Latest Updates
-
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ?
ಶನಿ ದೇವನ ನಿಧಾನ ಗತಿಯ ಚಲನೆಯ ಹಿಂದಿರುವ ಅಸಲಿ ಕಹಾನಿ...
ಶನಿ ದೇವರನ್ನು ನ್ಯಾಯದ ಅಧಿಪತಿ ಎಂದು ಕರೆಯುತ್ತಾರೆ. ವೇದಿಕ್ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗ್ರಹವು ಶನಿ ದೇವರನ್ನು ಪ್ರತಿನಿಧಿಸುತ್ತದೆ ಎನ್ನಲಾಗುವುದು. ಹಾಗಾಗಿ ಶನಿ ಗ್ರಹದ ಬದಲಾವಣೆಯು ವ್ಯಕ್ತಿಯ ರಾಶಿ ಭವಿಷ್ಯದ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಶನಿಗ್ರಹದ ಚಲನ ವಲನಗಳು ಇತರ ಗ್ರಹಗಳಂತೆಯೇ ನಡೆಯುವುದು.
ಸೂಕ್ತ ರೀತಿಯ ಪರಿಣಾಮ ನೀಡುವನು ಎನ್ನಲಾಗುತ್ತದೆ. ಆದರೆ ಇತರ ಗ್ರಹಗಳಿಗಿಂತ ಶನಿಗ್ರಹದ ಚಲನೆಯು ಸಾಮಾನ್ಯವಾಗಿ ನಿಧಾನವಾಗಿರುತ್ತದೆ ಎಂದು ಹೇಳಲಾಗುವುದು. ಹಾಗಾಗಿಯೇ ಒಂದು ರಾಶಿ ಚಕ್ರದಿಂದ ಇನ್ನೊಂದು ರಾಶಿಚಕ್ರಕ್ಕೆ ಹೋಗಲು ಒಂದೂವರೆ ವರ್ಷದಿಂದ ಎರಡು ವರ್ಷಗಳ ಕಾಲ ಬೇಕಾಗುವುದು ಎಂದು ಹೇಳಲಾಗುತ್ತದೆ.
ಜೀವನದ ಅರ್ಥ ಹಾಗೂ ಬದುಕಿನ ರೀತಿಯನ್ನು ಹೇಗೆ ನಡೆಸಬೇಕು ಎಂದು ತಿಳಿಸಿಕೊಡುವವನು ಶನಿ. ಶನಿಯ ಪ್ರಭಾವ ವ್ಯಕ್ತಿಯಲ್ಲಿ ಗಮನಾರ್ಹ ಬದಲಾವಣೆ ತಂದುಕೊಡುವುದು. ಶನಿಯ ಹುಟ್ಟು, ಅವನ ಪ್ರಭಾವ ಹಾಗೂ ಅವನ ಚಲನೆಯ ನಿಧಾನಗತಿಯ ವಿಚಾರಗಳು ಮಹತ್ತರವಾದ ಹಿನ್ನೆಲೆಯನ್ನು ಪಡೆದುಕೊಂಡಿವೆ. ಇಂತಹ ವಿಶೇಷ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಶನಿ ದೇವನ ಜನ್ಮ ಕಥೆ
ಶನಿ ದೇವರ ಜನ್ಮ ಕಥೆಯ ಪ್ರಕಾರ ಶಯಾ ದೇವಿಯನ್ನು ಸಂಧ್ಯಾ ಎಂದೂ ಕರೆಯಲಾಗುತ್ತಿತ್ತು. ಸಂಧ್ಯಾ ದೇವಿಯೇ ಶನಿಯ ತಾಯಿ ಎಂದು ಕರೆಯಲಾಗುತ್ತದೆ. ಆಕೆ ಶಿವನ ಪರಮ ಭಕ್ತಳಾಗಿದ್ದಳು. ತಾನು ಗರ್ಭಿಣಿಯಾಗಿರುವಾಗ ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಶನಿ ದೇವನು ಜನಿಸಿದಾಗ ಕಪ್ಪು ಛಾಯೆಯನ್ನು ಹೊಂದಿದ್ದನು. ಸೂರ್ಯ ದೇವನು ತನ್ನ ಮಗ ಕಪ್ಪಗಾಗಿರುವುದನ್ನು ಇಷ್ಟಪಡಲು ಬಯಸಲಿಲ್ಲ. ಸೂರ್ಯ ದೇವ ಭಯಪಟ್ಟಿರುವುದರಿಂದ ಸಂಧ್ಯಾ ದೇವಿಯು ತನ್ನ ನೆರಳಾದ ಛಾಯಾ/ಸುವರ್ಣ ದೇವಿಯನ್ನು ಕರೆದು ಅದಲು ಬದಲಾದರು. ತನ್ನ ತಂದೆಯ ಮನೆಗೆ ಹೋದಳು.

ತಾಯಿಯ ಶಾಪಕ್ಕೆ ಒಳಗಾಗಿದ್ದನು
ಸಂಧ್ಯಾ ಮತ್ತು ಛಾಯಾ/ಸುವರ್ಣ ಅದಲು ಬದಲಾಗಿರುವ ವಿಚಾರ ಸೂರ್ಯ ದೇವ ಹಾಗೂ ಶನಿಗೆ ತಿಳಿದಿರಲಿಲ್ಲ. ಸುವರ್ಣ ನಂತರದ ದಿನಗಳಲ್ಲಿ ಐದು ಗಂಡು ಮತ್ತು 3 ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆರಂಭದಲ್ಲಿ ಸುವರ್ಣ ಶನಿ ದೇವನಿಗೆ ಉತ್ತಮ ಆರೈಕೆ ಮಾಡುತ್ತಿದ್ದಳು. ತನ್ನ ಸ್ವಂತ ಮಕ್ಕಳು ಜನಿಸಿದ ನಂತರ ಶನಿಗೆ ಪಕ್ಷಪಾತ ಮಾಡಲು ಪ್ರಾರಂಭಿಸಿದಳು. ಇದು ಶನಿ ದೇವನಿಗೆ ಅತ್ಯಂತ ಬೇಸರ ಹಾಗೂ ಹತಾಶೆ ಆಗಲು ಪ್ರಾರಂಭವಾಯಿತು. ಸುವರ್ಣ ತನ್ನ ಮಕ್ಕಳಿಗೆ ಆಹಾರ ನೀಡುವಾಗ ಶನಿ ದೇವನು ತನಗೂ ಆಹಾರ ನೀಡಬೇಕೆಂದು ಕೇಳಿಕೊಂಡಳು. ಆದಾಗ್ಯೂ ಸುವರ್ಣ ಅದನ್ನು ನಿರ್ಲಕ್ಷಿಸಿದಳು. ಈ ಮೂಲಕ ಕೋಪಗೊಂಡ ಶನಿಯು ತನ್ನ ಮುಗ್ಧತೆಯನ್ನು ಮರೆತು, ತಾಯಿಗೆ ಕಾಲಿನಿಂದ ತುಳಿದನು. ಆಗ ತಾಯಿಯು ಶನಿಗೆ ಕುಂಟ ಗ್ರಹವಾಗಬೇಕೆಂದು ಶಪಿಸಿದಳು. ಹಾಗಾಗಿಯೇ ಶನಿಗ್ರಹವು ನಿಧಾನವಾದ ಚಲನೆಯನ್ನು ಹೊಂದಿದೆ ಎಂದು ಹೇಳಲಾಗುವುದು.

ಸಂಧ್ಯಾ ಮತ್ತು ಸುವರ್ಣರ ರಹಸ್ಯ ಬಹಿರಂಗವಾಯಿತು
ಶಾಪದಿಂದ ಬೇಸರಗೊಂಡ ಶನಿಯು ತಂದೆಯ ಸಹಾಯ ಕೇಳಿದನು. ಸಂಧ್ಯಾ ತನ್ನ ಮಗನಿಗೆ ಶಾಪ ನೀಡಿರುವುದನ್ನು ತಿಳಿದ ಸೂರ್ಯದೇವನು ಸಂದೇಹಕ್ಕೆ ಒಳಗಾದನು. ತನ್ನ ಮಕ್ಕಳಿಗೆ ತಾಯಿ ಎಂದಿಗೂ ಶಪಿಸುವುದಿಲ್ಲ, ಹಾಗಾದರೆ ಈಕೆ ಯಾರು ಎನ್ನುವುದನ್ನು ತಿಳಿದುಕೊಳ್ಳಲು ಮುಂದಾದನು. ಸತ್ಯವನ್ನು ತಿಳಿಯಲು ಮುಂದಾದಾಗ ಅವಳು ಸುವರ್ಣ ಸಂಧ್ಯಾ ಅಲ್ಲ ಎನ್ನುವುದು ತಿಳಿಯಿತು.

ಇದೇ ಕಾರಣಕ್ಕೆ ಶನಿ ದೇವ ಇತರ ಗ್ರಹಗಳಂತೆ ವೇಗವಾಗಿ ಚಲನೆ ಹೊಂದಿಲ್ಲ
ನಂತರ ಸೂರ್ಯ ದೇವ ಶನಿಗೆ ಸಮಾಧಾನ ಮಾಡಿದನು. ಇತರ ಗ್ರಹಗಳಂತೆ ವೇಗವಾಗಿ ನಡೆಯಲು ಸಾಧ್ಯವಾಗದಿದ್ದರೂ ಕುಂಟಾಗುವುದಿಲ್ಲ ಎಂದು ಹೇಳಿದರು. ಅದಕ್ಕಾಗಿಯೇ ಶನಿ ದೇವ ಇತರ ಗ್ರಹಗಳಂತೆ ವೇಗವಾಗಿ ಚಲನೆ ಹೊಂದಿಲ್ಲ. ಒಂದು ರಾಶಿಚಕ್ರದಿಂದ ಇನ್ನೊಂದು ರಾಶಿಚಕ್ರಕ್ಕೆ ಚಲಿಸುವಾಗ ಸಮಯ ತೆಗೆದುಕೊಳ್ಳುವನು ಎಂದು ಹೇಳಲಾಗುವುದು. ಶನಿದೇವ ನಿಧಾನ ಗತಿಯ ಚಲನೆ ಹೊಂದಲು ಇನ್ನೊಂದು ಕಥೆಯಿದೆ ಎಂದು ಸಹ ಹೇಳಲಾಗುವುದು.

ಶನಿ ದೇವ ಮತ್ತು ರಾವಣ
ಶನಿ ದೇವನ ನಿಧಾನಗತಿಯ ಚಲನೆಯನ್ನು ಪಡೆದುಕೊಂಡ ಕಥೆಯ ಹಿಂದೆ ರಾವಣನ ಪುತ್ರ ಮೇಘನಾದನ ಜನ್ಮ ಕಥೆಯ ಸಂಬಂಧವನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು. ಎಲ್ಲಾ ಗ್ರಹಗಳ ಉಪಸ್ಥಿತಿ ಅನುಕೂಲಕರವಾಗಿರುವಾಗ ತನ್ನ ಮಗನ ಜನ್ಮವಾದರೆ ಸುದೀರ್ಘವಾದ ಬದುಕನ್ನು ತನ್ನ ಮಗ ಪಡೆದುಕೊಳ್ಳುವನು ಎಂದು ರಾವಣನು ಭಾವಿಸಿದ್ದನು.

ಶನಿ ದೇವ ಮತ್ತು ರಾವಣ
ಅಂತೆಯೇ ಎಲ್ಲಾ ಗ್ರಹಗಳ ಮನವೊಲಿಸುವಲ್ಲಿ ರಾವಣನು ಯಶಸ್ವಿಯಾದನು. ಆದರೆ ಶನಿಯ ಮನವೊಲಿಸುವುದು ಸ್ವಲ್ಪ ಕಷ್ಟದ ಕೆಲಸವಾಯಿತು. ಇದು ರಾವಣನಿಗೆ ಸ್ವಲ್ಪ ಬೇಸರವನ್ನುಂಟು ಮಾಡಿತಾದರೂ, ಅಂತ್ಯದ ವೇಳೆಗೆ ಶನಿಯನ್ನು ಒಪ್ಪಿಸಿದನು.

ಶನಿ ವ್ರಕ್ರವಾಗಿದ್ದಾಗ
ನ್ಯಾಯ ದೇವನಾದ ಶನಿಯು ನ್ಯಾಯಯುತವಾಗಿಯೇ ಇರಬೇಕೆಂದು ಭಾವಿಸಿದ್ದರಿಂದ, ರಾವಣನ ಯೋಜನೆ ಉಚಿತವಾದದ್ದಲ್ಲ ಎಂದು ಭಾವಿಸಿದನು. ದೂರದೃಷ್ಟಿಯಿಂದಾಗಿ ಶನಿಯು ತನ್ನ ವಕ್ರ ಚಲನೆಯಿಂದ ತೆರಳಿದ್ದನು. ಇದನ್ನು ತಿಳಿದ ರಾವಣನು ಕೆರಳಿದನು. ಜೊತೆಗೆ ಶನಿ ದೇವನ ಒಂದು ಕಾಲನ್ನು ಕತ್ತರಿಸಿದನು. ಇದರಿಂದ ಶನಿಯ ಚಲನೆ ನಿಧಾನವಾಯಿತು ಎನ್ನಲಾಗುವುದು.



Click it and Unblock the Notifications











