Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಈ ನಾಲ್ಕು ರಾಶಿಯವರು ಮದುವೆಯಾಗಲು ಮನಸ್ಸೇ ಮಾಡುವುದಿಲ್ಲವಂತೆ!
ವಿವಾಹ ಎನ್ನುವುದು ಜೀವನದಲ್ಲಿ ಒಂದು ಮಹತ್ತರದ ತಿರುವನ್ನು ನೀಡುತ್ತದೆ. ಹುಡುಗಾಟದ ಜೀವನದಿಂದ ಜವಾಬ್ದಾರಿಯ ಹಾದಿಗೆ ಹೋಗುವ ಒಂದು ಪರಿ. ವಿವಾಹ ಬಂಧನವು ಒಂದು ಬಗೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ ಆದರೂ ಜೀವನದಲ್ಲಿ ಪರಿಪೂರ್ಣತೆಯ ಭಾವನೆಯನ್ನು ನೀಡುತ್ತದೆ. ಜೀವನ ಪರ್ಯಂತ ನಮಗಾಗಿಯೇ ಇನ್ನೊಂದು ಜೀವ ಇರುತ್ತದೆ ಎನ್ನುವ ಸಂತೋಷ, ಆ ಜೀವದೊಂದಿಗೆ ಪ್ರೀತಿಯ ಜೀವನವನ್ನು ನಡೆಸುತ್ತಾ ಬದುಕನ್ನು ಸಾಗಿಸುವುದು ಒಂದು ವಿಸ್ಮಯ.
ಹಾಗಾಗಿಯೇ ಬಹುತೇಕ ಮಂದಿ ತಮ್ಮ ಸಂಗಾತಿಯ ಹುಡುಕಾಟ, ವಿವಾಹ ಎಂದರೆ ಜೀವನದಲ್ಲಿ ಬಹಳ ಸಂತಸ ಹಾಗೂ ಸಡಗರವನ್ನು ವ್ಯಕ್ತಪಡಿಸುತ್ತಾರೆ. ಆದರೆ ಕೆಲವು ಬೆರಳೆಣಿಕೆಯಷ್ಟು ಜನರು ವಿವಾಹ ಎಂದರೆ ದೂರ ಸರಿಯುತ್ತಾರೆ. ಆ ಸಂಭ್ರಮ ಹಾಗೂ ಬಂಧನಗಳಿಗೆ ಒಳಗಾಗಲು ಬಯಸುವುದಿಲ್ಲ. ಇದಕ್ಕೆ ಕಾರಣ ಅವರ ರಾಶಿಚಕ್ರ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರದವರು ಯಾರು? ಅವರು ಏಕೆ ವಿವಾಹದ ಬಗ್ಗೆ ಆಸಕ್ತಿ ಹೊಂದಿರುವುದಿಲ್ಲ? ಎನ್ನುವುದನ್ನು ಈ ಮುಂದಿನ ವಿವರಣೆ ಓದಿ ತಿಳಿಯಿರಿ...
1.ಮೇಷ
ಈ ರಾಶಿಯವರು ತಮ್ಮ ಹೃದಯದಲ್ಲಿ ಹೆಚ್ಚು ಪ್ರೀತಿ ಹಾಗೂ ವಿಶ್ವಾಸವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಜೀವನದಲ್ಲಿ ಪ್ರಮುಖ ಉದ್ದೇಶವೊಂದನ್ನು ಹೊಂದಿರುತ್ತಾರೆ. ಇವರು ಯಾರೊಂದಿಗಾದರೂ ಡೇಟಿಂಗ್ ಅಥವಾ ಒಂದಿಷ್ಟು ಸಮಯವನ್ನು ಕಳೆಯಲು ಮನಸ್ಸು ಮಾಡಿದಾಗ ಅವರು ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಬಯಸುತ್ತಾರೆ. ಇನ್ನೊಂದೆಡೆ ಈ ರಾಶಿಯವರು ತಮ್ಮ ಸಂಬಂಧ ನಿಭಾಯಿಸುವುದರ ಬಗ್ಗೆ ಹೆಚ್ಚು ವಿಸ್ಮಯಕಾರಿಯಾಗಿ ಚಿಂತಿಸುತ್ತಾರೆ ಎಂದು ಹೇಳಲಾಗುವುದು. ಇವರ ಪಾಲುದಾರರು ಅಥವಾ ಸಂಬಂಧ ಬೆಳೆಸಲು ಬಯಸುವವರು ಅವರ ಆಸಕ್ತಿಗೆ ಅನುಗುಣವಾಗಿ ಇಲ್ಲ ಎಂದಾದರೆ ವಿಷಾದವನ್ನು ವ್ಯಕ್ತಪಡಿಸುವರು. ಜೊತೆಗೆ ವಿವಾಹದ ಬಗ್ಗೆ ಆಸಕ್ತಿ ಹೊಂದದೆ ಇರುವರು.
