Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯಾವ ರಾಶಿಯವರಿಗೆ ಯಾವ ಉಲ್ಲೇಖ ಸರಿ ಹೊಂದುವುದು?
ರಾಶಿಚಕ್ರಗಳ ಬಗ್ಗೆ ಜ್ಯೋತಿಷ್ಯದ ಫಲಾಫಲಗಳು ಹೇಗಿರುತ್ತದೆ ಎನ್ನುವ ಬಗ್ಗೆ ಹಲವಾರು ಲೇಖನಗಳನ್ನು ನೀವು ಈಗಾಗಲೇ ಓದಿರುತ್ತೀರಿ. ಆದರೆ ಪ್ರತಿಯೊಂದು ರಾಶಿಗಳಿಗೂ ಹೊಂದಿಕೊಳ್ಳುವಂತಹ ಉದ್ಧರಣಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಉದ್ಧರಣವೆಂದರೆ ಅದಕ್ಕೆ ನಿಜವಾಗಿಯೂ ಒಂದು ಒಳ್ಳೆಯ ಅರ್ಥವಿರುವುದು ಮತ್ತು ಇದನ್ನು ನಮ್ಮ ಜೀವನಕ್ಕೂ ಕೆಲವೊಮ್ಮೆ ಅಳವಡಿಸಿಕೊಳ್ಳಬಹುದು.
ಕೆಲವೊಂದು ಉದ್ಧರಣಗಳು ನೇರವಾಗಿ ನಮ್ಮ ಜೀವನಕ್ಕೆ ಸಂಬಂಧಿಸಿದಂತೆ ಕಾಣುವುದು ಮತ್ತು ನಮಗೆ ವಿಶೇಷವಾಗಿರುವವರ ನೆನಪು ತರುವುದು. ಈ ಲೇಖನದಲ್ಲಿ 12 ರಾಶಿಗಳಿಗೆ ಹೊಂದಿಕೊಳ್ಳುವ ಉದ್ಧರಣದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ರಾಶಿಚಕ್ರಗಳ ನಡವಳಿಕೆಗೆ ಅನುಗುಣವಾಗಿ ಈ ಉದ್ಧರಣಗಳನ್ನು ಹೇಳಲಾಗಿದೆ. ಅದು ಯಾವುದು ಮತ್ತು ನಿಮ್ಮ ರಾಶಿಗೆ ಯಾವ ಉದ್ಧರಣ ಎಂದು ಓದಲು ತಯಾರಾಗಿ.....

ಮೇಷ: ಮಾ.21-ಎ.19
ಮೇಷ ರಾಶಿಯವರು ಬೇರೆಲ್ಲಾ ರಾಶಿಗಿಂತ ತುಂಬಾ ಪ್ರಬಲ ಮಸಸ್ಥಿತಿಯವರು ಎಂದು ಪರಿಗಣಿಸಲಾಗಿದೆ. ಈ ರಾಶಿಯವರು ಸ್ವಾಭಾವಿಕ ಹಾಗೂ ನಿಷ್ಠೆಯುಳ್ಳವರು. ಇವರನ್ನು ವಿವರಿಸುವ ಒಳ್ಳೆಯ ಉದ್ಧರಣ: ``ನನ್ನ ಅದೃಷ್ಟಕ್ಕೆ ನಾನೇ ಮುಖ್ಯಸ್ಥ. ನನ್ನ ಆತ್ಮಕ್ಕೆ ನಾನೇ ನಾಯಕ-ವಿಲಿಯಂ ಅರ್ನೆಸ್ಟ್ ಹೆನ್ಲೆ

ವೃಷಭ: ಎ.20-ಮೇ 20
ವೃಷಭ ರಾಶಿಯವರಲ್ಲಿ ಸ್ಥಿತಿಸ್ಥಾಪಕತ್ವವುಳ್ಳ ಅಂತರಂಗ ಶಕ್ತಿಯಿದೆ ಮತ್ತು ಭಾವನೆಗಳನ್ನು ನಿಭಾಯಿಸಲು ಅವರಿಗೆ ತಿಳಿದಿದೆ. ಇವರಿಂದ ಸರಿಹೊಂದುವ ಉಲ್ಲೇಖ: ``ನಿನ್ನನ್ನು ಕೊಲ್ಲದೆ ಅದು ನಿನ್ನನ್ನು ಬಲಪಡಿಸುತ್ತದೆ. "- ಫ್ರೆಡ್ರಿಕ್ ನೀತ್ಸೆ

ಮಿಥುನ: ಮೇ 21- ಜೂನ್ 20
ಮಿಥುನ ರಾಶಿಯವರು ಸಮಾಜಮುಖಿಯಾಗಿರಲು ಮತ್ತು ಸ್ನೇಹಿತರನ್ನು ಸಂಪಾದಿಸಲು ಬಯಸುವರು. ಇದೇ ವೇಳೆ ಇವರು ತುಮಬಾ ಸೂಕ್ಷ್ಮ ಮತ್ತು ಸಾಮಾಜಿಕವಾಗಿರುವವರು. ಇವರನ್ನು ವಿವರಿಸುವ ಉಲ್ಲೇಖವೆಂದರೆ : ``ನಗುವಿಲ್ಲದ ದಿನ ವ್ಯರ್ಥ'': ಚಾರ್ಲಿ ಚಾಪ್ಲಿನ್

