Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ನಾಲ್ಕು ರಾಶಿಯವರು ತುಂಬಾನೇ ಸಿಟ್ಟು ಮಾಡಿಕೊಳ್ಳುತ್ತಾರಂತೆ!
ಕೋಪ/ಸಿಟ್ಟು ಎನ್ನುವುದು ಮನುಷ್ಯನ ಸಾಮಾನ್ಯ ಸಂವೇದನೆಗಳಲ್ಲಿ ಒಂದು. ತಾನು ಅಂದುಕೊಂಡಿದ್ದು ದೊರೆಯದಿದ್ದಾಗ, ಮನಸ್ಸು ಬಯಸಿದ್ದು ಸಿಗದೆ ಇರುವಾಗ, ಇತರರ ಕಾರಣದಿಂದ ಜೀವನ ಹಾಳಾದಾಗ, ಅನಗತ್ಯ ಕಾರಣಗಳಿಂದಾಗಿ ಇತರರು ಕಿರಿಕಿರಿ ಉಂಟುಮಾಡಿದರೆ ಹೀಗೆ ವಿವಿಧ ಕಾರಣಗಳಿಂದಾಗಿ ಕೋಪ/ಸಿಟ್ಟು ಬರುವುದು ಸಹಜ. ಸಿಟ್ಟು ಎನ್ನುವುದು ವ್ಯಕ್ತಿಯನ್ನು ಆವರಿಸಿರುವಾಗ ವ್ಯಕ್ತಿ ಏನು ಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ.
ಸಿಟ್ಟು ಬಂದಾಗ ಕೆಲವರು ತಮ್ಮ ಸುತ್ತಲಿನ ವಸ್ತುಗಳನ್ನು ನಾಶಮಾಡಬಹುದು, ಕೆಲವರು ಸುತ್ತಲ ವ್ಯಕ್ತಿಗಳ ಮೇಲೆ ಹರಿಹಾಯಬಹುದು ಅಥವಾ ಇನ್ನೂ ಕೆಲವರು ತಮಗೆ ತಾವೇ ನೋವನ್ನುಂಟು ಮಾಡುಕೊಳ್ಳುವರು. ತಮ್ಮ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮೌನದ ಮೊರೆ ಹೋಗುವವರು ಬೆರಳೆಣಿಕೆಯ ಮಂದಿ ಎಂದು ಹೇಳಬಹುದು.

ಕೆಲವರು ತಮ್ಮ ರಾಶಿಚಕ್ರ ಹಾಗೂ ಗ್ರಹಗಳ ಪ್ರಭಾವದಿಂದ ಸಣ್ಣ ಪುಟ್ಟ ಸಮಸ್ಯೆಗಳಿಗೂ ಅಧಿಕ ಉದ್ವೇಗಕ್ಕೆ ಒಳಗಾಗುತ್ತಾರೆ. ಇವರು ಸಿಟ್ಟಿನಲ್ಲಿ ಇರುವಾಗ ಮಾತನಾಡಿಸುವಾಗ ಸಾಕಷ್ಟು ಚಿಂತನೆ ನಡೆಸಬೇಕಾಗುವುದು. ಇವರಿಗೆ ಕೋಪ ಕಡಿಮೆಯಾದ ಬಳಿಕ ಮಾತನಾಡಬೇಕು ಅಷ್ಟೆ. ಹಾಗಾದರೆ ಅತಿಯಾದ ಸಿಟ್ಟಿನ ರಾಶಿಚಕ್ರದ ಪಟ್ಟಿಯಲ್ಲಿ ಯಾವ ರಾಶಿಚಕ್ರದವರು ನಿಲ್ಲುತ್ತಾರೆ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ
ಈ ರಾಶಿಯ ವ್ಯಕ್ತಿಗಳು ಹಠಾತ್ ಕೋಪಕ್ಕೆ ಒಳಗಾಗುತ್ತಾರೆ. ಇವರಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಕಾಣಬಹುದು. ಸ್ಪರ್ಧಾತ್ಮಕ ಮನೋಭಾವವನ್ನು ಹೊಂದಿರುವ ಇವರು ಸುಲಭವಾಗಿ ನಿರಾಶೆಗೆ ಒಳಗಾಗುತ್ತಾರೆ. ಘರ್ಷಣೆ ಮತ್ತು ಕಿರಿಕಿರಿಗೆ ಒಳಗಾದಾಗ ಬಹುಬೇಗ ಕೋಪಗೊಳ್ಳುತ್ತಾರೆ ಎನ್ನಲಾಗುವುದು. ಇವರಲ್ಲಿ ತಾಳ್ಮೆಯ ಪ್ರಮಾಣ ಕಡಿಮೆಯಿರುವುದೇ ಇದಕ್ಕೆ ಕಾರಣ ಎನ್ನಬಹುದು.

