Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 4 ರಾಶಿಯವರು ಸಣ್ಣ ವಿಷಯಕ್ಕೂ ಪ್ರಪಂಚವೇ ಮುಳುಗಿ ಹೋದ ಹಾಗೆ ಚಿಂತೆ ಪಡುತ್ತಾರೆ!
ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಸಮಸ್ಯೆಗಳು ಎದುರಾದಾಗ ಅವುಗಳ ಬಗ್ಗೆ ಚಿಂತನೆ ಕೈಗೊಳ್ಳುವುದು ಹಾಗೂ ಅದರ ನಿವಾರಣೆ ಹೇಗೆ ಎನ್ನುವುದರ ಬಗ್ಗೆ ಉಪಾಯ ಮಾಡುವುದು ಸಹಜ ಸಂಗತಿ. ಹಾಗೊಮ್ಮೆ ಸಮಸ್ಯೆ ದೊಡ್ಡದು ಎಂದರೆ ನಮ್ಮ ಚಿಂತನೆಗಳು ಒಂದೆರಡು ದಿನಗಳ ಕಾಲ ಮುಂದುವರಿಯ ಬಹುದು. ನಂತರ ನಿಧಾನಕ್ಕೆ ಆ ಚಿಂತೆಗಳನ್ನು ಮರೆಯಲು ಪ್ರಯತ್ನಿಸುತ್ತೇವೆ. ಆದರೆ ಕೆಲವು ವ್ಯಕ್ತಿಗಳು ಈ ಸಂಗತಿಗಳಿಗೆ ತದ್ವಿರುದ್ಧವಾಗಿ ಇರುತ್ತಾರೆ. ಸಮಸ್ಯೆಗಳು ಎದುರಾಯಿತು ಎಂದರೆ ಅದರ ಚಿಂತನೆಯಲ್ಲಿಯೇ ಮುಳುಗಿ ಬಿಡುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವ್ಯಕ್ತಿಗಳು ತಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಅಧಿಕ ಚಿಂತನೆಯನ್ನು ನಡೆಸುತ್ತಾರೆ. ಸಮಸ್ಯೆಗಳು ಎದುರಾದಾಗ ಅವರು ಮುಳುಗಿ ಹೋದೆವು ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಕಷ್ಟಗಳು ಸರಳವಾಗಿದ್ದರೂ ಕೆಲವರಿಗೆ ಅದನ್ನು ಸುಲಭವಾಗಿ ಸ್ವೀಕರಿಸಲು ಸಾಧ್ಯವಾಗದು. ಅದೊಂದು ಪರ್ವತದಂತಹ ಸಮಸ್ಯೆ ಎಂದು ಭಾಸವಾಗುವುದು. ಜೊತೆಗೆ ಸಮಸ್ಯೆಗಳ ಬಗ್ಗೆ ದೀರ್ಘ ಕಾಲ ಚಿಂತನೆ ನಡೆಸುತ್ತಲೇ ಇರುತ್ತಾರೆ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರದವರು ಯಾರು? ಕಷ್ಟದ ಬಗ್ಗೆ ಅವರ ಚಿಂತನೆಗಳು ಏನು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮಿಥುನ
ಈ ರಾಶಿಯ ವ್ಯಕ್ತಿಗಳು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಗಳಾಗಿರುವುದಿಲ್ಲ. ಸದಾ ಚಟಪಟ ಮಾತನಾಡುತ್ತಲೇ ಇರುತ್ತಾರೆ. ರಾತ್ರಿ ಮಲಗುವ ಮುನ್ನವೂ ಅವರು ದಿನದಲ್ಲಿ ನಡೆದ ವಿಚಾರಗಳೆಲ್ಲವನ್ನೂ ಒಮ್ಮೆ ನೆನಪಿಸಿಕೊಳ್ಳುತ್ತಾರೆ. ಇವರು ಚಿಂತನೆಗೆ ಒಳಗಾದರೂ ಎಂದರೆ ಅದರಲ್ಲಿಯೇ ಮುಳುಗಿ ಹೋಗಿರುತ್ತಾರೆ. ಇವರು ದ್ವಿಮುಖಿಯ ತರಹ ಚಿಂತನೆ ನಡೆಸುವರು. ಸಮಸ್ಯೆಗಳು ಎದುರಾದಾಗ ದೀರ್ಘ ಸಮಯದ ಕಾಲ ಚಿಂತನೆ ನಡೆಸುತ್ತಲೇ ಇರುತ್ತಾರೆ.

