Latest Updates
-
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ!
ಅಚ್ಚರಿ ಜಗತ್ತು: ಸಾವಿನ ನಂತರ ಮನುಷ್ಯನ ಆತ್ಮ ಏನಾಗುತ್ತದೆ?

ದೇಹ ಹಾಗೂ ಆತ್ಮ ಎರಡೂ ಒಂದನ್ನೊಂದು ಹೊಂದಿಕೊಂಡಿದೆ. ಆತ್ಮವಿಲ್ಲದ ದೇಹವಿಲ್ಲ, ದೇಹವಿಲ್ಲದೆ ಆತ್ಮವಿಲ್ಲವೆನ್ನಬಹುದು. ಆತ್ಮವನ್ನು ನೋಡಿದವರು ಯಾರೂ ಇಲ್ಲದಿದ್ದರೂ ದೇಹವು ಆತ್ಮದ ಅನತಿಯಂತೆ ನಡೆಯುವುದು. ಜೀವನದಲ್ಲಿ ನಾವು ಮುಂದುವರಿಯಲು, ಯಾವುದೇ ರೀತಿಯ ಕೆಲಸಕಾರ್ಯಗಳನ್ನು ಮಾಡಲು ಆತ್ಮದ ಶಕ್ತಿಯೇ ಪ್ರಮುಖವಾದದ್ದು. ಆತ್ಮವು ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪ್ರವೇಶಿಸಬಹುದು.
ಆದರೆ ದೇಹವನ್ನು ಆತ್ಮವು ಬಿಟ್ಟು ಹೋದಾಗ ಆ ವ್ಯಕ್ತಿಯ ಭೂಮಿಯ ಮೇಲಿನ ದಿನಗಳು ಕೊನೆಗೊಂಡಂತೆ! ವಿಶ್ವದ ಪ್ರತಿಯೊಂದು ಧರ್ಮದಲ್ಲಿ ಆತ್ಮದ ಬಗ್ಗೆ ನಂಬಿಕೆ ಎನ್ನುವುದು ಇದೆ. ಆದರೆ ಇದನ್ನು ವಿಭಿನ್ನವಾಗಿ ಪರಿಗಣಿಸುವರು. ಜೀವನವನ್ನು ಹೇಗೆ ಜೀವಿಸಿದ್ದಾರೆ ಎನ್ನುವ ಮೇಲೆ ಆತ್ಮದ ನಿರ್ದಿಷ್ಟಸ್ಥಾನ ನಿರ್ಧರಿಸಲಾಗುತ್ತದೆ. ನೀವು ಜೀವನ ಹೇಗೆ ಜೀವಿಸಿದ್ದೀರಿ ಎನ್ನುವುದರ ಮೇಲೆ ಆತ್ಮದ ಸ್ಥಾನವು ನಿರ್ಧಾರವಾಗುವುದು. ಈ ಲೇಖನದಲ್ಲಿ ಯಾವ ರೀತಿಯಲ್ಲಿ ಜೀವನ ಸಾಗಿಸಿದರೆ ಆತ್ಮಕ್ಕೆ ಸಿಗುವ ಸ್ಥಾನ ಯಾವುದು ಎಂದು ತಿಳಿಯಿರಿ...

ತ್ರಿಶಂಕು ಸ್ಥಿತಿಯಲ್ಲಿ ಸಿಲುಕು
ಕೆಲವೊಮ್ಮೆ ವ್ಯಕ್ತಿಯು ಮೃತಪಟ್ಟಾಗ ಆತನಲ್ಲಿದ್ದ ಆತ್ಮಕ್ಕೆ ನೀಡಿದ್ದ ಕಾರ್ಯವು ಪೂರ್ತಿಯಾಗದೆ ಉಳಿದಿರಬಹುದು. ಪೂರ್ತಿಯಾಗದೆ ಇರುವ ಕಾರ್ಯದಿಂದ ಆತ್ಮವು ಗೊಂದಲಕ್ಕೆ ಸಿಲುವುದು ಮತ್ತು ಯಾವುದೇ ಸ್ಥಾನ ಪಡೆಯಲು ವಿಫಲವಾಗುವುದು. ಸೆರೆಯು ಒಂದು ಸ್ಥಾನವಾಗಿದ್ದು, ಇಲ್ಲಿ ಆತ್ಮವು ಕೆಲವು ದಿನಗಳ ಕಾಲ ಉಳಿದು ಕೊಳ್ಳುವುದು. ಸ್ವರ್ಗ ಅಥವಾ ನರಕದಲ್ಲಿ ಸ್ಥಾನ ಪಡೆಯುವ ಮೊದಲು ಈ ಆತ್ಮವು ಸೆರೆಯಲ್ಲಿ ಕೆಲವು ಸಮಯ ಕಾಲ ಉಳಿಯಬೇಕಾಗುತ್ತದೆ. ಆಕಾಂಕ್ಷೆಗಳು ಪೂರ್ತಿಯಾಗದೆ ಉಳಿದರೆ ಆಗ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಸಿಲುಕಿ ಶಾಶ್ವತತೆಗೆ ಕಾಯಬಹುದು.

