Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1-11-2018: ಗುರುವಾರದ ದಿನ ಭವಿಷ್ಯ
ನವಗ್ರಹದಲ್ಲಿ ಗುರು ಗ್ರಹ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.ಮನುಷ್ಯನ ಪ್ರತಿಯೊಂದು ಯಶಸ್ಸಿಗೂ ಗುರು ಗ್ರಹದ ಕೃಪೆ ಬೇಕು. ಗುರು ಗ್ರಹದ ಅನುಗ್ರಹವಿದ್ದಲ್ಲಿ ಸುಖ,ಶಾಂತಿ, ಸಂಪತ್ತು, ವಿವಾಹ, ಸಂತಾನ ಯೋಗ ಎಲ್ಲವೂ ಸಿಗಲಿದೆ.

ಜಾತಕದಲ್ಲಿ ಗುರು ಪ್ರಬಲವಾಗಿದ್ದರೆ ಯಶಸ್ಸು ಲಭಿಸುತ್ತದೆ. ದುರ್ಬಲವಾಗಿದ್ದರೆ ಅಪಜಯ, ನೋವು, ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಗುರುವಿನ ಅನುಗ್ರಹ ಪಡೆಯಲು ಬಯಸುವ ವ್ಯಕ್ತಿ ಗುರುವಾರದ ಈ ದಿನ ಗುರು ಸ್ಥಾನದಲ್ಲಿರುವ 'ದತ್ತಾತ್ರೇಯ','ರಾಘವೇಂದ್ರ ಸ್ವಾಮಿಗಳು','ಸಾಯಿಬಾಬಾ'ಮೊದಲಾದವರ ದರ್ಶನವನ್ನು(ಮಂದಿರಗಳಲ್ಲಿ) ಪಡೆಯಿರಿ.ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807.

ಮೇಷ
ಕಾಲಘಟ್ಟದಲ್ಲಿ ಏರಿಳಿತಗಳು ಸಾಮಾನ್ಯ. ಹಾಗಾಗಿ ಕೊರಗದಿರುವುದೇ ಬುದ್ಧಿವಂತನ ಲಕ್ಷ ಣ. ಹಾಗಾಗಿ ನಿಮ್ಮ ವಿಚಾರದಲ್ಲಿ ನಕಾರಾತ್ಮಕ ಯೋಜನಾ ಲಹರಿಯನ್ನು ಕಡಿಮೆ ಮಾಡಿಕೊಳ್ಳಿ. ಧನಾತ್ಮಕ ಚಿಂತನೆಯಿಂದ ಸಂತೋಷದಿಂದ ಕಾಲ ಕಳೆಯಬಹುದು.ನಾಲಿಗೆ ಒಳ್ಳೆಯದಿದ್ದರೆ ನಾಡೇ ಒಳ್ಳೆಯದು ಎಂಬಂತೆ ಸ್ನೇಹಜೀವಿಯಾದ ನಿಮ್ಮ ಮಾತನ್ನು ಎಲ್ಲರೂ ಗೌರವಿಸುವರು. ಇದರಿಂದ ಹೊಸತನ ಮತ್ತು ಹೊಸ ಸ್ನೇಹಿತರನ್ನು ನೀವು ಸಂಪಾದಿಸುವಿರಿ. ಸಾಮಾಜಿಕವಾಗಿ ಸರ್ವರಿಂದ ಗೌರವಿಸ್ಪಡುವಿರಿ. ಹಣಕಾಸು ಕೂಡಾ ಉತ್ತಮವಾಗಿರುತ್ತದೆ.ಕೋರ್ಟು, ಕಚೇರಿ ಕೆಲಸಗಳಲ್ಲಿ ಹಿನ್ನಡೆ ತೋರುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಕೇಸನ್ನು ನಡೆಸುತ್ತಿರುವ ವಕೀಲರನ್ನೇ ಬದಲಿಸಬೇಕೆಂಬ ಇಚ್ಛೆ ಮನದಲ್ಲಿ ಸುಳಿಯುವುದು. ಆದರೆ ಹಾಗೆ ಮಾಡುವುದು ಈ ಹಂತದಲ್ಲಿ ಸರಿಯಲ್ಲ.
ಅದೃಷ್ಟ ಸಂಖ್ಯೆ:2

