For Quick Alerts
ALLOW NOTIFICATIONS  
For Daily Alerts

  ರಿಯಲ್ ಸ್ಟೋರಿ: ದಿವಂಗತ ಮಗನ ವೀರ್ಯಾಣುವಿನಿಂದಲೇ ಅಜ್ಜಿಯಾದ ತಾಯಿ

  |

  ಯಾವುದೇ ತಾಯಿ ತನ್ನ ಮಕ್ಕಳು ಆರೋಗ್ಯವಂತರಾಗಿ, ಸಂತೋಷದಿಂದ ಜೀವಿಸುವುದನ್ನು ಕಂಡಾಗ ಮಾತ್ರ ಆಕೆ ತನ್ನ ಜೀವನದ ಅತ್ಯಂತ ದೊಡ್ಡ ಸಂತೋಷವನ್ನು ಅನುಭವಿಸುತ್ತಾಳೆ. ಪಾಲಕರಿಗೆ ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮ ಜೀವನ ಪಡೆಯುವಂತಾಗಬೇಕು ಹಾಗೂ ಪರಿಪೂರ್ಣರಾಗಬೇಕು ಎಂಬ ಹಂಬಲವಿರುತ್ತದೆ. ಆದರೆ ಈ ಜಗತ್ತಿನಲ್ಲಿ ಮಕ್ಕಳ ಸುಖವನ್ನು ಎಲ್ಲರಿಗೂ ಆ ದೇವರು ದಯಪಾಲಿಸಿರುವುದಿಲ್ಲ.

  ಅದರಲ್ಲೂ ತಮ್ಮೆದುರಿಗೇ ತಮ್ಮ ಮಕ್ಕಳು ಅಕಾಲಿಕ ಮರಣವನ್ನಪ್ಪಿದರೆ ಇದಕ್ಕಿಂತ ದೊಡ್ಡ ದುಃಖಕರ ಸನ್ನಿವೇಶ ಇನ್ನೊಂದಿರಲಾರದು. ಭಾರತದ ಒಬ್ಬ ತಾಯಿಯೂ ತನ್ನ ಮಗನ ಅಕಸ್ಮಿಕ ಮರಣದಿಂದ ಭಾರೀ ದುಃಖಕ್ಕೆ ಒಳಗಾಗಿದ್ದರು. ಆಕೆಯ ಜಗತ್ತೇ ತಲೆಕೆಳಗಾಗಿತ್ತು. ಆದರೆ ಅಕೆಯ ಮಗನ ಸಾವಿನಲ್ಲಿಯೂ ಒಂದು ಬೆಳಕಿನ ಕಿರಣ ಮೂಡಿದ್ದು ಆಕೆಯ ಜೀವನವನ್ನು ಮತ್ತೊಮ್ಮೆ ಬೆಳಗಿಸಿದೆ.

  ಸಾಮಾನ್ಯವಾಗಿ ನಾವು ಯಾರೂ ಊಹಿಸದೇ ಇರುವ ಕಾರ್ಯದ ಮೂಲಕ ಆಕೆ ಹಲವು ಚರ್ಚೆಗಳಿಗೆ ಈಗ ಗ್ರಾಸಳಾಗಿದ್ದಾಳೆ. ಆಕೆ ಕಾಲವಶನಾದ ಮಗನ ವೀರ್ಯಾಣುವನ್ನು ಧರಿಸಿ ತನ್ನದೇ ಮಗುವಿನ ಅಜ್ಜಿಯಾಗಿದ್ದಾಳೆ. ಬನ್ನಿ,' ರಾಜಶ್ರೀ ಪಾಟೀಲ್' ಎಂಬ ಹೆಸರಿನ ಈ ಧೈರ್ಯವಂತೆ ಮಹಿಳೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ... 

  ಆಕೆಯ ಜೊತೆ ಪರಿಪೂರ್ಣವಾದ ಕುಟುಂಬವಿತ್ತು

  ಆಕೆಯ ಜೊತೆ ಪರಿಪೂರ್ಣವಾದ ಕುಟುಂಬವಿತ್ತು

  ರಾಜಶ್ರೀ ಪಾಟೀಲ್ ಎಂಬ ಈ ಮಹಿಳೆಗೂ 2010ರ ವರೆಗೆ ಪರಿಪೂರ್ಣವಾದ ಕುಟುಂಬವಿತ್ತು. ಅಂದು ಆಕೆಯ ಮಗ ಪ್ರಥಮೇಶ್ ಪಾಟೀಲ್ ತನ್ನ ಉನ್ನತ ಪದವಿ ಪಡೆಯಲೆಂದು ಜರ್ಮನಿಗೆ ತೆರಳಿದ್ದ. ಆದರೆ ಆತನಿಗೆ ಮೆದುಳಿನಲ್ಲಿ ಗಡ್ಡೆಯಿದೆ ಎಂದು ತಿಳಿದುಬಂದ ಬಳಿಕ ಆಕೆಯ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿತ್ತು.

  ಪ್ರಥಮೇಶ್‌ರಿಗೆ ತಕ್ಷಣವೇ ತುರ್ತು ಚಿಕಿತ್ಸೆಯ ಅಗತ್ಯವಿತ್ತು

  ಪ್ರಥಮೇಶ್‌ರಿಗೆ ತಕ್ಷಣವೇ ತುರ್ತು ಚಿಕಿತ್ಸೆಯ ಅಗತ್ಯವಿತ್ತು

  ಜರ್ಮನಿಯಲ್ಲಿದ್ದ ಪ್ರಥಮೇಶ್ ರನ್ನು ಪರೀಕ್ಷಿಸಿದ ವೈದ್ಯರು ಆತನ ಚಿಕಿತ್ಸೆಗಾಗಿ ಖೀಮೋಥೆರಪಿ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ಇದರ ಅಡ್ಡಪರಿಣಾಮಗಳಿಂದ ರಕ್ಷಿಸುವ ಸಲುವಾಗಿ ಆತನ ವೀರ್ಯಾಣುಗಳನ್ನು ಸಂಗ್ರಹಿಸಿ ಸಂರಕ್ಷಿಸಿಟ್ಟುಕೊಂಡಿದ್ದರು. ಏಕೆಂದರೆ ಈ ಚಿಕಿತ್ಸೆಯ ಬಳಿಕ ಆತ ಚೇತರಿಸಿಕೊಂಡರೂ ಮುಂದಿನ ದಿನಗಳಲ್ಲಿ ಆತ ತಂದೆಯಾಗುವ ಸಾಧ್ಯತೆಯನ್ನು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲದ ಕಾರಣ ಈ ಕ್ರಮವನ್ನು ವೈದ್ಯರು ನಿರ್ಣಾಯಕವಾಗಿ ಕೈಗೊಂಡಿದ್ದರು.

  ಹೆಚ್ಚಿನ ಚಿಕಿತ್ಸೆಗಾಗಿ ಭಾರತಕ್ಕೆ ತರಲಾಯಿತು

  ಹೆಚ್ಚಿನ ಚಿಕಿತ್ಸೆಗಾಗಿ ಭಾರತಕ್ಕೆ ತರಲಾಯಿತು

  ಪ್ರಥಮೇಶ್ ರಿಗೆ ಮೆದುಳಿನಲ್ಲಿ ಗಡ್ಡೆ ಇದೆ ಎಂದು ತಿಳಿಯುವ ಹೊತ್ತಿಗಾಗಲೇ ಗಡ್ಡೆ ನಾಲ್ಕನೆಯ ಹಂತವನ್ನು ದಾಟಿಯಾಗಿತ್ತು. ಆಗಲೇ ಜರ್ಮನಿಯಲ್ಲಿ ಚಿಕಿತ್ಸೆ ಪ್ರಾರಂಭಿಸಿದರೂ ಹೆಚ್ಚಿನ ಚಿಕಿತ್ಸೆಗಾಗಿ ಭಾರತಕ್ಕೆ ಕಳುಹಿಸಿಕ್ಕೊಡಲಾಯಿತು. ಈ ಸ್ಥಿತಿಯಲ್ಲಿ ಪ್ರಥಮೇಶ್ ರವರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದರು ಹಾಗೂ ದೇಹವೆಲ್ಲಾ ನಡುಗುತ್ತಿತ್ತು. ಭಾರತದಲ್ಲಿ ಚಿಕಿತ್ಸೆ ಪ್ರಾರಂಭಿಸಿದ ಬಳಿಕ ಕೊಂಚ ಚೇತರಿಕೆಯೂ ಕಂಡುಬಂದಿತ್ತು.

  ಆದರೆ ವಿಧಿಯಾಟವೇ ಬೇರೆಯಾಗಿತ್ತು

  ಆದರೆ ವಿಧಿಯಾಟವೇ ಬೇರೆಯಾಗಿತ್ತು

  ಈ ಸ್ಥಿತಿಯಲ್ಲಿ ಪ್ರಥಮೇಶ್ ತನ್ನ ಜೀವವನ್ನುಳಿಸಿಕೊಳ್ಳಲು ಕೆಲವಾರು ವರ್ಷಗಳವರೆಗೆ ಹೋರಾಟ ನಡೆಸಿದರೂ ಸುಮಾರು ಐದು ವರ್ಷಗಳ ನಂತರ, ಅಂದರೆ 2016ರಲ್ಲಿ ಪ್ರಥಮೇಶ್ ರಿಗೆ ಕಡಿಮೆಯಾಗಿದ್ದ ಗಡ್ಡೆ ಮತ್ತೆ ಬೆಳೆದಿರುವುದು ಕಂಡುಬಂದಿತ್ತು. ಆದರೆ ಈ ಗಡ್ಡೆ ತನ್ನ ಉಗ್ರರೂಪಕ್ಕೆ ಬೆಳೆದ ಪರಿಣಾಮವಾಗಿ ಕಡೆಗೆ ಈ ಹೋರಾಟ ಕೊನೆಗೊಂಡು ಸೆಪ್ಟೆಂಬರ್ ೨೦೧೬ರಲ್ಲಿ ಕೊನೆಯುಸಿರೆಳೆದ.

   ಜರ್ಮನಿಯಿಂದ ಮಗನ ವೀರ್ಯಾಣುಗಳನ್ನು ತರಲು ಬಯಸಿದ ತಾಯಿ

  ಜರ್ಮನಿಯಿಂದ ಮಗನ ವೀರ್ಯಾಣುಗಳನ್ನು ತರಲು ಬಯಸಿದ ತಾಯಿ

  ಐದು ವರ್ಷಗಳ ಹಿಂದೆ ಜರ್ಮನಿಯಲ್ಲಿ ತನ್ನ ಮಗನ ವೀರ್ಯಾಣುಗಳನ್ನು ಸಂಗ್ರಹಿಸಿಟ್ಟಿದ್ದ ವಿಷಯವನ್ನು ತಾಯಿ ಈ ಸಂಗ್ರಹವನ್ನು ಭಾರತಕ್ಕೆ ತರಲು ಬಯಸಿದಳು. ಅಂತೆಯೇ ಜರ್ಮನಿಯ ವೀರ್ಯಾಣು ಬ್ಯಾಂಕ್ ಅನ್ನು ಸಂಪರ್ಕಿಸಿದಳು. ಈ ಬ್ಯಾಂಕ್ ನಲ್ಲಿ ವೀರ್ಯಾಣುಗಳನ್ನು ಕೆಡದಂತೆ ಅತಿ ಶೀತಲ ವ್ಯವಸ್ಥೆಯಲ್ಲಿ ಕಾಪಾಡಿಕೊಂಡಿರಲಾಗುತ್ತದೆ. ಈ ವೀರ್ಯಾಣುಗಳನ್ನು ತರಲು ಆ ದೇಶದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಆಕೆಗೆ ಈ ವೀರ್ಯಾಣುಗಳನ್ನು ಪಡೆಯಲು ಸಾಧ್ಯವಾಯಿತು. ಆದರೆ ಈ ತಾಯಿ ಈ ವೀರ್ಯಾಣುಗಳನ್ನು ತಾನೇ ಧರಿಸಿ ತನ್ನ ಮೊಮ್ಮಗನ ತಾಯಿಯಾಗಲು ಬಯಸಿದಳು.

  ಇದೊಂದು ಭಾವನಾತ್ಮಕ ಪ್ರಯಾಣವಾಗಿತ್ತು

  ಇದೊಂದು ಭಾವನಾತ್ಮಕ ಪ್ರಯಾಣವಾಗಿತ್ತು

  ಈ ನಿರ್ಧಾರವನ್ನು ಪ್ರಕಟಿಸಿದ ಬಳಿಕ ವೈದ್ಯರು ಈ ವೀರ್ಯಾಣುಗಳನ್ನು ಯಶಸ್ವಿಯಾಗಿ ಆಕೆಯ ಗರ್ಭದಲ್ಲಿ ಅಳವಡಿಸಿ ಗರ್ಭಾಂಕುರವಾಗುವಂತೆ ನೋಡಿಕೊಂಡರು. ನವಮಾಸಗಳು ಪೂರ್ಣಗೊಂಡ ಬಳಿಕ ಆರೋಗ್ಯವಂತ ಅವಳಿ ಮಕ್ಕಳನ್ನು ಪಡೆದ ಬಳಿಕ ರಾಜಶ್ರೀ ಪಾಟೀಲ್ ರವರ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಮಗನ ಮಕ್ಕಳನ್ನು ನೋಡಬೇಕೆಂಬ ಸಂತೋಷವನ್ನು ದೇವರು ಈ ರೀತಿಯಾಗಿ ನಡೆಸಿಕೊಟ್ಟಿದ್ದ. ಅಸಾಧ್ಯವಾದ ಈ ಕಾರ್ಯವನ್ನು ಸಾಧ್ಯವಾಗಿಸಿದ ವಿಜ್ಞಾನಕ್ಕೂ, ಈ ಕಾರ್ಯಕ್ಕೆ ನೆರವಾದ ವೈದ್ಯರನ್ನು ಮೆಚ್ಚಲೇಬೇಕು. ಈ ಸುಂದರ ನೈಜಕಥೆಯ ಬಗ್ಗೆ ನಿಮಗೇನೆನಿಸುತ್ತದೆ? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

  English summary

  woman who became grandmother with her dead sons sperm

  A Pune-based woman's world came to an unexpected standstill when her young son succumbed to cancer 2 years back in Germany. But her joy knows no bound after she successfully gave birth to twins using her dead son's sperms. She had to undergo legal processes to get the sperm from the Germany's hospital after her son had saved his semen there.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more