Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂತಹ 5 ರಾಶಿಚಕ್ರದವರು ಅತ್ಯಂತ 'ಪ್ರತಿಭಾವಂತರು'
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಾನು ಬುದ್ಧಿವಂತ ಎಂಬ ಭಾವನೆ ಇರುತ್ತದೆ. ಅದು ಅವನ ಆತ್ಮ ಸ್ಥೈರ್ಯವನ್ನು ಹೆಚ್ಚಿಸಲು ಸಹಾಯ ಮಾಡುವುದು. ಆದರೆ ವಾಸ್ತವದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ದಡ್ಡತನ ಅಥವಾ ಮಂಕಾದ ಬುದ್ಧಿಯೂ ಇರುತ್ತದೆ. ಅದನ್ನು ಬಹುತೇಕವಾಗಿ ಎಲ್ಲರೂ ಮರೆಮಾಚುವರು. ಇತರರ ಮುಂದೆ ತಾವು ಸದಾ ಬುದ್ಧಿವಂತರಾಗಿ ಇರಬೇಕೆಂದು ಬಯಸುತ್ತಾರೆ. ಇದು ಕೆಲವೊಮ್ಮೆ ಸಫಲಗೊಳ್ಳಬಹುದು. ಕೆಲವು ಸಂದರ್ಭದಲ್ಲಿ ನಮ್ಮ ರಹಸ್ಯ ಬಯಲಾಗುವ ಸಾಧ್ಯತೆಗಳೂ ಇರುತ್ತವೆ.
ಸೃಜನ ಶೀಲತೆ ಎನ್ನುವುದು ವ್ಯಕ್ತಿಯ ಬುದ್ಧಿವಂತಿಕೆಯನ್ನು ಹೆಚ್ಚಿಸುವುದು. ಸಂದರ್ಭಕ್ಕೆ ತಕ್ಕಂತೆ ಹೇಗೆ ತಮ್ಮ ವಿಚಾರಗಳನ್ನು ಅಥವಾ ಅಭಿಪ್ರಾಯಗಳನ್ನು ಮಂಡಿಸುತ್ತಾರೆ? ಸಮಸ್ಯೆಗಳ ನಿವಾರಣೆಗೆ ಹೇಗೆ ಚಿಂತನೆ ನಡೆಸುತ್ತಾರೆ? ಭವಿಷ್ಯದ ಆಗು ಹೋಗುಗಳಿಗೆ ಹೇಗೆ ಸೂಕ್ತ ರೀತಿಯ ವರ್ತನೆಯನ್ನು ತೋರುವರು? ಎನ್ನುವುದರ ಆಧಾರದ ಮೇಲೆ ವ್ಯಕ್ತಿಯ ಬುದ್ಧಿವಂತಿಕೆ ನಿರ್ಧಾರವಾಗುವುದು.

ಜನರು ಪ್ರತಿಭೆ ಹಾಗೂ ಬುದ್ಧಿವಂತಿಕೆಯ ಬಗ್ಗೆ ಯೋಚಿಸುವಾಗ ಅವರು ಸಂಗೀತ, ಕಲೆ, ಗಣಿತ, ವಿಜ್ಞಾನ ಹಾಗೂ ತಂತ್ರಜ್ಞಾನಗಳ ಜೊತೆಗೆ ಸಂಯೋಜಿಸುತ್ತಾರೆ. ನೆನಪಿಟ್ಟುಕೊಳ್ಳುವುದು ಒಂದು ವ್ಯಕ್ತಿಯ ಸಾಮಥ್ರ್ಯ ಆಗಿರಬಹುದೇ ಹೊರತು ಅದು ಬುದ್ಧಿವಂತಿಕೆ ಎಂದು ಪರಿಗಣಿಸಲಾಗುವುದಿಲ್ಲ. ಬಿದ್ಧಿವಂತಿಕೆ ಎನ್ನುವುದು ಸಂದರ್ಭಕ್ಕೆ ತಕ್ಕಂತೆ ಹೇಗೆ ತಮ್ಮ ಆಲೋಚನೆಯನ್ನು ಕೈಗೊಳ್ಳುತ್ತಾನೆ ಎನ್ನುವುದರ ಮೇಲೆ ನಿರ್ಧಾರವಾಗುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷ ಬಗೆಯ ಜಾಣ್ಮೆ ಇರುತ್ತವೆ. ಆದರೆ ಕೆಲವು ರಾಶಿಚಕ್ರದವರಲ್ಲಿ ಅತ್ಯಂತ ಬುದ್ಧಿವಂತಿಕೆ ಇರುತ್ತದೆ ಎಂದು ಹೇಳಲಾಗುವುದು. ಆ ರಾಶಿಚಕ್ರದವರು ಇತರರ ನಡುವೆ ಹೆಚ್ಚು ಆಕರ್ಷಕ ವ್ಯಕ್ತಿತ್ವದವರಂತೆ ಮಿಂಚುತ್ತಾರೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಪಟ್ಟಿಯಲ್ಲಿ ನೀವು ಅಥವಾ ನಿಮ್ಮವರು ಇದ್ದಾರೆಯೇ ಎಂದು ತಿಳಿಯಲು ಮುಂದಿನ ಲೇಖನವನ್ನು ಓದಿ.

ಮಿಥುನ
ಮಿಥುನ ರಾಶಿಯ ವ್ಯಕ್ತಿಗಳು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಇವರು ಎಂತಹ ವಿಚಾರಗಳನ್ನಾದರೂ ಹೀರಿಕೊಳ್ಳುವ ಅಥವಾ ಅರ್ಥೈಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವರು ಏನನ್ನೇ ಕಲಿಯಲು ಪ್ರಯತ್ನಿಸಿದರೂ ಅದನ್ನು ಬಲು ಸುಲಭವಾಗಿ ನಿರ್ವಹಿಸುತ್ತಾರೆ. ಉದಾಹರಣೆಗೆ ಹಾಡುಗಾರಿಕೆ, ಆಡುವುದು, ಅಭಿನಯ, ವಾದ್ಯ, ಭಾಷೆ ಕಲಿಕೆ ಅದೇನೇ ಆದರೂ ಬಹುಬೇಗ ಕಲಿತುಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ.

ಮಿಥುನ
ಯಾವುದೇ ವಿಚಾರಗಳಿಗೂ ಶಾಶ್ವತವಾಗಿ ಅಂಟಿಕೊಳ್ಳುವುದಿಲ್ಲ. ತಮ್ಮ ಬುದ್ಧಿಶಕ್ತಿಯನ್ನು ಸದಾ ಚಾಲನೆಯಲ್ಲಿಟ್ಟಿರುವರು. ಇವರು ಸ್ವಾಭಾವಿಕವಾಗಿ ಕುತೂಹಲಕಾರಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸದಾ ಹೊಸತನವನ್ನು ಕಲಿಯುವ ಉತ್ಸಾಹ ಹಾಗೂ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಇವರು ಜ್ಞಾನವನ್ನು ವಿಸ್ತರಿಸಿಕೊಳ್ಳುವ ದಾಹ ಹೊಂದಿರುವುದರಿಂದ ಬುದ್ಧಿಯನ್ನು ಸಹ ಸೂಕ್ತವಾಗಿ ಉಪಯೋಗಿಸುತ್ತಾರೆ.

ಕನ್ಯಾ
ಇತರ ರಾಶಿಚಕ್ರಗಳಿಗೆ ಹೋಲಿಸಿದರೆ ಕನ್ಯಾ ರಾಶಿಯವರು ಹೆಚ್ಚು ಬುದ್ಧಿವಂತರು ಎಂದು ಪರಿಗಣಿಸಲಾಗುವುದು. ಇವರು ತಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಲು ಕ್ರಮಬದ್ಧವಾದ ವಿಧಾನಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಇವರ ಉತ್ತಮ ಆಯ್ಕೆಗಳೇ ಇವರ ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಹೆಚ್ಚು ಶ್ರಮದಾಯಕ ವ್ಯಕ್ತಿಗಳಾಗಿರುವುದರಿಂದ ಯಾವುದೇ ಕೆಲಸವನ್ನು ಒಪ್ಪಿಸಿದರೂ ಅದನ್ನು ಮೊದಲ ಹಂತದಲ್ಲಿಯೇ ಯಶಸ್ವಿಯಾಗುವಂತೆ ಮಾಡುತ್ತಾರೆ.

ಕನ್ಯಾ
ಇವರು ಭಾವನಾತ್ಮಕ ವ್ಯಕ್ತಿಗಳಾಗಿರುವುದರಿಂದ ಇತರರ ಸಮಸ್ಯೆಗಳನ್ನು ಬಹುಬೇಗ ಅರ್ಥೈಸಿಕೊಳ್ಳುವರು. ಕನ್ಯಾರಾಶಿಯವರಿಗೆ ತಾವು ಏನುಮಾಡುತ್ತಾರೆ ಎನ್ನುವುದನ್ನು ಉತ್ತಮವಾಗಿ ಅರ್ಥೈಸಿಕೊಳ್ಳುತ್ತಾರೆ. ಕಷ್ಟದ ಕೆಲಸವನ್ನು ತಾವೇ ಸುಂದರವಾಗಿ ನಿರ್ವಹಿಸಬೇಕು ಎನ್ನುವ ಜವಾಬ್ದಾರಿಯನ್ನು ಕೈಗೊಳ್ಳುವರು. ತಮ್ಮದೇ ಆದ ಬುದ್ಧಿವಂತಿಕೆಯ ಮೇಲೆ ಎಲ್ಲಾ ಕೆಲಸಗಳು ಉತ್ತಮವಾಗುವಂತೆ ಮಾಡುವರು.

ವೃಶ್ಚಿಕ
ನೈಸರ್ಗಿಕವಾಗಿಯೇ ಉತ್ತಮ ಜ್ಞಾನವನ್ನು ಹೊಂದಿದ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ಪರಿಪೂರ್ಣಗೊಳಿಸುತ್ತಾರೆ. ತಮ್ಮ ಪ್ರತಿಭೆ ಅಥವಾ ಬುದ್ಧಿವಂತಿಕೆಯಿಂದ ಮನರಂಜನೆ ಹಾಗೂ ತಂತ್ರಗಾರಿಕೆಯನ್ನು ಕೈಗೊಳ್ಳುವರು. ಇವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಕೆಲಸದಲ್ಲಿ ಹೇಗೆ ಯಶಸ್ಸನ್ನು ಕಾಣಬೇಕು ಎನ್ನುವ ಸೂಕ್ಷ್ಮತೆಯನ್ನು ತಿಳಿದಿರುತ್ತಾರೆ.

ವೃಶ್ಚಿಕ
ಇವರ ಬಲವಾದ ಭಾವನೆ ಹಾಗೂ ಶ್ರಮದಾಯಕವಾದ ಪ್ರವೃತ್ತಿಯು ಹೆಚ್ಚಿನ ಯಶಸ್ಸನ್ನು ತಂದುಕೊಡುವುದು. ಇತರರ ಮಾತನ್ನು ಕೇಳುವುದರಲ್ಲಿ ಹಾಗೂ ಅದರ ಬಗ್ಗೆ ನಟನೆ ಮಾಡುವುದರಲ್ಲಿ ಮಹಾನ್ ನಟರ ರೀತಿಯಲ್ಲಿಯೇ ವರ್ತಿಸುತ್ತಾರೆ. ಅವರು ಎಷ್ಟು ಪ್ರತಿಭಾವಂತರು ಎನ್ನುವುದನ್ನು ತಿಳಿದುಕೊಳ್ಳುವ ಪರೀಕ್ಷೆ ಮಾಡುವ ಅಗತ್ಯವೇ ಇರುವುದಿಲ್ಲ ಎಂದು ಹೇಳಲಾಗುವುದು.