ಕರ್ಕಾಟಕ: ಜೂನ್ 21- ಜುಲೈ 22
ಕರ್ಕಾಟಕ ರಾಶಿಯವರು ತುಂಬಾ ಸೌಮ್ಯ ಹಾಗೂ ವಿಶಾಲ ಹೃದಯಿಗಳು. ಇವರು ತುಂಬಾ ಒಳ್ಳೆಯ ಮನಸ್ಸಿನವರಾಗಿರುವ ಕಾರಣ ಕ್ಷಮಿಸುವ ಗುಣವು ಹುಟ್ಟಿನಿಂದಲೇ ಬಂದಿರುವುದು. ಇವರನ್ನು ವಿವರಿಸುವ ಉದ್ಧರಣವೆಂದರೆ: ``ಅಂತ್ಯದಲ್ಲಿ ಮೂರು ವಿಷಯಗಳು ಮುಖ್ಯವಾಗಿರುವುದು: ನೀವು ಎಷ್ಟು ಪ್ರೀತಿಸಿದ್ದೀರಿ, ಹೇಗೆ ಬದುಕಿದ್ದೀರಿ ಮತ್ತು ನಿಮಗೆ ಸಂಬಂಧಿಸದೆ ಇರುವ ವಸ್ತುಗಳನ್ನು ಎಷ್ಟು ಹಿತವಾಗಿ ಬಿಟ್ಟುಕೊಡುತ್ತೀರಿ''-ಬುದ್ಧ

ಸಿಂಹ: ಜುಲೈ 23-ಆ.23
ಸಿಂಹ ರಾಶಿಯವರು ಜನ್ಮತಃ ನಾಯಕರು ಮತ್ತು ಯಾವಾಗಲೂ ಆಕರ್ಷಣೆಯ ಕೇಂದ್ರ ಬಿಂದುವಾಗಿರಲು ಬಯಸುವರು. ಇವರು ಆತ್ಮವಿಶ್ವಾಸ ಕಳೆದುಕೊಳ್ಳಲ್ಲ. ಇವರನ್ನು ವಿಶ್ಲೇಷಿಸುವ ಒಳ್ಳೆಯ ಉದ್ಧರಣವೆಂದರೆ: ``ನಿನ್ನ ಪ್ರೀತಿಯು ನನ್ನನ್ನು ಬಲಗೊಳಿಸಿದೆ; ನಿಮ್ಮ ದ್ವೇಷವು ನನ್ನನ್ನು ನಿಲ್ಲಿಸದಂತೆ ಮಾಡಿದೆ-ಕ್ರಿಸ್ಟಿಯಾನೋ ರೊನಾಲ್ಡೊ

ಕನ್ಯಾ: ಆ.24-ಸೆ.23
ಕನ್ಯಾ ರಾಶಿಯವರು ತುಂಬಾ ಪ್ರಾಯೋಗಿಕವಾಗಿರುವ ವ್ಯಕ್ತಿಗಳು. ಇವರು ಯಾವುದೇ ಕಠಿಣ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವರು. ಇವರನ್ನು ವಿವರಿಸುವ ಉದ್ಧರಣವೆಂದರೆ: ``ನೀವು ಮರುಪಾವತಿ ಮಾಡದೆ, ಯಾರಿಗಾದರೂ ಏನನ್ನಾದರೂ ಮಾಡದೆ ನೀವು ಇಂದು ಜೀವಿಸಲ್ಲ-ಜಾನ್ ಬನ್ಯಾನ್

ತುಲಾ: ಸೆ.24-ಅ.23
ತುಲಾ ರಾಶಿಯವರು ತುಂಬಾ ಸಮತೋಲನ ಮತ್ತು ಸಹಕಾರಿಗಳು. ಇವರು ಯಾವತ್ತೂ ತಮ್ಮ ಪ್ರೀತಿಪಾತ್ರರ ಕಡೆ ಹೆಚ್ಚಿನ ಗಮನಹರಿಸುವರು. ಇವರಿಗೆ ಹೊಂದಿಕೊಳ್ಳುವ ಉಲ್ಲೇಖ: ಜನರು ಪರಿಪೂರ್ಣರಾಗಬೇಕೆಂಬ ನಿರೀಕ್ಷೆ ಮಾಡುವುದನ್ನು ನೀವು ನಿಲ್ಲಿಸಿದಾಗ, ಅವರು ಹೇಗಿದ್ದಾರೋ ಹಾಗೆ ಅವರನ್ನು ನೀವು ಇಷ್ಟಪಡುವಿರಿ-ಡೊನಾಲ್ಡ್ ಮಿಲ್ಲರ್.

