Latest Updates
-
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ!
14-11-2018: ಬುಧವಾರದ ದಿನ ಭವಿಷ್ಯ
ಬುಧವಾರದ ದಿನ ಶ್ರೀಕೃಷ್ಣ ಸಾಂಪ್ರದಾಯಿಕ ಶ್ರೀ ವಿಷ್ಣುವಿನ ಹತ್ತು ಅವತಾರಗಳಲ್ಲಿಒಬ್ಬನಾಗಿದ್ದಾನೆ.ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕತೆಗಳಿವೆ.

ಕೃಷ್ಣ ಆರಾಧನೆಯು ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲಕೃಷ್ಣನನ್ನುಪೂಜಿಸಲಾಗುತ್ತದೆ.ಪಾಂಡುರಂಗ ಪಾರ್ಥಸಾರಥಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807

ಮೇಷ
ಎಲ್ಲರೊಂದಿಗೆ ಸಂಭಾಳಿಸಿಕೊಂಡು ಹೋಗುವಂಥ ನಿಮ್ಮ ವಿಚಾರಗಳು ನಿಮಗೆ ಜನಪ್ರಿಯತೆ ತಂದು ಕೊಡುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನಿಮ್ಮ ಬಳಿ ಯಾಚಿಸುವ ವ್ಯಕ್ತಿಗಳಿಗೆ ಧನಸಹಾಯ ಮಾಡುವಿರಿ. ನಿಮ್ಮ ಚಾಕಚಕ್ಯತೆಯನ್ನು ಗಮನಿಸಿ ಏಕಕಾಲದಲ್ಲಿ ಹಲವಾರು ಕಾರ್ಯಯೋಜನೆಗಳು ನಿಮ್ಮ ಬಳಿ ಬರುವವು. ಅವುಗಳಲ್ಲಿ ಪ್ರಮುಖವಾದ ಮತ್ತು ಮುಖ್ಯವಾದ ಕಾರ್ಯಗಳನ್ನು ಆದ್ಯತೆಯ ಮೇಲೆ ಹಮ್ಮಿಕೊಳ್ಳಿ. ಒಳಿತಾಗುವುದು. ನೀವು ಸಮಾಜದ ಎಲ್ಲಾ ಜನರನ್ನು ಒಗ್ಗೂಡಿಸಲು ಕಾರಣರಾಗುತ್ತೀರ. ಇದರಿಂದ ಪ್ರಶಂಸೆಯನ್ನೂ ಗಳಿಸುತ್ತೀರ. ಇದು ನಿಮ್ಮ ಮುಂದಿನ ರಾಜಕೀಯ ಜೀವನಕ್ಕೆ ಮಹತ್ತರ ಬದಲಾವಣೆಯನ್ನು ತಂದುಕೊಡುತ್ತದೆ. ಹಾಗಾಗಿ ಎಲ್ಲರೊಡನೆ ಸಮಾಲೋಚಿಸಿ ನಿರ್ಧಾರ ತಳೆಯಿರಿ. ಅದೃಷ್ಟ ಸಂಖ್ಯೆ:2

ವೃಷಭ
ಬಂಧು ಬಾಂಧವರು ನಿಮಗಿಂದು ವಿವಿಧ ರೀತಿಯಲ್ಲಿ ಸಹಾಯ ಮಾಡುವರು. ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುವುದು. ಮಕ್ಕಳ ಅಭಿವೃದ್ಧಿ ನಿಮಗೆ ಹೆಚ್ಚಿನ ಸಂತೋಷ ತಂದುಕೊಡುವುದು. ಮನೆಯ ಹಿರಿಯರೊಡನೆ ಸ್ನೇಹದಿಂದ ವರ್ತಿಸಿ.ಹಲವು ಮನೋಲ್ಲಾಸ ಘಟನೆಗಳು ನಡೆಯುವುದರಿಂದ ಹೆಚ್ಚಿನ ಉತ್ಸಾಹ, ಶಕ್ತಿ ಸಾಮರ್ಥ್ಯಗಳನ್ನು ಹೊಂದುವಿರಿ. ಹಣಕಾಸು ಕೂಡಾ ವಿವಿಧ ಮೂಲಗಳಿಂದ ಬರುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.ನಿಮ್ಮ ಮನದಲ್ಲಿನ ದುಗುಡಗಳು ಕಡಿಮೆ ಆಗಿ ಮನಸ್ಸು ಕೊಳದ ನೀರಿನಂತೆ ಪ್ರಶಾಂತವಾಗುವುದು. ಇದರಿಂದ ನಿಮ್ಮ ಮನದಲ್ಲಿ ಉತ್ತಮ ವಿಚಾರಗಳು ಹೊರಹೊಮ್ಮುವವು ಮತ್ತು ನೀವು ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಿರಿ. ಅದೃಷ್ಟ ಸಂಖ್ಯೆ:1

ಮಿಥುನ
ಕಟ್ಟಡ ವಿನ್ಯಾಸಕಾರರು ಹಾಗೂ ಕಂಟ್ರ್ಯಾಕ್ಟರ್‌ಗಳಿಗೆ ಉತ್ತಮ ಆದಾಯದ ಜತೆಗೆ ನೂತನ ಕೆಲಸ ಕಾರ್ಯಗಳು ದೊರೆಯುವವು. ಹೊಸ ಕೆಲಸ ಕಾರ್ಯಗಳಿಗೆ ಟೆಂಡರ್ ಹಾಕುವುದಕ್ಕೆ ಸಕಾಲವಾಗಿದೆ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯುವುದು.ಈಗಾಗಲೆ ದೂರ ಪ್ರವಾಸವನ್ನು ಹಮ್ಮಿಕೊಂಡಿದ್ದಲ್ಲಿ ಅದನ್ನು ಮುಂದೂಡುವುದು ಒಳ್ಳೆಯದು. ಮಾಡುವ ಪ್ರಯಾಣದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ಅನಿವಾರ್ಯ ಎಂದಾದಲ್ಲಿ ಶ್ರೀ ಲಕ್ಷ್ಮೀನಾರಸಿಂಹ ದೇವರನ್ನು ನೆನೆದು ಪ್ರಯಾಣ ಮಾಡಿ.ನಿಮ್ಮ ಒಳ ಮಹತ್ವಾಕಾಂಕ್ಷೆಗಳಾದ ಅಧಿಕಾರ ಮತ್ತು ಜನಪ್ರಿಯತೆಗಳು ಆತುರದಿಂದ ಹಾಳಾಗುವವು. ಆತುರಗಾರನಿಗೆ ಬುದ್ಧಿಮಟ್ಟ ಕಡಿಮೆ ಎಂಬ ಗಾದೆ ಮಾತು ನಿಮಗೆ ಅನ್ವಯಿಸುವುದು. ಹಾಗಾಗಿ ಸಾವಧಾನವಾಗಿ ತೀರ್ಮಾನ ಕೈಗೊಳ್ಳಿ. ಅದೃಷ್ಟ ಸಂಖ್ಯೆ:1

