Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ದೇವಸ್ಥಾನದಲ್ಲಿ ಮನುಷ್ಯನ ರಕ್ತವನ್ನೇ ದೇವರಿಗೆ ಅರ್ಪಿಸುತ್ತಾರೆ!
ಭಾರತವನ್ನು ದೇವಾಲಯಗಳ ದೇಶ ಎಂದು ಕರೆಯುತ್ತಾರೆ. ಭಾರತೀಯರು ದೇವರು, ದೇವಾಲಯಗಳು, ಪೂಜೆ, ಧಾರ್ಮಿಕ ಅನುಷ್ಠಾನಗಳು ಮೊದಲಾದ ಸಂಗತಿಗಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವವರಾಗಿದ್ದೇವೆ. ಅದಕ್ಕಾಗಿಯೇ ಒಂದೊಂದು ದಿನವನ್ನು ಒಂದೊಂದು ದೇವರ ಹೆಸರಿನಲ್ಲಿ ನೆನೆಸಿಕೊಂಡು ಅವರಿಗೆ ಪೂಜೆಗಳನ್ನು ನೀಡುತ್ತೇವೆ. ಹಬ್ಬ ಹರಿದಿನಗಳಂದು ಯಾವುದೇ ಶುಭ ಕಾರ್ಯಗಳಂದು ದೇವರಿಗೆ ಪೂಜೆಯನ್ನು ನಡೆಸಿಯೇ ಆ ಕಾರ್ಯಕ್ಕೆ ಚಾಲನೆಯನ್ನು ಮಾಡುತ್ತೇವೆ.
ಇನ್ನು ದೇವರಿಗೆ ಪೂಜೆಯ ಹೆಸರಿನಲ್ಲಿ ಪ್ರಾಣಿ ಬಲಿಯನ್ನು ನೀಡುವುದು ನಾವು ಕೇಳಿರುತ್ತೇವೆ. ದೇವರು ಪ್ರಾಣಿ ಹಿಂಸೆಯನ್ನು ಕೇಳದೇ ಇದ್ದರೂ ಕೂಡ ದೇವರು ತೃಪ್ತಿಗೊಳ್ಳುತ್ತಾರೆ ಎಂಬ ನಂಬಿಕೆಯಿಂದ ಪ್ರಾಣಿ ಬಲಿಯನ್ನು ನೀಡುವುದು ನಮ್ಮ ದೇಶದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಪೇಟಾದಂತಹ ಸಂಸ್ಥೆಗಳು ಈ ಬಲಿಯನ್ನು ನಿಲ್ಲಿಸಬೇಕೆಂದು ಎಷ್ಟೇ ಕಾರ್ಯಗಳನ್ನು ನಡೆಸುತ್ತಿದ್ದರೂ ಹಳ್ಳಿ ಪ್ರದೇಶಗಳಲ್ಲಿ ಪ್ರಾಣಿ ಬಲಿಯಂತಹ ಅನುಷ್ಠಾನವನ್ನು ಇಂದಿಗೂ ಜಾರಿಗೂ ತರುತ್ತಿದ್ದಾರೆ.
ಆದರೆ ಭಾರತದಲ್ಲಿರುವ ಒಂದು ದೇವಸ್ಥಾನದಲ್ಲಿ ಮನುಷ್ಯರ ರಕ್ತವನ್ನು ದೇವರಿಗೆ ನೀಡಲಾಗುತ್ತದೆಯಂತೆ! ಹಲವಾರು ಶತಮಾನಗಳಿಂದ ಈ ಸಂಪ್ರದಾಯ ಚಾಲ್ತಿಯಲ್ಲಿದ್ದು ಜನರು ಅದನ್ನು ಅನುಸರಿಸುತ್ತಿದ್ದಾರೆ. ದೇವಾಲಯವನ್ನು ಪವಿತ್ರ ಸ್ಥಳ ಎಂದು ಕರೆಯುತ್ತಾರೆ. ಆದರೆ ಪಶ್ಚಿಮ ಬಂಗಾಳದ ಬೋರೋದೇವಿ
ದೇವಸ್ಥಾನದಲ್ಲಿ ಮನುಷ್ಯನ ರಕ್ತ ನೀಡಿ ದೇವರನ್ನು ತೃಪ್ತಿ ಪಡಿಸುತ್ತಾರೆ. ಬರೋದೇವಿ ದೇವಸ್ಥಾನ ಇದಾಗಿದ್ದು ಇನ್ನಷ್ಟು ಮಾಹಿತಿಗಳನ್ನು ನಾವು ಈ ಲೇಖನದ ಮೂಲಕ ನೀಡುತ್ತಿದ್ದೇವೆ....

