Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರಾಕ್ಷಸನಾದ ಬಾಲಕ ತನ್ನನ್ನು ಕೊಲ್ಲುವಂತೆ ಪೋಷಕರಿಗೆ ಹೇಳುತ್ತಾನಂತೆ!
ಜ್ವರ ಬರುವುದು ಮನುಷ್ಯನಿಗೆ ಸಹಜ. ಜ್ವರ ಬಂದ ಬಳಿಕ ನಿಮ್ಮ ಸಂಪೂರ್ಣ ಜೀವನವೇ ಬದಲಾದರೆ ಅದನ್ನು ನೀವು ಊಹಿಸಲು ಸಾಧ್ಯವಿಲ್ಲ ಅಲ್ಲವೇ? ಆದರೆ ಇಲ್ಲೊಬ್ಬ ಬಾಲಕನಿಗೆ ಮನೆಯಲ್ಲಿನ ಗೋಡೆಯಲ್ಲಿದ್ದ ಶಿಲೀಂಧ್ರದ ಅಲರ್ಜಿಯಿಂದಾಗಿ ಜ್ವರ ಬಂದು ಆತನ ಜೀವನವೇ ಬದಲಾಗಿದೆ. ಈ ಬಾಲಕನಿಗೆ ಯಾವುದೇ ಕಾರಣವಿಲ್ಲದೆಯೂ ಜ್ವರ ಬರುತ್ತಿರುವುದು.

ಆದರೆ ಜ್ವರ ಬಂದ ಬಳಿಕ ಈತನ ವರ್ತನೆಯೇ ಬದಲಾಗಿದೆ. ಇದು ಹೇಗಾಯಿತು? ವಿಲಿಯಮ್ ಎನ್ನುವ ಬಾಲಕ ಜ್ವರ ಬಂದ ಬಳಿಕ ತುಂಬಾ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದು, ತನ್ನನ್ನು ಕೊಲ್ಲುವಂತೆ ಪೋಷಕರಲ್ಲಿ ಬೇಡುತ್ತಿದ್ದಾನೆ. ಈ ವಿಚಿತ್ರ ಘಟನೆಯ ಬಗ್ಗೆ ನೀವು ಇನ್ನಷ್ಟು ತಿಳಿಯಿರಿ.

ವಿಲಿಯಮ್ಸ್ ಹಿಂಸೆಗಿಳಿದ
ಜ್ವರ ಬಂದ ಬಳಿಕ ವಿಲಿಯಮ್ ತುಂಬಾ ಕ್ರೂರಿಯಾದ ಮತ್ತು ಭ್ರಮೆಯಲ್ಲೇ ಇರುತ್ತಿದ್ದ. ತನ್ನನ್ನು ಕೊಲ್ಲುವಂತೆ ಪೋಷಕರಲ್ಲಿ ಹೇಳುತ್ತಿದ್ದ.

ಪೋಷಕರು ನಂಬುವಂತೆ…
ವಿಲಿಯಮ್ ಗೆ ಜ್ವರ ಬಂದ ಬಳಿಕ ಹೀಗೆ ಆಗಿದೆ ಎಂದು ಪೋಷಕರು ನಂಬಿದ್ದಾರೆ. ಗೋಡೆಗಳ ಮೇಲಿದ್ದ ಶಿಲೀಂಧ್ರದಿಂದಾಗಿ ಆತನಿಗೆ ಹೀಗೆ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾತ್ರಿಬೆಳಗಾಗುದರೊಳಗಡೆ ಬದಲಾದ…
ಒಂದು ವಾರ ಕಾಲ ಅನಾರೋಗ್ಯದಿಂದ ಇದ್ದ ಬಳಿಕ ಒಂದು ದಿನ ಹಠಾತ್ ಆಗಿ ಆತ ತುಂಬಾ ಕ್ರೂರಿ ಹಾಗೂ ಹಿಂಸೆಗೆ ಇಳಿದ. ಆತ ತುಂಬಾ ಭಿನ್ನವಾಗಿ, ತೆಳುವಾಗಿ ಮತ್ತು ಕಣ್ಣುಗಳು ಎಳೆದುಕೊಂಡಂತೆ ಇದ್ದವು.

ತನ್ನ ಕುಟುಂಬದವರನ್ನೇ ಗುರುತಿಸಲಿಲ್ಲ
ವಿಲಿಯಮ್ ಭ್ರಮೆಯಲ್ಲೇ ಮಾತನಾಡುತ್ತಿದ್ದ. ಕರ್ಟನ್ ನಿಂದ ರಕ್ತದ ಹನಿಗಳು ಸೋರುತ್ತಿದೆ ಎನ್ನುತ್ತಿದ್ದ. ಆತನ ಪರಿಸ್ಥಿತಿ ಹೇಗಿತ್ತೆಂದರೆ ತನ್ನ ಕುಟುಂಬದವರನ್ನೇ ಗುರುತು ಹಿಡಿಯಲಿಲ್ಲ. ತನ್ನ ತಾಯಿಯಲ್ಲೇ ನನ್ನ ಅಮ್ಮ ಎಲ್ಲಿದ್ದಾರೆಂದು ಕೇಳುತ್ತಿದ್ದ.

