Latest Updates
-
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ?
ಈ 4 ರಾಶಿಚಕ್ರದವರಿಗೆ ಮೂಗಿನ ಮೇಲೆ ಸಿಟ್ಟು-ಇವರ ಕೋಪವನ್ನು ನಿಯಂತ್ರಿಸುವುದೇ ಕಷ್ಟ!
ಸಿಟ್ಟು ಎನ್ನುವುದು ನವರಸಗಳಲ್ಲಿ ಒಂದು. ವ್ಯಕ್ತಿಯ ಮನಸ್ಸಿಗೆ ಅಹಿತಕರವಾದ ಭಾವನೆ ಉಂಟಾದಾಗ ಅಥವಾ ತಾವು ಅಂದುಕೊಂಡಿರುವುದು ನೆರವೇರದೆ ಇರುವಾಗ ಸಾಮಾನ್ಯವಾಗಿ ಸಿಟ್ಟಿಗೆ ಒಳಗಾಗುತ್ತಾರೆ. ಸಿಟ್ಟು ಎನ್ನುವುದು ಮನುಷ್ಯನ ವೈರಿ ಎಂದು ಕರೆಯಲಾಗುತ್ತದೆ. ಏಕೆಂದರೆ ಸಿಟ್ಟು ವ್ಯಕ್ತಿಯ ಭಾವನೆಯ ಮೇಲೆ ಬಹುಬೇಗ ಪರಿಣಾಮ ಬೀರುವ ಸಂವೇದನೆ. ಸಿಟ್ಟು ಬಹುಬೇಗ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಬದಲಾಯಿರುತ್ತದೆ. ಸಿಟ್ಟಿಗೆ ಒಳಗಾದ ವ್ಯಕ್ತಿ ಏನು ಮಾಡುತ್ತಾನೆ ಎನ್ನುವುದು ಅವನ ಅರಿವಿನಲ್ಲಿಯೇ ಇರುವುದಿಲ್ಲ. ಸಿಟ್ಟಿನಿಂದ ಒಂದಿಷ್ಟು ಹಾನಿ ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಿಟ್ಟು ಬಂದಾಗ ಸಾಮಾನ್ಯವಾಗಿ ಅದನ್ನು ನಿಯಂತ್ರಿಸುವ ಕಲೆ ನಮಗಿರಬೇಕು.
ಸಿಟ್ಟಿಗೆ ಒಳಗಾದಾಗ ಎಲ್ಲವೂ ನಕಾರಾತ್ಮಕ ರೀತಿಯಲ್ಲಿಯೇ ಕಾಣುತ್ತದೆ. ಹಾಗಾಗಿ ಸಿಟ್ಟಿಗೆ ಒಳಗಾದಾಗ ಯಾವುದೇ ನಿರ್ಧಾರವನ್ನು ಕೈಗೊಳ್ಳಬಾರದು. ಸಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಎಂದಿಗೂ ಒಳ್ಳೆಯದನ್ನು ಮಾಡದು. ಸಿಟ್ಟಿಗೆ ಒಳಗಾದುದರ ಪರಿಣಾಮವಾಗಿ ಅನೇಕ ಅಹಿತಕರ ಘಟನೆ ಉಂಟಾಗಿರುವುದನ್ನು ನಾವು ಪುರಾಣ ಇತಿಹಾಸಗಳಲ್ಲಿ ಕಾಣಬಹುದು. ಎಂತಹ ಸ್ಥಿತಿಯಲ್ಲಾದರೂ ಹೃದಯದಿಂದ ನೋಡಿದರೆ ಎಲ್ಲವೂ ಉತ್ತಮವಾಗಿ ಕಾಣುವುದು.

