ಅಚ್ಚರಿಯ ಲೋಕ: ನೂರೈವತ್ತು ವರ್ಷಗಳ ಬಳಿಕ ಕಾಣಿಸುವ 'ನೀಲಿ ಚಂದ್ರ'!

Posted By: Arshad Hussain
Subscribe to Boldsky

ಈ ವರ್ಷದ ಹುತಾತ್ಮಾ ದಿನ, ಜನವರಿ 31, 2018 ರಂದೇ ಅತ್ಯಪರೂಪಕ್ಕೊಮ್ಮೆ ಜರುಗುವ ಖಗೋಳ ವಿದ್ಯಮಾನವೊಂದು ನಡೆಯುತ್ತಿದೆ. ಇದು ಸುಮಾರು ನೂರೈವತ್ತು ವರ್ಷಗಳ ಬಳಿಕ ಬರುವ ನೀಲಿಚಂದ್ರ ಅಥವಾ ಬ್ಲೂ ಮೂನ್ ಆಗಿದೆ. ಅಂದರೆ ಒಂದು ಕ್ಯಾಲೆಂಡರ್ ತಿಂಗಳಲ್ಲಿ ಎರಡು ಬಾರಿ ಕಾಣಬರುವ ಬ್ಲೂಮೂನ್ ಹಾಗೂ ಇದೇ ಚಂದ್ರಕ್ಕೆ ಗ್ರಹಣವೂ ಹಿಡಿಯಲಿದೆ.

ಹೀಗೆ ಎರಡೂ ವಿದ್ಯಮಾನಗಳು ಒಂದೇ ಬಾರಿ ಸಂಭವಿಸುವ ಸಾಧ್ಯತೆ ಎಷ್ಟೋ ಲಕ್ಷಕ್ಕೊಂದು ಮಾತ್ರವೇ ಇರುವ ಕಾರಣ ಈ ಚಂದ್ರಗ್ರಹಣವನ್ನು ವೀಕ್ಷಿಸುವುದು ಜೀವಮಾನದಲ್ಲೊಂದು ಮಾತ್ರವೇ ಬಾರಿ ಬರುವ ಅವಕಾಶವಾಗಿದೆ. ಆದರೆ ಈ ಸಂದರ್ಭದಲ್ಲಿ ಪಸರಿಸುವ ಅಲೆಗಳು ನಮ್ಮ ಮೇಲೆ ಭಾವನಾತ್ಮಕ ಪರಿಣಾಮ ಬೀರುವ ಮೂಲಕ ಹೆಚ್ಚಿನವರ ನಿದ್ದೆಯ ಸಮಯವನ್ನು ಬಾಧಿಸಲಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ... 

ಈ ಬಗ್ಗೆ ವೈಜ್ಞಾನಿಕ ಆಧಾರಗಳು

ಈ ಬಗ್ಗೆ ವೈಜ್ಞಾನಿಕ ಆಧಾರಗಳು

ಈ ಬಗ್ಗೆ ಪ್ರಕಟವಾಗಿರುವ ಹಲವಾರು ವರದಿಗಳ ಪ್ರಕಾರ ಈ ಚಂದ್ರಗ್ರಹಣದ ಪ್ರಭಾವ ಭೂಮಿಯ ಮೇಲಿರುವ ಎಲ್ಲಾ ಜೀವಿಗಳ ಮೇಲೆ ಭಾವನಾತ್ಮಕ ಪ್ರಭಾವ ಬೀರಲಿದೆ. ಈ ಜೀವಿಗಳಲ್ಲಿ ಮನುಷ್ಯರ ಸಹಿತ ಪಕ್ಷಿಗಳು, ಸಾಗರದಲ್ಲಿರುವ ಮೀನು ಮತ್ತಿರತ ಜಲ಼ಚರಗಳು ಹಾಗೂ ಪ್ರಾಣಿಗಳೂ ಸೇರಿವೆ.

