Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
17-11-2018: ಶನಿವಾರದ ದಿನ ಭವಿಷ್ಯ
ಶನಿವಾರದ ದಿನ ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ, ಆರೋಗ್ಯಕರ ಜೀವನವಾಗಿರುತ್ತದೆ, ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ ,ಹಿಂದೂ ಜ್ಯೋತಿಷಿಗಳು ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು. ಅದೇ ಶನಿಯು "ಕೆಟ್ಟಸ್ಥಾನ"ದಲ್ಲಿ ಕುಳಿತಿದ್ದರೆ, ಎಲ್ಲ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ.

ಇದರಿಂದ ಶನಿವಾರವು ಶನಿ ದೈವವನ್ನು ಆರಾಧಿಸುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807

ಮೇಷ
ಹಲವಾರು ಯೋಜನೆಗಳನ್ನು ಹಾಕಿಕೊಳ್ಳುವ ಹಳೆಯ ಚಾಳಿ ಶುರು ಮಾಡದಿರಿ. ಅದಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ. ಸದ್ಯದರಲ್ಲಿಯೇ ಒಂದು ಮಹಾಯುದ್ಧದಲ್ಲಿ ಗೆಲ್ಲಬೇಕಿದೆ. ಆ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.ಮಕ್ಕಳಿಂದ ಸಂತೋಷದ ವಾರ್ತೆ ಕೇಳಲಿದ್ದೀರಿ. ಅವರಿಗೆ ನಿಮ್ಮ ಮಾರ್ಗದರ್ಶನ ಸೂಕ್ತವಾಗಿ ಸಿಗಲಿ. ಶ್ರೇಯಸ್ಸು ದೊರೆಯಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಮನೆ ಮಂದಿಯೆಲ್ಲಾ ಕೂಡಿ ಕುಲದೇವರನ್ನು ಪ್ರಾರ್ಥನೆ ಮಾಡಿ.ಮಾತಿನ ಚಾತುರ್ಯ ಇದ್ದರೂ ಸುಮ್ಮನೆ ಮೌನ ವಹಿಸುವುದು ಉತ್ತಮ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ. ಸಂಗಾತಿಯ ಸಲಹೆ ಪಡೆಯಿರಿ. ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.
ಅದೃಷ್ಟ ಸಂಖ್ಯೆ:2

ವೃಷಭ
ಸುಮ್ಮನೆ ಕಾಲಹರಣ ಮಾಡಬೇಡಿ. ನಿಶ್ಚಿತವಾದ ಗುರಿ ಹಾಗೂ ಧೈರ್ಯ ನಿಮಗೆ ರಕ್ಷ ಣೆ ನೀಡುವವು. ವಾಹನ ಖರೀದಿ ಯೋಗ ಇರುತ್ತದೆ. ಸಂಸಾರದಲ್ಲಿ ಸ್ವಲ್ಪ ವಿರಸ ಮೂಡುವ ಸಾಧ್ಯತೆ ಇರುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಕತ್ತಲು ಇದೆ, ಹಗಲು ಮೂಡಲಾರದು ಎಂಬ ನಿರಾಸೆ ಭಾವನೆಯು ನಿಮಗೆ ಥರವಲ್ಲ. ಧೈಯಂ ಸರ್ವತ್ರ ಸಾಧನಂ ಎಂದು ಮುನ್ನುಗ್ಗುವ ನೀವು ಇಂದೇಕೆ ಚಿಂತಿಸುವಿರಿ. ಯಾವುದನ್ನೂ ಚಿಂತಿಸುವ ಅಗತ್ಯವಿಲ್ಲ. ಚಿನ್ಮಯನಿದ್ದಾನೆ ನಿಮ್ಮನ್ನು ರಕ್ಷಿಸಲು.ಕಾದು ಸುಸ್ತಾಗುವುದು ನೋವಿನ ವಿಷಯ. ಆದರೆ ಗಾಣದಲ್ಲಿ ಎಣ್ಣೆ ಬರುವ ಸಮಯದಲ್ಲಿ ಕಣ್ಣು ಮುಚ್ಚಿಕೊಂಡರೆ ಹೇಗೆ? ಬಹುದಿನದ ಕನಸು ಈಡೇರುವ ಸುವರ್ಣ ದಿನ ಇದಾಗಿದೆ. ಕುಲದೇವರನ್ನು ಪ್ರಾರ್ಥಿಸಿ. ಕಾಲನಾಮಕ ಪರಮಾತ್ಮನನ್ನು ನೆನೆಯಿರಿ.
ಅದೃಷ್ಟ ಸಂಖ್ಯೆ:1

