Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ವೃಷಭ ರಾಶಿಯವರು ಎದುರಿಸುವಂತಹ ಸಮಸ್ಯೆಗಳು ಇಲ್ಲಿದೆ ನೋಡಿ...
ವೃಷಭ ರಾಶಿಯವರ ಸೌಂದರ್ಯದಲ್ಲಿ ಯಾರಿಗೂ ಕಡಿಮೆಯೇನಲ್ಲ. ಶುಕ್ರನು ಅಧಿಪತಿಯಾಗಿರುವಂತಹ ಈ ರಾಶಿಯವರು ಶಾಂತಿ ಹಾಗೂ ಪ್ರೇಮಕ್ಕೆ ಮನಸೋಲುವವರು. ಶಾಂತಿ ಬಯಸುವ ಕಾರಣದಿಂದಾಗಿ ವೃಷಭ ರಾಶಿಯವರು ಸ್ನೇಹಿತರು ಮಾತ್ರವಲ್ಲದೆ, ಇತರರನ್ನು ಕೂಡ ಹೆಚ್ಚು ಪ್ರೀತಿಸುವರು. ಆದರೆ ಒಮ್ಮೆ ಪ್ರೀತಿಗೆ ಬೀಳುವಂತಹ ವೃಷಭ ರಾಶಿಯವರಿಗೆ ಅದರಿಂದ ಮೇಲೆ ಬರಲು ತುಂಬಾ ಕಷ್ಟವಾಗುವುದು.
ಇವರಿಗೆ ಪ್ರೇಮದ ವಿಚಾರದಲ್ಲಿ ಯಾರಾದರೂ ಮೋಸ ಮಾಡಿದರೆ ಅದರಿಂದ ಹೊರಬರಲು ತುಂಬಾ ಕಷ್ಟಪಡುವರು. ಇವರು ತುಂಬಾ ಸಭ್ಯ ಪ್ರೇಮಿಗಳು ಎಂದು ಪರಿಗಣಿಸಲಾಗಿದೆ. ಆದರೆ ಪ್ರೇಮವೈಫಲ್ಯವಾದರೆ ಆಗ ಏನಾಗುವುದು ಎಂದು ತಿಳಿಯಿರಿ.
ರಾಶಿಚಕ್ರದಿಂದ ವ್ಯಕ್ತಿಯೊಬ್ಬನ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ತಿಳಿಯಬಹುದು ಎಂದು ಜ್ಯೋತಿಷಿಗಳು ಹೇಳುವರು. ವೃತ್ತಿ, ಕುಟುಂಬ ಅಥವಾ ಸಂಬಂಧದ ಬಗ್ಗೆ ತಿಳಿದುಕೊಳ್ಳಬೇಕಾದರೆ ಆಗ ನಿಮ್ಮ ರಾಶಿ ಯಾವುದು ಎಂದು ತಿಳಿದಿರುವುದು ಅತೀ ಅಗತ್ಯವಾಗಿರುವುದು. ವೃಷಭ ರಾಶಿಯವರು ಎದುರಿಸುವಂತಹ ಕೆಲವೊಂದು ಸಮಸ್ಯೆಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಓದುತ್ತಾ ಸಾಗಿ...

ನ್ಯಾಯ ಬೋಧಕರು
ವೃಷಭ ರಾಶಿಯವರು ನ್ಯಾಯದ ವಕೀಲರಾಗಿರುವರು. ಇದು ನಿಜವಾದರೂ ಸಂಪೂರ್ಣ ನ್ಯಾಯವನ್ನು ಸಂಬಂಧದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ವೃಷಭ ರಾಶಿಯವರ ಸಂಗಾತಿಯು ಏನಾದರೂ ಸಣ್ಣ ತಪ್ಪು ಮಾಡಿದರೂ ಅವರು ಇದನ್ನು ಮನಸ್ಸಿಗೆ ತೆಗೆದುಕೊಳ್ಳುವರು. ಇದನ್ನು ಸಣ್ಣ ವಿಷಯವೆಂದು ಪರಿಗಣಿಸುವ ಬದಲು ದ್ವೇಷ ಸಾಧಿಸಲು ಹೊರಡುವುದು ಇವರ ದೊಡ್ಡ ತಪ್ಪು.

ಕೆಲವೊಂದು ಸಲ ತೀರ್ಪುಗಾರರು
ವೃಷಭ ರಾಶಿಯವರಿಗೆ ಹೆಚ್ಚಿನ ಸ್ನೇಹಿತರು ಮತ್ತು ಸ್ನೇಹದ ಸಂಬಂಧ ಹೊಂದಿರುವವರು ಇರುವರು. ಆದರೆ ಇವರ ಮೇಲೆ ಕಾರಣವಿಲ್ಲದ ಅಭಿಪ್ರಾಯ ಹೇರುವುದು ವೃಷಭ ರಾಶಿಯವರು ಮಾಡುವ ತಪ್ಪು. ಕಾರಣವಿರುವಂತಹ ಅಭಿಪ್ರಾಯವಾಗಿದ್ದರೆ ಆಗ ಅವರು ಇದನ್ನು ತಿಳಿಸಿಕೊಡಲು ವಿಫಲವಾಗುವರು ಮತ್ತು ತೀರ್ಪು ನೀಡುವಂತೆ ವರ್ತಿಸಿ, ಸ್ನೇಹ ಕಳೆದುಕೊಳ್ಳುವರು. ತಮ್ಮ ವಿರುದ್ಧ ತೀರ್ಪು ನೀಡುವುದನ್ನು ಯಾರೂ ಇಷ್ಟಪಡಲಾರರು. ನಿಮ್ಮ ಇಷ್ಟ ಅಥವಾ ನಂಬಿಕೆಗಳನ್ನು ಒಪ್ಪಿಕೊಳ್ಳದೆ ಇರುವಂತಹ ವ್ಯಕ್ತಿಯು ಸರಿಯಿಲ್ಲ ಎನ್ನುವ ನಿರ್ಧಾರ ಮಾಡುವುದನ್ನು ವೃಷಭ ರಾಶಿಯವರು ಬಿಡಬೇಕು.

ಪ್ರೀತಿ ಬಗ್ಗೆ ಅತಿಯಾದ ಸುರಕ್ಷತೆ
ವೃಷಭ ರಾಶಿಯವರ ಬೇಡಿಕೆಯು ಅತಿಯಾಗಿರುವುದು. ಇವರು ಯಾವುದೇ ವಸ್ತು ಅಥವಾ ಉಡುಗೊರೆಯ ಬೇಡಿಕೆ ಸಲ್ಲಿಸುವುದಿಲ್ಲ. ಆದರೆ ಇವರು ತಮ್ಮ ಸಂಗಾತಿಯ ಹವ್ಯಾಸದ ಬಗ್ಗೆ ಕೆಲವೊಂದು ಬೇಡಿಕೆ ಸಲ್ಲಿಸುವರು. ಕೆಲವು ವ್ಯಕ್ತಿಗಳು ತಮ್ಮ ಸಂಗಾತಿ ಬಗ್ಗೆ ಅತಿಯಾದ ಸುರಕ್ಷಿತ ಭಾವನೆ ಹೊಂದಿ, ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಬಹುದು. ಇದೆಲ್ಲವೂ ಪ್ರೀತಿ ಹಾಗೂ ಚಿಂತೆಯಿಂದ ಮಾಡಿರುವುದು. ಆದರೆ ಸಂಗಾತಿಯು ತನ್ನನ್ನು ಪ್ರೀತಿಸುವಳು ಮತ್ತು ಎಲ್ಲರೂ ಒಂದೇ ರೀತಿಯಲ್ಲಿ ಇರಲ್ಲವೆಂದು ಅವರು ಅರ್ಥ ಮಾಡಿಕೊಂಡಾಗ ಎಲ್ಲವೂ ಸರಿಯಾಗುವುದು.

ಪರಿಪೂರ್ಣತೆಯ ಬೇಡಿಕೆ
ವೃಷಭ ರಾಶಿಯವರು ಯಾವಾಗಲೂ ಪರಿಪೂರ್ಣತೆಯನ್ನು ಬಯಸುವರು. ಆದರೆ ಇವರು ತಮ್ಮ ವೃತ್ತಿ ಬದುಕಿನಲ್ಲಿ ಮಾತ್ರ ಇದನ್ನು ಬಯಸುವರು ಎನ್ನುವುದು ಒಳ್ಳೆಯ ವಿಚಾರ. ಆದರೆ ಪರಿಪೂರ್ಣತೆಯ ಹುಚ್ಚು ಸಂಬಂಧಕ್ಕೆ ಬಂದರೆ ತುಂಬಾ ಕಠಿಣ. ಪರಿಪೂರ್ಣವಾಗಿಲ್ಲದ ಪ್ರೀತಿಯ ಜೀವನವನ್ನು ಇವರು ಇಷ್ಟಪಡಲಾರರು. ನಿಧಾನವಾಗಿ ಪರಿಪೂರ್ಣತೆಯತ್ತ ತೆರಳಲು ಇವರು ಕಲಿಯಬೇಕು. ಇವರ ನಿಯಮವು ಕಠಿಣವಾಗಿದೆ. ಆದರೆ ಇದಕ್ಕೆ ತಾಳ್ಮೆಯು ಅತೀ ಅಗತ್ಯ.



Click it and Unblock the Notifications