2.ಮಿಥುನ
ಈ ರಾಶಿಯವರು ಹೊಸ ವ್ಯಕ್ತಿಯನ್ನು ಭೇಟಿಯಾಗಲು ಮತ್ತು ಪ್ರೀತಿಯ ಅಗತ್ಯತೆಯನ್ನು ಪೂರೈಸುವ ಮಾರ್ಗದ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಇವರಿಗೆ ವ್ಯಕ್ತಿಗಳೊಂದಿಗೆ ಡೇಟಿಂಗ್ ಹೋಗುವಾಗ ಅವರ ಭಾವನೆಗಳು ವಿನೋದದಿಂದ ಹಾಗೂ ಸರಳ ಮನೋಭಾವದಿಂದ ಕೂಡಿರಬೇಕು ಎಂದು ಬಯಸುತ್ತಾರೆ. ನಿರಾತಂಕದ ಮನೋಭಾವವನ್ನು ಹೊಂದಿರುವ ಇವರು ಸಂಬಂಧವನ್ನು ಗಂಭೀರವಾಗಿಯೇ ಪರಿಗಣಿಸಿದಾಗ ತೊಡಕುಂಟಾಗಬಾರದು ಎಂದು ಭಾವಿಸುತ್ತಾರೆ. ಬದ್ಧತೆಗೆ ಒಳಗಾದಾಗ ಅವರು ಪ್ರಕ್ಷುಬ್ಧತೆಯನ್ನು ಪಡೆಯುತ್ತಾರೆ. ಇದು ವ್ಯಕ್ತಿಯ ಸಂಬಂಧಗಳನ್ನು ಬದಲಾಯಿಸ ಬಹುದು. ಇವರ ಮನಸ್ಸು ಬೇಸರವಾದಾಗ ಸಂಬಂಧದಲ್ಲಿ ಬೇಸರವನ್ನು ತೋರಿಸಬಹುದು. ಆದರೆ ತದ ನಂತರ ಪುನಃ ಸಮತೋಲನದ ಮನಸ್ಸನ್ನು ಹೊಂದುತ್ತಾರೆ. ಇವರು ತಮ್ಮ ಭಾವನೆಗಳಿಗೆ ವಿರುದ್ಧವಾಗಿ ಅಷ್ಟು ಸುಲಭವಾಗಿ ಪ್ರೀತಿಯಲ್ಲಿ ಬೀಳುವುದಿಲ್ಲ ಎಂದು ಹೇಳಲಾಗುವುದು.
3.ತುಲಾ
ಇವರು ಡೇಟಿಂಗ್ ಮಾಡುವ ವ್ಯಕ್ತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಪ್ರಯತ್ನಿಸುತ್ತಾರೆ. ಆದರೆ ಭವಿಷ್ಯದ ಬಗ್ಗೆ ಪ್ರಚೋದನೆ ನೀಡುವ ಸಂಗತಿಗಳನ್ನು ವಿರೋಧಿಸುವರು. ಇವರು ತಮ್ಮ ಭವಿಷ್ಯವು ತಮ್ಮ ಲೆಕ್ಕಚಾರಕ್ಕೆ ಅನುಗುಣವಾಗಿಯೇ ನಡೆಯಬೇಕು ಎಂದು ಬಯಸುವರು. ಶುಕ್ರ ಗ್ರಹದ ಆಳ್ವಿಕೆಗೆ ಒಳಗಾದ ರಾಶಿಚಕ್ರ ವಾಗಿರುವುದರಿಂದ ಎಲ್ಲಾ ವಿಚಾರದಲ್ಲೂ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಜೊತೆಗೆ ಎಲ್ಲವೂ ಸರಿಯಾಗಿಯೇ ಆಗಬೇಕು ಎಂದು ಬಯಸುವರು. ಇವರಿಗೆ ವಿವಾಹಕ್ಕಿಂತ ತಮ್ಮ ಗುರಿಗಳನ್ನು ಸಾಧಿಸುವುದೇ ಮುಖ್ಯ ಎಂದು ಪರಿಗಣಿಸುತ್ತಾರೆ. ಹಾಗಾಗಿ ಅಷ್ಟು ಸುಲಭವಾಗಿ ವಿವಾಹದ ಬಂಧನಕ್ಕೆ ಒಳಗಾಗಲು ಬಯಸುವುದಿಲ್ಲ.
4.ಮೀನ
ಈ ರಾಶಿಯವರ ಅದೃಷ್ಟದ ಬಣ್ಣ ಗುಲಾಬಿ. ಇವರು ಮಬ್ಬಾದ ದೃಷ್ಟಿಯಿಂದ ಪ್ರಪಂಚವನ್ನು ನೋಡುತ್ತಾರೆ. ಇವರು ತಾವು ಪ್ರೀತಿಯಲ್ಲಿ ಬೀಳಲು ಬಯಸುತ್ತಾರೆ. ತಮ್ಮ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ಈ ಕುರಿತು ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ಸ್ನೇಹಿತರಂತ ಹೆಚಿನ ಕಾಳಜಿ ಹಾಗೂ ಪಾಲುದಾರರಿಗೆ ಅಗತ್ಯವಾದ ಸಂಗತಿಗಳನ್ನು ನೀಡಲು ಬಯಸುವರು. ಸಂಗಾತಿಗಳೊಡನೆ ಯಾವುದೇ ಭಿನ್ನಾಭಿಪ್ರಾಯಗಳು ಎದುರಾದರೂ ಅದರ ಬಗ್ಗೆ ತಕ್ಷಣ ವಿಷಾದಿಸುತ್ತಾರೆ. ಅವರು ತಮ್ಮ ಪಾಲುದಾರರ ಭಾವನೆಗಳ ಜೊತೆಗೆ ಸಾಗುತ್ತಾ ಹೋಗುತ್ತಾರೆ. ಆದರೆ ಪ್ರೀತಿಯ ಬಂಧನಕ್ಕೆ ಅಷ್ಟು ಸುಲಭವಾಗಿ ಒಳಗಾಗುವುದಿಲ್ಲ. ವಿವಾಹದ ವಿಚಾರದಲ್ಲಿ ನಿಧಾನಗತಿಯ ಚಿಂತನೆ ನಡೆಸುತ್ತಾರೆ.