ಮಿಥುನ
ಯಾವುದೋ ದೂರದ ಊರು, ಇಲ್ಲವೇ ಪ್ರವಾಸವೇ ಆಗಬಹುದು ಅದನ್ನು ನಿರಾಕರಿಸದಿರಿ. ಸವಾಲನ್ನು ಎದುರಿಸಿ ಅದರಲ್ಲಿ ಜಯಶೀಲರಾಗುವಿರಿ. ಮನೆ ಮತ್ತು ಆಸ್ಪತ್ರೆ ಎಂದು ಅಡ್ಡಾಡುವ ಸಂದರ್ಭ ಎದುರಾಗುವುದು.ಜನರ ನಡುವೆ ನಿಂತು ನಾಯಕತ್ವ ಪ್ರದರ್ಶಿಸುವ ಸಂದರ್ಭ ಬಂದರೆ ಸವಾಲು ಸ್ವೀಕರಿಸಿ. ಒಳಿತಾಗುವುದು. ಕುಟುಂಬದ ಸದಸ್ಯರೊಡನೆ ಸೌಹಾರ್ದಯುತವಾಗಿ ವರ್ತಿಸಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ. ಬರೀ ಮಾತನಾಡುವವರೇ ಬಂದು ತಲೆ ತಿನ್ನುವ ಸಂಭವ ಹೆಚ್ಚು. ಚತುರರಾದ ನೀವು ಸಹನೆಯಿಂದ ಅವರನ್ನು ದೂರ ತಳ್ಳಿ. ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ನೀವು ಆಹಾರದ ಬಗ್ಗೆ ಗಮನ ಹರಿಸಿ. ಇಲ್ಲವೆ ಉದರ ಶೂಲೆ ಬರುವ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ:2

ಕಟಕ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ. ಅಂತೆಯೇ ಆಗಸದಲ್ಲಿ ಕಾಣುವ ಕಾಮನಬಿಲ್ಲಿನ ಬಣ್ಣಗಳನ್ನು ನೋಡಿ ಅನಂದಿಸಬೇಕೇ ಹೊರತು ಅದನ್ನು ಪಡದೇ ತೀರುವೆನೆಂಬ ಹುಚ್ಚು ವ್ಯಾಮೋಹ ಬೇಡ.ನಿಮ್ಮ ವ್ಯಕ್ತಿತ್ವದ ಸಿದ್ಧಿ ಗೆಲ್ಲುವ, ಜನರ ಪ್ರಶಂಸೆ ದೊರೆಯುವ ಕಾಲವಾಗಿದೆ. ಜಗತ್ತು ಬಹು ಸುಂದರವಾಗಿ ಕಾಣಿಸುವುದು. ಗುರು ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುವುದರಿಂದ ತೊಂದರೆ ಇಲ್ಲ. ಹೊರಗಿನವರು ಬಂದು ನಿಮಗೆ ಸಹಾಯ ಮಾಡುವರೆಂಬ ಭ್ರಮೆ ಬೇಡ. ನಿಮ್ಮ ಜೀವನದ ಶಿಲ್ಪಿ ನೀವೇ. ಹಾಗಾಗಿ ಕಠಿಣ ಪರಿಶ್ರಮ ಮಾಡದೆ ವಿಧಿಯಿಲ್ಲ. ಆದಾಗ್ಯೂ ಭಗವಂತ ನಿಮ್ಮ ಕೋರಿಕೆಯನ್ನು ಈಡೇರಿಸುವನು.
ಅದೃಷ್ಟ ಸಂಖ್ಯೆ:4

ಸಿಂಹ
ಸುಮ್ಮನೆ ನಿರೀಕ್ಷೆ ಇಟ್ಟುಕೊಂಡು ಕೂರುವುದಕ್ಕಿಂತ ಇತರೆ ಕಾರ್ಯಗಳಲ್ಲಿ ಮಗ್ನವಾಗುವುದು ಉತ್ತಮ. ತಾನು ಮಾಡುವುದು ಒಳ್ಳೆಯದು, ಮಗ ಮಾಡುವುದು ಹಾನಿ ಎಂಬ ಮಾತಿದೆ. ಹಾಗಾಗಿ ನೀವೇ ಖುದ್ದಾಗಿ ಕೆಲಸ ಕಾರ್ಯ ಮಾಡುವುದು ಒಳ್ಳೆಯದು. ಸಮುದ್ರದಲ್ಲಿ ಅಲೆಗಳು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಅಲೆ ನಿಂತ ಮೇಲೆ ಸಮುದ್ರ ಸ್ನಾನ ಮಾಡುತ್ತೇನೆ ಎಂದರೆ ಆಗುವುದಿಲ್ಲ. ಆ ಅಲೆಗಳ ಮಧ್ಯೆಯೇ ಸ್ನಾನ ಮಾಡುವಂತೆ ನಿತ್ಯ ಜೀವನ ಜಂಜಾಟದ ನಡುವೆ ಭಗವಂತನನ್ನು ಆರಾಧಿಸುವುದು ಒಳ್ಳೆಯದು.ಕೇವಲ ಕೃತ್ರಿಮ ಮಾತುಗಳಿಂದಲೇ ನಿಮ್ಮನ್ನು ಹಣಿಯಲು ಕೆಲವರು ಕಾದಿರುವರು. ಇದರಿಂದ ಪಾರಾಗಲು ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು.
ಅದೃಷ್ಟ ಸಂಖ್ಯೆ:5

ಕನ್ಯಾ
ಯಾಕಾದರೂ ಈ ಕೆಲಸಕ್ಕೆ ಕೈ ಹಾಕಿದೆನೋ ಎಂಬ ನಿರಾಸೆ ಬೇಡ. ದೈವದ ಅನುಗ್ರಹದಿಂದ ಸಿದ್ಧಿ ದೊರೆಯುವುದು. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ನಿಮ್ಮ ಮನಸ್ಸಿಗೆ ಮುದ ನೀಡುವರು.ನೀವು ಪರೋಪಕಾರಿ ಎಂದು ಹಲವಾರು ಬಾರಿ ಸಾಬೀತಾದ ವಿಷಯ. ಅಂತೆಯೆ ನೀವು ಹಮ್ಮಿಕೊಳ್ಳುವ ಕೆಲಸ ಕಾರ್ಯಗಳಿಗೆ ಇತರರು ಸಹಕಾರ ನೀಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹೊಯ್ದಾಟದ ದಾರಿಗಳೇ ಎದುರಿಗೆ ಬಂದು ನಿಲ್ಲುತ್ತವೆ. ಗಟ್ಟಿ ಮನಸ್ಸಿನಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಮನೋಕಾಮನೆಗಳು ಬೇಗನೆ ಕಾರ್ಯರೂಪಕ್ಕೆ ಬರುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟ ಸಂಖ್ಯೆ:4

ತುಲಾ
ಮನಸ್ಸಿನ ಸಂತಸವನ್ನು ನಿಯಂತ್ರಿಸಿಕೊಳ್ಳಿ. ಕೆಟ್ಟ ದೃಷ್ಟಿಯ ಜನ ಎಲ್ಲವನ್ನೂ ಹಾಳು ಮಾಡುವರು. ಶ್ರೀ ರಾಘವೆಂದ್ರ ಸ್ವಾಮಿಯನ್ನು ಮನಸಾ ಸ್ಮರಿಸಿ. ಕೆಲವು ವಿಚಾರಗಳಲ್ಲಿ ಸಹೋದರನ ಸಹಕಾರ ಬಯಸುವುದು ಒಳ್ಳೆಯದು.ಸುಮ್ಮನೆ ಗಾಳಿಗೆ ಗುದ್ದಿ ಮೈ ನೋಯಿಸಿಕೊಳ್ಳದಿರಿ. ಧನಾತ್ಮಕ ಚಿಂತನೆಗಳಿಂದ ನಿಶ್ಚಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಮನೆಯ ಬಂಧುಬಾಂಧವರು ಇಲ್ಲವೆ ಆತ್ಮೀಯ ಸ್ನೇಹಿತರೆ ನಿಮ್ಮನ್ನು ವಿರೋಧಿಸುವರು. ದೈವಕೃಪೆಯಿಂದ ಎಲ್ಲವೂ ಒಳಿತಾಗುವುದು. ಬಡವರಿಗೆ ಆಹಾರ ಕೊಡಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.
ಅದೃಷ್ಟ ಸಂಖ್ಯೆ:6

ವೃಶ್ಚಿಕ
ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂಬಂತೆ ಸದಾ ಶ್ರೀಹರಿಯನ್ನು ನೆನೆಯಿರಿ. ಸದ್ಯದ ಪರಿಸ್ಥಿತಿಯಲ್ಲಿ ಭಗವಂತನೇ ನಿಮ್ಮ ಸಹಾಯಕ್ಕೆ ಬರುವರು. ವೃತ್ತಿಯಲ್ಲಿನ ಕಿರಿಕಿರಿ ನಿವಾರಣೆಗಾಗಿ ಮಾತಾ ದುರ್ಗಾದೇವಿಯನ್ನು ಸ್ಮರಿಸಿ.
ಸಮೃದ್ಧಿಯ ದಿನಗಳನ್ನು ಕಂಡ ನಿಮಗೆ ತೊಳಲಾಟವಾಗುವುದು. ಆದರೂ ಧೈರ್ಯದಿಂದ ಎದುರಿಸಿ. ದೈವಕೃಪೆ ಅಪಾರವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಮುಂದೆ ನಿಮ್ಮಂತೆ ಮಾತನಾಡಿ ಹಿಂದುಗಡೆಯಿಂದ ನಿಮ್ಮ ಬಗ್ಗೆ ಕುಹಕ ಮಾತನಾಡುವ ಮಂದಿ ಬಗ್ಗೆ ಜಾಗೃತರಾಗಿ. ಸ್ವಂತ ಒಡಹುಟ್ಟಿದವರು ಇಲ್ಲವೆ ನಿಮ್ಮ ಮಕ್ಕಳೆ ಶತ್ರುಗಳಂತೆ ವರ್ತಿಸುವರು ತಾಳ್ಮೆ ಇರಲಿ.
ಅದೃಷ್ಟ ಸಂಖ್ಯೆ:8

ಧನು
ಸರ್ರನೆ ಯಾರ ಬಗೆಗೂ ನಿಮ್ಮ ಪ್ರತಿಕ್ರಿಯೆ ತಿಳಿಸದಿರಿ. ನಿಮ್ಮ ಸುತ್ತಮುತ್ತಲು ಹಿತಶತ್ರುಗಳೇ ತುಂಬಿಕೊಂಡಿರುವರು. ನಿಮ್ಮ ನಿಧಾನ ನಡೆ ಮತ್ತು ಯೋಚಿಸಿ ಮಾತನಾಡುವ ಪರಿಯು ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗುವುದು. ಮಹತ್ತರ ವಿಷಯವೊಂದನ್ನು ತಿಳಿಯುವಿರಿ. ಎಲ್ಲದಕ್ಕೂ ಕೋಲೆ ಬಸವನಂತೆ ಒಪ್ಪಿಗೆ ಸೂಚಿಸದಿರಿ. ನನ್ನಿಂದ ಈ ಕೆಲಸ ಆಗುವುದಿಲ್ಲ ಎನ್ನುವ ದಿಟ್ಟ ನಿಲುವನ್ನು ತಿಳಿಸಿ. ಇಲ್ಲದೆ ಇದ್ದಲ್ಲಿ ಅನಗತ್ಯ ತೊಂದರೆಯನ್ನು ಎದುರಿಸಬೇಕಾಗುವುದು.
ತಂದೆಗೆ ಸಂಬಂಧಿಸಿದ ಸ್ಥಿರಾಸ್ತಿಯೊಂದರ ಬಗೆಗಿನ ಹೊಸ ಮಾಹಿತಿಗಳು ಕುಟುಂಬದ ಹಿರಿಯರೊಬ್ಬರಿಂದ ಲಭ್ಯವಾಗಲಿದೆ. ಇದು ನಿಮಗೆ ಪೂರಕವಾಗಿದ್ದು ಮುಂದಿನ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗುವುದು.
ಅದೃಷ್ಟ ಸಂಖ್ಯೆ:8

ಮಕರ
ಹೋಟೆಲ್, ರತ್ನವ್ಯಾಪಾರಿಗಳು ಇಲ್ಲವೆ ಔಷಧ ವ್ಯವಹಾರದಲ್ಲಿರುವವರು ಸರ್ಕಾರಿ ಅಧಿಕಾರಿಗಳಿಂದ ದಿಢೀರನೆ ತಪಾಸಣೆಯನ್ನು ಎದುರಿಸಬೇಕಾಗುವುದು. ಸೂಕ್ತ ಲೆಕ್ಕಪತ್ರ ಮತ್ತು ಸ್ಥಳದ ಶುಚಿತ್ವದ ಕಡೆ ಗಮನ ಹರಿಸಿ. ಆದಾಗ್ಯೂ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ. ಬಹುದಿನಗಳ ನಂತರ ಜೀವನದಲ್ಲಿ ನೆಮ್ಮದಿಯ ಮತ್ತು ಸಂತೋಷದ ದಿನಗಳನ್ನು ಕಾಣುವಿರಿ. ನಿಮ್ಮ ಮೇಲೆ ಇದ್ದ ಅಪವಾದಗಳಲ್ಲಿ ಹುರುಳಿಲ್ಲ ಎಂದು ಸಾಬೀತು ಆಗುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಹರ್ಷಕ್ಕೆ ಕಾರಣವಾಗುವ ವಿಚಾರ ಬಲಯುತವಾಗಿದ್ದು ನಿಮ್ಮ ಬದುಕಿನ ದಾರಿಯನ್ನೆ ಬದಲಿಸಲು ಅವಕಾಶ ಕೂಡಿ ಬರುತ್ತದೆ. ಮನೆಗೆ ನೂತನ ಸದಸ್ಯನ ಆಗಮನದ ಸಂಭ್ರಮ ಗರಿಗೆದರುವುದು.
ಅದೃಷ್ಟ ಸಂಖ್ಯೆ:9

