ಭಕ್ತಿಯ ಪರಾಕಾಷ್ಠೆಯನ್ನು ಪ್ರಕಟಿಸಲು ತನ್ನ ಮರ್ಮಾಂಗದಿಂದ ಟ್ರಕ್ ಎಳೆದ ಸಾಧು!

Posted By: Arshad Hussain
Subscribe to Boldsky

ಹಿಂದೆ ಸಾಧು ಋಷಿ ಮುನಿಗಳು ತಮ್ಮ ನೆಚ್ಚಿನ ಭಗವಂತನನ್ನು ಮೆಚ್ಚಿಸಲು ಕಠಿಣ ತಪಸ್ಸು ಆಚರಿಸುತ್ತಿದ್ದರಂತೆ. ಇಂದಿನ ದಿನಗಳಲ್ಲಿ ತಾವು ನಂಬಿರುವ ತತ್ವಗಳನ್ನು ಪ್ರಕಟಿಸಲು ಕೆಲವರು ಯಾವುದೇ ಮಟ್ಟಕ್ಕೆ ಹೋಗುತ್ತಾರೆ. ಕೆಲವರ್ಷಗಳ ಹಿಂದೆ ಕನಸಿನಲ್ಲಿ ಕಂಡ ದೇವಿಗೆ ಕಣ್ಣನ್ನೇ ಕೊಟ್ಟು ಕುರುಡಾಗಿದ್ದ ಭಕ್ತನ ಕಥೆ ಎಲ್ಲಾ ಪತ್ರಿಕೆಗಳಲ್ಲಿ ಬಂದಿತ್ತು.

ಇಂದಿನ ದಿನಗಳಲ್ಲಿ ಸಾಧುವೊಬ್ಬರು ತಮ್ಮ ದೈವಭಕ್ತಿಯ ಪರಾಕಾಷ್ಠೆಯನ್ನು ಪ್ರಕಟಿಸಲು ಜನನಾಂಗಕ್ಕೆ ಕಟ್ಟಿದ ಹಗ್ಗದಿಂದ ಟ್ರಕ್ ಒಂದನ್ನು ಎಲ್ಲರ ಮುಂದೆ ಎಳೆದು ತೋರಿಸಿದರಂತೆ. ಈ ನೈಜ ಘಟನೆ ನಡೆದದ್ದು ಉತ್ತರಪ್ರದೇಶದ ಅಲಾಹಾಬಾದ್ ನಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿ. ದೇಶದ ವಿವಿಧ ಕಡೆಗಳಿಂದ ಸಾಧುಗಳು ಈ ಮೇಳಕ್ಕೆ ಆಗಮಿಸಿ ಸುಮಾರು ನಲವತ್ತೈದು ದಿನಗಳ ಕಾಲ ಭಗವಂತನನ್ನು ಆರಾಧಿಸುತ್ತಾರೆ. ಬನ್ನಿ, ಈ ಅಸಾಧಾರಣ ಕಥೆಯ ಬಗ್ಗೆ ಅರಿಯೋಣ.... 

 ಮಾಘಮೇಳದಲ್ಲಿ ನಡೆದ ಅಸಾಧಾರಣ ಘಟನೆ

ಮಾಘಮೇಳದಲ್ಲಿ ನಡೆದ ಅಸಾಧಾರಣ ಘಟನೆ

ಈ ಮೇಳ ಸುಮಾರು ನಲವತ್ತೈದು ದಿನಗಳ ಕಾಲ ನಡೆಯುತ್ತದೆ ಹಾಗೂ ಈ ಮೇಳದಲ್ಲಿ ಭಾಗವಹಿಸಲು ದೇಶದ ಎಲ್ಲಾ ಕಡೆಗಳಿಂದ ಅಗಾಧ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಪ್ರದೇಶದಲ್ಲಿ ಇವರು ಒಗ್ಗೂಡಿ ಈ ಎಲ್ಲಾ ದಿನಗಳಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ಆಚರಿಸುತ್ತಾರೆ.

