Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
15-10-2018: ಸೋಮವಾರದ ದಿನ ಭವಿಷ್ಯ
ಸೋಮವಾರ ಈ ದಿನ ನಿಮ್ಲಲ್ಲಿ ಶುಕ್ರ ರೇಖೆ ಹಾಗೂ ಧನ ರೇಖೆ ಹನ್ನೆರಡು ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಹಾಗೂ ನಿಮ್ಮಲ್ಲಿ ಈ ದಿನ ಆಗುವಂತಹ ಪರಿಣಾಮವನ್ನು ನೋಡಲು ಈ ದಿನದ ರಾಶಿ ಭವಿಷ್ಯವನ್ನು ನೋಡಿ.

ಮೇಷ
ನಂಬಿದವರನ್ನು ವಿಶ್ವಾಸಕ್ಕೆ ಹೆಚ್ಚು ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು.ನಿಮ್ಮ ಅತ್ಯಂತ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಅತಿಯಾದ ಮಾತೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಸುದಿನ. ನಿಮ್ಮ ವಿಚಾರಧಾರೆಗಳನ್ನು ಇತರರು ಒಪ್ಪಿಕೊಳ್ಳುವರು.ಗ್ರಹಸ್ಥಿತಿಗಳು ನಿಮ್ಮ ವಿರುದ್ಧ ತೀರ್ಪನ್ನು ನೀಡುವವು. ಹಾಗಾಗಿ ತಾಳ್ಮೆಯನ್ನು ಕಳೆದುಕೊಳ್ಳದಿರಿ.ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ದುಷ್ಟ ಫಲ ನಿವಾರಣೆಗಾಗಿ ಗಣಪತಿಯನ್ನು ಆರಾಧಿಸಿರಿ.
ಅದೃಷ್ಟ ಸಂಖ್ಯೆ: 7

ವೃಷಭ
ವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ.ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್ ಚಾತುರ್ಯದಿಂದ ನಿಮ್ಮ ಸಹಪಾಠಿಗಳನ್ನು ಗೆಲ್ಲುವಿರಿ.ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ವೃಥಾ ಕಾರಣಗಳಿಗಾಗಿ ಯಾರನ್ನೂ ಕೂಡಾ ವಿರೋಧಿಸಲು ಮುಂದಾಗದಿರಿ. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ವಿರಸ ತೋರುವ ಸಾಧ್ಯತೆ ಇರುವುದು. ಶಿವಪಂಚಾಕ್ಷ ರಿ ಮಂತ್ರ ಜಪಿಸಿ.
ಅದೃಷ್ಟ ಸಂಖ್ಯೆ: 4

ಮಿಥುನ
ಧರ್ಮಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಕೆಲವು ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ಕುಲದೇವತಾ ಸ್ಮರಣೆ ಮಾಡಿರಿ. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.ಒಣ ತರ್ಕದಿಂದ ಸಿದ್ಧಾಂತವನ್ನು ರೂಪಿಸಲು ಆಗುವುದಿಲ್ಲ. ನಿಮ್ಮ ವಾದ ಸರಣಿಗೆ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಿ. ಇಲ್ಲದಿದ್ದಲ್ಲಿ ಎದುರಾಳಿಯಿಂದ ಮುಖಭಂಗಕ್ಕೆ ಕಾರಣವಾಗುವುದು.
ಅದೃಷ್ಟ ಸಂಖ್ಯೆ: 8

ಕರ್ಕಾಟಕ
ತಾಯಿಯ ಸುಖ ಮತ್ತು ವಾಹನ ಸುಖ ದೊರೆಯುವುದಾದರೂ ಸಂಗಾತಿಯ ಅಸಹಕಾರ ನಿಮ್ಮ ಮನೋಚಿಂತನೆಯನ್ನು ಹೆಚ್ಚಿಸುವುದು.ನೀವು ಆಡುವ ಮಾತುಗಳನ್ನು ಇನ್ನೊಬ್ಬರೂ ಅಷ್ಟೇ ಗಹನವಾಗಿ ಚಿಂತಿಸುತ್ತಾರೆ ಎಂಬುದನ್ನು ತಿಳಿಯಿರಿ.ಇತರರ ಮಾತಿಗೂ ಬೆಲೆ ಕೊಡುವುದನ್ನು ಕಲಿತರೆ ಜೀವನ ಸುಂದರಮಯವಾಗಿರುತ್ತದೆ. ಸಂಗಾತಿಯು ಮಾತಾಡುವ ವಿಷಯಗಳಿಗೆ ಅಪಾರ್ಥ ಕಲ್ಪಿಸಕೊಳ್ಳದಿರಿ.
ಅದೃಷ್ಟ ಸಂಖ್ಯೆ: 6

ಸಿಂಹ
ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಂಗಾತಿಯಿಂದ ದೂರ ಇರುವುದು ಒಳ್ಳೆಯದಲ್ಲ.ಮದುರದ ಗೆಳೆಯರನ್ನು ಅನಿರೀಕ್ಷಿತವಾಗಿ ಸಂಧಿಸುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸ ತಿರುವೊಂದು ದೊರೆಯಲಿದೆ.ಮನೋನಿಯಾಮಕ ರುದ್ರ ದೇವರನ್ನು ಭಜಿಸಿ, ಒಳಿತಾಗುವುದು.ಎಲ್ಲಾ ಕಾಲದಲ್ಲೂ ನಿಮ್ಮ ಮಾತೇ ಅಂತಿಮ ಎನ್ನುವ ಧೋರಣೆ ಬಿಡಿ. ಅದೃಷ್ಟ ಸಂಖ್ಯೆ: 4

ಕನ್ಯಾ
ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು.ಹಣಕಾಸಿನ ತೊಂದರೆ ಇರುವುದಿಲ್ಲ. ಬಾಳಸಂಗಾತಿಯೊಡನೆ ಚರ್ಚಿಸಿ ಸಲಹೆ ಪಡೆಯಲು ಸಕಾಲ ವಾಗಿದೆ. ನೀವಾಡುವ ಮಾತು ಇತರರಿಗೆ ರುಚಿಸುವುದಿಲ್ಲ. ಆರೋಗ್ಯದ ಸಲುವಾಗಿ ಗಣಪತಿಯನ್ನು ಪ್ರಾರ್ಥಿಸಿ. ಸ್ವತಹ ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ.
ಅದೃಷ್ಟ ಸಂಖ್ಯೆ: 7

ತುಲಾ
ನಿಮ್ಮ ಹತ್ತಿರದ ಜನ ಅಥವಾ ಬಂಧುಗಳೇ ನಿಮ್ಮ ಕಾರ‍್ಯವೈಖರಿಯನ್ನು ಟೀಕಿಸುವರು. ನೀವು ಸಮಾಜದಲ್ಲಿ ಗಳಿಸುತ್ತಿರುವ ಗೌರವ, ಆದರ್ಶ ಆದರಗಳನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡುವರು. ನಿಮ್ಮ ಬಗ್ಗೆ ದೂರು ಹೇಳಿದರೆ ನಕ್ಕು ಸುಮ್ಮನಾಗಿ.ಚರರಾಶಿಯಲ್ಲಿ ಜನ್ಮಿಸಿರುವ ನೀವು ಒಂದೇ ಕಡೆ ಕುಳಿತು ಕೆಲಸ ಮಾಡುವವರಾಗಿದ್ದೀರಿ. ಕುಟುಂಬದಲ್ಲಿ ಒಡಕು ಮೂಡುವ ಸಾಧ್ಯತೆ ಇದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಪದೇ ಪದೇ ಪ್ರಶ್ನೆಗಳು ಬರುತ್ತವೆ. ಸುಬ್ರಮಣ್ಯಸ್ವಾಮಿಯನ್ನು ಆರಾಧಿಸಿ.
ಅದೃಷ್ಟ ಸಂಖ್ಯೆ: 9

ವೃಶ್ಚಿಕ
ನೀವು ನಿಮ್ಮ ಮಕ್ಕಳ ಮೇಲೆ ಇಟ್ಟಿರುವ ಭರವಸೆ , ಫಲಿತಾಂಶ ಕಾರ್ಯರೂಪಕ್ಕೆ ಬರುವುದು. ಸಾಲದ ತೀರುವಳಿ ಮಾಡಿದಲ್ಲಿ ಅನುಕೂಲವಾಗುವುದು. ಭಗವಂತನ ಕೃಪೆ ಇದ್ದಲ್ಲಿ ನಿಮ್ಮನ್ನು ಜನರು ಹಾಡಿ ಕೊಂಡಾಡುವರು.ಸಾಧು ಪ್ರಾಣಿಗಳನ್ನೇ ಬಲಿಕೊಡುವರೇ ಹೊರತು ಹುಲಿ ಸಿಂಹಗಳನ್ನು ಬಲಿ ಕೊಡುವುದಿಲ್ಲ. ಹಾಗಾಗಿ ನಿಮ್ಮ ತೀರ್ಮಾನಗಳನ್ನು ಯಾರೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ನಿಮ್ಮ ದೃಢ ನಿರ್ಧಾರವೇ ಕಾರಣ. ಅದೃಷ್ಟ ಸಂಖ್ಯೆ: 6