ಸ್ವರ್ಗಕ್ಕೆ ಹೋಗಬಹುದು
ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆದು, ದಾನಧರ್ಮಗಳನ್ನು ಮಾಡಿಕೊಂಡು, ಜನರಿಗೆ ನೆರವಾಗಿ ಒಳ್ಳೆಯ ವ್ಯಕ್ತಿಯೆಂಬ ಹೆಸರು ಪಡೆದುಕೊಂಡರೆ ಆತ್ಮವು ತನ್ನ ಕಾರ್ಯವು ಪೂರೈಸಿರುವುದು ಮತ್ತು ಜೀವನ ಉತ್ತಮವಾಗಿರುವುದು. ಇದರರ್ಥ ಆ ಆತ್ಮವು ಸುಂದರವಾದ ಜೀವನ ಸಾಗಿಸಿದೆ ಎಂದು. ಯಾವುದೇ ಧರ್ಮವಾಗಿದ್ದರೂ ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡಿರುವಂತಹ ವ್ಯಕ್ತಿಯ ಆತ್ಮವು ಸ್ವರ್ಗಕ್ಕೆ ಹೋಗುವುದು ಎಂದು ಪ್ರತಿಯೊಬ್ಬರು ನಂಬುವರು. ವಿಶ್ವದ ಒತ್ತಡದಿಂದ ಆತ್ಮವು ಹೊರಬಹುದು ಮತ್ತು ಸೃಷ್ಟಿಕರ್ತನ ಬದಿಯಲ್ಲಿ ಅದಕ್ಕೆ ಸ್ಥಾನ ಸಿಗುವುದು. ಜೀವನವನ್ನು ತುಂಬಾ ಒಳ್ಳೆಯ ರೀತಿ ಸಾಗಿಸಿದರೆ ಆಗ ಆ ಆತ್ಮಕ್ಕೆ ಸ್ವರ್ಗದ ದಾರಿ ಪ್ರಾಪ್ತಿಯಾಗುವುದು ಮತ್ತು ಶಾಶ್ವತತೆ ಸಿಗುವುದು.

ನರಕಕ್ಕೆ ಹೋಗುವುದು
ಕೆಲವರು ಭೂಮಿ ಮೇಲೆ ಮಾಡುವಂತಹ ಕರ್ಮಗಳನ್ನು ನೋಡಿದಾಗ ಇವರು ಖಂಡಿತವಾಗಿಯೂ ನರಕಕ್ಕೆ ಹೋಗುತ್ತಾನೆ ಎಂದು ಹೇಳುವರು. ಯಾವಾಗಲೂ ತೊಂದರೆ ನೀಡುವಂತಹ ದೇಹದಲ್ಲಿರುವ ಆತ್ಮವೂ ನರಕಕ್ಕೆ ಹೋಗುವುದು. ಜನರಿಗೆ ಮೋಸ, ಸುಳ್ಳು, ದ್ವೇಷ ಮತ್ತು ಹಿಂಸೆ ಪಸರಿಸುವಂತಹ ಆತ್ಮಗಳು ಏನಾಗುವುದು? ಸ್ವಾರ್ಥಿಗಳು ಮತ್ತು ಜೀವನದಲ್ಲಿ ದುಷ್ಟರಾಗಿರುವವರ ಆತ್ಮವು ಏನಾಗುವುದು?
ಇಂತಹ ಆತ್ಮಗಳು ಯಾವಾಗಲೂ ನರಕದ ಹಾದಿ ಹಿಡಿಯುವುದು. ಜೀವನದ ಬಳಿಕ ಇವರಿಗೆ ಭೂಮಿ ಮೇಲೆ ಮಾಡಿರುವಂತಹ ಪಾಪ ಕೃತ್ಯಗಳಿಗೆ ಶಿಕ್ಷೆ ಸಿಗುವುದು ಮತ್ತು ನರಕದಲ್ಲಿನ ಬೆಂಕಿಯಲ್ಲಿ ಆತ್ಮವನ್ನು ಸುಡಲಾಗುವುದು. ಈ ಆತ್ಮಕ್ಕೆ ವಿಶ್ರಾಂತಿ ಸಿಗಲಾರದು ಮತ್ತು ಶಾಶ್ವತವಾಗಿ ಶಾಪಗ್ರಸ್ತವಾಗುವ ಭಾವನೆ ಮೂಡುವುದು.

