Latest Updates
-
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ!
ರಾಶಿ ಭವಿಷ್ಯ: ನಿಮ್ಮ ಆತ್ಮ ಸಂಗಾತಿಯ ಪರಿಚಯ ಹೀಗೂ ಆಗುವುದು...
ಸಂಗಾತಿ ಎಂದರೆ ಜೀವನ ಪರ್ಯಂತ ನಮ್ಮೊಂದಿಗೆ ಇರುವವರು ಎಂದರ್ಥವನ್ನು ನೀಡುತ್ತದೆ. ವಿವಾಹ ಎನ್ನುವ ಬಂಧನದ ಮೂಲಕ ಸಂಗಾತಿಯನ್ನು ಆತ್ಮ ಸಂಗಾತಿಯನ್ನಾಗಿ ಮಾಡಿಕೊಳ್ಳುವುದು ಒಂದು ಪರಿ. ಜೀವನದ ಎಲ್ಲಾ ಸುಖ-ದುಃಖಗಳಿಗೆ ಪಾಲುದಾರರಾಗಿ ಜೊತೆ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಾರೆ. ಇದರಿಂದ ಪರಸ್ಪರ ನಮಗಾಗಿ ಒಂದು ಜೀವ ಇದೆ ಎನ್ನುವ ಭರವಸೆ, ಪ್ರೀತಿ ವಾತ್ಸಲ್ಯ ಹೆಚ್ಚುವುದು. ಅಲ್ಲದೆ ಜೀವನದಲ್ಲಿ ಉತ್ತಮ ಭರವಸೆಗಳೊಂದಿಗೆ ಕೆಲಸ ನಿರ್ವಹಿಸಲು ಹಾಗೂ ಜವಾಬ್ದಾರಿ ಕೆಲಸಗಳನ್ನು ಕೈಗೊಳ್ಳಲು ಸಹ ಸಹಾಯವಾಗುವುದು.
ಪ್ರತಿಯೊಂದು ರಾಶಿಚಕ್ರದವರು ಸಹ ತಮ್ಮ ಜೀವನದ ಪರಿಪೂರ್ಣತೆಯನ್ನು ಕಾಣಲು ಆತ್ಮ ಸಂಗಾತಿಯನ್ನು ಹುಡುಕುತ್ತಾರೆ. ಕೆಲವರಿಗೆ ಗ್ರಹಗತಿಗಳ ಅನುಕೂಲಕರ ಪರಿಸ್ಥಿತಿಯಿಂದ ಬಹುಬೇಗ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ಅದೇ ರೀತಿ ಗ್ರಹಗತಿಗಳ ಸಹಕಾರ ಇಲ್ಲದಿರುವ ಕಾರಣದಿಂದ ಸಂಗಾತಿಯ ಹುಡುಕಾಟವನ್ನು ಮುಂದುವರಿಸುತ್ತಲೇ ಇರುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಅನುಸಾರ ನೀವು ಯಾವ ಪರಿಯಲ್ಲಿ ಆತ್ಮ ಸಂಗಾತಿಯನ್ನು ಹುಡುಕುವಿರಿ? ಅವರ ಭೇಟಿ ಹೇಗೆ ಸಂಭವಿಸುವುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ನೋಡಿ...

ಮೇಷ
ಈ ರಾಶಿಯವರು ಅತ್ಯುತ್ತಮ ಸಕ್ರಿಯತೆಯನ್ನು ಹೊಂದಿರುವ ಚಿಹ್ನೆಯವರು ಎಂದು ಹೇಳಬಹುದು. ಇವರು ತಮ್ಮ ಸಕ್ರಿಯ ಜೀವನದ ಮಧ್ಯಭಾಗದಲ್ಲಿ ಆತ್ಮ ಸಂಗಾತಿಯನ್ನು ಕಂಡುಕೊಳ್ಳುವರು. ಇವರು ತಮ್ಮ ದೊಡ್ಡ ಗುರಿ ಮತ್ತು ಕನಸನ್ನು ನೆರವೇರಿಸಿಕೊಳ್ಳಲು ಸದಾ ಕಾರ್ಯನಿರತರಾಗಿರುತ್ತಾರೆ. ಇವರು ಗುರಿಯನ್ನು ಸಾಧಿಸುವ ಹಂಬಲದಲ್ಲಿ ಇರುವುದರಿಂದ ಸಂಬಂಧವನ್ನು ಮುಂದುವರಿಸಲು ಇವರಿಗೆ ಕಷ್ಟಸಾಧ್ಯವಾಗುವುದು. ಇವರು ಒಂದೇ ಗುಣಲಕ್ಷಣ ಹಾಗೂ ಮೌಲ್ಯವನ್ನು ಹೊಂದಿದ್ದೀರಿ ಎನ್ನುವುದನ್ನು ನಿಮ್ಮ ನಕ್ಷತ್ರವು ಬಹಿರಂಗಪಡಿಸುವುದು.

ವೃಷಭ
ಈ ರಾಶಿಯವರು ತಮ್ಮ ಆತ್ಮ ಸಂಗಾತಿಯನ್ನು ಶಾಪಿಂಗ್ ಮಳಿಗೆಗಳಲ್ಲಿ ಭೇಟಿಯಾಗುವ ಸಾಧ್ಯತೆಗಳಿರುತ್ತವೆ. ಈ ರಾಶಿಯವರು ಆಡಂಬರ ತೋರಿಸುವಲ್ಲಿ ಅಳತೆ ಮೀರಿದ ವರ್ತನೆಯನ್ನು ತೋರುವಿರಿ. ನೀವು ಇನ್ನೊಮ್ಮೆ ಶಾಪಿಂಗ್‍ಗೆ ತೆರಳಿದಾಗ ನಿಮ್ಮ ಸುತ್ತಲಲ್ಲೇ ನಿಮ್ಮ ಆತ್ಮ ಸಂಗಾತಿಯ ಭೇಟಿಯಾಗುವ ಸಾಧ್ಯತೆಗಳಿವೆ.

ಮಿಥುನ
ಈ ರಾಶಿಯವರು ಪರಸ್ಪರ ಸ್ನೇಹಿತರ ನಡುವೆಯೇ ಆತ್ಮಸಂಗಾತಿಯನ್ನು ಕಂಡುಕೊಳ್ಳುವ ಸಾಧ್ಯತೆಗಳಿರುತ್ತವೆ. ಸಕ್ರಿಯವಾದ ಸಾಮಾಜಿಕ ವಲಯವನ್ನು ಹೊಂದಿರುವ ನಿಮಗೆ ದೊಡ್ಡ ಅವಕಾಶಗಳು ದೊರೆಯುತ್ತವೆ. ನೀವು ಸೀಮಿತ ವ್ಯಕ್ತಿಗಳೊಂದಿಗೆ ಸ್ನೇಹಿತರಾಗಲು ಬಯಸಿದರೆ ನಿಮ್ಮ ಪ್ರೀತಿಪಾತ್ರರನ್ನು ಅಥವಾ ಆತ್ಮಸಂಗಾತಿಯನ್ನು ಬಹುಬೇಗ ಭೇಟಿ ಮಾಡುವ ಸಾಧ್ಯತೆಗಳಿರುತ್ತವೆ.

ಕರ್ಕ
ಈ ವ್ಯಕ್ತಿಗಳು ಹೆಚ್ಚು ಮನೆಯೊಳಗೆ ಇರಲು ಬಯಸುತ್ತಾರೆ. ಇವರು ತಮ್ಮ ಕುಟುಂಬವನ್ನು ಹೆಚ್ಚು ಇಷ್ಟಪಡುತ್ತಾರೆ. ಕುಟುಂಬದ ಸಮಾರಂಭಗಳಲ್ಲಿ ಅಥವಾ ಕೆಲವು ಕಾರ್ಯಕ್ರಮಗಳಲ್ಲಿ ನಿಮ್ಮ ಆತ್ಮ ಸಂಗಾತಿಯನ್ನು ನೀವು ಕಂಡುಕೊಳ್ಳುವ ಸಾಧ್ಯತೆಗಳಿವೆ.

ಸಿಂಹ
ಈ ರಾಶಿಯವರು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುತ್ತಾರೆ. ಇವರು ಕೆಲವು ತಂತ್ರಜ್ಞಾನಗಳ ಮೂಲಕ ತಮ್ಮ ಆತ್ಮ ಸಂಗಾತಿಯನ್ನು ಭೇಟಿ ಮಾಡುತ್ತಾರೆ. ಇವರಿಗೆ ವಿಶಾಲವಾದ ಸಾಮಾಜಿಕ ವ್ಯವಸ್ಥೆಯ ಪರಿಚಯ ಇರುವುದರಿಂದ ಆತ್ಮ ಸಂಗಾತಿಯನ್ನು ಹುಡುಕುವುದು ಕಷ್ಟವಾಗದು.

ಕನ್ಯಾ
ಈ ರಾಶಿಯವರು ವೃತ್ತಿ ಜೀವನದ ಬಗ್ಗೆ ಹೆಚ್ಚು ಒತ್ತು ಹಾಗೂ ಸಮಯವನ್ನು ನೀಡುತ್ತಾರೆ. ಇವರು ಪ್ರಾಯೋಗಿಕವಾಗಿ ಚಿಂತನೆ ನಡೆಸುವ ಅಗತ್ಯವಿರುತ್ತದೆ. ಇವರ ಆತ್ಮ ಸಂಗಾತಿಯೂ ಇವರ ಹತ್ತಿರದಲ್ಲಿಯೇ ಇರುತ್ತಾರೆ. ಇವರು ತಮ್ಮ ಜಗತ್ತಿನಾಚೆ ಕಣ್ತೆರೆದು ನೋಡಿದಾಗ ಸಂಗಾತಿಯ ಭೇಟಿಯಾಗುವುದು.

ತುಲಾ
ಈ ವ್ಯಕ್ತಿಗಳು ಉತ್ತಮ ಹವ್ಯಾಸವನ್ನು ಹೊಂದಿರುತ್ತಾರೆ. ಇವರ ಹವ್ಯಾಸದ ಮೂಲಕವೇ ಆತ್ಮಸಂಗಾತಿಯ ಭೇಟಿಯಾಗುವುದು ಎಂದು ಇವರ ನಕ್ಷತ್ರ ಹೇಳುತ್ತದೆ. ಮ್ಯಾರಥಾನ್ ಚಾಲನೆ ಮಾಡುವಾಗ ಅಥವಾ ನಿಮ್ಮ ಭಾವೋದ್ರೇಕ ತುಂಬಿದ ಚಟುವಟಿಕೆಗಳನ್ನು ನೀವು ಮಾಡುತ್ತಿರುವಾಗ ಆತ್ಮ ಸಂಗಾತಿಯನ್ನು ಭೇಟಿಯಾಗುವ ಸಾಧ್ಯತೆಗಳಿರುತ್ತವೆ.

ವೃಶ್ಚಿಕ
ಈ ರಾಶಿಯವರು ಅತ್ಯಂತ ಭಾವೋದ್ರಿಕ್ತ ವ್ಯಕ್ತಿಗಳಾಗಿರುತ್ತಾರೆ. ಏನಾದರೂ ಸಾಧಿಸಬೇಕು ಎಂದಾಗ ಬಹಳ ಕಷ್ಟಪಟ್ಟು ಹೋರಾಡುತ್ತಾರೆ. ನಿಮ್ಮ ಪಾಲುದಾರರು ಕೆಲಸವನ್ನು ನೋಡಿ ಬರುವ ಸಾಧ್ಯತೆಗಳಿವೆ. ನಿಮ್ಮ ಗುರಿ ಸಾಧನೆಗೆ ನೀವು ಹೊಂದಿರುವ ಭಾವೋದ್ರೇಕವನ್ನು ನಿಮ್ಮ ಆತ್ಮ ಸಂಗಾತಿ ನೋಡಿದಾಗ ನಿಮ್ಮೆಡೆಗೆ ಸಂಪೂರ್ಣವಾಗಿ ಆಕರ್ಷಿತರಾಗುತ್ತಾರೆ.

ಧನು
ಈ ರಾಶಿಯವರು ಅತ್ಯಂತ ಸಾಹಸಮಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಸಾಹಸ ಕಾರ್ಯಗಳಲ್ಲಿ ಸದಾ ತೊಡಗಿಕೊಳ್ಳುವುದನ್ನು ಕಾಣಬಹುದು. ಇವರ ಆತ್ಮ ಸಂಗಾತಿಯೂ ಜಗತ್ತಿನ ಪ್ರಯಾಣ ಮಾಡುವಾಗ ಭೇಟಿಯಾಗುವ ಸಾಧ್ಯತೆಗಳಿವೆ. ಒಂದೇ ಸ್ಥಳದಲ್ಲಿ ನೀವು ಉಳಿದುಕೊಳ್ಳಲು ಬಯಸಬಾರದು.

ಮಕರ
ನಿಮ್ಮ ಕೆಲಸದಲ್ಲಿ ನೀವು ಮುಳುಗಿಕೊಳ್ಳಲು ಬಯಸುತ್ತೀರಿ. ನಿಮ್ಮ ಮಹತ್ವಾಕಾಂಕ್ಷೆಯ ಕನಸು ನನಸಾಗಲು ಅನೇಕ ಶ್ರಮವನ್ನು ವಹಿಸುವಿರಿ. ಈ ನಡುವೆ ನಿಮ್ಮ ಪ್ರಣಯದ ಜೀವನವನ್ನು ನೀವು ನಿರ್ಲಕ್ಷಿಸುವ ಸಾಧ್ಯತೆಗಳಿವೆ. ನೀವು ಸ್ವಲ್ಪ ವಿಶ್ರಾಂತಿಯನ್ನು ಪಡೆಯಬೇಕಾಗುವುದು. ಆಗ ನಿಮ್ಮ ಆತ್ಮಸಂಗಾತಿಯ ಭೇಟಿಯಾಗುವುದು.

ಕುಂಭ
ಈ ರಾಶಿಯವರು ಕೆಲವು ಬೌದ್ಧಿಕ ಅನ್ವೇಷಣೆಯ ಮೂಲಕ ತಮ್ಮ ಆತ್ಮಸಂಗಾತಿಯನ್ನು ಭೇಟಿಯಾಗುವರು. ಅದು ನಿಮ್ಮ ತರಗತಿಯಲ್ಲಿ ಅಥವಾ ಕಾಫಿ ಅಂಗಡಿಯಲ್ಲಿ ಆಗಬಹುದು. ಈ ತಾಣಗಳು ಸಂಗಾತಿಯನ್ನು ಪಡೆಯಲು ಅತ್ಯುತ್ತಮ ಸ್ಥಳವಾಗಿದೆ. ಅನೇಕ ಪ್ರೇಮ ಕಥೆಗಳು ಇಲ್ಲಿಂದಲೇ ಪ್ರಾರಂಭವಾಗುತ್ತವೆ ಎಂದು ಹೇಳಬಹುದು.

ಮೀನ
ಈ ರಾಶಿಯವರು ತಮ್ಮ ಆತ್ಮ ಸಂಗಾತಿಯನ್ನು ಕಲೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭೇಟಿಯಾಗಬಹುದು ಎಂದು ಹೇಳಲಾಗುತ್ತದೆ. ಏಕೆಂದರೆ ಇವರು ಕಲೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ. ನಿಮ್ಮ ಸೂಕ್ಷ್ಮ ಭಾವನಾತ್ಮಕ ಭಾವನೆಯು ನಿಮ್ಮನ್ನು ಎಲ್ಲೆಡೆ ಸಂಚರಿಸುವಂತೆ ಮಾಡುವುದು. ಜೊತೆಗೆ ಸಂಗಾತಿಯ ಪರಿಚಯ ಮಾಡಿಸುವುದು.



Click it and Unblock the Notifications