ಕಟಕ
ಸುಮ್ಮನೆ ತೊಂದರೆ, ಕಿರಿಕಿರಿ ಮಾಡುವ ಜನ ಹತ್ತಿರದಲ್ಲೇ ಇರುತ್ತಾರೆ. ಆದರೆ ತಾಳ್ಮೆ ಕಳೆದುಕೊಳ್ಳದೆ ಅವರೊಂದಿಗೆ ವ್ಯವಹರಿಸಿ. ಇದರಿಂದ ನಿಮಗೆ ಒಳಿತಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. ಜೀವನದ ಮಹತ್ವದ ಕ್ಷ ಣಗಳು ಸದಾಕಾಲ ಬರುವುದಿಲ್ಲ. ಆದರೆ ಆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಅದನ್ನು ತಿರಸ್ಕರಿಸಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ಬಹು ಬದಲಾವಣೆಗಳು ಉಂಟಾಗುವವು. ಅನೇಕ ದಿನಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಹಲವು ಬಗೆಯ ನಾಟಕೀಯ ತಿರುವುಗಳು ಉಂಟಾದರೂ ಅಂತಿಮವಾಗಿ ನಿಮಗೆ ಗೆಲುವು ನಿಶ್ಚಿತವಾಗಿರುತ್ತದೆ. ಮಾತೆ ದುರ್ಗಾದೇವಿಯನ್ನು ಸ್ಮರಿಸುವುದು ಒಳ್ಳೆಯದು.
ಅದೃಷ್ಟ ಸಂಖ್ಯೆ:2

ಸಿಂಹ
ಮುಂಗೋಪ ಬಿಟ್ಟುಬಿಡಿ. ಕೋಪ ಮನುಜನ ಮೊದಲ ಶತ್ರು. ಸರ್ವ ಚಿತ್ತಾರ ಮಸಿ ನುಂಗಿತು ಎನ್ನುವಂತೆ ನಿಮ್ಮಲ್ಲಿ ಎಷ್ಟೇ ಒಳ್ಳೆಯ ಗುಣಗಳಿದ್ದರೂ ಅವೆಲ್ಲವೂ ನಿಮ್ಮ ಮುಂಗೋಪದಿಂದ ಮುಚ್ಚಿಹೋಗುವುದು. ಸಕಾರಾತ್ಮಕ ಚಿಂತನೆಯಿಂದ ಮಹತ್ತರವಾದ ಕೆಲಸವನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇದು ನಿಮ್ಮ ಪ್ರಸಿದ್ಧಿಗೆ ದಾರಿಯಾಗುವುದು. ಇದರ ಜತೆಗೆ ಖರ್ಚಿನ ದಾರಿ ತೆರೆದುಕೊಳ್ಳವುದರಿಂದ ಖರ್ಚು ವೆಚ್ಚದ ಕಡೆ ಬಿಗಿ ಹಿಡಿತ ಮಾಡುವುದು ಒಳ್ಳೆಯದು. ಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಜಾಣತನದಿಂದ ಯೋಚಿಸಬಹುದಾಗಿದೆ. ಮಗನು ತನ್ನ ಕಾರ್ಯದಲ್ಲಿ ತಲ್ಲೀನನಾಗಿದ್ದು ನಿಮ್ಮ ಹೆಚ್ಚಿನ ಕೆಲಸಗಳನ್ನು ಮುತುವರ್ಜಿಯಿಂದ ಮಾಡುತ್ತಿರುವುದು ನಿಮಗೆ ಹೆಮ್ಮೆ ಎನಿಸುವುದು.
ಅದೃಷ್ಟ ಸಂಖ್ಯೆ:1

ಕನ್ಯಾ
ಬಾಳಸಂಗಾತಿಯೊಡನೆ ಅನವಶ್ಯಕ ಮನಸ್ತಾಪಗಳಿಗೆ ಅವಕಾಶ ಕೊಡಬೇಡಿ. ಅವರ ವಿಚಾರಧಾರೆಗಳು ಅವರಿಗೆ ಸರಿ ಎನಿಸುವುದು. ನಿಮ್ಮ ವಿಚಾರಧಾರೆಗಳು ನಿಮಗೆ ಸರಿ ಎನಿಸುವುದು. ಇದು ನಿಮ್ಮ ನಡುವೆ ವೈಮನಸ್ಸಿಗೆ ದಾರಿಯಾದೀತು. ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧಾರ ಮಾಡುತ್ತಾರೆಂಬ ಭ್ರಮೆಗೆ ಒಳಗಾಗುವಿರಿ. ಜೀವನದಲ್ಲಿ ಹಲವು ಏರಿಳಿತಗಳನ್ನು ಕಾಣುವಿರಿ. ಮನೋ ನಿಯಾಮಕ ರುದ್ರದೇವರನ್ನು ಭಜಿಸಿ. ಜೀವಮಿಮಾ ವಿಭಾಗದಲ್ಲಿ ಹೆಚ್ಚಿನ ಒಲವು ಇದ್ದು, ಯಶಸ್ಸು ದೊರೆಯಲಿದೆ. ಬಹುದಿನದ ಕನಸು ನಿಮ್ಮದಾಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಹೆಚ್ಚಿನ ಸಂಭ್ರಮ ಪಡುವುದು ಬೇಡ. ಕಾರ್ಯ ಪೂರ್ಣವಾದ ಮೇಲೆ ಸಂಭ್ರಮಿಸುವುದು ಇದ್ದೇ ಇರುತ್ತದೆ.
ಅದೃಷ್ಟ ಸಂಖ್ಯೆ:2

ತುಲಾ
ದಿಢೀರನೆ ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಮಾಡದಿರಿ. ನೀವು ಸಾಗುವ ದಾರಿ ಬಹಳ ಇರುವುದರಿಂದ ಕೂತು ಮಲಗುವ ಅಭ್ಯಾಸ ಮಾಡಿಕೊಳ್ಳಿ. ನೀವು ಸವೆಸಬೇಕಾಗಿರುವ ದಾರಿಯ ಸ್ಪಷ್ಟತೆ ಅರಿಯಿರಿ.
ಮಾತಾ ದುರ್ಗಾದೇವಿಯನ್ನು ಅನನ್ಯ ಭಕ್ತಿಯಿಂದ ಜಪಿಸಿ. ನಿಮ್ಮ ಇಷ್ಟಾರ್ಥ ಸಿದ್ಧಿಸುವುದು. ಬರುವ ದಿನಗಳಲ್ಲಿ ಹೆಚ್ಚಿನ ಪ್ರಗತಿ ತೋರುವುದು. ಅನಗತ್ಯ ವಿಚಾರಗಳನ್ನು ತಲೆಗೆ ತುಂಬಿಕೊಂಡು ಭಯಪಡಬೇಡಿ. ಮಾಡುವ ಕೆಲಸ ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಮಾಡಿದರೆ ಯಾರಿಂದಲೂ ಟೀಕೆಗೆ ಒಳಗಾಗುವುದಿಲ್ಲ. ಆದರೆ ನಿಮ್ಮಲ್ಲಿರುವ ಜಡತ್ವವನ್ನು ತೊಡೆದು ಹಾಕಿ ಕಾರ್ಯ ಪ್ರವೃತ್ತರಾದರೆ ಹೆಚ್ಚಿನ ಲಾಭ ಹೊಂದುವಿರಿ.
ಅದೃಷ್ಟ ಸಂಖ್ಯೆ:6

ವೃಶ್ಚಿಕ
ಹಣೆಬರಹ ಎಂದು ಕೊರಗುತ್ತಾ ಸುಮ್ಮನೆ ಕೂರುವುದು ತರವಲ್ಲ. ಧೈರ್ಯದಿಂದ ಮುನ್ನುಗ್ಗಿ ಹೋಗುವುದನ್ನು ಕಲಿತುಕೊಳ್ಳಿ. ಧೈರ್ಯವಂತರಿಗೆ ಭಗವಂತನು ಕೂಡಾ ಸಹಾಯ ಮಾಡುವನು. ಸದ್ಯದ ಪರಿಸ್ಥಿತಿಯು ಏಕಾಂತಮಯವಾದ ಸ್ಥಳವನ್ನು ಬಯಸುತ್ತದೆ. ಅಂತೆಯೆ ಮನಸ್ಸಿನ ನೆಮ್ಮದಿಗಾಗಿ ಅಂತಹ ಸ್ಥಳವನ್ನು ಹುಡುಕಿಕೊಂಡು ಹೋಗುವಿರಿ. ಇದರಿಂದಾಗಿ ಮಾನಸಿಕ ನೆಮ್ಮದಿ ದೊರೆಯುವುದು. ಕಷ್ಟಗಳನ್ನು ಎದುರಿಸುವ ಶಕ್ತಿ ಬರುವುದು. ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವ ಪ್ರಸಂಗಗಳೇ ಹೆಚ್ಚಾಗುತ್ತಿರುವುದರಿಂದ ಮಾನಸಿಕ ಖಿನ್ನತೆ ಎದುರಾಗುವುದು. ಆಂಜನೇಯ ಸ್ತೋತ್ರ ಮತ್ತು ಗುರುವಿನ ಸ್ತೋತ್ರ ಪಠಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಅದೃಷ್ಟ ಸಂಖ್ಯೆ:4

