ಶುಕ್ರವಾರದ ದಿನ ಭವಿಷ್ಯ

Posted By: Divya Pandit
Subscribe to Boldsky
ದಿನ ಭವಿಷ್ಯ - Kannada Astrology 12-01-2018 - Your Day Today - Oneindia Kannada

ಕೆಲವು ಸನ್ನಿವೇಶಗಳಲ್ಲಿ ನಾವು ನಮ್ಮವರ ಬಳಿ ಅಥವಾ ಮೂರನೇ ವ್ಯಕ್ತಿಯ ಬಳಿ ಜಗಳವಾಡುತ್ತೇವೆ. ಆ ಸಂದರ್ಭದಲ್ಲಿ ನಮ್ಮ ಹೊರ ಮನಸ್ಸು ಹೇಳುತ್ತದೆ ಸಿಟ್ಟಾದವರನ್ನು ಮತ್ತೆ ಮಾತನಾಡಬೇಡ ಎಂದು. ಇನ್ನೊಂದು ಒಳ ಮನಸ್ಸು ಹೇಳುತ್ತದೆ ಯಾರನ್ನು ಕಳೆದುಕೊಳ್ಳಬೇಡ ಎಂದು.ನಿಜ, ನಾವು ನಮ್ಮ ಸಿಟ್ಟನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಹಾಗೊಮ್ಮೆ ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಟ್ಟರೆ ಅನಾಹುತಗಳು ನಡೆದು ಹೋಗುತ್ತವೆ.

ಒಂದು ಕ್ಷಣದ ಸಿಟ್ಟು ಅಥವಾ ಕೋಪಕ್ಕೆ ಸಂಬಂಧವನ್ನು ಕಳೆದುಕೊಳ್ಳಬಾರದು. ಸಿಟ್ಟು ಶಾಂತವಾದಾಗ ಮಾಡಿದ ತಪ್ಪಿನ ಬಗ್ಗೆ ಅದೆಷ್ಟೇ ಕೊರಗಿದರೂ ಸರಿಮಾಡಲಾಗದಂತಹ ಅನಾಹುತಗಳು ನಡೆದಿರುತ್ತವೆ. ಹಾಗಾಗಿ ಸಿಟ್ಟು ಬಂದಾಗ ಆದಷ್ಟು ಶಾಂತವಾದ ವರ್ತನೆ ತೋರುವುದು ಉತ್ತಮ. ಇತರರ ಮೇಲೆ ಹರಿಹಾಯದೆ ನಮ್ಮ ನಿಯಂತ್ರಣದಲ್ಲಿ ಇರುವುದನ್ನು ಮೊದಲು ಅರಿಯಬೇಕು. ಆಗ ಜೀವನದಲ್ಲಿ ಒಳ್ಳೆಯದನ್ನೇ ಅನುಭವಿಸಬಹುದು.

ಶುಕ್ರವಾರವಾದ ಇಂದು ಲಕ್ಷ್ಮಿ ದೇವಿಯ ವಿಶೇಷವಾದ ದಿನ. ಶುಭ ಗ್ರಹಗಳಲ್ಲಿ ಒಂದಾದ ಶುಕ್ರನಿಗೂ ಈ ದಿನ ಶ್ರೇಷ್ಠವಾದದ್ದು ಎಂದು ಹೇಳಲಾಗುತ್ತದೆ. ಈ ಶುಭ ದಿನ ನಿಮ್ಮ ಜೀವನದಲ್ಲಿ ಯಾವೆಲ್ಲಾ ಬದಲಾವಣೆ ಅಥವಾ ಹೊಂದಾಣಿಕೆಗೆ ಅನುಕೂಲ ಮಾಡಿಕೊಡುತ್ತದೆ? ಎನ್ನುವುದನ್ನು ತಿಳಿಯಲು ನೀವು ಕುತೂಹಲರಾಗಿದ್ದರೆ ಈ ಮುಂದೆ ನೀಡಿರುವ ರಾಶಿ ಭವಿಷ್ಯವನ್ನು ಓದಿ ಅರಿಯಿರಿ...

ಮೇಷ:

ಮೇಷ:

ಇಂದು ನೀವು ಮನೆಯಲ್ಲಿ ನೆಮ್ಮದಿ ಹಾಗೂ ಸಮಾಧಾನದ ಬದುಕನ್ನು ಕಾಣುವಿರಿ. ಮಕ್ಕಳಿಂದಲೂ ಶುಭ ವಾರ್ತೆಯನ್ನು ಕೇಳುವಿರಿ. ತೆಂಗು, ಅಡಿಕೆ ಸೇರಿದಂತೆ ಸಿರಿ ಧಾನ್ಯಗಳು ನಿಮಗೆ ಅನುಕೂಲ ಹಾಗೂ ಲಾಭವನ್ನು ತಂದುಕೊಡುವುದು.

ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ವಿದೇಶಯಾನ ಮಾಡುವ ಕನಸನ್ನು ಹೊಂದಿದ್ದರೆ ಉತ್ತಮ ಪ್ರಯತ್ನದಿಂದ ಸಫಲತೆಯನ್ನು ಪಡೆದುಕೊಳ್ಳುವಿರಿ. ಎಲ್ಲಾ ಬಗೆಯ ಸಫಲತೆಗಾಗಿ ಹಾಗೂ ಸಂತೋಷಕರವಾದ ಬದುಕಿಗೆ ದೇವಿ ಮತ್ತು ಲಕ್ಷ್ಮಿಯ ಆರಾಧನೆ ಮಾಡಿ.

 ವೃಷಭ:

ವೃಷಭ:

ಇವರು ಹೆಚ್ಚು ಕಾಳಜಿಯಿಂದ ಇರಬೇಕು. ಅಪಘಾತ ಉಂಟಾಗುವ ಸಾಧ್ಯತೆಗಳಿವೆ. ರಾಹು ಕಾಲದ ಪ್ರಯಾಣ ಸೂಕ್ತವಲ್ಲ. ಇಷ್ಟ ಮಿತ್ರರರಲ್ಲೂ ಆಂತರಿಕ ವಿಚಾರವನ್ನು ಹೇಳಿಕೊಳ್ಳದಿರಿ.

ಸ್ಥಿರಾಸ್ತಿಯನ್ನು ಖರೀದಿಸುವಂತಹ ಹುಂಬ ಧೈರ್ಯ ಮಾಡದಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಲ್ಲಿ ಯಾವುದೇ ಬಗೆಯ ಒಳಿತು ಉಂಟಾಗದು. ಕೋರ್ಟ್ ವ್ಯವಹಾರಗಳಲ್ಲೂ ಅಪಜಯ ಉಂಟಾಗುವ ಸಧ್ಯತೆಗಳಿವೆ. ಸಾಲವನ್ನು ನೀಡುವ ಕಾರ್ಯಕ್ಕೆ ಮುಂದಾಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಮಿಥುನ:

ಮಿಥುನ:

ಇಂದು ನಿಮಗೆ ಉತ್ತಮವಾದ ದಿನ. ಆದರೂ ಪತ್ನಿಯಿಂದ ಕೊಂಚ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಮಾಡುತ್ತಿರುವ ಉದ್ಯೋಗದಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರಿ. ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಉಂಟಾಗುವುದು.

ಛಾಯಾಗ್ರಾಹಕರಾಗಿರುವವರಿಗೆ ಉತ್ತಮ ಲಾಭ ಮತ್ತು ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೂ ಇಂದು ಶುಭ ದಿನ. ಉನ್ನತ ವ್ಯಾಸಂಗದ ಕನಸು ನನಸಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಕರ್ಕ:

ಕರ್ಕ:

ಸೌಂದರ್ಯ ವರ್ಧಕ ಸಾಮಾಗ್ರಿಗಳ ವ್ಯಾಪಾರಸ್ಥರು ಇಂದು ಅಧಿಕ ಲಾಭವನ್ನು ಕಾಣಲಿದ್ದಾರೆ. ಖನಿಜೋತ್ಪನ್ನ ವ್ಯಾಪಾರಿಗಳು ಇಂದು ಅಧಿಕ ಲಾಭವನ್ನೇ ಕಾಣುವರು.

ಉಪನದ್ಯಾಸ ವರ್ಗದವರಿಗೆ ನೆಮ್ಮದಿ ದೊರೆಯುವುದು. ಶಿಶ್ಯರಿಂದ ಗುರುಗಳಿಗೆ ಗೌರವ ದೊರೆಯುವುದು. ನೀವು ಕೈಗೊಳ್ಳುವ ದೂರದ ಪ್ರಯಾಣದಿಂದಲೂ ಲಾಭದ ನಿರೀಕ್ಷೆ ಮಾಡಬಹುದು. ನಿರುದ್ಯೋಗಿಗಳಿಗೂ ಉದ್ಯೋಗ ಲಭ್ಯವಾಗುವುದು. ಪ್ರಾಮಾಣಿಕ ಪ್ರಯತ್ನ ಮಾಡುವುದರ ಮೂಲಕ ಯಶಸ್ಸನ್ನು ಕಾಣಬಹುದು. ಪ್ರಗತಿಪರ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ದೇವಿಯ ಆರಾಧನೆ ಮಾಡಿ.

ಸಿಂಹ:

ಸಿಂಹ:

ಮಾನಸಿಕ ವೈಪರೀತ್ಯವನ್ನು ಅನುಭವಿಸುವಿರಿ. ಅನಾರೋಗ್ಯದ ಸಮಸ್ಯೆಯಿಂದ ಹೈರಾಣಗೊಳ್ಳುವಿರಿ. ಸಾಲಭಾದೆ ನಿಮ್ಮನ್ನು ಕಾಡುವುದು. ಬಂಧು ಮಿತ್ರರಿಂದಲೂ ಕಿರಿಕಿರಿ ಅನುಭವಿಸುವಿರಿ.

ಅನಿರೀಕ್ಷಿತವಾಗಿ ಅನೇಕ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುವ ಸಾಧ್ಯತೆಗಳಿವೆ. ಮಿತ್ರರಿಂದಲೇ ಒಂದಿಷ್ಟು ಅಪಚಾರ ಹಾಗೂ ಕಷ್ಟಗಳನ್ನು ಎದುರಿಸಬೇಕಾಗುವುದು. ಸಾಲ ನೀಡುವುದು ಅಥವಾ ಪಡೆಯುವ ಕೆಲಸಕ್ಕೆ ಮುಂದಾಗದಿರಿ. ಸಮಸ್ಯೆಗಳ ನಿವಾರಣೆಗಾಗಿ ಕುಲದೇವರ ಪ್ರಾರ್ಥನೆ ಹಾಗೂ ದೇವಿ ಆರಾಧನೆ ಮಾಡಿ.

ಕನ್ಯಾ:

ಕನ್ಯಾ:

ಸಮಾಧಾನಕರವಾದ ಜೀವನವನ್ನು ಪಡೆಯುವಿರಿ. ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವರು. ಗೃಹ ಕೈಗಾರಿಕೆಗಲ್ಲಿ ಹಾಗೂ ಚಾಲಕ ವೃತ್ತಿಯಲ್ಲಿರುವವರಿಗೆ ಅಧಿಕ ಲಾಭ ಉಂಟಾಗುವುದು.

ಉಪನ್ಯಾಸಕರಿಗೆ ಗೌರವ ದೊರೆಯುವುದು. ಹೋಟೆಲ್ ಉದ್ಯಮದಲ್ಲೂ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಜೀವನಕ್ಕಾಗಿ ಲಕ್ಷ್ಮಿ ದೇವಿಯ ಆರಾಧನೆ ಮಾಡಿ.

ತುಲಾ:

ತುಲಾ:

ಇಂದು ನಿಮಗೆ ಸಮಾಧಾನದ ಬದುಕು ದೊರೆಯುವುದು. ಬಂಧು ಮಿತ್ರರಿಂದಲೂ ನಿರೀಕ್ಷಿತಮಟ್ಟದ ಸಹಾಯ ದೊರೆಯುವುದು. ಕೆಲವು ದಿನಗಳಲ್ಲಿ ಸ್ಥಿರಾಸ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಅಲ್ಲದೆ ವೃತ್ತಿಯಲ್ಲಿ ನಿರತರಾಗಿರುವವರಿಗೆ ಬಡ್ತಿ ದೊರೆಯುವ ಲಕ್ಷಣಗಳಿವೆ. ಪ್ರಗತಿಪರ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ದೇವಿಯನ್ನು ಆರಾಧಿಸಿ.

ವೃಶ್ಚಿಕ:

ವೃಶ್ಚಿಕ:

ಯಾವುದೇ ವಿಚಾರದಲ್ಲಿ ಆತುರವನ್ನು ತೋರಿಸದಿರಿ. ಮಾಡುತ್ತಿರುವ ಉದ್ಯೋಗದಲ್ಲಿ ಅಲ್ಪ ಪ್ರಮಾಣದ ಲಾಭಾಂಶವನ್ನು ಪಡೆದುಕೊಳ್ಳುವಿರಿ. ಸ್ಥಿರಾಸ್ತಿಯಿಂದಲೂ ಲಾಭ ಉಂಟಾಗುವುದು. ರಾಜಕೀಯ ನಾಯಕರು ಸಾಮಾನ್ಯವಾದ ಮುನ್ನಡೆಯನ್ನು ಪಡೆದುಕೊಳ್ಳುವರು. ಉತ್ತಮವಾದ ಪ್ರಗತಿಯನ್ನು ಇಂದು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ಶಕ್ತಿಯ ಆರಾಧನೆ ಮಾಡಿ.

ಧನು:

ಧನು:

ಜನ್ಮ ಶನಿಯ ಪ್ರಭಾವ ಇರುವುದರಿಂದ ನೀವು ಕೈಗೆತ್ತಿಕೊಂಡ ಕೆಲಸ ಅಷ್ಟಾಗಿ ಯಶಸ್ಸನ್ನು ಪಡೆದುಕೊಳ್ಳದು. ಕಿರಿಕಿರಿಯ ವಾತಾವರಣ ಮುಂದುವರಿಯುವುದು.

ಬಂಧುಮಿತ್ರರಿಂದಲೂ ಇಲ್ಲ ಸಲ್ಲದ ಆರೋಪಗಳನ್ನು ಕೇಳಬೇಕಾಗುವುದು. ಅನೇಕ ವಿಚಾರದಲ್ಲಿ ಅಡೆತಡೆಯನ್ನು ಅನುಭವಿಸುವಿರಿ. ನ್ಯಾಯಾಂಗದಲ್ಲೂ ನಿಮಗೆ ಸೋಲು ಉಂಟಾಗುವುದು. ಅನೇಕ ಸಮಸ್ಯೆಗಳು ನಿಮ್ಮನ್ನು ಒಮ್ಮೆಲೇ ಕಾಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನಿಗೆ ಗರಿಕೆಯನ್ನು ಸಲ್ಲಿಸಿ. ದೇವಿಯ ಪ್ರಾರ್ಥನೆ ಮಾಡಿ.

ಮಕರ:

ಮಕರ:

ಇಂದು ನಿಮಗೆ ಸಂಪೂರ್ಣ ಪ್ರಮಾಣದ ಸಮಾಧಾನ ಲಭ್ಯವಾಗದು. ಮಾನಸಿಕ ಕಿರಿಕಿರಿಯನ್ನು ಅನುಭವಿಸುವಿರಿ. ಶನಿಯ ಪ್ರಭಾವ ಇರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು.

ಪತ್ನಿಯ ಅನಾರೋಗ್ಯಕ್ಕೆ ಒಂದಿಷ್ಟು ಹಣವನ್ನು ವ್ಯಯಿಸಬೇಕಾಗುವುದು. ಮಕ್ಕಳಿಂದ ಅಶುಭ ವಾರ್ತೆಯನ್ನು ಕೇಳಬೇಕಾಗುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳಲ್ಲಿ ಉಂಟಾದ ಏರು ಪೇರು ನಿಮ್ಮನ್ನು ಹೈರಾಣಗೊಳಿಸುವುದು. ಸ್ತ್ರೀಯರನ್ನು ಒಳಗೊಂಡಂತೆ ಎಲ್ಲರೂ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ದೇವಿ ಮತ್ತು ಆಂಜನೇಯನ ಆರಾಧನೆ ಮಾಡಿ.

ಕುಂಬ:

ಕುಂಬ:

ಇಂದು ನಿಮಗೆ ಸಮಾಧಾನಕರವಾದ ದಿನ. ಆರ್ಥಿಕ ವಲಯದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಮನೆಯಲ್ಲಿ ನೆಮ್ಮದಿ. ಹೊಸ ವ್ಯಾಪಾರ ವಹಿವಾಟುಗಳನ್ನು ತಂದೆಯೊಂದಿಗೆ ಆರಂಭಿಸುವ ಸಾಧ್ಯತೆಗಳಿವೆ.

ಕೈಗಾರಿಕೋದ್ಯಮದಲ್ಲಿ ಉತ್ತಮ ಲಾಭ ಬರುವುದು. ವಿದೇಶ ಯಾನಕ್ಕೆ ಬೇಕಾದ ಹಣಕಾಸುಗಳ ವ್ಯವಸ್ಥೆ ದೊರೆಯುವುದು. ಶುಭ ವಾರ್ತೆಯನ್ನು ನೀವು ಕೇಳುವಿರಿ. ಅವಿವಾಹಿತರು ವಿವಾಹವಾಗುವ ಯೋಗವನ್ನು ಪಡೆದುಕೊಳ್ಳುವರು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ದೇವಿಯ ಆರಾಧನೆ ಮಾಡಿ.

ಮೀನ:

ಮೀನ:

ಇಂದು ನಿಮಗೆ ಶುಭಕರವಾದ ದಿನ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಅನೇಕದಿನಗಳಿಂದ ತೀರ್ಮಾನವಾಗದೆ ಇರುವಂತಹ ವ್ಯಾಜ್ಯ ತೀರ್ಮಾನಗೊಳ್ಳುವುದು. ಸಹೋದರನ ಆಗಮನದಿಂದ ಒಂದಿಷ್ಟು ಸಮಾಧಾನ ಪಡೆದುಕೊಳ್ಳುವಿರಿ. ವಾಹನ ಚಲಾಯಿಸುವಾಗ ಆದಷ್ಟು ಕಾಳಜಿಯಿಂದ ಚಲಾವಣೆ ಮಾಡಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

Read more about: ಭವಿಷ್ಯ
English summary

your daily horoscope 12 january

Know what astrology and the planets have in store for you today the 12th of January. Choose your zodiac sign and read the details..
Story first published: Friday, January 12, 2018, 8:26 [IST]