ಕರ್ಕ
ಈ ರಾಶಿಯ ವ್ಯಕ್ತಿಗಳು ಭಾವನಾತ್ಮಕ ಮತ್ತು ಸೂಕ್ಷ್ಮ ಪ್ರವೃತ್ತಿಯವರು ಎನ್ನಬಹುದು. ಇವರು ಅಸಮಧಾನಗೊಂಡಾಗ ಹಾಗೂ ನಿರಾಶೆಗೆ ಒಳಗಾದಾಗ, ಸಂಗಾತಿ ಅಥವಾ ಸ್ನೇಹಿತರೊಂದಿಗೆ ವಾದಕ್ಕೆ ಒಳಗಾದ ಸಂದರ್ಭದಲ್ಲಿ ಅಧಿಕ ಸಿಟ್ಟನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರ ಕೋಪ ಅಧಿಕವಾಗಿರುವಾಗ ಕೋಪಕ್ಕೆ ಕಾರಣರಾದವರಿಗೆ ಹೊಡೆಯುವ ಸಾಧ್ಯತೆಗಳು ಇರುತ್ತವೆ.

ಸಿಂಹ
ಈ ರಾಶಿಯವರು ತೊಂದರೆಗೆ ಒಳಗಾದಾಗ ಸಾಕಷ್ಟು ಸಮಾಧಾನದಲ್ಲಿಯೇ ಇರುತ್ತಾರೆ. ಯಾವಾಗ ಇವರ ತಾಳ್ಮೆ ಮೀರಿ ಅತಿಯಾದ ತೊಂದರೆ ಹಾಗೂ ಅಸಮಧಾನಕ್ಕೆ ಒಳಗಾಗುತ್ತಾರೋ ಆಗ ಅವರ ಸಿಟ್ಟು ನಿಯಂತ್ರಣವನ್ನು ತಪ್ಪಿರುತ್ತದೆ. ಅಲ್ಲದೆ ಇವರ ಸ್ನೇಹಿತರು ಇವರಿಂದ ಅಂಗಿಯನ್ನು ಎರವಲು ಪಡೆದು, ಬಳಿಕ ಹಿಂತಿರುಗಿಸುವಾಗ ಅದರ ಮೇಲೆ ಯಾವುದೇ ಹಾನಿ ಉಂಟಾಗಿದ್ದರೆ ದೊಡ್ಡ ಸಿಟ್ಟನ್ನು ತೋರುವರು. ಅನಿರೀಕ್ಷಿತವಾಗಿ ಉಂಟಾಗುವ ಸಮಸ್ಯೆಗಳಿಗೆ ಅಧಿಕ ಸಿಟ್ಟನ್ನು ತೋರುವರು ಎನ್ನಲಾಗುವುದು.

ವೃಶ್ಚಿಕ
ಈ ರಾಶಿಚಕ್ರದವರು ಸಾಮಾನ್ಯವಾಗಿ ಸಮರ್ಥನೀಯ ಹಾಗೂ ಬೆಂಕಿಯ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ವಿಷಯವು ಇವರ ದಾರಿಯಲ್ಲಿ ಇಲ್ಲದಿದ್ದರೆ ಬಹಳ ಕೋಪವನ್ನು ತೋರುವರು. ಕೆಲವೊಮ್ಮೆ ಹಿಂಸಾತ್ಮಕ ರೂಪವನ್ನು ತಾಳುವರು. ಇವರು ಅತಿಯಾದ ಕಿರಿಕಿರಿಗೆ ಒಳಗಾದರೆ ವಸ್ತುಗಳನ್ನು ಮುರಿಯುವ ಸಾಧ್ಯತೆಗಳಿವೆ. ಹಾಗಾಗಿ ಸಿಟ್ಟಿಗೆ ಒಳಗಾದ ವೃಶ್ಚಿಕ ರಾಶಿಯವರ ಬಗ್ಗೆ ಹೆಚ್ಚಿನ ಜಾಗರೂಕತೆಯಲ್ಲಿ ಇರಬೇಕು.



Click it and Unblock the Notifications