ಮೋಕ್ಷ ಪ್ರಾಪ್ತಿಯಾಗುವುದು
ಕೆಲವೊಂದು ಆತ್ಮಗಳು ನಿಂದೆ ಮೀರಿ ನಿಂತಿರುವುದು. ಈ ಆತ್ಮಗಳು ತಮ್ಮ ಆಲೋಚನೆ, ಮಾತು ಮತ್ತು ಕಾರ್ಯದಲ್ಲಿ ಸ್ವತ್ಯಾಗ, ಪರಹಿತಚಿಂತನೆ ಮತ್ತು ನಿಜವಾಗಿಯೂ ನಿಸ್ವಾರ್ಥ ಭಾವನೆ ಹೊಂದಿರುವುದು. ಈ ಆತ್ಮಗಳು ಬೇರೆ ಎಲ್ಲಕ್ಕಿಂತಲೂ ವಿಶೇಷ ವಾಗಿರುವಂತದ್ದಾಗಿದೆ ಮತ್ತು ಇವರು ತಮ್ಮ ಜೀವನದಲ್ಲಿ ನಿಸ್ವಾರ್ಥವಾಗಿ ಇತರರ ಸೇವೆ ಮಾಡಿರುವರು. ಇಂತಹ ಆತ್ಮಗಳು ಸ್ವರ್ಗಕ್ಕೆ ಹೋಗುವುದು. ಇವರಿಗೆ ಸೃಷ್ಟಿಕರ್ತನೊಂದಿಗೂ ಜಾಗವಿರುವುದಿಲ್ಲ. ಆತ್ಮಗಳು ಸೃಷ್ಟಿಕರ್ತರೊಂದಿಗೆ ಏಕೀಕರಣಗೊಳ್ಳುವುದು. ಸೃಷ್ಟಿಕರ್ತನ ಹೃದಯದಲ್ಲಿ ಈ ಆತ್ಮಗಳಿಗೆ ಸ್ಥಾನ ಸಿಗುವುದು. ಈ ಆತ್ಮಗಳನ್ನು ಶಿಕ್ಷಿಸಲಾಗುವುದಿಲ್ಲ. ಆದರೆ ಇವು ಯಾವಾಗಲೂ ಸೃಷ್ಟಿಕರ್ತನಲ್ಲಿ ಒಂದಾಗಿರುವುದು.

ಪುನರ್ಜನ್ಮ ಸಿಗುವುದು
ಕೆಲವು ಆತ್ಮಗಳು ಜೀವನದಲ್ಲಿ ತುಂಬಾ ಶ್ರಮವಹಿಸಿದರೂ ಅದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇವರು ಯಾವಾಗಲೂ ಒಳ್ಳೆಯ ಕಾರ್ಯಕ್ಕಾಗಿ ಕೆಲಸ ಮಾಡಿರುವರು. ಆದರೆ ಜೀವನದ ಅಲ್ಪಾವಧಿಯಲ್ಲಿ ಇದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ತ್ರಿಶಂಕು ಸ್ಥಿತಿ ತಪ್ಪಿಸಲು ಇವರು ಸಾಕಷ್ಟುಪ್ರಯತ್ನಿಸಿದ್ದಾರೆ. ಇಂತಹ ಆತ್ಮಗಳಿಗೆ ಜೀವನದಲ್ಲಿ ಮತ್ತೊಂದು ಅವಕಾಶ ಸಿಗುವುದು. ಇವರಿಗೆ ವಿಶ್ವದಲ್ಲಿ ಪುನರ್ಜನ್ಮ ಸಿಗುವುದು ಮತ್ತು ಇದರಿಂದ ಅವರು ತಮ್ಮ ಒಳ್ಳೆಯ ಕೆಲಸಗಳನ್ನು ಮತ್ತೊಂದು ಜೀವನದಲ್ಲಿ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಇವರು ಅದೇ ಉತ್ಸಾಹ ಮತ್ತು ಶಕ್ತಿಯೊಂದಿಗೆ ಜೀವನವನ್ನು ಪ್ರವೇಶಿಸಿವರು ಮತ್ತು ಒಳ್ಳೆಯ ಕೆಲಸ ಮಾಡುವರು. ಇದರಿಂದ ಅವರು ಸೃಷ್ಟಿ ಕರ್ತನ ಬದಿಯಲ್ಲಿ ಸ್ಥಾನ ಪಡೆಯುವರು.

ತೊಂದರೆ ನೀಡುವುದು
ದೇಹದಿಂದ ಆತ್ಮವು ಬೇರ್ಪಡುವ ಸಮಯವು ಇದಾಗಿಲ್ಲದೆ ಇದ್ದರೆ, ಸೆರೆ, ಜೀವನಕ್ಕೆ ಮರಳಿ ಬರುವಂತಹ ಆತ್ಮಗಳು ಯಾವಾಗಲೂ ತೊಂದರೆ ನೀಡುತ್ತಲಿರುವುದು. ಸಮಯಕ್ಕೆ ಮೊದಲೇ ಸಾವನ್ನಪ್ಪು ವಂತಹ ಆತ್ಮಗಳು, ದುರ್ಮರಣಕ್ಕೀಡಾಗುವ ಆತ್ಮಗಳು, ಕೊಲೆಯಾಗುವ ಮತ್ತು ಜೀವನದಲ್ಲಿ ತಮ್ಮ ಮೇಲೆ ಆಗಿರುವ ಅನ್ಯಾಯಕ್ಕೆ ಸೇಡನ್ನು ಬಯಸುವಂತಹ ಆತ್ಮಗಳು ಮತ್ತೆ ಮರ್ತ್ಯ ಪ್ರಪಂಚಕ್ಕೆ ಬರುವುದು. ಇವುಗಳು ದೇಹವನ್ನು ಬಿಡುವುದಿಲ್ಲ. ತಮ್ಮ ಸಾವಿಗೆ ಕಾರಣರಾದವರನ್ನು ಇದು ಕಾಡುತ್ತಲಿರುವುದು.

ಶಮನ ನೀಡುವುದು
ಮೋಕ್ಷ ಪಡೆಯುವಂತೆ ಕೆಲವು ಆತ್ಮಗಳು ಈಗಲೂ ಒಳ್ಳೆಯದನ್ನು ಮಾಡುವಂತಹ ಹಂಬಲ ಹೊಂದಿರುವುದು. ಒಳ್ಳೆಯದನ್ನು ಮಾಡಿರುವಂತಹ ಆತ್ಮಗಳು ಅತ್ಯುತ್ತಮವಾಗಿರುವುದನ್ನು ಮಾಡಲು ಬಯಸುವುದು. ಸಂಕಷ್ಟದಲ್ಲಿ ಇರುವಂತಹವರಿಗೆ ನೆರವು, ಬೆಂಬಲ ಮತ್ತು ದಾರಿ ತೋರಿಸುವುದು ಈ ಆತ್ಮಗಳ ಉದ್ದೇಶವಾಗಿರುವುದು. ಇಂತಹ ಆತ್ಮಗಳು ಮರ್ತ್ಯ ಪ್ರಪಂಚಕ್ಕೆ ಮತ್ತೆ ಬರುವುದು. ಇವರ ಈ ಆಧ್ಯಾತ್ಮಿಕ ಸ್ಥಿತಿಯು ಯಾರಿಗೂ ತೊಂದರೆ ನೀಡುವುದಲ್ಲ, ಬದಲಿಗೆ ನೆರವಾಗುವುದು. ಈ ಆತ್ಮಗಳು ರಕ್ಷಕ ದೇವತೆಗಳು, ರಕ್ಷಣಾತ್ಮಕ ಶಕ್ತಿಗಳು ಮತ್ತು ಕಾಣಿಸದೆ ವ್ಯಕ್ತಿಯೊಬ್ಬನಿಗೆ ಸರಿಯಾದ ದಾರಿಯಲ್ಲಿ ನಡೆಯಲು ಮಾರ್ಗದರ್ಶನ ನೀಡುವುದು.



Click it and Unblock the Notifications











