For Quick Alerts
ALLOW NOTIFICATIONS  
For Daily Alerts

ಈ 5 ರಾಶಿಯವರು ಅನಾವಶ್ಯಕ ವಾದ ಮಾಡುವ ಅಭ್ಯಾಸ ಹೊಂದಿರುತ್ತಾರೆ!

|

ಪ್ರತಿಯೊಬ್ಬರಿಗೂ ಮಾತು ಎನ್ನುವುದು ಬಹಳ ಮುಖ್ಯ. ಉತ್ತಮ ಮಾತುಗಾರಿಕೆಯಿಂದ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಬಹುದು. ಹಾಗಾಗಿ ನಾವು ಮಾತನಾಡುವಾಗ ಹೆಚ್ಚು ಚಿಂತನೆ ನಡೆಸಬೇಕಾಗುವುದು. ನಾವು ಆಡುವ ಮಾತಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದರಿಂದ ಇನ್ನೊಬ್ಬರ ಮನಸ್ಸಿಗೆ ನೋವು ಉಂಟಾಗಬಹುದು. ಹಾಗಾಗಿಯೇ ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂದು ಹೇಳುತ್ತಾರೆ. ನಾವು ಆಡುವ ಪ್ರತಿಯೊಂದು ಪದಗಳು ಅಥವಾ ಮಾತುಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅತಿಯಾಗಿ ಮಾತನಾಡುತ್ತಾರೆ. ಇನ್ನೂ ಕೆಲವರು ಮಿತವಾದ ಮಾತುಗಾರಿಕೆಯನ್ನು ಹೊಂದಿರುತ್ತಾರೆ. ಬಹುತೇಕ ಜನರು ಯಾವುದಾದರೂ ಒಂದು ವಿಚಾರದ ಬಗ್ಗೆ ಮಾತನಾಡುವಾಗ ತಮ್ಮದೇ ಆದ ಚಿಂತನೆಗಳ ಮೂಲಕ ವಾದಕ್ಕೆ ಇಳಿಯುತ್ತಾರೆ. ಆ ವಾದಗಳು ವಿಷಯಕ್ಕೆ ಎಷ್ಟು ಹೊಂದಿಕೆಯಾಗಿರುತ್ತದೆ? ಅದರಲ್ಲಿ ಹುರುಳಿದೆಯೇ? ಇಲ್ಲವೇ? ಎನ್ನುವುದರ ಬಗ್ಗೆ ಚೂರು ಚಿಂತಿಸುವುದಿಲ್ಲ.

ಬದಲಿಗೆ ತಾವು ಮಾತನಾಡುತ್ತಿರುವ ವಿಷಯದಲ್ಲಿ ತಾವೇ ಮೇಲುಗೈ ಸಾಧಿಸಬೇಕು ಎನ್ನುವ ಹಂಬಲ ಅಷ್ಟೆ. ರಾಶಿಚಕ್ರಗಳ ಪ್ರಕಾರ 5 ರಾಶಿಚಕ್ರದವರು ಅತಿಯಾಗಿ ವಾದ ಮಾಡುತ್ತಾರೆ. ಇವರ ಮುಂದೆ ವಾದಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಅದು ಯಾವ ರಾಶಿ ಚಕ್ರಗಳು? ಎನ್ನುವದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ಒಬ್ಬ ದೊಡ್ಡ ಜಗಳಗಂಟರು ಹಾಗೂ ವಾದ ಮಾಡುವವರು ಎಂದು ಹೇಳಲಾಗುವುದು. ಇವರು ಒಂದು ವಿಚಾರದ ಬಗ್ಗೆ ಸಾಕಷ್ಟು ಮಾತುಗಳನ್ನು ಆಡಬಲ್ಲರು. ಆದರೆ ಅದರು ಚರ್ಚೆಗೆ ಇಳಿದಾಗ ಅಥವಾ ತರ್ಕದ ತಿರುವನ್ನು ಪಡೆದುಕೊಂಡರೆ ಸಾಕಷ್ಟು ಸಮಯದವರೆಗೂ ತಮ್ಮದೇ ಆದ ರೀತಿಯಲ್ಲಿ ವಾದಗಳನ್ನು ಮಾಡುತ್ತಲೇ ಇರುತ್ತಾರೆ. ಅವರು ಏನು ಹೇಳುತ್ತಾರೋ ಅದನ್ನು ಹಾಗೆಯೇ ಸ್ವೀಕರಿಸಬೇಕು. ಇಲ್ಲವಾದರೆ ಅದು ಸಹಿಸಲಾಗದಂತಹ ವಾದಗಳಾಗಿ ಪರಿವರ್ತನೆ ಹೊಂದುವುದು.

ವೃಷಭ

ವೃಷಭ

ಈ ರಾಶಿಯವರು ನೈಸರ್ಗಿಕವಾಗಿಯೇ ಜಗಳಗಂಟರು ಎನ್ನಬಹುದು. ಇವರು ಒಮ್ಮೆ ವಾದಕ್ಕೆ ಇಳಿದರು ಎಂದಾದರೆ ಅದನ್ನು ಅಷ್ಟು ಸುಲಭವಾಗಿ ನಿಲ್ಲಿಸಲಾರರು. ಎದುರಿಗಿರುವ ವ್ಯಕ್ತಿಯು ಅದನ್ನು ಪ್ರಶ್ನಿಸದೆಯೇ ಹಾಗೆಯೇ ಸ್ವೀಕರಿಸಬೇಕು ಅಷ್ಟೆ. ಇವರು ತಮ್ಮ ವ್ಯಕ್ತಿತ್ವದ ಬಗ್ಗೆ ತಪ್ಪು ಕಲ್ಪನೆಯನ್ನು ಪಡೆದುಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಇವರು ಎಲ್ಲರಲ್ಲೂ ತಮ್ಮದೇ ಆದ ಭರವಸೆಯನ್ನು ಹೊಂದಿದ್ದಾರೆ. ಇವರ ಸಮರ್ಥನೆಗೆ ವಿರುದ್ಧವಾಗಿ ಮಾತನಾಡಿದರೆ ತಮ್ಮ ಗೆಲುವು ಸಂಭವಿಸುವ

ತನಕವೂ ವಾದವನ್ನು ಮಾಡುತ್ತಲೇ ಇರುತ್ತಾರೆ.

ಸಿಂಹ

ಸಿಂಹ

ಸಿಂಹ ರಾಶಿಯವರು ಸೂಕ್ಷ್ಮವಾದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಯಾವುದಾದರೂ ವಿಚಾರದಲ್ಲಿ ಭಿನ್ನಾಭಿಪ್ರಾಯ ಎದುರಾದರೆ ಗಂಟೆಗಳ ಕಾಲ ವಾದ ಮಾಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಇವರ ವ್ಯಕ್ತಿತ್ವ ತೀವ್ರತೆಯ ವಿಚಾರಗಳನ್ನು ವಿರೋಧಿಸುತ್ತದೆ. ಇವರೊಂದಿಗೆ ಸಂಭವನೀಯವಾಗಿ ಅಥವಾ ಆಕಸ್ಮಿಕವಾಗಿ ವಾದಗಳು ಪ್ರಾರಂಭವಾದರೆ ಅದು ಗಂಭೀರ ಸ್ಥಿತಿಗೆ ತಲುಪಬಹುದು. ನಂತರದಲ್ಲಿ ಅದು ಬಿಸಿ ಬಿಸಿಯಾದ ಚರ್ಚೆಯಾಗಿ ಪರಿಣಮಿಸುವುದು. ಇವರೊಂದಿಗೆ ವಾದವನ್ನು ನಿಲ್ಲಿಸಬೇಕು ಎಂದರೆ ಅವರಲ್ಲಿ ಕ್ಷಮೆಯಾಚಿಸುವುದು ಒಳಿತು ಎಂದು ಹೇಳಲಾಗುತ್ತದೆ.

