ಅಂತ ಕೂಡ ಕರೆಯಲಾಗುತ್ತದೆ. ದೇವಿಯ ಆರಾಧನೆ ಮಾಡುವುದರಿಂದ ಆರ್ಥಿಕ ಅನುಕೂಲ ಹೆಚ್ಚಾಗುತ್ತದೆ. ಸಂಪತ್ತಿನ ಕ್ರೋಡೀಕರಣ ಆಗುತ್ತದೆ. ಈ ವಿಜಯದಶಮಿ ದಿನದಂದು ದಿನ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807

ಮೇಷ

ಮೇಷ

ಸದ್ಯಕ್ಕೆ ನಿಮಗಿರುವ ಕೀರ್ತಿಯೇ ಸಾಕಷ್ಟು ಆದಾಯ ತಂದುಕೊಡಲಿದೆ. ಕೆಲವು ಗ್ರಹಗಳ ಅನುಗ್ರಹ ನಿಮಗಿರುವುದರಿಂದ ನೀವು ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಹೊಂದುವಿರಿ. ಲಕ್ಷ್ಮೀನರಸಿಂಹ ಮಂತ್ರ ಪಠಿಸಿ.ಜಯ ಇರುವವರೆಗೂ ಭಯವಿಲ್ಲ. ಗ್ರಹಸ್ಥಿತಿಗಳು ಉತ್ತಮವಾಗಿರುವುದರಿಂದ ಈ ದಿನ ಸಂತೋಷದ ದಿನವಾಗಿದೆ. ಮಕ್ಕಳು ಮತ್ತು ಮಡದಿಯೊಂದಿಗೆ ಸಂತಸದ ಕ್ಷ ಣಗಳನ್ನು ಕಾಣುವಿರಿ.ಸಂತೋಷಪಡುವ ಸಂಭ್ರಮದ ಕಾರ್ಯಕ್ರಮವೊಂದು ದಿಢೀರ್‌ ನಿಶ್ಚಯವಾಗುವುದರಿಂದ ದೂರ ಪ್ರಯಾಣದ ಸಾಧ್ಯತೆ ಇರುವುದು. ಸಂತೋಷದ ಈ ದಿನದಲ್ಲಿ ಮನಸ್ಸು ಹಕ್ಕಿಯಂತೆ ಹಾರಾಡುವುದು.

ಅದೃಷ್ಟ ಸಂಖ್ಯೆ:1

ವೃಷಭ

ವೃಷಭ

ಮಾಡುವ ಕೆಲಸಗಳಲ್ಲಿ ಗೊಂದಲಗಳು ಕಂಡುಬರುವವು. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದು. ಮನೆ ಕಟ್ಟುವ ಕಾರ್ಮಿಕರಿಗೆ ಬಿಡುವು ಇಲ್ಲದ ದಿನಗಳು. ಹಳೆ ಮನೆ ರಿಪೇರಿ ಕೆಲಸ ಆದಷ್ಟು ಬೇಗ ಮಾಡಿ ಮುಗಿಸುವುದು ಒಳ್ಳೆಯದು.ಮಕ್ಕಳು ಸ್ವಲ್ಪ ಮೊಂಡಾಟ ಮಾಡಿ ಕೋಪ ತರಿಸುವರು ಇದು ನಿಮ್ಮ ಆತಂಕಕ್ಕೆ ಕಾರಣವಾಗುವುದು. ಮಕ್ಕಳ ಶಾಲಾ ಪ್ರಗತಿಯ ನ್ಯೂನತೆ ಸರಿಪಡಿಸಲು ಶಾಲೆಯಿಂದ ನಿಮಗೆ ನೋಟೀಸು ಬರುವ ಸಾಧ್ಯತೆ ಇದೆ. ಮಕ್ಕಳನ್ನು ಈ ವಿಚಾರವಾಗಿ ಶಿಕ್ಷಿಸದೆ ಪ್ರೀತಿಯಿಂದ ಬುದ್ಧಿ ಹೇಳಿ.

ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷಮಿಸಿಬಿಡಿ.

ಅದೃಷ್ಟ ಸಂಖ್ಯೆ:2

ಮಿಥುನ

ಮಿಥುನ

ಸಮಾಜ ಸೇವೆಯಲ್ಲಿ ನೆಮ್ಮದಿ ಕಾಣುವಿರಿ. ಆರೋಗ್ಯದ ಕಡೆ ಗಮನ ಕೊಡಿ. ಶುಗರ್‌ ಮತ್ತು ಬಿಪಿ ಇರುವವರು ವೈದ್ಯರ ಸಲಹೆಗಳನ್ನು ಪಾಲಿಸಿ. ವೈಯಕ್ತಿಕ ಸಮಸ್ಯೆಗಳಿಗೆ ವಾರಾಂತ್ಯದಲ್ಲಿ ಪರಿಹಾರ ಸಿಗುವುದು.

ಯಾವುದೇ ತೆರೆನಾದ ಹೊಸ ಕಾರ್ಯಕ್ರಮದ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲು ಕಾಲಾವಕಾಶ ತೆಗೆದುಕೊಳ್ಳಿ. ನಿಮ್ಮಿಂದ ಶಿಸ್ತುಬದ್ಧ ಕಾರ್ಯಕ್ರಮವನ್ನು ವೀಕ್ಷಿಸಲು ಕಾತುರರಾಗಿದ್ದಾರೆ. ಅವರಿಗೆ ಭ್ರಮ ನಿರಸನ ಮಾಡಬೇಡಿ.

ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಸಮಾಜದಲ್ಲಿ ಗೌರವ, ಸನ್ಮಾನಗಳು ಏರ್ಪಡುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಮಾನಸಿಕ ಗೊಂದಲದಿಂದ ದೂರ ಇರುವುದು ಒಳ್ಳೆಯದು. ನಿಮ್ಮ ಉದಾಸೀನತೆಯಿಂದ ವ್ಯವಹಾರದಲ್ಲಿ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇದ್ದು ಸಂಯಮದಿಂದ ವರ್ತಿಸಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುವುದು.

ಬಂಧುವೊಬ್ಬರ ಅನಾರೋಗ್ಯ ನಿಮಿತ್ತ ಆಸ್ಪತ್ರೆಗಳಿಗೆ ಓಡಾಟ, ಗಡಿಬಿಡಿ ಜಾಸ್ತಿಯಾಗಲಿದೆ. ಆದರೆ ಎಲ್ಲದಕ್ಕೂ ಸಮಯದ ಕೊರತೆ ಎದ್ದು ಕಾಣುವುದು. ಇತರೆ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ರೋಗಿಯ ಆರೈಕೆ ಮಾಡುವುದು ಆದ್ಯ ಕರ್ತವ್ಯವಾಗಿದೆ.

ನಿಮ್ಮ ವಿರೋಧಿಗಳು ನಿಮ್ಮ ಸಾಮಾಜಿಕ ಗೌರವದ ಪ್ರಭಾವ ತಗ್ಗಿಸಲು ಪ್ರಯತ್ನ ಪಡುವರು. ಆದಾಗ್ಯೂ ಗೋಡೆಗೆ ಪುಟಿದ ಚೆಂಡಿನಂತೆ ನೀವು ಹೆಚ್ಚು ಜನಪ್ರಿಯರಾಗುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.

ಅದೃಷ್ಟ ಸಂಖ್ಯೆ:3

ಸಿಂಹ

ಸಿಂಹ

ಅರಿತು ಬಾಳಿದರೆ ಆರು ವರುಷ, ಮರೆತು ಬಾಳಿದರೆ ಮೂರು ವರುಷ ಎನ್ನುವಂತೆ ಕೆಲವೊಂದು ವಿಚಾರಗಳನ್ನು ವಿಮರ್ಶಿಸಿ ಕಾರ್ಯರೂಪಕ್ಕೆ ತನ್ನಿ. ಹಿರಿಯರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಪ್ರತಿ ದಿನವೂ ನಿಮ್ಮ ಜವಾಬ್ದಾರಿಗಳು ಮಾನಸಿಕ ಒತ್ತಡವನ್ನು ತರುತ್ತಿವೆ. ಒಂದು ಸಮಸ್ಯೆಯನ್ನು ಬಗೆಹರಿಸುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಈ ಜವಾಬ್ದಾರಿ ಕೆಲಸ ಬೇಡವೇ ಬೇಡಪ್ಪ ಎಂದು ಅಂದುಕೊಳ್ಳುವಿರಿ.

ಕೆಲ ಗ್ರಹಗಳು ಮಕ್ಕಳಿಂದ ನಿಮ್ಮ ಕನಸುಗಳು ನನಸಾಗುವಂತೆ ಮಾಡುವವು. ಮಗನಿಗೆ ಉತ್ತಮ ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ಹೊಸ ರೀತಿಯ ಕಾರ್ಯಗಳು ನೆರವೇರುವವು. ಕುಲದೇವತಾ ಸ್ಮರಣೆ ಮಾಡಿ.

ಅದೃಷ್ಟ ಸಂಖ್ಯೆ:5

ಕನ್ಯಾ

ಕನ್ಯಾ

ದಿಢೀರ್‌ ಪ್ರಯಾಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಮಕ್ಕಳ ಶ್ರೇಯೋಭಿವೃದ್ಧಿಯಿಂದ ನೆಮ್ಮದಿ ಸಿಗುವುದು. ಹಮ್ಮಿಕೊಂಡ ಕಾರ್ಯದಲ್ಲಿ ಶೀಘ್ರವೇ ಯಶಸ್ಸು ದೊರೆಯುವುದು. ಬರಲಿರುವ ಸಂಕಷ್ಟಗಳು ನಿಮ್ಮ ಜಾಣ್ಮೆಯಿಂದ ಪರಿಹಾರವಾಗುವವು.

ಯಾವುದೇ ಕಾರ್ಯಯೋಜನೆಗಳನ್ನು ಹಮ್ಮಿಕೊಂಡರೂ ಸಹಧರ್ಮಿಣಿಯ ಸಲಹೆಯನ್ನು ಪಡೆಯಿರಿ. ಅದರಿಂದ ನಿಮ್ಮ ಕಾರ್ಯ ಯೋಜನೆಗಳು ಯಶಸ್ಸಿನತ್ತ ಸಾಗುವುದು. ದೂರದ ಪ್ರಯಾಣವೊಂದಕ್ಕೆ ರೆಡಿ ಆಗುವಿರಿ.ಹೊಸ ಸಂಸ್ಥೆಯೊಂದನ್ನು ಹುಟ್ಟುಹಾಕುವ ಅಪರೂಪದ ಕಾಯಕದಲ್ಲಿ ಜಯಶೀಲರಾಗಲು ಅವಕಾಶವಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳು ನಿಮ್ಮ ಕೈಸೇರುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಅದೃಷ್ಟ ಸಂಖ್ಯೆ:6

ತುಲಾ

ತುಲಾ

ನಿತ್ಯ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳುವುದು ಉತ್ತಮ. ಶಿಸ್ತುಳ್ಳ ಮನುಜಂಗೆ ಶಿವನು ತಲೆ ಬಾಗುವನು ಎಂಬ ಸತ್ಯವನ್ನು ಅರಿಯಿರಿ. ತೈಲ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿದೆ. ಶಿವನ ಆರಾಧನೆಯಿಂದ ಆರೋಗ್ಯ ಸುಧಾರಿಸುವುದು.ಪದೇ ಪದೆ ವಿರೋಧಿಗಳಿಂದ ಬರುತ್ತಿರುವ ಕಿರಿಕಿರಿಗಳು ಗೆಳೆಯನ ಬೆಂಬಲದಿಂದ ಪರಿಹಾರಗೊಳ್ಳುವುದು. ಈ ಸಂಕಷ್ಟಗಳಿಗೆ ಮನೆಯ ವಾಸ್ತುವೇ ಕಾರಣ ಎಂದು ಮನೆ ಬದಲಾಯಿಸಲು ಮನಸ್ಸು ಮಾಡುವುದು ಸೂಕ್ತವಲ್ಲ.ಹಳೆಯ ಕಡತವೊಂದನ್ನು ಅಪಹರಿಸಲು ಇಲ್ಲವೆ ಹಳೆಯ ಲೆಕ್ಕಪತ್ರಗಳನ್ನು ಕೆದಕಿ ನಿಮ್ಮ ಮೇಲೆ ಅಪವಾದ ತರುವ ಹುನ್ನಾರ ನಡೆಯುತ್ತಿದೆ. ಆದಷ್ಟು ಎಚ್ಚರಿಕೆಯಿಂದ ಇರಿ. ನಿಮ್ಮ ಪ್ರಾಮಾಣಿಕತನವು ನಿಮಗೆ ಸಹಾಯ ಮಾಡುವುದು.

ಅದೃಷ್ಟ ಸಂಖ್ಯೆ:9

ವೃಶ್ಚಿಕ

ವೃಶ್ಚಿಕ

ಸುಖ ದಾಂಪತ್ಯ ನಿಮ್ಮದಾಗಲಿದೆ. ಆತುರದ ನಿರ್ಧಾರ ತಳೆಯದೆ ಪಾಲುದಾರರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಸುಸಮಯ.

ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಸ್ನೇಹಿತರ ಮತ್ತು ಬಂಧುಗಳಿಂದ ಸಲಹೆಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ. ಪರರ ಸಲಹೆ ಪಡೆಯುವುದು ಅವಮಾನದ ಪ್ರಸಂಗವಲ್ಲ.ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಅಸಹಕಾರ ತೋರುವರು ಇಲ್ಲವೆ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ.ಬಂದ ದುರಿತಗಳು ನಶಿಸಿ ಹೋಗುವುದು.

ಅದೃಷ್ಟ ಸಂಖ್ಯೆ:1

ಧನಸ್ಸು

ಧನಸ್ಸು

ಕೆಲವೊಮ್ಮೆ ನಿಮ್ಮ ಉದಾಸೀನ ಪ್ರವೃತ್ತಿ ನಿಮ್ಮ ಭವಿಷ್ಯವನ್ನು ಹಾಳು ಮಾಡುವ ಸಾಧ್ಯತೆ ಇದೆ. ಆಹಾರ ದಾನ ಮಾಡಿ. ಕಚೇರಿ ಕೆಲಸದ ಒತ್ತಡದಿಂದ ಮುಕ್ತರಾಗುವಿರಿ. ನೂತನ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಖರೀದಿಸುವಿರಿ.

ಒಳ್ಳೆತನ ಪ್ರದರ್ಶಿಸುವ ನಿಮ್ಮ ವಿನಯವು ನಿಮಗೆ ಯಶಸ್ಸಿನ ದಾರಿಯನ್ನು ತೋರಿಸಿಕೊಡಲಿದೆ. ಆದಾಯಕ್ಕೆ ತಕ್ಕಷ್ಟೇ ಖರ್ಚು ಬರುವುದರಿಂದ ಹಣಕಾಸಿನ ವಿಷಯದಲ್ಲಿ ಕೈಹಿಡಿತ ಮಾಡುವುದು ಒಳ್ಳೆಯದು.ಹಿರಿಯರೊಬ್ಬರ ಸಕಾಲಿಕ ಹಿತನುಡಿಗಳಿಂದ ಮನೆಯಲ್ಲಿನ ಪತಿ, ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಕಾಣುವುದು. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದರಿಂದ ನೆಮ್ಮದಿಯ ವಾತಾವರಣ ಕಾಣುವಿರಿ.

ಅದೃಷ್ಟ ಸಂಖ್ಯೆ:2

ಮಕರ

ಮಕರ

ಮನೆಯಲ್ಲಿ ನಡೆಯಲಿರುವ ಶುಭ ಕಾರ್ಯಗಳಿಗೆ ಕೆಲವು ಗ್ರಹಗಳ ಅನುಗ್ರಹ ವಿಶೇಷವಾಗಿರುವುದು. ದೂರದೂರಿಗೆ ಪ್ರಯಾಣ ಬೆಳೆಸುವಿರಿ. ಮಕ್ಕಳಿಂದ ನೆಮ್ಮದಿ ದೊರೆಯಲಿದೆ. ಭೂವ್ಯವಹಾರದಲ್ಲಿ ಲಾಭವಿದೆ.ಗೆಳೆಯರು ಬೆಂಬಲದ ಭರವಸೆ ಕೊಟ್ಟು ಹಿಂಜರಿಯುತ್ತಾರೆ. ಈ ಬಗ್ಗೆ ನಿರಾಶರಾಗದಿರಿ. ಸರ್ವ ವಿಘ್ನ ಪರಿಹಾರಕನಾದ ಗಣೇಶನನ್ನು ಪ್ರಾರ್ಥಿಸಿ. ಸಂಜೆ ದೀನ ದಲಿತರಿಗೆ ಆಹಾರ ನೀಡಿ.ಬೆಲೆಬಾಳುವ ವಸ್ತುಗಳ ಕಣ್ಮರೆ ಸಾಧ್ಯತೆ ಇದೆ. ಹಾಗಾಗಿ ಎಚ್ಚರದಿಂದ ಇರಿ. ಪ್ರಯಾಣದಲ್ಲಿ ಕೂಡಾ ಎಚ್ಚರದಿಂದ ಇರುವುದು ಒಳ್ಳೆಯದು. ಮಾಡದೆ ಇರುವ ತಪ್ಪಿಗೆ ನೀವು ನಿಂದನೆಗೆ ಒಳಗಾಗುವಿರಿ.

ಅದೃಷ್ಟ ಸಂಖ್ಯೆ:4

ಕುಂಭ

ಕುಂಭ

ಮಗನ ವಿದ್ಯಾಭ್ಯಾಸದಲ್ಲಿ ತಾತ್ಕಾಲಿಕ ಅಡೆತಡೆಗಳು ಕಂಡುಬರುವವು. ಮಾಡುವ ಕೆಲಸದಲ್ಲಿ ಉದಾಸೀನತೆ ಅಥವಾ ಉಡಾಫೆ ಸಲ್ಲದು. ಆರೋಗ್ಯದ ಕಡೆ ಗಮನ ಹರಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ.ಬಹು ಮುಖ್ಯವಾದ ಕಾಗದ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಕಚೇರಿಯಲ್ಲಿ ಮತ್ತು ಮನೆಯಲ್ಲಿ ನಿಮ್ಮ ಮಾತಿಗೆ ಎಲ್ಲರೂ ಬೆಲೆ ಕೊಡುವರು. ಮೇಲಧಿಕಾರಿಗಳ ಕೃಪೆಗೆ ಪಾತ್ರರಾಗುವಿರಿ.ನಿಮ್ಮ ಬಂಧುಬಳಗದವರು ಮತ್ತು ಆತ್ಮೀಯ ಗೆಳೆಯರಿಂದ ಬೆಂಬಲ ಸಿಗುವುದು. ಆದರೆ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳದಿರಿ. ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡುವುದು ಉತ್ತಮ.

ಅದೃಷ್ಟ ಸಂಖ್ಯೆ:2

ಮೀನ

ಮೀನ

ಹಮ್ಮಿಕೊಂಡ ನೂತನ ಕಾರ್ಯಗಳು ಯಶಸ್ಸು ತಂದುಕೊಡುವವು. ಬಹುದಿನದ ನಿಮ್ಮ ಸಂಕಲ್ಪ ಈಡೇರಲಿದೆ. ಮನೆಯಲ್ಲಿ ಮದುವೆಗೆ ಸಂಬಂಧಪಟ್ಟ ಮಾತುಕತೆಗಳು ನಡೆಯುವವು. ಸೂಕ್ತ ವಧು ವರರಿಗೆ ಕಂಕಣಭಾಗ್ಯ ಬರಲಿದೆ.

ನಿಮ್ಮ ಕಾರ್ಯವೈಖರಿಯನ್ನು ಯಾರೂ ಪತ್ತೆ ಮಾಡಲು ಸಾಧ್ಯವಿಲ್ಲ. ನೀರಿನಲ್ಲಿನ ಮೀನಿನ ಹೆಜ್ಜೆಯನ್ನು ಗುರುತು ಹಿಡಿಯಲು ಕಷ್ಟಸಾಧ್ಯವೆಂಬಂತೆ ನಿಮ್ಮ ಮನಸ್ಸು ವಿಚಿತ್ರವಾದುದು. ಹಾಗಾಗಿ ಕೆಲವರು ನಿಮ್ಮನ್ನು ತಪ್ಪಾಗಿ ಅರ್ಥೈಸಿ ಕೊಳ್ಳುವರು. ಸಮಯವೇ ದುಡ್ಡು' ಎಂದು ಅನುಭಾವಿಗಳು ಹೇಳಿದ್ದಾರೆ. ನನ್ನ ಸಮಯ ಸರಿಯಿಲ್ಲ ಎಂದು ಪರಿತಪಿಸುತ್ತಾ ಕಾಲಹರಣ ಮಾಡದಿರಿ. ಯಾವುದಾದರೊಂದು ಸಕಾರಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಆನಂದವನ್ನು ಹೊಂದಿ.

ಅದೃಷ್ಟ ಸಂಖ್ಯೆ:1

English summary

your daily horoscope-19-october-2018

Know what astrology and the planets have in store for you today. Choose your zodiac sign and read the details...
X
Desktop Bottom Promotion