ಮನುಷ್ಯನ ಬಲಿ
ಇತರ ದೇವಸ್ಥಾನಗಳಿಗೆ ಹೋಲಿಸಿದರೆ ಈ ದೇವಸ್ಥಾನದಲ್ಲಿ ಮನುಷ್ಯರನ್ನೇ ಬಲಿಯನ್ನಾಗಿ ನೀಡುತ್ತಾರಂತೆ. ಮನುಷ್ಯರ ರಕ್ತವನ್ನು ನೀಡಿ ದೇವರನ್ನು ಪ್ರೀತಿಗೊಳಿಸುತ್ತಾರೆ. 250 ವರ್ಷಗಳ ಹಿಂದೆಯೇ ಈ ಪದ್ಧತಿಯನ್ನು ರದ್ದುಮಾಡಲಾಗಿದೆ ಆದರೆ ಆ ದಿನಗಳಲ್ಲಿ ಮನುಷ್ಯರನ್ನೇ ಬಲಿಯಾಗಿ ನೀಡಲಾಗುತ್ತಿತ್ತು.

ಮಾನವರ ರಕ್ತವನ್ನೇ ಇಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ
ಪ್ರತೀ ಅಷ್ಟಮಿ ರಾತ್ರಿಯಂದು ಮುಚ್ಚಿದ ಬಾಗಿಲುಗಳ ಮೂಲಕ ಪೂಜೆಯನ್ನು ನಡೆಸಲಾಗುತ್ತದೆ. ಈ ಸಮಯದಲ್ಲಿ 52 ರ ಹರೆಯದ ಶಿಬೇಂದ್ರ ನಾಥ ರೇ ಈ ಕಾರ್ಯವನ್ನು ನಡೆಸಿಕೊಡುತ್ತಾರೆ. ಮಾನವರ ರಕ್ತವನ್ನು ನೀಡದೆಯೇ ಪೂಜೆ ಸಂಪೂರ್ಣಗೊಳ್ಳುವುದಿಲ್ಲ ಎಂಬುದು ಅಲ್ಲಿನ ಭಕ್ತರ ನಂಬಿಕೆಯಾಗಿದೆ.

ಈ ಪದ್ಧತಿಗೆ ವಿರಾಮ
ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಪರಿಶೀಲಿಸಲು ರಾಜನು ಭಕ್ಷಿ ಎಂಬಾತನನ್ನು ಆಯ್ಕೆ ಮಾಡಿದ್ದ. ಈ ಪದ್ಧತಿಯನ್ನು ನಿಲ್ಲಿಸುವಂತೆ ರಾಜನನ್ನು ಭಕ್ಷಿ ಕೇಳಿಕೊಳ್ಳುತ್ತಾರೆ. ಮಾನವರ ಬಲಿ ತುಂಬಾ ಕ್ಷೋಭೆ ತರುವಂತಹ ವಿಷಯವಾಗಿದೆ ಎಂದು ಭಕ್ಷಿ ರಾಜನನ್ನು ಕೇಳಿಕೊಳ್ಳುತ್ತಾರೆ.

ಪ್ರಸ್ತುತ ಮೂರು ರಕ್ತದ ಹನಿಗಳಿಂದ ಪೂಜೆಯನ್ನು ನಡೆಸುತ್ತಾರೆ
ಮಾನವರ ಬಲಿಯನ್ನು ನಿಷೇಧಿಸಿದ ಬಳಿಕ ಮೂರು ಹನಿ ರಕ್ತವನ್ನು ಅರ್ಪಿಸುವ ಮೂಲಕ ದೇವರನ್ನು ಭಕ್ತರು ಸಂತುಷ್ಟಗೊಳಿಸುತ್ತಿದ್ದಾರೆ. ಮಾನವರ ರಕ್ತವನ್ನು ನೀಡದೇ ಇದ್ದಲ್ಲಿ ಪೂಜೆ ಪೂರ್ಣಗೊಳ್ಳುವುದಿಲ್ಲ ಎಂಬುದು ಅಲ್ಲಿನ ಭಕ್ತರ ನಂಬಿಕೆಯಾಗಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂಬುದು ನಿಮ್ಮ ಇಚ್ಛೆಯಾಗಿದೆಯೇ? ಈ ಲೇಖನದ ಕುರಿತು ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ.



Click it and Unblock the Notifications