ಕರ್ಕ

ಕರ್ಕ

ಕರ್ಕಾಟಕ ರಾಶಿಯವರು ಜಗಳವಾಡುವವರಲ್ಲ, ಬದಲಾಗಿ ಜೂಜಾಡುವವರು. ಅಂದರೆ ತಮ್ಮ ಉತ್ತರಗಳನ್ನು ನೀಡುವಾಗ ತೂಗುಯ್ಯಾಲೆ ಮಾಡುವುದು ಜಾಸ್ತಿ. ಇವರ ವರ್ತನೆಗಳು, ಉತ್ತರಗಳು ಎಲ್ಲವೂ ಅವರ ಆಗಿನ ಮನಸ್ಥಿತಿಯನ್ನು ಆಧರಿಸುತ್ತದೆ. ಒಂದೇ ಪ್ರಶ್ನೆಗೆ ವಿವಿಧ ರೀತಿಯಲ್ಲಿ ಇವರು ಉತ್ತರಿಸಿಬಿಡುತ್ತಾರೆ. ಹಾಗಾಗಿ ಇವರೊಡನೆ ಯಾವುದಾದರೂ ಪ್ರಮುಖ ವಿಚಾರ ಪ್ರಸ್ತಾಪಿಸುವಾಗ ಎರಡು ಭಿನ್ನ ಪ್ರತಿಕ್ರಿಯೆಗಳನ್ನು ನಿರೀಕ್ಷೆಯಲ್ಲಿಟ್ಟು ಕೊಂಡೇ ಮಾತನಾಡಬೇಕು. ಹಾಗಾಗಿ ಅವರೊಡನೆ ವಾದಕ್ಕಿಳುವಾಗ ಜಾಗೃತರಾಗಿರಿ.

ಮಿಥುನ

ಮಿಥುನ

ಮಿಥುನ ರಾಶಿಯವರು ಮೌನಿಗಳು, ಭಾವನಾತ್ಮಕ ಜೀವಿಗಳು, ಪ್ರಬುದ್ಧ ವ್ಯಕ್ತಿತ್ವವನ್ನು ಹೊಂದಿರುವವರೇ ಆಗಿದ್ದರೂ ಕೂಡ ಇವರ ಭಾವನೆಗಳು ಏರುಪೇರಾಗುತ್ತಿರುತ್ತೆ. ಸೂಕ್ಷ್ಮ ವಿಚಾರಗಳನ್ನು ಇವರೊಡನೆ ಮಾತನಾಡುವಾಗ ಬಹಳ ಜಾಗರೂಕತೆ ಬೇಕು ಯಾಕೆಂದರೆ ಒಂದು ವೇಳೆ ಇವರ ಭಾವನೆಗಳಿಗೆ ನೀವು ಧಕ್ಕೆ ತಂದರೆ ಅದನ್ನು ಅವರು ಸೀರಿಯಸ್ ಆಗಿ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ತಿಂಗಳಾಗಿರಲಿ, ವರ್ಷವಾಗಿರಲಿ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಮುಂದೊಂದು ದಿನ ಇವರು ನಿಮ್ಮೊಡನೆ ಜಗಳಕ್ಕಿಳಬಹುದು. ಹಾಗಾಗಿ ಮಿಥುನ ರಾಶಿಯವರೊಡನೆ ಜಾಗರೂಕತೆಯಿಂದ ವರ್ತಿಸುವುದು ಬಹಳ ಒಳಿತು.

English summary

Thses Zodiac Signs Who Argue The Most

ಮನುಷ್ಯನಾಗಿ ಹುಟ್ಟಿದ ಮೇಲೆ ಕೋಪ ಸಹಜವೇ. ಆದರೆ ಕೆಲವು ರಾಶಿಯವರಿಗೆ ಕೋಪ ಅತೀ ಬೇಗನೆ ಬಂದುಬಿಡುತ್ತೆ. ನಾವು ಹೇಳುತ್ತೇವಲ್ಲ ಅವರಿಗೆ ಮೂಗಿನ ತುದಿಯಲ್ಲೇ ಕೋಪವಿರುತ್ತೆ ಎಂದು ಹಾಗೆ. ಹಿಂದೆಮುಂದೆ ಆಲೋಚನೆ ಮಾಡದೆ ಥಟ್ ಅಂತ ಎಗರಾಡಿಬಿಡುವುದು ಅವರ ಅಭ್ಯಾಸ. ಅದರಲ್ಲೂ ಈ 5 ರಾಶಿಯವರಿಗೆ ಕೋಪ ಬರುವುದು ಬಹಳ ಬೇಗ. ಕೋಪ ಬರಲು ಅದು ಹೋಗಿರುವುದೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಆ ರಾಶಿಯವರು ಯಾರೆಂದರೆ - ವೃಶ್ಚಿಕ, ವೃಷಭ, ಸಿಂಹ ,ಮಿಥುನ, ಕರ್ಕಾಟಕ
X
Desktop Bottom Promotion