ಧನುಸ್ಸು
ಭೂಮಿ ವಿಕ್ರಯ, ರಿಯಲ್ ಎಸ್ಟೇಟ್ ಮೈನಿಂಗ್ ಇತ್ಯಾದಿ ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಜಾಗರೂಕತೆಯಿಂದ ಇರಿ ಮತ್ತು ಆ ವ್ಯವಹಾರಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮುಂದುವರೆಯಿರಿ. ನೀವು ಅಂದುಕೊಂಡಿರುವ ಮಹತ್ತರ ಕೆಲಸಗಳಿಗೆ ಅಡೆ ತಡೆಗಳು ಉಂಟಾಗುವ ಸಾಧ್ಯತೆ ಇದೆ. ಗುರು ಮತ್ತು ಶನಿ ನಿಮ್ಮನ್ನು ವಿವಿಧ ರೀತಿಗಳಿಂದ ಪರೀಕ್ಷಿಸುವರು. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಗುರು ಹಿರಿಯರ ಆಶೀರ್ವಾದ ಅಗತ್ಯವಿರುತ್ತದೆ. ಮಿತ್ರರಾಗಲಿ ನಿಮ್ಮ ಮೇಲಧಿಕಾರಿಗಳಾಗಲಿ ನಿಮ್ಮ ಕಾರ್ಯ ತತ್ಪರತೆಯನ್ನು ಕಂಡು ತಮ್ಮ ಹರ್ಷವನ್ನು ವ್ಯಕ್ತಪಡಿಸುವರು. ವೃತ್ತಿ ಜೀವನದಲ್ಲಿ ಇದು ನಿಮಗೆ ಹೊಸ ದಾರಿಯನ್ನು ತೋರಿಸುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಅದೃಷ್ಟ ಸಂಖ್ಯೆ:6

ಮಕರ
ವಿದೇಶ ಪ್ರವಾಸಗಳನ್ನು ಸದ್ಯಕ್ಕೆ ಮುಂದೂಡುವುದೇ ಒಳಿತು. ಸಾಡೇಸಾತ್ ಶನಿ ಕಾಟವು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳದಂತೆ ತಡೆಗಟ್ಟುವ ಸಾಧ್ಯತೆ ಇದೆ. ಆಂಜನೇಯ ಸ್ತೋತ್ರ ಮತ್ತು ಶನಿ ಸ್ತೋತ್ರ ಪಠಿಸಿ. ಹಲವು ವಿಧಗಳಿಂದ ಇಂದು ಮಹತ್ತರ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಯಾವುದೇ ಅಡೆತಡೆಗಳಿಲ್ಲದೆ ಮುಗಿಯುವವು. ಬಂಧುಗಳು ಸ್ನೇಹಿತರು ನಿಮಗೆ ಸಹಾಯ ಮಾಡಲು ಮುಂದೆ ಬರುವರು.
ಕಬ್ಬಿಣ, ಪ್ಲಾಸ್ಟಿಕ್ ಮತ್ತು ಸಿಮೆಂಟ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಕಂಡು ಬರುವುದು. ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಕಂಡು ಬಂದರೆ ಕೆಲವರು ತಾವಿರುವ ಮನೆಯನ್ನು ಬದಲಾಯಿಸುವ ಚಿಂತೆಯಲ್ಲಿರುತ್ತಾರೆ.
ಅದೃಷ್ಟ ಸಂಖ್ಯೆ:9

ಕುಂಭ
ನಿಮ್ಮ ಎಲ್ಲಾ ಯೋಚನೆಗಳು ಧನಾತ್ಮಕವಾಗಿದ್ದು ಉತ್ತಮ ಫಲಿತಾಂಶವನ್ನು ಶೀಘ್ರವೇ ಹೊಂದುವಿರಿ. ನಿಮ್ಮ ಪ್ರಗತಿಯನ್ನು ಕಂಡು ಅಸೂಯೆ ಪಡುವ ಮತ್ತು ಕರುಬುವ ವ್ಯಕ್ತಿಗಳು ಹುಟ್ಟಿಕೊಳ್ಳುವರು. ಈ ಬಗ್ಗೆ ನೀವು ತಲೆಕೆಡಿಸಿಕೊಳ್ಳದಿರಿ. ಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮಗಿದೆ. ಸಕಾರಾತ್ಮಕವಾಗಿ ಮುಂದುವರೆಯಿರಿ. ಇದರಿಂದ ನಿಮ್ಮ ಕೀರ್ತಿ ಗೌರವ ಇಮ್ಮಡಿಯಾಗುವುದು. ನೀವು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ನಿಮ್ಮದೇ ಗುಣಗಾನ ಇರುತ್ತದೆ. ಆಧ್ಯಾತ್ಮದ ಓದು ಹೊಸ ರೀತಿಯ ಚಿಂತನೆಗಳಿಗೆ ದಾರಿ ಮಾಡಿಕೊಡುವುದು. ಇದರಿಂದ ನೀವು ಆಂತರಿಕವಾಗಿ ಪರಿಶುದ್ಧಗೊಳ್ಳುವಿರಿ. ನಿಮ್ಮ ಆತ್ಮಶಕ್ತಿಯು ಜಾಗೃತವಾಗುವುದು.
ಅದೃಷ್ಟ ಸಂಖ್ಯೆ:2

ಮೀನ
ಬಹು ವಿವಾದಪೂರ್ಣ ವಿಚಾರವು ತಾತ್ವಿಕ ನೆಲೆಗಟ್ಟಿನ ಮಾತುಕತೆಯೊಂದಿಗೆ ಮತ್ತು ಹೊಂದಾಣಿಕೆಗಳೊಂದಿಗೆ ಒಂದು ಇತ್ಯರ್ಥಕ್ಕೆ ಬರುವುದು. ಒಂದು ರೀತಿಯಲ್ಲಿ ವ್ಯಾಜ್ಯವು ಸುಖಾಂತ್ಯಗೊಳ್ಳುವುದು. ಇದು ಉಭಯತರರಿಗೂ ಸಂತೋಷ ತರುವುದು. ಒಂದು ಕಡೆ ಮಾಡಿದ ಸಾಲ ತೀರಿಸಲು ಮತ್ತೊಂದು ಕಡೆ ಸಾಲ ಮಾಡಿದಂತೆ ಒಂದು ಸಮಸ್ಯೆಯಿಂದ ಬಿಡುಗಡೆ ಆಯಿತು ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಮನೆದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ, ಒಳಿತಾಗುವುದು. ನಿಮ್ಮದೆ ಆದ ಅನುಭವಗಳಲ್ಲಿ ಪ್ರಸಿದ್ಧ ವಿಚಾರಗಳು ನಿಮಗೆ ಅನುಕೂಲಕರ ವಾತಾವರಣವನ್ನುಂಟು ಮಾಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಮಾಡುವರು.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