ಧನು
ನಿಮ್ಮ ಆಸ್ತಿ ಖರೀದಿಯ ಬಗ್ಗೆ ನಿಧಾನ ಪ್ರಗತಿಯುಂಟಾಗುವುದು. ಸ್ನೇಹಿತರು ನಿಮ್ಮ ನಂಬಿಕಸ್ಥರು ಹೆಚ್ಚಿನ ಸಹಾಯ ಮಾಡುವರು.ವ್ಯಾಪಾರ, ವ್ಯವಹಾರ ಎಂದರೆ ಅದರಲ್ಲಿ ಲಾಭ ನಷ್ಟ ಇದ್ದದ್ದೇ. ಎಲ್ಲಾ ಕಾಲದಲ್ಲೂ ಲಾಭವೇ ಆಗುತ್ತದೆ ಎಂದು ತಿಳಿಯಬಾರದು. ಮುಷ್ಟಿ ಕಾಳು ಚೆಲ್ಲಿ ಮೂಟೆ ಕಾಳನ್ನು ಪಡೆಯುವಂತೆ ನಿಮ್ಮ ಹಣ ಖರ್ಚಾಗುವುದು. ಆದರೂ ಮುಂದೆ ಒಳಿತಾಗುವುದು. ಭೂವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೋಸ ಹೋಗುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ. ಅದೃಷ್ಟ ಸಂಖ್ಯೆ: 6

ಮಕರ
ಮಾತು ಬಲ್ಲವನಿಗೆ ಜಗಳವಿಲ್ಲ ಎಂದರು ಹಿರಿಯರು. ನೀವಾಡುವ ಮಾತುಗಳು ವರ್ತನೆಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡುವುದು. ಈ ಬಗ್ಗೆ ಜಾಗ್ರತೆ ಇರಲಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ.ಮುಂದೆ ಬರಬಹುದಾದ ಉತ್ತಮ ದಿನಗಳನ್ನು ಎದುರಿಸಲು ಸನ್ನದ್ಧರಾಗುವಿರಿ. ಎಲ್ಲೆಡೆಯೂ ನಿಮ್ಮ ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಯುವುದು. ಆ ಚರ್ಚೆಯು ಹಾದಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು.ಅದೃಷ್ಟ ಸಂಖ್ಯೆ: 3

ಕುಂಭ
ಸಹಜವಾಗಿಯೇ ಕೆಲವರು ವಿರೋಧಿಸುವ ದ್ವೇಷಿಸುವ ಜನ ಇರುತ್ತಾರೆ.ನಿಮ್ಮ ಬುದ್ಧಿ ಸಾಮರ್ಥ್ಯ ಬಲದಿಂದ ಪದೋನ್ನತಿ ಸಿಗುವುದು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಓದು ಮುಂದುವರಿಕೆಯ ಬಗ್ಗೆ ಚಿಂತನೆ ನಡೆಸುವಿರಿ. ಅವರ ಇವರ ಟೀಕೆಗಳಿಗೆ ಕಿವಿಗೊಡದಿರಿ.ಎಷ್ಟೇ ಪ್ರಾಮಾಣಿಕವಾಗಿ ದುಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿದೆ. ಕೆಲ ಗ್ರಹಸ್ಥಿತಿಗಳು ನೀವು ಕೈಗೊಳ್ಳುವ ಕಾರ್ಯದಲ್ಲಿ ವಿಫಲಗೊಳಿಸುತ್ತಿವೆ.ಅದೃಷ್ಟ ಸಂಖ್ಯೆ: 1

ಮೀನ
ಹಣಕಾಸಿನ ಬರುವ ವ್ಯವಹಾರವು ನಿಮ್ಮ ನಿರ್ವಹಣಾ ಸಂಪೂರ್ಣ ಸಾಮರ್ಥ್ಯವು ನಿಮಗೆ ಹೆಚ್ಚಿನ ಸಾಮರ್ಥ್ಯದ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ವೇಗವಾಗಿ ಲೀಲಾಜಾಲವಾಗಿ ಮಾಡಿ ಮುಗಿಸುವಂತವರು.ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಬಹುಬೇಗ ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು. ಅದೃಷ್ಟ ಸಂಖ್ಯೆ: 1
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications