Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ವ್ಯಕ್ತಿತ್ವದ ಬಗ್ಗೆ ಬೆರಳ ಅಚ್ಚುಗಳು ಏನು ತಿಳಿಸುತ್ತವೆ?
ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಹಲವಾರು ಮಾರ್ಗಗಳಿವೆ. ಇದಕ್ಕಾಗಿ ಏನು ಮಾಡಬೇಕು ಎಂದರೆ ಆ ವ್ಯಕ್ತಿಯ ಕೆಲವು ದೈಹಿಕ ಚರ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಈ ವಿವರಗಳು ವ್ಯಕ್ತಿಯ ಇನ್ನೊಂದು ಮುಖವನ್ನು ಪರಿಚಯಿಸುತ್ತವೆ. ಇಂದಿನ ಲೇಖನದಲ್ಲಿ, ವ್ಯಕ್ತಿಗಳ ವಿವಿಧ ಬೆರಳಚ್ಚುಗಳ ಮೂಲಕ ಆ ವ್ಯಕ್ತಿಗಳ ಬಗ್ಗೆ ಕೆಲವು ಮಾಹಿತಿಗಳನ್ನು ಪಡೆಯುವುದು ಹೇಗೆ ಎಂಬುದನ್ನು ವಿವರಿಸಲಿದ್ದೇವೆ.
ಬೆರಳಚ್ಚು ವಿಜ್ಞಾನದ ಪ್ರಕಾರ ಬೆರಳಚ್ಚುಗಳು ಪ್ರಮುಖವಾಗಿ ಮೂರು ಬಗೆಯದ್ದಾಗಿರುತವೆ ಹಾಗೂ ಇವುಗಳಲ್ಲಿ ಕಂಡುಬರುವ ವೈಪರೀತ್ಯಗಳೇ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತವೆ. ಆದರೆ ನೀವು ಈ ವಿವರಗಳನ್ನು ಅವಲೋಕಿಸುವ ಮುನ್ನ ನಿಮ್ಮದೇ ಬೆರಳಚ್ಚುಗಳನ್ನು ಮೊದಲಾಗಿ ಪರಿಶೀಲಿಸಿಕೊಂಡು ಇವುಗಳಲ್ಲಿ ಯಾವುದು ನಿಮಗೆ ಅನ್ವಯಿಸುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

ಚಕ್ರಾಕಾರದ ಬೆರಳಚ್ಚುಗಳು
ನಿಮ್ಮ ಬೆರಳ ತುದಿಯ ಅಚ್ಚುಗಳು ಮೊಟ್ಟೆಯಾಕಾರ ಅಥವಾ ವೃತ್ತಾಕಾರವಾಗಿದ್ದರೆ ನೀವು ವಿಶಾಲ ಮನೋಭಾವ ಹೊಂದಿರುವ ವ್ಯಕ್ತಿಯಾಗಿದ್ದೀರಿ ಎಂದು ತಿಳಿದುಕೊಳ್ಳಬಹುದು. ಈ ವ್ಯಕ್ತಿಗಳನ್ನು ಆಶಾವಾದಿಗಳು ಅಥವಾ 'sanguine' ಎಂದು ಕರೆಯಲಾಗುತ್ತದೆ. ಈ ಬೆರಳಚ್ಚು ಹೊಂದಿದ ವ್ಯಕ್ತಿಗಳು ಸಾಮಾನ್ಯವಾಗಿ ತಣ್ಣನೆಯ ಮನೋಭಾವದವರಾಗಿದ್ದು ಸಮತೋಲನದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೂ ಇವರು ಇತರರ ಬಗ್ಗೆ ಮೃದು ಧೋರಣೆಯನ್ನು ಹೊಂದಿರುತ್ತಾರೆ. ಇವರು ಎಲ್ಲರನ್ನೂ ಒಳ್ಳೆಯ ಮನೋಭಾವದಿಂದ ಕಾಣುವ ಹಾಗೂ ಎಲ್ಲರನ್ನೂ ಆಹ್ವಾನಿಸುವ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಸುಲಭವಾಗಿ ಸ್ನೇಹವನ್ನು ಸಂಪಾದಿಸಬಲ್ಲವರು ಹಾಗೂ ಇದೇ ಕಾರಣದಿಂದ ಹೆಚ್ಚು ಹೆಚ್ಚು ಜನರು ಈ ವ್ಯಕ್ತಿಗಳ ಕಡೆಗೆ ಆಕರ್ಷಿತರಾಗುತ್ತಾರೆ.

ಸುಳಿಯಂತಿರುವ ಬೆರಳಚ್ಚುಗಳು
ಒಂದು ವೇಳೆ ನಿಮ್ಮ ಬೆರಳಚ್ಚುಗಳು ಸುಳಿಯಾಕಾರದಲ್ಲಿದ್ದರೆ ನೀವು ಇನ್ನೂ ವಿಶಾಲ ಮನೋಭಾವ ಹಾಗೂ ಯಾವುದೇ ಸಂದರ್ಭದಲ್ಲಿ ತಣ್ಣಗೇ ಇರುವ (phlegmatic) ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂದು ತಿಳಿದುಕೊಳ್ಳಬಹುದು. ಆದರೆ ಈ ವಿವರಗಳನ್ನು ಅರಿಯದ ಇತರ ವ್ಯಕ್ತಿಗಳು ನಿಮ್ಮನ್ನು ಮುಂಗೋಪಿಗಳು ಹಾಗೂ ಉದ್ವಿಗ್ನ ಮನೋಭಾವವುಳ್ಳವರೆಂದು ಪರಿಗಣಿಸಬಹುದು. ಇನ್ನೊಂದು ಮಗ್ಗುಲಲ್ಲಿ, ನಿಮ್ಮ ಒಳ್ಳೆಯತನವನ್ನು ಈ ವಿವರಗಳು ಪ್ರಕಟಿಸುತ್ತವೆ. ಅಲ್ಲದೇ ಹಿಂದೆ ಆದ ವೈಮನಸ್ಯಗಳನ್ನು ನೆನಪಿನಲ್ಲಿಟ್ಟು ಸೇಡು ತೀರಿಸಿಕೊಳ್ಳುವ ಮನೋಭಾವ ನಿಮ್ಮಲ್ಲಿರುವುದಿಲ್ಲ. ಆದರೆ ನಿಮ್ಮ ಹೃದಯದ ಮಾತುಗಳನ್ನು ನೇರವಾಗಿ ನೀವು ಇನ್ನೊಬ್ಬರಲ್ಲಿ ಹೇಳಿಕೊಳ್ಳುವುದು ಹಾಗೂ ಇನ್ನೊಬ್ಬರ ಬಗ್ಗೆ ಹಿಂದಿನಿಂದ ಹೀಯಾಳಿಸುವುದನ್ನು ಇಷ್ಟಪಡದ ವ್ಯಕ್ತಿಯೂ ಆಗಿದ್ದೀರಿ.

ಕಮಾನಿನಾಕೃತಿಯ ರೇಖೆಗಳು
ಒಂದು ವೇಳೆ ಈ ಅಚ್ಚುಗಳು ವೃತ್ತಾಕಾರದಲ್ಲಿರದೇ, ಕೇವಲ ಕಮಾನುಗಳಂತಿದ್ದರೆ ನೀವು ಶೀಘ್ರವೇ ಕೋಪಗೊಳ್ಳುವ ವ್ಯಕ್ತಿತ್ವದವರು ಎಂದು ತಿಳಿದುಕೊಳ್ಳಬಹುದು. ಈ ವ್ಯಕ್ತಿಗಳು ಹೆಚ್ಚು ಆತ್ಮವಿಶ್ವಾಸವುಳ್ಳವರು ಹಾಗೂ ಹೆಚ್ಚಿನ ಚೈತನ್ಯಶೀಲರಾಗಿರುತ್ತಾರೆ. ಆದರೆ ಈ ಅಚ್ಚುಗಳನ್ನು ನೀವು ಹೊಂದಿದ್ದರೆ ನೀವು ಹಠಮಾರಿಗಳೂ ನಿಮ್ಮದೇ ವಾದಕ್ಕೆ ಕಟ್ಟುಬೀಳುವವರೂ ಹಾಗೂ ಮೊಂಡುವಾದದ ವ್ಯಕ್ತಿಗಳೂ ಆಗಿರುವ ಸಾಧ್ಯತೆ ಹೆಚ್ಚು. ಆದರೆ ನೀವು ನಂಬಿರುವ ವ್ಯಕ್ತಿಗಳನ್ನು ನಿಮಗೆಷ್ಟು ಕಷ್ಟ ಎದುರಾದರೂ ಸರಿ, ಅವರನ್ನು ನೀವು ನಡುನೀರಿನಲ್ಲಿ ಕೈಬಿಡದೇ ನೆರವು ನೀಡುವ ವ್ಯಕ್ತಿಯೂ ಆಗಿದ್ದೀರಿ.ಇದಕ್ಕೂ ಹೊರತಾಗಿ ಇನ್ನೂ ಕೆಲವು ವಿಧದ ಬೆರಳಚ್ಚುಗಳಿವೆ. ಬನ್ನಿ, ನಿಮ್ಮ ಬೆರಳಚ್ಚು ಈ ಬಗೆಯವೇ ಎಂದು ಪರಿಶೀಲಿಸಿ:

ಎಡ ಶಂಖಾಕೃತಿಯ ಅಚ್ಚು (The Ulnar Loop)
ಒಂದು ವೇಳೆ ನಿಮ್ಮ ಬೆರಳಚ್ಚುಗಳು ಶಂಖಾಕೃತಿ ಹೊಂದಿದ್ದರೆ, ಈ ವೃತ್ತಗಳಲ್ಲಿ ಹಲವಾರು ಪರಿವರ್ತನೆಯನ್ನು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಶಂಖಾಕೃತಿಯ ಕೇಂದ್ರ ಬೆರಳ ತುದಿಭಾಗದ ನಡುವಿನಲ್ಲಿದ್ದು ಸುತ್ತುವರೆದಿರುವ ಅಚ್ಚುಗಳು ಕಿರುಬೆರಳಿನತ್ತ ಜಲಪಾತದ ರೂಪದಲ್ಲಿ ಧಾವಿಸುತ್ತಿದ್ದಂತೆ ತೋರುತ್ತದೆ. ಈ ಪ್ರಕಾರದ ಅಚ್ಚುಗಳು ನಿಮ್ಮದಾಗಿದ್ದರೆ, ನೀವು ಒಳ್ಳೆಯ ಮನೋಭಾವದವರು ಹಾಗೂ ನಿಮ್ಮದೇ ವೇಳಾಪಟ್ಟಿಗೆ ಬದ್ದರಾದ ವ್ಯಕ್ತಿಗಳು ಎಂದು ತಿಳಿದುಕೊಳ್ಳಬಹುದು. ಇದರ ಹೊರತಾಗಿ, ನೀವು ಜಗತ್ತಿನ ಸೂಕ್ಷ್ಮ ವಿಷಯಗಳನ್ನು ಗಮನಿಸುವ ಪ್ರವೃತ್ತಿಯುಳ್ಳವರಾಗಿದ್ದು ಇದು ಶ್ಲಾಘನೀಯವೂ ಆಗಿದೆ. ಎಲ್ಲರೊಂದಿಗೆ ಸುಲಭವಾಗಿ ಬೆರೆತುಕೊಳ್ಳುವ ಮೂಲಕ ನಿಮಗೆ ಅತ್ಯುತ್ತಮವಾದುದೇ ಲಭಿಸುತ್ತದೆ. ಇದರ ಹೊರತಾಗಿ, ನೀವು ಈ ಕ್ಷಣದಲ್ಲಿ ಜೀವಿಸುವ ವ್ಯಕ್ತಿಯಾಗಿದ್ದು ಆ ಕ್ಷಣವನ್ನು ಪ್ರಜ್ವಲಿಸುವ ವ್ಯಕ್ತಿಯಾಗಿ ಎಲ್ಲರ ಮನಗೆಲ್ಲುತ್ತೀರಿ.

ಬಲ ಶಂಖಾಕೃತಿಯ ಅಚ್ಚು (The Radial Loop)
ಒಂದು ವೇಳೆ ನಿಮ್ಮ ಬೆರಳಚ್ಚು ಶಂಕಾಕೃತಿ ಹೊಂದಿದ್ದು ಕೇಂದ್ರವನ್ನು ಸುತ್ತುವರೆದಿರುವ ಅಚ್ಚುಗಳು ಹೆಬ್ಬೆರಳಿನತ್ತ ಧಾವಿಸುತ್ತಿದ್ದತೆ ತೋರುತ್ತಿದ್ದರೆ ನೀವು ಏಕಾಂತವನ್ನು ಅತಿ ಹೆಚ್ಚಾಗಿ ಇಷ್ಟಪಡುವ ಹಾಗೂ ನಿಮ್ಮ ಅನುಕೂಲಕ್ಕಾಗಿ ಏನನ್ನೂ ಮಾಡಲು ಹಿಂಜರಿಯದ ವ್ಯಕ್ತಿತ್ವವನ್ನು ಪ್ರಕಟಿಸುತ್ತದೆ. ಸಾಮಾನ್ಯವಾಗಿ ಈ ವ್ಯಕ್ತಿಗಳು ಇತರರು ಧಾವಿಸುವ ಧಾರೆಗೆ ವಿರುದ್ದವಾಗಿ ತಮ್ಮದೇ ಮಾರ್ಗದಲ್ಲಿ ಧಾವಿಸುವ ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೂ ಇವರು ಪ್ರತಿ ವಿಷಯಗಳನ್ನೂ ಪ್ರಶ್ನಿಸಿ ಕೊಂಕು ತೆಗೆಯುವ ವ್ಯಕ್ತಿಗಳೂ ಆಗಿರುತ್ತಾರೆ.



Click it and Unblock the Notifications











