ಉಂಗುರ ಆಯ್ಕೆ ಮಾಡಿ ಮದುವೆಯಾಗುವ ವಯಸ್ಸು ತಿಳಿಯಿರಿ!

Posted By: Deepu
Subscribe to Boldsky

ಸಮಾಜದಲ್ಲಿ ವ್ಯಕ್ತಿಯೊಬ್ಬನ ವ್ಯಕ್ತಿತ್ವವು ತುಂಬಾ ಮುಖ್ಯವಾಗಿರುತ್ತದೆ. ವ್ಯಕ್ತಿತ್ವವೇ ಇಲ್ಲದೆ ಇರುವ ವ್ಯಕ್ತಿಗೆ ಯಾವುದೇ ರೀತಿಯ ಗುರುತು ಇರದು. ಆದರೆ ನಮ್ಮ ವ್ಯಕ್ತಿತ್ವದ ಬಗ್ಗೆ ಬೇರೆಯವರು ಹೇಳುವ ಮೊದಲು ನಾವೇ ಅದನ್ನು ತಿಳಿದು ಕೊಂಡರೆ ತುಂಬಾ ಒಳ್ಳೆಯದು. ಕೆಲವೊಂದು ವ್ಯಕ್ತಿತ್ವ ಪರೀಕ್ಷೆಯಿಂದ ನಿಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಬಹುದು.

ನಿಮ್ಮ ಅದೃಷ್ಟವು ಇದರಿಂದ ತಿಳಿಯುವುದು. ಈ ಲೇಖನದಲ್ಲಿ ಕೆಲವೊಂದು ಚಿತ್ರಗಳನ್ನು ನೀಡಲಾಗಿದೆ. ಅದರಲ್ಲಿ ಒಂದನ್ನು ನೀವು ಆಯ್ಕೆ ಮಾಡಿಕೊಂಡು ನೀವು ಯಾವ ಸಮಯದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದೀರಿ ಎಂದು ತಿಳಿದುಕೊಳ್ಳಬಹುದು.

ಸೂಚನೆ: ಇದು ಕೇವಲ ಒಂದು ಪರೀಕ್ಷೆ ಮತ್ತು ಫಲಿತಾಂಶವು ಭಿನ್ನವಾಗಿರಬಹುದು. ಈಗ ಈ ಆಟವನ್ನು ಆಡಲು ನೀವು ತಯಾರಾಗಿ.... 

 ಮೊದಲನೇಯದನ್ನು ಆಯ್ಕೆ ಮಾಡಿದರೆ

ಮೊದಲನೇಯದನ್ನು ಆಯ್ಕೆ ಮಾಡಿದರೆ

ನೀವು ಮೊದಲನೇಯದನ್ನು ಆಯ್ಕೆ ಮಾಡಿದರೆ ಆಗ 27ರಿಂದ 30ರ ಹರೆಯದ ಮಧ್ಯೆ ಮದುವೆಯಾಗುತ್ತೀರಿ ಎಂದು ಹೇಳಬಹುದು. ಮದುವೆಗೆ ಮೊದಲು ನೀವು ಜೀವನ ಆನಂದಿಸಿರುತ್ತೀರಿ. ವೃತ್ತಿ ಕಡೆ ಗಮನಹರಿಸುವುದು ಮತ್ತು ಹಣ ಗಳಿಸುವ ಕಡೆ ನೀವು ಹೆಚ್ಚು ಗಮನಹರಿಸುತ್ತೀರಿ.

ಎರಡನೇಯದನ್ನು ಆಯ್ಕೆ ಮಾಡಿದರೆ

ಎರಡನೇಯದನ್ನು ಆಯ್ಕೆ ಮಾಡಿದರೆ

ನೀವು ಎರಡನೇಯದನ್ನು ಆಯ್ಕೆ ಮಾಡಿದರೆ 38-40 ವರ್ಷದೊಳಗೆ ಮದುವೆಯಾಗುತ್ತೀರಿ. ಬೇಗನೆ ಮದುವೆಯಾಗುವುದಕ್ಕಿಂತ ಜೀವನದಲ್ಲಿ ಇನ್ನು ಸಾಕಷ್ಟು ಸಾಧನೆ ಮಾಡಬೇಕು ಮತ್ತು ಅನುಭವ ಪಡೆಯಬೇಕು ಎಂದು ನೀವು ಭಾವಿಸುತ್ತೀರಿ.

ಮೂರನೇಯದನ್ನು ಆಯ್ಕೆ ಮಾಡಿದರೆ

ಮೂರನೇಯದನ್ನು ಆಯ್ಕೆ ಮಾಡಿದರೆ

ಮೂರನೇ ಆಯ್ಕೆ ನಿಮ್ಮದಾಗಿದ್ದರೆ ಆಗ ನೀವು 19-22 ವರ್ಷದೊಳಗೆ ಮದುವೆಯಾಗಿರುತ್ತೀರಿ. ಮದುವೆಯಾಗುವುದು ನಿಮ್ಮ ದೊಡ್ಡ ಪ್ರಯತ್ನ ಮತ್ತು ಬಾಲ್ಯದಿಂದಲೂ ಇದರ ಬಗ್ಗೆ ನಿಮಗೆ ತವಕವಿರುತ್ತದೆ. ನೀವು ಸಣ್ಣ ವಯಸ್ಸಿನಲ್ಲಿ ಪೋಷಕರಾಗಲು ಬಯಸುತ್ತೀರಿ ಮತ್ತು ಜೀವನದ ಇತರ ವಿಷಯಗಳಿಗಿಂತ ಸಂಗಾತಿ ಕಡೆ ಹೆಚ್ಚು ಗಮನಹರಿಸುತ್ತೀರಿ.

ನಾಲ್ಕನೇ ಆಯ್ಕೆ ನಿಮ್ಮದಾಗಿದ್ದರೆ

ನಾಲ್ಕನೇ ಆಯ್ಕೆ ನಿಮ್ಮದಾಗಿದ್ದರೆ

ಈ ಆಯ್ಕೆಯು ನಿಮ್ಮದಾಗಿದ್ದರೆ 23-26ನೇ ವಯಸ್ಸಿನ ಮಧ್ಯೆ ನಿಮಗೆ ಮದುವೆಯಾಗುವುದು. ಮದುವೆಯಾಗುವ ಮೊದಲು ನಿಮ್ಮ ಶಿಕ್ಷಣ ಮತ್ತು ಪ್ರವಾಸವನ್ನು ಪೂರ್ತಿಗೊಳಿಸಬೇಕೆಂದು ನೀವು ಬಯಸುತ್ತೀರಿ. ನೀವು ಮದುವೆ ಬಂಧನಕ್ಕೆ ಒಳಗಾಗುವ ಮೊದಲು ಜೀವನದಲ್ಲಿ ಅನುಭವ ಪಡೆಯಲು ಬಯಸುತ್ತೀರಿ.

ಐದನೇ ಆಯ್ಕೆ ನಿಮ್ಮದಾಗಿದ್ದರೆ

ಐದನೇ ಆಯ್ಕೆ ನಿಮ್ಮದಾಗಿದ್ದರೆ

ಐದನೇ ಆಯ್ಕೆಯು ನಿಮ್ಮದಾಗಿದ್ದರೆ ಖಂಡಿತವಾಗಿಯೂ 31ರಿಂದ 33ನೇ ವಯಸ್ಸಿನ ಮಧ್ಯೆ ನೀವು ಮದುವೆಯಾಗುತ್ತೀರಿ. ನೀವು ಸಾಧಕರಾಗಿರುವಿರಿ ಮತ್ತು ಮದುವೆ ಬಂಧನಕ್ಕೆ ಒಳಗಾಗಲು ಸಮಯ ತೆಗೆದುಕೊಳ್ಳುವಿರಿ. ವೃತ್ತಿಯಲ್ಲಿ ಯಶಸ್ಸು ಪಡೆಯಲು ಬಯಸುವಿರಿ ಮತ್ತು ಮದುವೆಗೆ ಸರಿಯಾದ ವಯಸ್ಸನ್ನು ಹುಡುಕುತ್ತಿರುತ್ತೀರಿ.

ಆರನೇ ಆಯ್ಕೆ ನಿಮ್ಮದಾದರೆ

ಆರನೇ ಆಯ್ಕೆ ನಿಮ್ಮದಾದರೆ

ಆರನೇ ಆಯ್ಕೆಯು ನಿಮ್ಮದಾಗಿದ್ದರೆ ಆಗ ನೀವು ಖಂಡಿತವಾಗಿಯೂ 41-45ನೇ ವಯಸ್ಸಿನಲ್ಲಿ ಮದುವೆಯಾಗುವಿರಿ. ನೀವು ಜೀವನವನ್ನು ಹೆಚ್ಚಿನ ಬದ್ಧತೆ ಮತ್ತು ಜವಾಬ್ದಾರಿಯಿಲ್ಲದೆ ಆನಂದಿಸಲು ಬಯಸುವಿರಿ. ,ಮದುವೆ ನಿಮ್ಮ ಪ್ರಾಮುಖ್ಯತೆಯಾಗಿರಲ್ಲ.

ಏಳನೇ ಆಯ್ಕೆ ನಿಮ್ಮದಾಗಿದ್ದರೆ

ಏಳನೇ ಆಯ್ಕೆ ನಿಮ್ಮದಾಗಿದ್ದರೆ

ನೀವು ಏಳನ್ನು ಆಯ್ಕೆ ಮಾಡಿದರೆ ಆಗ ಖಂಡಿತವಾಗಿಯೂ ನೀವು 34-37ನೇ ವಯಸ್ಸಿನಲ್ಲಿ ಮದುವೆಯಾಗುವಿರಿ. ಜೀವನದಲ್ಲಿ ಬೆಳೆಯಲು ನಿಮಗೋಸ್ಕರ ಸಮಯ ಕೊಡುವಿರಿ ಮತ್ತು ಮದುವೆಗೆ ಸರಿಯಾದ ಸಂಗಾತಿಯ ಹುಡುಕುವಿರಿ.

ಎಂಟನೇ ಆಯ್ಕೆ ನಿಮ್ಮದಾಗಿದ್ದರೆ

ಎಂಟನೇ ಆಯ್ಕೆ ನಿಮ್ಮದಾಗಿದ್ದರೆ

ಎಂಟನೇ ಆಯ್ಕೆ ನಿಮ್ಮದಾಗಿದ್ದರೆ ತುಂಬಾ ವಿಳಂಬವಾಗಿ ಅಂದರೆ 46-50ನೇ ವಯಸ್ಸಿನಲ್ಲಿ ಮದುವೆಯಾಗುವಿರಿ. ಈ ಉಂಗುರ ಆಯ್ಕೆ ಮಾಡಿದರೆ ಮದುವೆ ನಿಮ್ಮ ಆದ್ಯತೆಯಾಗಿರಲ್ಲ. ನೀವು ಬೇರೆ ಪ್ರಮುಖ ವಿಷಯಗಳ ಕಡೆ ಗಮನಹರಿಸುತ್ತಾ ಇರುತ್ತೀರಿ.

English summary

Pick An Engagement Ring And Know When You Will Get Married

There are tests that define our personality and there are those too which help reveal to us about how lucky we would get in life. Here, in this article, we are sharing the list of ring images that you need to choose from and all that you got to do is pick any one and know the actual age at which you would get married at.