ವರ್ಷದ ಬಳಿಕ ವೈದ್ಯರಿಗೆ ಪರಿಸ್ಥಿತಿ ತಿಳಿಯಿತು
ಒಂದು ವರ್ಷದ ಬಳಿಕ ವೈದ್ಯರಿಗೆ ವಿಲಿಯಮ್ ನ ಪರಿಸ್ಥಿತಿ ತಿಳಿಯಿತು. ವಿಲಿಯಮ್ ನ ಪರಿಸ್ಥಿತಿಯನ್ನು ಪಾನ್ಸ್ ಅಥವಾ ಪಾಂಡಸ್ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯು ಒಂದು ರೀತಿಯ ಸೋಂಕಿನಿಂದ ಬರುವುದು ಮತ್ತು ಇದರಿಂದ ಮೆದುಳಿನಲ್ಲಿ ಉರಿಯೂತ ಉಂಟಾಗಬಹುದು.

ಪಾನ್ಸ್ ಮತ್ತು ಪಾಂಡಸ್ ಬಗ್ಗೆ
ಈ ಪರಿಸ್ಥಿತಿಯು ಸುಮಾರು 200 ಮಕ್ಕಳಲ್ಲಿ ಒಬ್ಬರಿಗೆ ಬರುವುದು. ಈ ಪರಿಸ್ಥಿತಿಯು ಒಸಿಡಿ ಅಥವಾ ತಿನ್ನುವ ಅಸಾಮಾನ್ಯತೆ ಉಂಟು ಮಾಡಬಹುದು. ಎರಡು ವಾರಗಳ ಕಾಲ ಆ್ಯಂಟಿಬಯೋಟಿಕ್ ನೀಡಿದರೆ ಪರಿಸ್ಥಿತಿ ಸುಧಾರಣೆಯಾಗುವುದು.

ತನ್ನ ಜೀವನ ಹಾಳು ಮಾಡಿದನೆಂದು ಸೋದರಿಯ ಆರೋಪ
ವಿಲಿಯಮ್ ನ ಸೋದರಿ ಷರ್ಲೆಟ್ ನ ಪ್ರಕಾರ ತನ್ನ ಜೀವನವನ್ನು ಆತ ಹಾಳು ಮಾಡಿದ್ದಾನೆ. ಯಾಕೆಂದರೆ ಆಕೆ ವಿಲಿಯಮ್ ಗೆ ಹೆದರಿ ತನ್ನ ಸ್ನೇಹಿತೆಯರ ಮನೆಯಲ್ಲಿ ಮಲಗುತ್ತಿದ್ದಳು. ಇದು ತುಂಬಾ ಅಸಾಮಾನ್ಯ ಪರಿಸ್ಥಿತಿಯಾಗಿತ್ತು. ಇದನ್ನು ಹತ್ತು ವರ್ಷದ ಮಗುವಿಗೆ ವಿವರಿಸಲು ಸಾಧ್ಯವಿರಲಿಲ್ಲ ಎಂದು ವಿಲಿಯಮ್ ತಾಯಿ ಹೇಳುತ್ತಾರೆ.

ಶಿಲೀಂಧ್ರದಿಂದ ಬಂದಿರುವುದೆಂದು ವಿಲಿಯಮ್ ಪೋಷಕರ ನಂಬಿಕೆ
ವಿಲಿಯಮ್ ನ್ನು ಪರೀಕ್ಷಿಸಿದ ವೈದ್ಯರು ಹಲವಾರು ಪರೀಕ್ಷೆಗಳನ್ನು ನಡೆಸಿದ್ದಾರೆ. ಶಿಲೀಂಧ್ರವು ಬಿಡುಗಡೆ ಮಾಡುವಂತಹ ವಿಷಕಾರಿ ಅಂಶದಿಂದ ಬಂದಿದೆ ಎಂದಿದ್ದಾರೆ. ಇದು ಸಂಪೂರ್ಣವಾಗಿ ವಿಲಿಯಮ್ ದೇಹದಿಂದ ಹೊರಹೋಗದ ಹೊರತಾಗಿ ಆತನಿಗೆ ಪಾನ್ಸ್/ಪಾಂಡದಿಂದ ಸಂಪೂರ್ಣವಾಗಿ ಗುಣಪಡಿಸಲು ಆಗಲ್ಲ. ಹೊಸ ಮನೆಗೆ ಹೋದ ಬಳಿಕ ಆತನ ಪರಿಸ್ಥಿತಿಯು ಸುಧಾರಿಸಿದೆ. ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಇದರ ಬಗ್ಗೆ ನಿಮ್ಮ ಅನಿಸಿಕೆಯೇನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications
