Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾನುವಾರದ ದಿನ ಭವಿಷ್ಯ

ಜೀವನದಲ್ಲಿ ಯಾರನ್ನೂ ಅತಿಯಾಗಿ ಪ್ರೀತಿಸಬೇಡಿ. ಒಂದು ದಿನ ಆತ ನಿಮ್ಮ ಶತ್ರು ಕೂಡ ಆಗಬಲ್ಲ. ಜೀವನದಲ್ಲಿ ಯಾರನ್ನೂ ಅತಿಯಾಗಿ ದ್ವೇಷಿಸಬೇಡಿ. ಒಂದು ದಿನ ಆತ ನಿಮ್ಮ ಮಿತ್ರನೂ ಆಗಬಲ್ಲ. ಏಕೆಂದರೆ ಜಗತ್ತಿನಲ್ಲಿ ಕಾಲ ಎನ್ನುವುದು ಬಹಳ ಶಕ್ತಿಶಾಲಿಯಾದ ವಸ್ತು. ಪರಿವರ್ತನೆ ಎನ್ನುವುದು ಜಗದ ನಿಯಮ. ನಾವು ಏನು ಅಂದುಕೊಂಡಿರುತ್ತೇವೋ ಅದು ಹಾಗೆಯೇ ನಡೆಯುವುದಿಲ್ಲ. ನಮ್ಮ ನಿರೀಕ್ಷೆಗೂ ಮಿಗಿಲಾದ ಸನ್ನಿವೇಶಗಳು ಉದ್ಭವಿಸುವ ಸಾಧ್ಯತೆಗಳಿರುತ್ತವೆ. ಜೀವನದಲ್ಲಿ ಏಳು ಬೀಳು ಹೇಗೆ ಸಾಮಾನ್ಯವೋ ಹಾಗೆಯೇ ಪ್ರೀತಿ-ದ್ವೇಷ ಎನ್ನುವುದು ಸಮಯಕ್ಕೆ ತಕ್ಕಂತೆ ಅಥವಾ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾವಣೆಯನ್ನು ಕಾಣುತ್ತದೆ. ಹಾಗಾಗಿ ಜೀವನದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಿ. ದ್ವೇಷದ ಭಾವನೆಯಿಂದ ಹೊರ ಬನ್ನಿ.
ಭಾನುವಾರವಾದ ಈ ಶುಭ ದಿನ ಸಾಮಾನ್ಯವಾಗಿ ಎಲ್ಲರೂ ವಿಶ್ರಾಂತಿ ಪಡೆದುಕೊಳ್ಳುವ ಗುಂಗಿನಲ್ಲಿರುತ್ತಾರೆ. ಇಂದು ನಿಮ್ಮ ಭಾವನೆಗೆ ಪೂರಕವಾಗಿ ಯಾವೆಲ್ಲಾ ಸನ್ನಿವೇಶಗಳು ಸಂಭವಿಸಬಹುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕೆಂದರೆ ರಾಶಿ ಭವಿಷ್ಯದ ವಿವರಣೆಯನ್ನು ಪರಿಶೀಲಿಸಿ.

ಮೇಷ:28 ಮಾರ್ಚ್ -20 ಏಪ್ರಿಲ್
ಸಮಾಧಾನದ ಬದುಕು ನಿಮಗೆ ಲಭ್ಯವಾಗುವುದು. ಸ್ನೇಹಿತರೊಂದಿಗೆ ದೂರದ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಯುವಕರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಬೇಕು. ವಿಪರೀತವಾದ ಖರ್ಚಿಗೆ ಮುಂದಾಗದಿರಿ. ಪ್ರಗತಿಯ ಬದುಕಿಗೆ ನಾರಾಯಣನ ಆರಾಧನೆ ಮಾಡಿ. ಹಿರಿಯರ ಆರೋಗ್ಯ ಸುಧಾರಣೆ ಕಾಣುವುದು. ವಿದ್ಯಾರ್ಥಿಗಳಿಗೂ ಇಂದು ಶುಭ ದಿನ. ಕೆಲವರು ಹೊಸ ಮನೆಯನ್ನು ಖರೀದಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆಗೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶ ಮತ್ತು ಕುಲದೇವರ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ
ಆರ್ಥಿಕ ವಲಯದಲ್ಲಿ ಸ್ವಲ್ಪ ಸಮಾಧಾನವನ್ನು ತಂದುಕೊಡುತ್ತದೆ. ಮಿತ್ರರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಉಪಶಮನವಾಗುವುದು. ತಂದೆ ಮಕ್ಕಳ ನಡುವೆ ಸಮಾಧಾನದ ಬದುಕನ್ನು ಕಾಣುವಿರಿ. ನಿಮ್ಮ ಜನಪ್ರಿಯತೆಗೆ ಕೆಲವು ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ರಾಜಕಾರಣಿಗಳು ಇಂದು ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20
ಇಂದು ನಿಮಗೆ ಸಮಾಧಾನಕರವಾದ ದಿನ. ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವರು. ಗೃಹಕೈಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಸಮಾಧಾನ ದೊರೆಯುವುದು. ಮನೆಯಲ್ಲಿ ನೆಮ್ಮದಿಯನ್ನು ಅನುಭವಿಸುವಿರಿ. ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ಯಾವುದೇ ಕಾರಣಕ್ಕೂ ನಿಲ್ಲಿಸದಿರಿ. ವಿದ್ಯಾರ್ಥಿಗಳಿಗೂ ಇಂದು ಶುಭ ದಿನ. ಯಶಸ್ಸಿನ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22
ಇಂದು ನಿಮಗೆ ಅದೃಷ್ಟಕರವಾದ ದಿನ. ನೀವು ಮಾಡುವ ಎಲ್ಲಾ ಕೆಲಸದಲ್ಲೂ ಜಯವನ್ನು ಗಳಿಸುವಿರಿ. ಅಧಿಕ ಪ್ರಮಾಣದ ಸಿಹಿಯನ್ನು ಸೇವಿಸದಿರಿ. ಆರೋಗ್ಯದ ಬಗ್ಗೆ ಆದಷ್ಟು ಕಾಳಜಿ ವಹಿಸಿ. ಆರ್ಥಿಕ ವಲಯವು ನಿಮ್ಮ ಜೀವನಕ್ಕೆ ನೆಮ್ಮದಿಯನ್ನು ತಂದೊಡ್ಡುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ನೆಮ್ಮದಿಯನ್ನು ತಂದುಕೊಡುವುದು. ವಾಹನ ಹಾಗೂ ತೈಲೋದ್ಯಮದಲ್ಲಿ ತೊಡಗಿಕೊಂಡವರಿಗೆ ಅಧಿಕ ಲಾಭ ಲಭಿಸುವುದು. ಇನ್ನಷ್ಟು ಪ್ರಗತಿ ಹಾಗೂ ಸಂತೋಷಕ್ಕೆ ವಿಷ್ಣುವಿನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23
ನಿಮಗೆ ಪಂಚಮ ಶನಿಯ ಪ್ರಭಾವ ಇರುವುದರಿಂದ ಜೀವನದ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು. ವಿಪರೀತವಾದ ಆರೋಗ್ಯ ಸಮಸ್ಯೆ, ಆರ್ಥಿಕ ಸ್ಥಿತಿಯಲ್ಲಿ ಏರುಪೇರು, ವೃತ್ತಿ ಕ್ಷೇತ್ರದಲ್ಲಿ ಅಸಮಧಾನ ಹಾಗೂ ಸಮೃದ್ಧಿಯಲ್ಲಿ ಕುಂಟಿತವನ್ನು ಅನುಭವಿಸ ಬೇಕಾದ್ದರಿಂದ ಮಾನಸಿಕ ನೆಮ್ಮದಿ ಹದಗೆಡುವುದು. ಸಮಸ್ಯೆಗಳ ನಿವಾರಣೆಗೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಮತ್ತು ಕುಲದೇವರ ಪ್ರಾರ್ಥನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23
ಆದಷ್ಟು ಸಮಾಧಾನದಿಂದ ಇರಿ. ನೀವು ಮಾಡುತ್ತಿರುವ ಉದ್ಯಮದಲ್ಲಿ ಲಾಭವನ್ನು ಗಳಿಸುವಿರಿ. ಯಂತ್ರೋಪಕರಣಗಳಿಂದಲೂ ಲಾಭವನ್ನು ಗಳಿಸಬಹುದು. ರೈತರಿಗೆ ಸಮೃದ್ಧಿ ಉಂಟಾಗುವುದು. ಮನೆಯಲ್ಲಿ ನೆಮ್ಮದಿ ದೊರೆಯುವುದು. ಸಹೋದರಿಯಿಂದ ಸಹಕಾರ ದೊರೆಯುವುದು. ಸಾಮಾನ್ಯವಾಗಿ ಎಲ್ಲಾ ಬಗೆಯ ವಿಚಾರದಿಂದಲೂ ಉತ್ತಮ ಲಾಭ ಹಾಗೂ ಅನುಕೂಲವನ್ನೇ ಪಡೆದುಕೊಳ್ಳುವಿರಿ. ಸಮಸ್ಯೆಗಳ ನಿವಾರಣೆಗೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶ ಮತ್ತು ಕುಲದೇವರ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23
ಇಂದು ನಿಮಗೆ ಸಂತೋಷಕರವಾದ ದಿನ. ಸಮಾಧಾನವನ್ನು ಪಡೆದುಕೊಳ್ಳುವಿರಿ. ಆರೋಗ್ಯದಲ್ಲೂ ಚೇತರಿಕೆ ಕಾಣುವುದು. ಬಂಧುಗಳು ಅಗಲಿದ ದುರ್ವಾರ್ತೆ ಕೇಳುವ ಸಾಧ್ಯತೆಗಳಿವೆ. ಬರಬೇಕಿದ್ದ ಹಣಕಾಸು ನಿಮ್ಮ ಕೈ ಸೇರುವುದು. ಮನೆಗೆ ಬರುವ ನೆಂಟರಿಂದ ಶುಭಸುದ್ದಿಯನ್ನೇ ಕೇಳುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರು ಲಾಭ ಮತ್ತು ಅವಕಾಶಗಳನ್ನು ಪಡೆದುಕೊಳ್ಳುವರು. ಸಮಸ್ಯೆಗಳ ನಿವಾರಣೆ ಹಾಗೂ ಶುಭಕರವಾದ ಜೀವನಕ್ಕೆ ವಿಷ್ಣುವಿನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಸಮಾಧಾನಕರವಾದ ಬದುಕನ್ನು ನೀವು ಕಾಣಲು ಸಾಧ್ಯವಾಗದು. ಮನೆಯಲ್ಲಿ ಕಿರಿಕಿರಿ ವಾತಾವರಣ ಉಂಟಾಗುವುದು. ವಾಹನಗಳ ಮಾರಾಟದಲ್ಲಿರುವವರಿಗೆ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ನಿರೀಕ್ಷಿತ ಮಟ್ಟದ ಯಶಸ್ಸನ್ನು ಸಾಧಿಸಲು ಅಸಾಧ್ಯವಾಗುವುದು. ಕೆಲವು ನಿರ್ಧಾರಿತ ತೀರ್ಮಾನಗಳಲ್ಲಿ ಉಂಟಾಗುವ ಏರು ಪೇರು ನಿಮ್ಮನ್ನು ಹೈರಾಣಗೊಳಿಸುವ ಸಾಧ್ಯತೆಗಳಿವೆ. ಶನಿಯ ಪ್ರಭಾವ ಇರುವುದರಿಂದ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್
ಇಂದು ನಿಮಗೆ ವಿಪರೀತವಾದ ದೇಹಾಯಾಸ, ಇಲ್ಲಸಲ್ಲದ ಆರೋಪವನ್ನು ಎದುರಿಸಬೇಕಾಗುವುದು. ಹದಗೆಟ್ಟ ಮಾನಸಿಕ ಸ್ಥಿತಿಗತಿಗಳು ನಿಮ್ಮ ಉತ್ಸಾಹಕ್ಕೆ ಅಡ್ಡಿ ಪಡಿಸುವುದು. ಆದಷ್ಟು ಕಾಳಜಿಯಿಂದ ಇರಬೇಕಾಗುವುದು. ಹಿತ ಶತ್ರುಗಳು ಹಾಗೂ ಸಹೋದರರಿಂದಲೂ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ಎಲ್ಲಾ ಬಗೆಯ ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಶಿವನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20
ಪೂರ್ತಿ ಪ್ರಮಾಣದಲ್ಲಿ ಸಮಾಧಾನಕರವಾದ ಬದುಕನ್ನು ನೀವು ಕಾಣಲು ಅಸಾಧ್ಯವಾಗುವುದು. ಬಂಧು ಮಿತ್ರರಿಂದಲೂ ಅಡೆತಡೆ ಉಂಟಾಗುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಿಂದ ಏರುಪೇರು ಉಂಟಾಗುವುದು. ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ಲಭಿಸುವ ಸಾಧ್ಯತೆಗಳಿವೆ. ಹಿರಿಯರು ತೀರ್ಥಕ್ಷೇತ್ರಗಳಿಗೆ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ಎಲ್ಲಾ ಬಗೆಯ ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಶಿವನ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18
ಇಂದು ಇವರಿಗೆ ಸಮಾಧಾನ ದೊರೆಯುವುದು. ಮನೆಯಲ್ಲಿ ನೆಮ್ಮದಿ ಲಭಿಸುವುದು. ಸ್ತ್ರೀಯರಿಗೆ ತವರು ಮನೆಯಿಂದ ಉಡುಗೊರೆ ದೊರೆಯುವುದು. ಹಲವು ಬಗೆಯ ಸಮಸ್ಯೆಗಳು ನಿವಾರಣೆ ಕಾಣುವುದರ ಮೂಲಕ ಸಂತೋಷದ ಜೀವನವನ್ನು ಅನುಭವಿಸುವರು. ತೀರ್ಮಾನಿಸಿಕೊಂಡ ವಿಚಾರಗಳಲ್ಲಿ ಯಶಸ್ಸು ಹಾಗೂ ಲಾಭವನ್ನೇ ಪಡೆದುಕೊಳ್ಳುವಿರಿ. ಎಲ್ಲಾ ಬಗೆಯ ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಗಣೇಶನ ಆರಾಧನೆ ಹಾಗೂ ವಿಷ್ಣುವಿನ ಪ್ರಾರ್ಥನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್
ಇಂದು ನಿಮಗೆ ಸುಂದರವಾದ ಜೀವನ ಪ್ರಾಪ್ತಿಯಾಗುವುದು. ಮನೆಯಲ್ಲಿ ನೆಮ್ಮದಿಯನ್ನು ಅನುಭವಿಸುವಿರಿ. ಅನಿರೀಕ್ಷಿತ ಸಮಸ್ಯೆಗಳು ದೂರಾಗುವುದು. ಮಿತ್ರರ ಸಹಕಾರ ಲಭಿಸುವುದು. ಅನಿರೀಕ್ಷಿತ ಲಾಭಾಂಶಗಳು ನಿಮಗೆ ದೊರೆಯುವುದು. ಬ್ಯಾಲ್ಯರಿಂದ ಹಿಡಿದು ವೃದ್ಧರು ಸಹ ಅನುಕೂಲವನ್ನೇ ಪಡೆದುಕೊಳ್ಳುವರು. ಎಲ್ಲಾ ಬಗೆಯ ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ವಿಷ್ಣು ಮತ್ತು ಶಿವನ ಆರಾಧನೆ ಮಾಡಿ.



Click it and Unblock the Notifications