ಈ 4 ರಾಶಿಚಕ್ರದ ವ್ಯಕ್ತಿಗಳಿಗೆ ಕೆಟ್ಟ ರೀತಿಯ ಸಿಟ್ಟು ಬರುತ್ತದೆಯಂತೆ!
ಮನುಷ್ಯನ ಸಂವೇದನೆಗಳಲ್ಲಿ ಸಿಟ್ಟು ಸಹಜವಾದದ್ದು. ಈ ಸಿಟ್ಟು ಉದ್ಭವವಾಗುವ ರೀತಿ, ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹಾಗೂ ಸಿಟ್ಟಿಗೆ ಒಳಗಾದಾಗ ಉಂಟಾಗುವ ವ್ಯಕ್ತಿಯ ವರ್ತನೆಗಳ ಪರಿವರ್ತನೆಯು ಅವರವರ ರಾಶಿಚಕ್ರ ಹಾಗೂ ಗ್ರಹಗಳ ಪ್ರಭಾವವನ್ನು ಒಳಗೊಂಡಿರುತ್ತದೆ. ಅದರಲ್ಲೂ ನಾಲ್ಕು ರಾಶಿಚಕ್ರದ ವ್ಯಕ್ತಿಗಳು ಕೆಟ್ಟ ರೀತಿಯ ಸಿಟ್ಟಿಗೆ ಒಳಗಾಗುತ್ತಾರೆ ಎನ್ನಲಾಗುವುದು. ಹಾಗಾದರೆ ಆ ರಾಶಿಚಕ್ರಗಳ ಸಿಟ್ಟಿನ ವರ್ತನೆಗಳು ಹಾಗೂ ಮಾನಸಿಕ ಬದಲಾವಣೆಗಳ ಬಗ್ಗೆ ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ
ಮೇಷರಾಶಿಯ ವ್ಯಕ್ತಿಗಳು ಹಠಾತ್ ಹಾಗೂ ಆಕ್ರಮಣಕಾರಿ ವರ್ತನೆಯನ್ನು ಒಳಗೊಂಡಿರುತ್ತಾರೆ. ಸ್ಪರ್ಧಾತ್ಮಕ ಮನೋಭಾವದವರಾದ ಇವರು ಬಹುಬೇಗ ನಿರಾಶೆಗೆ ಒಳಗಾಗುತ್ತಾರೆ.
Most Read:ಮನೆಯ ವಾಸ್ತು ಸಮಸ್ಯೆಯಿಂದ ಕೂಡ, ಆತ್ಮಹತ್ಯೆ ಆಲೋಚನೆ ಬರುತ್ತದೆಯಂತೆ!!
ಮೇಷ
ಘರ್ಷಣೆಗಳು ಮತ್ತು ಕಿರಿಕಿರಿಯನ್ನು ಎದುರಿಸುವಾಗ ಅವರು ಕೋಪದಿಂದ ಪ್ರತಿಕ್ರಿಯಿಸುತ್ತಾರೆ. ತಾಳ್ಮೆಯನ್ನು ಹೊಂದಿರದ ಈ ವ್ಯಕ್ತಿಗಳು ತಾವು ಕೈಗೊಂಡ ನಿರ್ಧಾರ ಅಥವಾ ಕೆಲಸದಲ್ಲಿ ಕೊಂಚ ಬದಲಾವಣೆ ಅಥವಾ ವ್ಯತ್ಯಾಸ ಉಂಟಾದರೂ ಬಹುಬೇಗ ಕೋಪಕ್ಕೆ ಒಳಗಾಗುತ್ತಾರೆ.

ಕರ್ಕ
ಕರ್ಕ ರಾಶಿಯವರು ಭಾವನಾತ್ಮಕ ಮತ್ತು ಸೂಕ್ಷ್ಮ ಪ್ರವೃತ್ತಿಯ ವ್ಯಕ್ತಿಗಳಾಗಿರುತ್ತಾರೆ. ಇವರು ಅತಿಯಾದ ಅಸಮಧಾನವನ್ನು ಸಹಿಸುವುದಿಲ್ಲ. ನಿರಾಶೆಯು ಇವರ ಭಾವನೆಗಳ ಮೇಲೆ ತೀಕ್ಷ್ಣವಾದ ಪರಿಣಾಮ ಬೀರುವುದು.