ಕುಂಭ
ಅರಸನನ್ನು ಕಂಡು ತನ್ನ ಪುರುಷನನ್ನು ಮರೆತ ಮಹಿಳೆಯಂತೆ ಯಾರೋ ನಿಮಗೆ ಸಹಾಯ ಮಾಡುವರೆಂದು ಭಾವಿಸಿ ಇದ್ದ ಅಲ್ಪಸ್ವಲ್ಪ ಹಣವನ್ನು ಖರ್ಚು ಮಾಡುವುದು ಸರಿಯಲ್ಲ. ಮನೆಯ ಹಿರಿಯರ ವಿಚಾರಗಳಿಗೆ ಗೌರವ ಕೊಡಿ.ನಿಮ್ಮ ದಾರಿ ಸುಗಮವಾಗಿಲ್ಲ. ಬಸವಳಿಯುವಂತೆ ಕಲ್ಲುಮುಳ್ಳುಗಳೇ ದಾರಿ ತುಂಬಾ ಹರಡಿವೆ. ಆದಾಗ್ಯೂ ತಾಳ್ಮೆ ಮತ್ತು ಅನುಭವಗಳ ದೃಷ್ಟಿಯಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಉತ್ತಮವಲ್ಲ.
ಉಸಿರು ಕಟ್ಟಿಸುವ ವಾತಾವರಣ ಇರುತ್ತದೆ. ಕುಲದೇವರ ಪ್ರಾರ್ಥನೆಯೊಂದಿಗೆ ಮನೆಯಿಂದ ಹೊರಡಿ. ಸಹೋದ್ಯೋಗಿಗಳೊಡನೆ ಅನಗತ್ಯ ಚರ್ಚೆ ಬೇಡ. ಕುಲದೇವರನ್ನು ಸ್ಮರಣೆ ಮಾಡಿ. ಹೆಚ್ಚಿನ ತೊಂದರೆ ಆಗುವುದಿಲ್ಲ.
ಅದೃಷ್ಟ ಸಂಖ್ಯೆ:2

ಮೀನ
ಕೆಲವು ಅನಪೇಕ್ಷಿತ ಅತಿಥಿಗಳು ನಿಮ್ಮ ಕೆಲಸ ಕಾರ್ಯಗಳಲ್ಲಿ ಮೂಗು ತೂರಿಸಿ ಕಿರಿಕಿರಿಯನ್ನುಂಟು ಮಾಡುವ ಸಾಧ್ಯತೆ ಇರುವುದು. ಅವರನ್ನು ನಯವಾದ ಮಾತುಗಳಿಂದ ದೂರ ಇಡುವುದು ಒಳ್ಳೆಯದು. ನಿಮ್ಮ ಬಹು ಅಮೂಲ್ಯವಾದ ಕಡತವೊಂದನ್ನು ಅಪಹರಿಸಲು ಕೆಲವರು ಸಂಚು ಹೂಡಿರುವರು. ಹಾಗಾಗಿ ಅಂತಹ ಮುಖ್ಯವಾದ ಕಡತವನ್ನು ಜೋಪಾನವಾಗಿಟ್ಟುಕೊಳ್ಳಿ. ಇಲ್ಲವೆ ಅದನ್ನು ಹಿರಿಯ ಅಧಿಕಾರಿಗೆ ಕೊಟ್ಟಿರುವೆ ಎಂದು ಅವರನ್ನು ಸಾಗಹಾಕಿ.ವಿರೋಧಿಗಳನ್ನು ಉದ್ರೇಕಗೊಳಿಸುವ ಕೆಲಸಕ್ಕೆ ಕೈಹಾಕದಿರಿ. ಒಂದು ಮಹತ್ತರ ಕಾರ್ಯ ಆಗಲು ಸ್ನೇಹಿತನ ಸಹಾಯವನ್ನು ಪಡೆಯಿರಿ. ಬರೀ ಒಣ ಮಾತಿನಿಂದ ಕಾರ್ಯವನ್ನು ನಿರ್ವಹಿಸಲು ಆಗುವುದಿಲ್ಲ.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