ವೃಷಭ
ಕುಟುಂಬದಲ್ಲಿ ನೆಮ್ಮದಿ ಹಾಗೂ ಸಮಾಧಾನಗಳಿಗೆ ಸಾಕಷ್ಟು ಅವಕಾಶಗಳು ಇದ್ದು ವಾಸ್ತವದಲ್ಲಿ ನಿಮಗೆ ವೇದ್ಯ ಆಗುವುದು. ಮನಸ್ಸು ಪ್ರಫುಲ್ಲತೆಯನ್ನು ಅನುಭವಿಸುವುದು. ನಿಮ್ಮ ಇಚ್ಛೆಯಂತೆ ಕಾರ್ಯಗಳು ನಡೆಯುವುದರಿಂದ ಅನುಕೂಲವಾಗುವುದು.
ಸಂಬಂಧಿಗಳ ಬಳಿ ಹಳೆಯ ವಿಚಾರಗಳನ್ನು ಕೆದಕಲು ಪ್ರಯತ್ನಿಸದಿರಿ. ಕೆದಕಲು ಹೋದರೆ ಮುಂದಿನ ಉತ್ತಮ ಬಾಂಧವ್ಯ ಮುರಿದು ಬೀಳುವುದು. ಹಳೇ ಭಿನ್ನಾಭಿಪ್ರಾಯವು ಉತ್ತಮ ಮಾತುಕತೆಯ ಸಂವಹನದಿಂದ ಕೊನೆಗೊಳ್ಳಲಿದೆ. ಜೀವನದಲ್ಲಿ ಹರ್ಷದ ವಾತಾವರಣ ಉಂಟಾಗುವುದು.ವೃಥಾ ಕಾಡುಹರಟೆಯಿಂದ ಸಮಯ ಕಳೆಯಲು ಸೂಕ್ತ ಸಮಯವಲ್ಲ. ಮೈತುಂಬಾ ಕೆಲಸಗಳು ಇದ್ದು, ಯಾವ ಕೆಲಸ ಮಾಡಲು ಹೋದರೂ ಟೀಕೆಗೆ ಗುರಿ ಆಗುವಿರಿ. ಆದರೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಎಂದು ಭಾವಿಸಿರಿ.
ಅದೃಷ್ಟ ಸಂಖ್ಯೆ:1

ಮಿಥುನ
ಕೆಲಸದ ಸ್ಥಳದಲ್ಲಿ ಹೊಸದಾದ ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳುವ ಸಾಧ್ಯತೆಗಳಿವೆ. ಪಂಚಮದ ಗುರುವು ನಿಮ್ಮ ಮನೋಕಾಮನೆಗಳನ್ನು ಪೂರ್ಣಗೊಳಿಸುವರು. ಮಕ್ಕಳು ನಿಮಗೆ ಸಂತೋಷವನ್ನುಂಟು ಮಾಡುವರು.ನಿಮ್ಮ ಕಾರ್ಯವೈಖರಿಯನ್ನು ಕೊಂಡಾಡುವ ಒಂದು ದೊಡ್ಡ ಗುಂಪೆ ನಿಮ್ಮನ್ನು ಭೇಟಿ ಆಗಲಿರುವರು. ಈ ಹಿಂದೆ ನೀವು ಮಾಡಿದ ಉಪಕಾರ ಸ್ಮರಣೆ ಮಾಡಿಕೊಂಡು ನಿಮ್ಮ ಸಹಾಯಕ್ಕೆ ಟೊಂಕ ಕಟ್ಟಿ ನಿಲ್ಲುವರು. ಹಾಗಾಗಿ ಇಂದು ಮಹತ್ತರ ಕೆಲಸ ಸಾಧಿಸುವಿರಿ. ಗುರುಕಾರುಣ್ಯದಿಂದ ಪಾಪರಾಶಿಗಳು ಸುಟ್ಟುಹೋಗುವುದು. ದೇಹದಲ್ಲಿ ನವಚೈತನ್ಯ ತುಂಬುವುದು. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಲೌಕಿಕ ಕಾರ್ಯ ಮಾಡಲು ಬಿಡುವು ಸಿಗದೆ ಹೋಗುವ ಸಾಧ್ಯತೆ ಇರುವುದು.
ಅದೃಷ್ಟ ಸಂಖ್ಯೆ:2

ಕಟಕ
ನಿಮ್ಮ ದೌರ್ಬಲ್ಯಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಅನ್ಯರನ್ನು ಟೀಕೆ ಮಾಡುವ ಮೊದಲು ನೀವು ಎಷ್ಟರಮಟ್ಟಿಗೆ ಸರಿ ಇದ್ದೀರಾ ಎಂದು ಯೋಚಿಸಿ ಮಾತನಾಡಿ. ಇದರಿಂದ ನಿಮ್ಮ ಗೌರವ ಘನತೆ ಹೆಚ್ಚುವುದು.ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವಿರಿ. ರಾಜಕೀಯ ಸಂಬಂಧವಾಗಿ ನಿಮಗೆ ಹೊಸ ಜವಾಬ್ದಾರಿಯನ್ನು ಹೊರುವ ಅವಕಾಶ ದೊರೆಯುವುದು. ಬಂದ ಸುಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಹಣದ ಅಡಚಣೆ ಎಂದು ಅಧಿಕಾರ ತಿರಸ್ಕರಿಸದಿರಿ.ಕುಟುಂಬದ ಜನರೊಂದಿಗೆ ಬೆರೆತು ಉಲ್ಲಾಸದ ದಿನವನ್ನಾಗಿ ಪರಿವರ್ತಿಸಿ ಕೊಳ್ಳುವಿರಿ. ಮಡದಿ, ಮಕ್ಕಳು ನಿಮ್ಮ ಸಂತೋಷದಲ್ಲಿ ಪಾಲ್ಗೊಳ್ಳುವರು. ಹಣಕಾಸು ಅಲ್ಪಮಟ್ಟಿಗೆ ಕೈಬಿಡಬಹುದು. ಆ ಬಗ್ಗೆ ಯೋಚಿಸದೆ ಸಂತೋಷವನ್ನು ಹೊಂದುವಿರಿ.
ಅದೃಷ್ಟ ಸಂಖ್ಯೆ:3

ಸಿಂಹ
ಎತ್ತರವಾದ ಹೆಸರು, ಸಿದ್ಧಿ ಹಾಗೂ ಸಾಧನೆಗಳನ್ನು ಮಾಡುವ ನಿಮ್ಮ ಹಂಬಲಗಳಿಗೆ ದಾರಿ ಸುಗಮವಾಗಲಿದೆ. ಬಂಧುವಿಗೆ ಮಾನಸಿಕ ಮತ್ತು ತಾತ್ವಿಕ ಬೆಂಬಲ ನೀಡುವುದರಿಂದ ನಿಮ್ಮ ಗೌರವ ಹೆಚ್ಚಾಗುವುದು.ತಿಳಿದು ತಿಳಿದು ತಲೆಗಟ್ಟಿ ಇದೆ ಎಂದೂ ಕಲ್ಲುಬಂಡೆಗೆ ತಲೆಯನ್ನು ಬಡಿದುಕೊಳ್ಳದಿರಿ. ಅರ್ಥಾತ್ ನೀವು ಮಾಡುವ ಕೆಲಸವನ್ನು ಎಲ್ಲರೂ ಮೆಚ್ಚುವರು ಎಂಬ ಹುಂಬುತನದಿಂದ ಮುನ್ನುಗ್ಗಿದಲ್ಲಿ ಸೋಲನ್ನು ಅನುಭವಿಸಬೇಕಾಗುವುದು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ.ದೂರ ದೂರದ ಊರಿನ ಪ್ರಯಾಣದಿಂದ ಅನೇಕ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಧೈರ್ಯವನ್ನು ಕಳೆದುಕೊಳ್ಳಬೇಡಿ. ದೈವಕೃಪೆಯಿಂದ ಎಲ್ಲವೂ ಒಳಿತಾಗಲಿದೆ. ಕುಲದೇವತಾ ಪ್ರಾರ್ಥನೆ ಮಾಡಿ.
ಅದೃಷ್ಟ ಸಂಖ್ಯೆ:4

ಕನ್ಯಾ
ಅನೇಕ ದಿನಗಳಿಂದ ಕಾಡುತ್ತಿರುವ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮಗೆ ಬರಬೇಕಾದ ಹಣವು ಶೀಘ್ರದಲ್ಲಿಯೇ ಕೈಸೇರುವ ಸಾಧ್ಯತೆ ಇರುತ್ತದೆ.ವ್ಯಾಪಕವಾದ ಬುದ್ಧಿ ಚಾತುರ್ಯದಿಂದ ನಿಮ್ಮ ಬಂಧುಬಾಂಧವರೇ ನಿಮ್ಮ ಸನಿಹಕ್ಕೆ ಬರುವರು. ಆದರೆ ಕುಟಿಲ ಯೋಜನೆಗಳಿಗೆ ಬಲಿಯಾಗದಿರಿ. ಬಹುದಿನದ ನಿಮ್ಮ ಕಾರ್ಯ ಕೈಗೂಡುವುದು. ಅದಕ್ಕಾಗಿ ಹಣವೂ ಖರ್ಚಾಗುವುದು.ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು. ಹಾಗಾಗಿ ಮನೆಯ ವಾತಾವರಣವನ್ನು ನಿರ್ಲಕ್ಷಿಸದಿರಿ. ಮಗ ಅಥವಾ ಮಗಳಿನ ವಿದ್ಯಾಭ್ಯಾಸದ ವಿಚಾರವಾಗಿ ಸ್ವಲ್ಪ ಗಮನಹರಿಸಿ. ಸಾಧ್ಯವಾದರೆ ಅವರ ಓದಿಗೆ ಸಹಾಯ ಮಾಡಿ.
ಅದೃಷ್ಟ ಸಂಖ್ಯೆ:6

ತುಲಾ
ನೀವು ರೂಪಿಸಿಕೊಂಡಿರುವ ಹಲವು ಯೋಜನೆಗಳಿಗೆ ಮೂರ್ತರೂಪ ಕೂಡಿ ಬರಲಿದೆ ಮತ್ತು ಈ ಯೋಜನೆಗಳನ್ನು ಮೆಚ್ಚಿ ಹೊಸ ಪಾಲುದಾರರು ನಿಮಗೆ ದೊರೆಯುವ ಸಾಧ್ಯತೆಗಳು ಇರುತ್ತವೆ. ಸಾಲ ಬಾಧೆಯ ತೀವ್ರತೆ ಕಡಿಮೆ ಆಗುವುದು.ಬದಲಾವಣೆಯನ್ನು ಬಯಸಿ ನಿರಾಶರಾಗಿದ್ದ ನಿಮಗೆ ಹೊಸದಾದ ಬೆಳಕೊಂದು ಗೋಚರಿಸಲಿದೆ. ಇದು ನಿಮ್ಮ ಮನೋಕಾಮನೆಯನ್ನು ಪೂರ್ತಿಗೊಳಿಸಲು ಸಹಕಾರಿಯಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದ ಇರುವುದು ಒಳ್ಳೆಯದು.ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಮಾತಿದೆ. ಹಾಗಾಗಿ ನೀವಾಡುವ ಮಾತುಗಳು ಹಿತಮಿತವಾಗಿರಲಿ. ಸೂಜಿಗೆ ಮುತ್ತು ಕೊಟ್ಟಂತೆ ನಿಮ್ಮ ಮಾತುಗಳು ಹೊರಗೆ ಬರಲಿ. ಇದರಿಂದ ಗೌರವ ಘನತೆ ನಿಮ್ಮದಾಗುವುದು.
ಅದೃಷ್ಟ ಸಂಖ್ಯೆ:4

ವೃಶ್ಚಿಕ
ಮನಸ್ಸಿನ ಒತ್ತಡವನ್ನು ಒಬ್ಬರೇ ಮನಸ್ಸಿನಲ್ಲಿಟ್ಟುಕೊಂಡು ಕೊರಗದಿರಿ. ನಿಮ್ಮ ಆತ್ಮೀಯ ಸ್ನೇಹಿತ ಅಥವಾ ಹಿತೈಷಿಯ ಸಂಗಡ ವಿಚಾರಗಳನ್ನು ಹಂಚಿಕೊಳ್ಳಿ. ನೀವು ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತ ಉತ್ತರ ದೊರೆಯುವುದು.ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತ ಕೂಡದಿರಿ. ಗುರುವಿನ ಮಂತ್ರ ಪಠಿಸಿ. ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ. ಮನಸ್ಸಿಗೆ ಶಾಂತಿ ದೊರಕುವುದು. ಮೌನದಿಂದ ಕಾರ್ಯ ನಿರ್ವಹಿಸಿರಿ.ವೃಥಾ ಸಂಯಮ ಕಳೆದುಕೊಳ್ಳಬೇಡಿ. ಗುರು, ಹಿರಿಯರು ತೋರಿದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಬಾಲ್ಯ ಸ್ನೇಹಿತರ ಭೇಟಿ ಸಂಭವ ಇದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.
ಅದೃಷ್ಟ ಸಂಖ್ಯೆ:1

ಧನಸ್ಸು
ಉನ್ನತ ವಿದ್ಯಾಭ್ಯಾಸದ ಸಲುವಾಗಿ ಕಾರ್ಯ ಯೋಜನೆಯು ಸಿದ್ಧಿಸುವುದು. ಇದಕ್ಕಾಗಿ ಬ್ಯಾಂಕಿನ ಅಧಿಕಾರಿಗಳು ಸಕಾರಾತ್ಮಕವಾಗಿ ನಿಮಗೆ ಸ್ಪಂದಿಸುವರು. ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಉತ್ತಮ ದಿನ. ವ್ಯಾಪಾರದ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ನೀವು ಧೈರ್ಯದಿಂದ ಮುಂದೆ ಹೆಜ್ಜೆಯನ್ನು ಇಡಿ. ಗುರುವಿನ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ಆಗುತ್ತದೆ. ನಿಮ್ಮ ಸನಿಹದ ಜನರಿಂದ ಪ್ರಶಂಸೆಗೆ ದಾರಿ ಇರುವುದು. ನಿಮ್ಮ ಸೌಮ್ಯ ಸ್ವಭಾವದಿಂದಾಗಿ ನೀವು ಎಲ್ಲರ ಗಮನ ಸೆಳೆಯುವಿರಿ. ನಿಮ್ಮಲ್ಲಿ ಮೂಡಿದ ಹೊಸ ವಿಚಾರವನ್ನು ಗೆಳೆಯರ ಮುಂದೆ ಪ್ರಕಟಗೊಳಿಸುವಿರಿ.
ಅದೃಷ್ಟ ಸಂಖ್ಯೆ:4

ಮಕರ
ಕರ್ಮ ಸ್ಥಾನದ ಗುರು, ವ್ಯಯಸ್ಥಾನದ ಶನಿಯು ವೃತ್ತಿಯಲ್ಲಿ ಅಸಹಕಾರವನ್ನು ಉಂಟು ಮಾಡುವರು. ಮೇಲಧಿಕಾರಿಗಳ ಅವಕೃಪೆಗೆ ಪಾತ್ರರಾಗಬೇಕಾಗುವುದು. ಆದಷ್ಟು ತಾಳ್ಮೆಯಿಂದ ಇರಿ. ಇಲ್ಲವೆ ಇಂದು ರಜಾ ಹಾಕಿ ಮನೆಯಲ್ಲಿರಿ.ವ್ಯಾಜ್ಯದ ವಿಚಾರವೊಂದರಲ್ಲಿ ನಿಮ್ಮನ್ನು ಸಿಲುಕಿಸಲು ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಎಚ್ಚರ ಇರಲಿ. ಯಾವುದೇ ರೀತಿಯ ಹಣಕಾಸಿನ ವಿಷಯದಲ್ಲಿ ಜಾಮೀನು ಪತ್ರಕ್ಕೆ ಸಹಿ ಹಾಕದಿರಿ. ಕಂಪನಿ ಕೆಲಸದಲ್ಲಿರುವ ಕೆಲವರು ಕೆಲಸ ತ್ಯಾಗ ಮಾಡುವರು.'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ' ಎಂದು ದಾಸರು ಹಾಡಿದ್ದಾರೆ. ಅಂತೆಯೇ ಬಲವಾಗಿ ನಿಮ್ಮ ಇಷ್ಟದೈವವನ್ನು ನೆನೆಯಿರಿ. ಇದರಿಂದ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು.
ಅದೃಷ್ಟ ಸಂಖ್ಯೆ:9

ಕುಂಭ
ನಿಮ್ಮ ಸಹೋದ್ಯೋಗಿಗಳಿಂದ ನಿಮಗೆ ಉಡುಗೊರೆ ರೂಪದಲ್ಲಿ ಕೆಲವು ವಸ್ತುಗಳು ಕೈಸೇರುವ ಸಾಧ್ಯತೆ ಇದೆ. ನಿಮ್ಮ ಸಹಕಾರವನ್ನು ಸಹೋದ್ಯೋಗಿಗಳು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವರು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.ನಿಮ್ಮನ್ನು ಪ್ರಶಂಸಿಸುವ ಪಾರದರ್ಶಕ ವ್ಯಕ್ತಿತ್ವವುಳ್ಳ ಜನರು ನಿಮ್ಮ ಇಚ್ಚಾಶಕ್ತಿಯನ್ನು ವೃದ್ಧಿಸಿ ಸಂತೋಷಕ್ಕೆ ಕಾರಣರಾಗುವರು. ಒಂದು ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ. ಹೆತ್ತವರ ಜತೆ ಸಮಯವನ್ನು ಕಳೆಯುವಿರಿ.ಮಾಡಿ ಮುಗಿಸಲೇಬೇಕಾದ ಕೆಲಸವನ್ನು ಆದಷ್ಟು ಜಾಗ್ರತೆಯಾಗಿ ಮುಗಿಸಿರಿ. ಏಕೆಂದರೆ ಮನೆಗೆ ಬಂದು ಹೋಗುವ ಬಂಧುಗಳ ಸಂಖ್ಯೆ ಅಧಿಕವಾಗಿರುತ್ತದೆ. ಅವರ ಇಷ್ಟನಿಷ್ಟಗಳನ್ನು ಪೂರೈಸುವುದರಲ್ಲಿಯೇ ದಿನ ಕಳೆದು ಹೋಗುವುದು.
ಅದೃಷ್ಟ ಸಂಖ್ಯೆ:2

ಮೀನ
ಕಠಿಣ ದುಡಿಮೆ ಬಿಟ್ಟರೆ ಅನ್ಯಮಾರ್ಗವಿಲ್ಲ ಎಂದರು ಅನುಭಾವಿಗಳು. ಹಾಗಾಗಿ ಕರ್ಮ ಸ್ಥಾನದ ಶನಿಯು ನಿಮ್ಮಿಂದ ಕೆಲಸ ಕಾರ್ಯಗಳನ್ನು ಮಾಡಿಸಿಯೇ ನಿಮಗೆ ಹಣಕಾಸಿನ ಸಹಕಾರ ನೀಡುವರು. ಹಾಗಾಗಿ ಉದಾಸೀನ ತೋರದೆ ಕೆಲಸ ಮಾಡಿ.
ನಿಮ್ಮ ದೇಹಕ್ಕೆ ವಯಸ್ಸಾಗಿದ್ದರೂ ನಿಮ್ಮ ಮನಸ್ಸಿಗೆ ಮುಪ್ಪು ಬಂದಿಲ್ಲ. ಹಾಗಾಗಿ ಕಿರಿಯರೊಡನೆ ಸ್ನೇಹ ಬಾಂಧವ್ಯದಿಂದ ವರ್ತಿಸುವಿರಿ. ಆ ಮೂಲಕ ನಿಮ್ಮ ಅಂತರಂಗದ ತುಮುಲಗಳಿಗೆ ಸಾಂತ್ವನ ಕಂಡುಕೊಳ್ಳುವಿರಿ. ಸಮರಸವೇ ಜೀವನ ವಿರಸವೇ ಮರಣ ಎಂಬುದನ್ನು ಅರಿಯುವಿರಿ.ಕೆಲಸದ ಒತ್ತಡದ ದೆಸೆಯಿಂದ ಗೊಂದಲದ ಗೂಡಾಗಿರುವ ಮನಸ್ಸಿನಲ್ಲಿ ಯಾವ ಕೆಲಸವನ್ನು ಮೊದಲು ಮುಗಿಸಬೇಕು ಎಂದು ಚಿಂತಿಸುವಿರಿ. ಮೊದಲು ಮಾಡಿಕೊಂಡ ಒಪ್ಪಂದದ ಕೆಲಸವನ್ನು ಬೇಗನೆ ಮುಗಿಸಿ ಮತ್ತೊಂದು ಕೆಲಸವನ್ನು ಕೈಗೆತ್ತಿಕೊಳ್ಳಿ.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











