Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಈ ಸ್ಥಳಗಳಿಗೆ ಹೋಗುವಾಗ ಎಚ್ಚರಿಕೆ ಇರಲಿ...ಏಕೆಂದರೆ ಇದು ದೆವ್ವಗಳ ವಾಸಸ್ಥಳ...
ಸುತ್ತಲು ಕತ್ತಲು, ಮಧ್ಯದಲ್ಲೆಲ್ಲೋ ಚಿಕ್ಕದಾಗಿ ಗೋಚರಿಸುತ್ತಿರುವ ಬೆಳಕಿನ ಕಿಡಿ... ನಿಶ್ಯಬ್ಧವಾದ ವಾತಾವರಣ... ಹತ್ತಿರದಲ್ಲೆಲ್ಲೂ ಮನುಷ್ಯರ ಸುಳಿವಿಲ್ಲ... ಎಷ್ಟು ದೂರದ ವರೆಗೆ ಕಣ್ಣು ಹಾಯಿಸಿದರೂ ಕಾಣುವುದು ಬರೀ ಕತ್ತಲು... ಜೋರಾಗಿ ಬೀಸುವ ಗಾಳಿ... ವಿಚಿತ್ರವಾದ ಹಕ್ಕಿಗಳ ಕೂಗು... ಇವುಗಳನ್ನು ಕಲ್ಪಿಸಿಕೊಂಡರೆ ಒಮ್ಮೆ ಉಸಿರು ನಿಂತಷ್ಟು ಭಯವಾಗುತ್ತದೆ. ಇನ್ನು ಆ ಸ್ಥಳದಲ್ಲಿ ನಮ್ಮ ಉಪಸ್ಥಿತಿಯಿದ್ದರೆ ಹೇಗಾಗಬಹುದು ಅಲ್ಲವಾ?
ನಿಜ, ಭಾರತದ ಹಲವೆಡೆ ಅನೇಕ ಪುರಾತನ ತಾಣಗಳಿವೆ. ಇವು ಜನ ನಿಬಿಡ ಪ್ರದೇಶಗಳಾಗಿ ಮಾರ್ಪಟ್ಟಿವೆ. ಇಲ್ಲಿ ಕೆಲವು ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಜನರ ಮನಸ್ಸಿಗೆ ಭೀಕರತೆ ಹಾಗೂ ಭಯವನ್ನು ಮೂಡಿಸಿದೆ. ಆದ್ದರಿಂದ ಅಂತಹ ಪ್ರದೇಶಗಳಿಗೆ ಜನರು ಭೇಟಿ ನೀಡುವುದಿಲ್ಲ. ಆ ಜಾಗಗಳಿಗೆ ಭೇಟಿ ನೀಡಬೇಕು ಎಂದರೆ ಅತಿಯಾದ ಎದೆಗಾರಿಕೆ ಅಥವಾ ಧೈರ್ಯ ಹೊಂದಿರಬೇಕು ಎಂದು ಹೇಳುತ್ತಾರೆ. ಭಾರತದೆಲ್ಲೆಡೆ ಇಂತಹ ಸ್ಥಳಗಳು ಹಲವಾರಿವೆ. ಅವುಗಳಲ್ಲಿ ಆಯ್ದ 5 ಸ್ಥಳಗಳ ಪರಿಚಯವನ್ನು ಬೋಲ್ಡ್ ಸ್ಕೈ ನಿಮಗೆ ಪರಿಚಯಿಸುತ್ತಿದೆ. ಅವುಗಳ ಕುರಿತು ಕೆಲವು ಮಾಹಿತಿಯನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗಿದೆ....
ಅಲ್ವಾರ್ ಭಂಗಾರ್ ಕೋಟೆ
ಇದು ಭಾರತದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಈ ಕೋಟೆಯೊಳಗೆ ಅನೇಕ ಅಪಸಾಮಾನ್ಯ ಘಟನೆಗಳು ನಡೆದಿವೆ ಎನ್ನುವ ದಂತಕಥೆಗಳಿವೆ. ಈ ಸ್ಥಳದಲ್ಲಿ ಭಯಾನಕ ಕೃತ್ಯಗಳು ನಡೆದಿರುವ ಅನೇಕ ಘಟನೆಗಳ ವರದಿಯಾಗಿದೆ. ಸೂರ್ಯಾಸ್ತದ ನಂತರ ಈ ಕೋಟೆಯ ಒಳಗೆ ಪ್ರವೇಶವನ್ನು "ಭಾರತದ ಪುರಾತತ್ವ ಸಮೀಕ್ಷೆಯು" ನಿಷೇಧಿಸಿದೆ.
ಕೋಟಾದಲ್ಲಿರುವ ಬ್ರಿಜ್ ರಾಜ್ ಭವನ್
1857ರ ದಂಗೆ ಸಂದರ್ಭದಲ್ಲಿ ಮೇಜರ್ ಬರ್ಟನ್ ಅವರನ್ನು ಕೊಲ್ಲಲಾಯಿತು. ನಂತರದ ದಿನದಲ್ಲಿ ಈ ಸ್ಥಳವು ಬರ್ಟ್‍ನ್ ಅವರ ಆತ್ಮ ಇಲ್ಲಿಯೇ ಇದೆ. ಇದು ಪ್ರೇತದ ರೂಪದಲ್ಲಿ ವಾಸವಿದೆ ಎಂದು ಹೇಳಲಾಗುತ್ತದೆ. 19ನೇ ಶತಮಾನದಲ್ಲಿ ನಿರ್ಮಿಸಲಾದ ಈ ಕೋಟೆಯು ಇದೀಗ ಪ್ರೇತಗಳ ಅರಮನೆಯಾಗಿದೆ ಎನ್ನಲಾಗುವುದು. ಈ ಅರಮನೆಯ ಕಾರಿಡಾರ್‍ಗಳಲ್ಲಿ ಪ್ರೇತಗಳು ಓಡಾಡುತ್ತಿರುತ್ತವೆ. ಇಲ್ಲಿ ಕರ್ತವ್ಯವನ್ನು ಮರೆತು ನಿದ್ರಿಸುವ ಕಾವಲುಗಾರರಿಗೆ ಬಡಿಯುತ್ತದೆ ಎಂದು ಹೇಳಲಾಗುತ್ತದೆ.
ರಾಜಸ್ಥಾನದ ಘೋಸ್ಟ್ ವಿಲೇಜ್ ಕುಲ್ಥಾರ್
19ನೇ ಶತಮಾನದ ಇತಿಹಾಸವನ್ನು ಹೊಂದಿರುವ ಹಳ್ಳಿಯಾಗಿದೆ. 1825ರಲ್ಲಿ ಒಂದು ರಾತ್ರಿ ಕುಲ್ಥಾರ್ ಹಳ್ಳಿಯವರು ಹಾಗೂ ಸುತ್ತಲಿನ 83 ಹಳ್ಳಿಯ ಜನರು ಇದ್ದಕ್ಕಿದ್ದಂತೆ ಎಲ್ಲವನ್ನೂ ಕಳೆದುಕೊಂಡರು ಎನ್ನಲಾಗುತ್ತದೆ. ರಾಜ್ಯದ ಮುಖ್ಯ ಮಂತ್ರಿಯು ಗ್ರಾಮದ ಮುಖ್ಯಸ್ಥನ ಸುಂದರವಾದ ಮಗಳನ್ನು ಪ್ರೀತಿಸುತ್ತಿದ್ದನು. ಗ್ರಾಮದ ತೆರಿಗೆಯನ್ನು ವಿಧಿಸಿದಾಗ ಗ್ರಾಮಸ್ಥರು ಅದನ್ನು ವಿರೋಧಿಸಿದರು. ಜೊತೆಗೆ ಗ್ರಾಮದ ಮುಖ್ಯಸ್ಥರು ಮತ್ತು ಹಳ್ಳಿಯವರು ಗ್ರಾಮವನ್ನು ತ್ಯಜಿಸಿದರು. ಭೂಮಿಯಲ್ಲಿ ಯಾವುದೇ ಆವಾಸಸ್ಥಾನವಿಲ್ಲದೆ ಶಾಪಗ್ರಸ್ತರಾದರು. ಆದ್ದರಿಂದ ಇಂದಿಗೂ ಈ ಹಳ್ಳಿ ಭಯಾನಕತೆಯಿಂದ ಕೂಡಿದೆ.
ಸೂರತ್‍ನ ದಮಾಸ್ ಬ್ಲಾಕ್ ಸ್ಯಾಂಡ್ ಬೀಚ್
ಈ ಕಡಲತೀರವನ್ನು ಸಮಾಧಿಯಾಗಿ ಬಳಸಲಾಗುತ್ತಿತ್ತು. ಇದರಿಂದಾಗಿ ಹಲವಾರು ಚಿತ್ರಹಿಂಸೆಗೆ ಒಳಗಾದ ಆತ್ಮಗಳಿಗೆ ನೆಲೆಯಾಗಿದೆ. ಈ ಕಡಲ ತೀರದಲ್ಲಿ ಒಬ್ಬರೆ ಇದ್ದರೆ ಯಾರೋ ಪಿಸುಗುಟ್ಟಂತೆ ಕೇಳುತ್ತದೆ ಎನ್ನಲಾಗುತ್ತದೆ. ರಾತ್ರಿ ವೇಳೆ ಇಲ್ಲಿಗೆ ಬಂದವರು ಅಥವಾ ಇಲ್ಲಿ ನಡೆದಾಡುವವರು ಮತ್ತೆ ಹಿಂತಿರುಗಿ ಬರುವುದಿಲ್ಲ ಎಂದು ಹೇಳಲಾಗುತ್ತದೆ.
ಶಿಮ್ಲಾದ ಕಾಲ್ಕಾ ರೈಲು ಸುರಂಗ ಮಾರ್ಗ ಸಂಖ್ಯೆ 33
ಕ್ಯಾಪ್ಟನ್ ಬರೋಗ್ನ ಸ್ನೇಹಶೀಲ ಪ್ರೇತವು ಈ ಸ್ಥಳವನ್ನು ಭೇಟಿ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅವರು ಈ ಸುರಂಗ ಮಾರ್ಗವನ್ನು ಕಟ್ಟುವ ಉಸ್ತುವಾರಿಯನ್ನು ಹೊಂದಿದ್ದರು. ಆದರೆ ಅದನ್ನು ನಿರ್ಮಿಸಲು ವಿಫಲರಾದರು. ಬ್ರಿಟಿಷ್ ಅಧಿಕಾರಿಗಳು ಅವರಿಗೆ ದಂಡವಿಧಿಸಿದರು. ಜೊತೆಗೆ ಅವಮಾನದಿಂದ ಅವರನ್ನು ಕೊಲ್ಲಲ್ಪಟ್ಟರು. ಇದೀಗ ಆ ಸುರಂಗದಲ್ಲಿ ಒಬ್ಬ ಮಹಿಳೆ ಕಿರುಚುತ್ತಾ ಸಾಗುತ್ತಾಳೆ. ನಂತರ ತೆಳುವಾದ ಗಾಳಿಯಲ್ಲಿ ಕಣ್ಮರೆಯಾಗುತ್ತಾಳೆ ಎಂದು ಸ್ಥಳೀಯರು ಹೇಳುತ್ತಾರೆ.