ವೃಶ್ಚಿಕ: ಅ.24-ನ.22
ಇವರು ಯಾವಾಗಲೂ ಯಶಸ್ಸಿನೆಡೆಗೆ ಮುನ್ನಡೆಯುವ ಕಾರಣ ಇವರು ಜೀವನದಲ್ಲಿ ಯಶಸ್ಸನ್ನು ಪಡೆಯುವರು. ಇವರನ್ನು ವಿವರಿಸುವ ಒಳ್ಳೆಯ ಉಲ್ಲೇಖ: ``ಸ್ಮಶಾನದಲ್ಲಿ ಶ್ರೀಮಂತ ವ್ಯಕ್ತಿಯಾಗಿರುವುದು ನನಗೆ ಅಪ್ರಸ್ತುತ. ಇಂದು ರಾತ್ರಿ ಮಲಗುವ ಮೊದಲು ನಾವು ಏನಾದರೂ ಅಮೋಘವಾಗಿರುವುದನ್ನು ಮಾಡಿದ್ದೇವೆ...ಎನ್ನುವುದು ನನಗೆ ಪ್ರಸ್ತುತ''-ಸ್ಟೀವ್ ಜಾಬ್ಸ್

ಧನು: ನ.23-ಡಿ.22
ಪ್ರಯಾಣ ಮಾಡಲು ತುಂಬಾ ಇಷ್ಟಪಡುವ ರಾಶಿ ಎಂದರೆ ಅದು ಧನು. ಇವರನ್ನು ವಿವರಿಸಲು ಒಳ್ಳೆಯ ಉದ್ದರಣವೆಂದರೆ: ``ಪ್ರಯಾಣಿಸಿ: ನಿಮಗೆ ಎಷ್ಟು ಸಾಧ್ಯವೋ ಅಷ್ಟು, ಎಷ್ಟು ಮಾಡಬಹುದೋ ಅಷ್ಟು, ಎಷ್ಟು ದೂರವೋ ಅಷ್ಟು. ಜೀವನವೆನ್ನುವುದು ಕೇವಲ ಒಂದೇ ಸ್ಥಳದಲ್ಲಿ ಕೂತಿರಲು ಇರುವುದಲ್ಲ- ಅನಾಮಧೇಯ

ಮಕರ: ಡಿ.23-ಜ.20
ಶ್ರೀಮಂತರಾಗಬೇಕೆಂಬ ಅವರ ಬಯಕೆಯು ಇವರನ್ನು ಜೀವನದಲ್ಲಿ ತುಂಬಾ ಕಠಿಣವಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವುದು. ಇವರಿಗೆ ಹೊಂದಿಕೊಳ್ಳುವ ಉಲ್ಲೇಖ: ``ನಿಮಗೆ ಜೀವನ ನೀಡಲಾಯಿತು;ಜೀವನದಲ್ಲಿ ಏನಾದರೂ ಸುಂದರವಾಗಿರುವುದನ್ನು ಹುಡುಕುವುದು ಅದು ನಿಮ್ಮ ಕರ್ತವ್ಯ(ಮತ್ತು ಮಾನವನಾಗಿ ಅದು ನಿಮ್ಮ ಅರ್ಹತೆ) ಅಷ್ಟು ಸ್ವಲ್ಪವೂ ಅಲ್ಲ-ಎಲಿಜಬೆತ್ ಗಿಲ್ಬರ್ಟ್

ಕುಂಭ: ಜ.21-ಫೆ.18
ಕುಂಭ ರಾಶಿಯವರು ತುಂಬಾ ಕ್ರಿಯಾತ್ಮಕ. ಅಸಹಾಯಕರಿಗೆ ಇವರು ಯಾವಾಗಲೂ ನೆರವಾಗುವರು. ಇವರನ್ನು ವಿವರಿಸುವ ಒಳ್ಳೆಯ ಉಲ್ಲೇಖವೆಂದರೆ: ಇತರರಿಗೆ ನೆರವಾಗುವುದು ಜೀವನದಲ್ಲಿ ನಮ್ಮ ಮುಖ್ಯ ಉದ್ದೇಶ ಮತ್ತು ನೀವು ಅವರಿಗೆ ನೆರವಾಗದೇ ಇದ್ದರೆ, ಅವರಿಗೆ ನೋವುಂಟು ಮಾಡಬೇಡಿ''-ದಲಾಯಿ ಲಾಮಾ

ಮೀನ: ಫೆ.19-ಮಾ.20
ಮೀನ ರಾಶಿಯವರು ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವರು ಮತ್ತು ಇತರರನ್ನು ವಿಧೇಯದಿಂದ ನೋಡುವರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅವರು ಬೇರೆಯವರಿಗೆ ನೆರವಾಗುವರು. ಇವರನ್ನು ವಿವರಿಸುವ ಒಳ್ಳೆಯ ಉದ್ದರಣ: ``ನೀವು ಕಲಿಯಬೇಕಾಗಿರುವ ಶ್ರೇಷ್ಠ ವಿಷಯವೆಂದರೆ ಅದು ಪ್ರೀತಿ ಮತ್ತು ಮರಳಿ ಪ್ರೀತಿ ಪಡೆಯುವುದು''-ಮೌಲಿನ್ ರೂಜ್



Click it and Unblock the Notifications