ಕರ್ಕ
ಅನುಮಾನಾಸ್ಪದ ಪ್ರವೃತ್ತಿಯನ್ನು ಹೊಂದಿರುವ ಇವರು ತಮ್ಮ ಸಂಗಾತಿ ಹಾಗೂ ಸ್ನೇಹಿತರಲ್ಲಿ ವಾದಮಾಡುವಾಗ ಸಾಕಷ್ಟು ಗಂಭೀರ ಸ್ಥಿತಿ ಹಾಗೂ ಸಿಟ್ಟಿಗೆ ಒಳಗಾಗುವರು. ಇವರ ಪರವಾಗಿ ಸ್ನೇಹಿತರು ಅಥವಾ ಆಪ್ತರು ನಿಲ್ಲದೆ ಹೋದರೆ ಬಹು ನಿರಾಶೆ ಹಾಗೂ ಸಿಟ್ಟನ್ನು ಹೊಂದುವರು.

ಸಿಂಹ
ಈ ರಾಶಿಯವರು ಶಾಂತರೀತಿಯ ಪ್ರವೃತ್ತಿ ಹೊಂದುವುದು ಎಂದರೆ ಆಶ್ಚರ್ಯ ಉಂಟುಮಾಡುವುದು. ಇವರು ಸಾಮಾನ್ಯವಾಗಿ ಸದಾ ಜೋರಾದ ಮತ್ತು ತೀವ್ರತರದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಕೆಲವು ಸಣ್ಣ ಪುಟ್ಟ ವಿಚಾರಗಳು ಸಹ ಕೆಲವೊಮ್ಮೆ ಅತಿಯಾದ ಅಸಮಧಾನಕ್ಕೆ ಕಾರಣವಾಗುವುದು.

ಸಿಂಹ
ತಾವು ಇತರರಿಗೆ ನೀಡಿದ ಕೆಲವು ವಸ್ತುಗಳನ್ನು ಹಿಂತಿರುಗಿ ಪಡೆಯುವಾಗ ಯಾವುದೇ ಹಾನಿ ಉಂಟಾಗಿದ್ದರೆ, ಕೋಪ ಅವರ ನಿಯಂತ್ರಣದಲ್ಲಿ ಇರುವುದಿಲ್ಲ. ಇವರು ಸಾರ್ವಜನಿಕ ಸ್ಥಳದಲ್ಲೂ ಸಹ ದೊಡ್ಡ ದೃಶ್ಯಗಳನ್ನು ಉಂಟುಮಾಡುವಂತಹ ಕೋಪವನ್ನು ತೋರುವರು.

ವೃಶ್ಚಿಕ
ಈ ರಾಶಿಯವರು ಬಹುತೇಕ ಸಂದರ್ಭದಲ್ಲಿ ಸಮರ್ಥನೀಯ ಮತ್ತು ಉಗ್ರರಾಗಿರುತ್ತಾರೆ. ವಿಷಯಗಳು ತಮ್ಮ ರೀತಿಯಲ್ಲಿ ಅಥವಾ ಪರವಾಗಿ ಇಲ್ಲವಾದರೆ ಬಹುಬೇಗ ಕೋಪಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಕೆಲವೊಮ್ಮೆ ಹಿಂಸಾತ್ಮಕ ಪ್ರವೃತ್ತಿಯನ್ನು ತೋರುವ ಸಾಧ್ಯತೆಗಳಿವೆ. ಕಿರಿಕಿರಿ ಉಂಟಾದಾಗ ತಮ್ಮ ನಿಯಂತ್ರಣ ಮೀರಿದಂತಹ ಕೋಪವನ್ನು ತೋರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು. ಹಾಗಾಗಿ ಕೋಪಕ್ಕೆ ಒಳಗಾದ ವೃಶ್ಚಿಕ ರಾಶಿಯ ವ್ಯಕ್ತಿಗಳ ಜೊತೆಗೆ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುವುದು.



Click it and Unblock the Notifications