ಕುಂಭ
ಜಗತ್ತನ್ನು ವಿಭಿನ್ನವಾಗಿ ನೋಡುವ ಪ್ರತಿಭೆಯನ್ನು ಕಂಡುಕೊಳ್ಳುವ ರಾಶಿಚಕ್ರ ಎಂದು ಹೇಳಲಾಗುವುದು. ಹೊಸತನವನ್ನು ಕಂಡುಕೊಳ್ಳುವ ವಿಶೇಷ ಕಲೆಯನ್ನು ಹೊಂದಿರುತ್ತಾರೆ. ಇವರು ಅತ್ಯುತ್ತಮ ಪ್ರತಿಭೆಯನ್ನು ಹೊಂದಿದ ವ್ಯಕ್ತಿಗಳಾಗಿರುತ್ತಾರೆ. ಹೊಸತನ್ನು ತಿಳಿಯುವುದು ಹಾಗೂ ಅದರ ಮೇಲೆ ಪ್ರಯೋಗ ಕೈಗೊಳ್ಳುವುದು ಎಂದರೆ ಇವರಿಗೆ ಅತ್ಯಂತ ಪ್ರಿಯವಾದ ವಿಚಾರವಾಗಿರುತ್ತವೆ.

ಕುಂಭ
ಹೊಸತನ್ನು ಪ್ರಯತ್ನಿಸಲು ಅವರು ತಮ್ಮ ಸ್ವಂತಿಕ ಮತ್ತು ಮುಕ್ತತೆಯನ್ನು ಬಯಸುತ್ತಾರೆ. ಇವರು ತಮ್ಮ ಪ್ರತಿಭೆಯನ್ನು ಹೊರಹಾಕಲು ಯಾವುದೇ ನಿಯಮಗಳನ್ನು ಬಯಸುವುದಿಲ್ಲ. ಹೊಸ ವಿಚಾರಗಳನ್ನು ತಿಳಿಯಲು ಸಾಕಷ್ಟು ಕುತೂಹಲ ಹಾಗೂ ಕಾತರದಿಂದ ಕೂಡಿರುತ್ತಾರೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಅರ್ಥೈಸಿಕೊಳ್ಳುವುದು ಮತ್ತು ಸಂದರ್ಭಕ್ಕೆ ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಬಹಳ ಬುದ್ಧಿವಂತರು ಎನ್ನಲಾಗುವುದು.

ಮೀನ
ಈ ರಾಶಿಯ ವ್ಯಕ್ತಿಗಳಿಗೆ ಸಂಗೀತ ಹಾಗೂ ಆಧುನಿಕತೆ ಎಂದರೆ ಬಹಳ ಇಷ್ಟ ಹಾಗೂ ಮಹಾನ್ ವಿಚಾರವಾಗಿರುತ್ತವೆ. ಇವರು ಸಾಮಾನ್ಯವಾಗಿ ಸಂಗೀತ, ಕಲೆ ಮತ್ತು ಕನಸುಗಳ ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತಾರೆ. ಇವರು ಸದಾ ಕಾಲ ಸೃಜನಾತ್ಮಕ ರೀತಿಯಲ್ಲಿ ಚಿಂತನೆ ನಡೆಸುತ್ತಲೇ ಇರುತ್ತಾರೆ. ಕನಸುಗಾರರಾದ ಇವರು ಹೊಸ ವಿಚಾರಗಳ ಬಗ್ಗೆಯೂಹೆಚ್ಚಿನ ಚಿಂತನೆ ನಡೆಸುತ್ತಾರೆ.

ಮೀನ
ಇವರು ಸಾಮಾನ್ಯವಾಗಿ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಉತ್ತಮ ಭಾವನೆಗಳನ್ನು ತೋರಿಸಲು ಯಾವುದೇ ಹಿಂಜರಿಕೆಯನ್ನು ವ್ಯಕ್ತಪಡಿಸುವುದಿಲ್ಲ. ಇವರಿಗೆ ವಾದ್ಯ, ಚಿತ್ರಕಲೆ, ಕವಿತೆ ಬರೆಯುವುದು ಎಂದರೆ ಬಹಳ ಇಷ್ಟವಾದ ಸಂಗತಿಗಳಾಗಿರುತ್ತವೆ. ಉತ್ತಮ ಪ್ರತಿಭೆಗಳಿಂದಲೇ ಜೀವನದಲ್ಲಿ ಬಹುಬೇಗ ಯಶಸ್ಸನ್ನು ಪಡೆದುಕೊಳ್ಳುವರು.



Click it and Unblock the Notifications