 ನಿದ್ದೆಯ ಪ್ರಭಾವವನ್ನು ಅರಿಯಲು ಒಂದು ಅಧ್ಯಯನವನ್ನೂ ನಡೆಸಲಾಗಿದೆ

ನಿದ್ದೆಯ ಪ್ರಭಾವವನ್ನು ಅರಿಯಲು ಒಂದು ಅಧ್ಯಯನವನ್ನೂ ನಡೆಸಲಾಗಿದೆ

ಈ ಬಗ್ಗೆ ಆಳವಾದ ಅಧ್ಯಯನವನ್ನು ಈಗಾಗಲೇ ನಡೆಸಲಾಗಿದ್ದು ಇಂದಿನ ದಿನದಲ್ಲಿ ಪ್ರಾಣಿಪಕ್ಷಿಗಳ ನಿದ್ದೆ ಹೇಗೆ ಬಾಧಿತವಾಗುತ್ತದೆ ಎಂಬುದನ್ನು ಕಂಡುಕೊಳ್ಳಲು ಸೂಕ್ತ ತಯಾರಿಗಳನ್ನು ನಡೆಸಲಾಗಿದೆ. ಸಂಶೋಧಕರು ಹಿಂದಿನ ಹುಣ್ಣಿಮೆಗಳಲ್ಲಿ ನಿದ್ದೆಯ ಸ್ವಭಾವವನ್ನು ದಾಖಲಿಸಿದ್ದು ಈ ಹುಣ್ಣಿಮೆಯಲ್ಲಿ ನಿದ್ದೆ ಹೇಗಿರುತ್ತದೆ ಎಂಬುದನ್ನು ಪರಿಶೀಲಿಸಿ ಹೋಲಿಸುವ ಮೂಲಕ ಗ್ರಹಣದ ಪ್ರಭಾವವನ್ನು ಕಂಡುಕೊಳ್ಳಲಿದ್ದಾರೆ.

ಈ ಬದಲಾವಣೆಗಳು ಹೀಗಿರಲಿವೆ

ಈ ಬದಲಾವಣೆಗಳು ಹೀಗಿರಲಿವೆ

ಹಿಂದಿನ ಪ್ರಯೋಗಗಳಲ್ಲಿ ಸ್ವಯಂಪ್ರೇರಿತರಾಗಿ ಬಂದವರ ನಿದ್ದೆಯ ಸ್ವಭಾವಗಳನ್ನು ಪರಿಶೀಲಿಸಿದಾಗ ಆಗಿರುವ ಬದಲಾವಣೆಗಳಲ್ಲಿ ಪ್ರಮುಖವಾಗಿ ನಿದ್ದೆಯ ಒಟ್ಟು ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. ಹೆಚ್ಚಿನವರು ತಮ್ಮ ಇತರ ದಿನಗಳಲ್ಲಿ ಮಾಡುವ ನಿದ್ದೆಗಿಂತ ಇಪ್ಪತ್ತು ನಿಮಿಷ ಕಡಿಮೆ ನಿದ್ದೆ ಮಾಡಿದ್ದಾರೆ.

ತಡವಾಗಿ ಆವರಿಸಿದ ನಿದ್ದೆ

ತಡವಾಗಿ ಆವರಿಸಿದ ನಿದ್ದೆ

ಹೆಚ್ಚಿನವರಲ್ಲಿ ಸಾಮಾನ್ಯವಾಗಿ ನಿದ್ದೆ ಆವರಿಸುವುದಕ್ಕಿಂತಲೂ ತಡವಾಗಿ ನಿದ್ದೆ ಆವರಿಸಿದೆ. ಉಳಿದ ದಿನಗಳಲ್ಲಿ ನಿದ್ದೆಹೋಗಲು ಪಡೆಯುವ ಸಮಯಕ್ಕಿಂತಲೂ ಹುಣ್ಣಿಮೆಯ ದಿನ ಐದು ನಿಮಿಷವಾದರೂ ತಡವಾಗಿ ನಿದ್ದೆಗೆ ಜಾರಿದ್ದಾರೆ.

 ನಿದ್ದೆಯ ಸಮಯದಲ್ಲಿ ಕಂಡುಬಂದ ಬದಲಾವಣೆ

ನಿದ್ದೆಯ ಸಮಯದಲ್ಲಿ ಕಂಡುಬಂದ ಬದಲಾವಣೆ

ಹುಣ್ಣಿಮೆಯ ದಿನದಲ್ಲಿ ಹೆಚ್ಚಿನವರಲ್ಲಿ ನಿದ್ದೆಯ ಸಮಯದಲ್ಲಿಯೂ ಕೆಲವು ಬದಲಾವಣೆಗಳು ಕಂಡುಬಂದಿವೆ. ಮೊದಲ ಹಂತಹ ನಿದ್ದೆ (slow wave sleep) ನಲ್ಲಿ ಕಡಿಮೆ ಸಮಯ ಕಳೆದಿದ್ದಾರೆ ಹಾಗೂ ಕಣ್ಣುಗುಡ್ಡೆ ಮಿಸುಕಾಡುವ ಹಂತ (REM-random eye movement) ಎಂಬ ಗಾಢನಿದ್ದೆಯಲ್ಲಿ ಕನಸನ್ನು ನೋಡುತ್ತಿರುವ ಹಂತವನ್ನು ತಡವಾಗಿ ತಲುಪಿದ್ದಾರೆ.

English summary

This Is How The Super Blue Moon Will Disrupt Your Sleep

With Jan 31st, 2018, approaching, the curiosity about this day is constantly increasing among people. There are so many things that people wish to know about this special super blue blood moon day. Here are some of the facts that you need to know about on how your sleeping pattern would get disturbed on this day.On this day, the sleep pattern of most of the individuals would get affected. Our mood swings and even our sleeping pattern will get affected on this day.So, continue reading to know more on this.