ಕರ್ಕ
ಇವರು ಅತ್ಯುತ್ತಮ ವ್ಯಕ್ತಿಗಳು ಇವರು ಇತರರ ಮೆಚ್ಚುಗೆಗೆ ತಕ್ಕಂತೆ ವರ್ತಿಸುವರು. ಅಸಮಧಾನ ಉಂಟಾದಾಗ ಇವರ ವರ್ತನೆ ಹಠಾತ್ ಬದಲಾವಣೆಯನ್ನು ಪಡೆದುಕೊಳ್ಳುವುದು. ಅದು ಕೆಲವೊಮ್ಮೆ ಅವರಿಗೆ ಕಿರಿಕಿರಿ ಉಂಟಾಗಬಹುದು. ಅದರ ಕುರಿತಾಗಿಯೇ ಹೆಚ್ಚು ಚಿಂತನೆಯನ್ನು ನಡೆಸುವರು. ವೃತ್ತಿಪರ ಕೆಲಸದಲ್ಲಿಯೂ ಹೆಚ್ಚು ಶ್ರಮವನ್ನು ವಹಿಸುವರು. ತಮ್ಮ ಗುರಿಯನ್ನು ತಲುಪುವ ತನಕವೂ ಸಾಕಷ್ಟು ಶ್ರಮವಹಿಸುತ್ತಾರೆ. ಆದರೆ ಸಮಸ್ಯೆಗಳು ಅಥವಾ ದುಃಖದ ಸಂಗತಿ ಎದುರಾದಾಗ ಸಾಕಷ್ಟು ದೀರ್ಘ ಸಮಯದವರೆಗೆ ಚಿಂತನೆ ಹಾಗೂ ಬೇಸರಕ್ಕೆ ಒಳಗಾಗಿಯೇ ಇರುವರು.

ಕನ್ಯಾ
ಇವರು ಸಾಕಷ್ಟು ಕಾಳಜಿ ಹಾಗೂ ಪ್ರೀತಿಯನ್ನು ತೋರುವ ವ್ಯಕ್ತಿಗಳು ಎನ್ನಬಹುದು. ಇವರು ಸಂಬಂಧಗಳನ್ನು ಹಾಗೂ ಪ್ರೀತಿಯನ್ನು ಬಹಳ ನಾಜೂಕಿನಿಂದ ನಿರ್ವಹಿಸುವರು. ನಿಕಟ ಕುಟುಂಬದವರೊಂದಿಗೆ ಸಂಬಂಧಗಳನ್ನು ಉತ್ತಮವಾಗಿ ಇಟ್ಟುಕೊಳ್ಳುವರು. ಅದೇ ರೀತಿ ಉತ್ತಮವಲ್ಲದ ವಿಚಾರಗಳಿಗೆ ಬಹುಬೇಗ ಬೇಸರಕ್ಕೆ ಒಳಗಾಗುವರು. ಪ್ರೀತಿಯಿಂದ ಹತಾಷೆ ಉಂಟಾದರೆ ಹೆಚ್ಚಿನ ದುಃಖಕ್ಕೆ ಒಳಗಾಗುವರು. ಇವರು ಒಮ್ಮೆ ಬೇಸರ ಹಾಗೂ ದುಃಖದಲ್ಲಿ ಮುಳುಗಿದರೆ ಸಾಮಾನ್ಯ ಮನಃಸ್ಥಿತಿಗೆ ಮರಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವರು.

ಮೀನ
ಇವರು ತಮ್ಮ ಸುತ್ತಲಿನ ಪರಿಸರ ಹಾಗೂ ವ್ಯಕ್ತಿಗಳನ್ನು ಬಹು ಸುಂದರವಾಗಿ ಪರಿಶೀಲನೆ ನಡೆಸುತ್ತಾರೆ. ಇತರರ ಸಮಸ್ಯೆಗಳನ್ನು ಬಹುಬೇಗ ಅರ್ಥಮಾಡಿಕೊಳ್ಳುವುದು ಹಾಗೂ ಉತ್ತಮ ಆರೈಕೆ ಮಾಡುವ ಸ್ವಭಾವ ಇವರದ್ದು. ಆದರೆ ಕೆಲವು ಸಂಗತಿಗಳಿಗೆ ಅನುಗುಣವಾಗಿ ಇವರು ಚಿಂತೆ ಅಥವಾ ಸಮಸ್ಯೆಗೆ ಒಳಗಾದರೆ ಪದೇ ಪದೇ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಚಿಂತೆಯನ್ನು ಮಾಡುತ್ತಿರುತ್ತಾರೆ. ಮನಸ್ಸನ್ನು ದುಃಖದಲ್ಲಿ ಮುಳುಗಿಸಿಕೊಳ್ಳುವರು.



Click it and Unblock the Notifications