Image courtesy

 ಈ ಮೇಳದಲ್ಲಿ ನಡೆಯುವ ವಿವಿಧ ಕ್ರಿಯೆಗಳು

ಈ ಮೇಳದಲ್ಲಿ ನಡೆಯುವ ವಿವಿಧ ಕ್ರಿಯೆಗಳು

ಈ ಸಾಧುಗಳು ತಮ್ಮನ್ನು ಪರಮಾತ್ಮನ ಅವತಾರ ಎಂದು ತೋರ್ಪಡಿಸಲು ತಮಗೆ ಒಲಿದ ವಿದ್ಯೆಯನ್ನು ಪ್ರಕಟಿಸಲು ಉತ್ಸುಕರಾಗಿರುತ್ತಾರೆ ಹಾಗೂ ಮೇಳದ ಸಮಯದಲ್ಲಿ ಆಗಮಿಸುವ ಸಹಸ್ರಾರು ಜನರ ಎದುರು ತಮ್ಮ ಪ್ರತಿಭೆಯನ್ನು ಪ್ರಕಟಿಸುತ್ತಾರೆ. ನದಿಯಲ್ಲಿ ನಿಶ್ಚಲರಾಗಿ ದಿನಗಟ್ಟಲೇ ನಿಂತು ಒಬ್ಬರು ವಿಶ್ವದಾಖಲೆ ನಿರ್ಮಿಸಿದರೆ ಗೋಡೆಗೆ ಆತುಕೊಂಡು ದಿನಗಟ್ಟಲೇ ಕುಳಿತು ಇನ್ನೊಬ್ಬರು ದಾಖಲೆ ನಿರ್ಮಿಸುತ್ತಾರೆ. ಎಲ್ಲಾ ವಿಚಿತ್ರ ಹಾಗೂ ಪ್ರಯೋಜನಕ್ಕೆ ಬಾರದ ಚಟುವಟಿಕೆಗಳು ಇಲ್ಲಿ ಪ್ರದರ್ಶಿಸಲ್ಪಡುತ್ತವೆ. ಇದರಲ್ಲಿ ಒಬ್ಬ ಸಾಧು ನಗ್ನನಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ ಕ್ರಿಯೆ ಮಾತ್ರ ಸಮಾಜಿಕ ಜಗತ್ತಿಗೆ ಒಗ್ಗದ ದಾಖಲೆಯಾಗಿದೆ.

Image courtesy

ಈತ ತನ್ನ ಮಾರ್ಮಾಂಗದಿಂದ ಟ್ರಕ್ ಎಳೆಯಲು ನಿಶ್ಚಯಿಸಿದ

ಈತ ತನ್ನ ಮಾರ್ಮಾಂಗದಿಂದ ಟ್ರಕ್ ಎಳೆಯಲು ನಿಶ್ಚಯಿಸಿದ

ನಗ್ನನಾಗಿದ್ದ ಸಾಧು ತನಗೆ ಒಲಿದ ವಿಶೇಷ ಶಕ್ತಿಯನ್ನು ಪ್ರದರ್ಶಿಸಲು ಬಲವಾದ ಹಗ್ಗವನ್ನು ತನ್ನ ಮರ್ಮಾಂಗಕ್ಕೆ ಕಟ್ಟಿ ಹಗ್ಗದ ಇನ್ನೊಂದು ತುದಿಯನ್ನು ಚಿಕ್ಕ ಪಿಕಪ್ ಟ್ರಕ್ ಒಂದಕ್ಕೆ ಕಟ್ಟಿ ಕೆಲವೊಮ್ಮೆ ಹಿಮ್ಮುಖನಾಗಿ, ಕೆಲವೊಮ್ಮೆ ಮುಮ್ಮುಖನಾಗಿ ನಡೆಯುತ್ತಾ ಟ್ರಕ್ ಚಲಿಸುವಂತೆ ಮಾಡುವಾಗ ಛಾಯಾಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ.

Image courtesy

ಈತ ತನ್ನ ಮಾರ್ಮಾಂಗದಿಂದ ಟ್ರಕ್ ಎಳೆಯಲು ನಿಶ್ಚಯಿಸಿದ

ಈತ ತನ್ನ ಮಾರ್ಮಾಂಗದಿಂದ ಟ್ರಕ್ ಎಳೆಯಲು ನಿಶ್ಚಯಿಸಿದ

ನಗ್ನನಾಗಿದ್ದ ಸಾಧು ತನಗೆ ಒಲಿದ ವಿಶೇಷ ಶಕ್ತಿಯನ್ನು ಪ್ರದರ್ಶಿಸಲು ಬಲವಾದ ಹಗ್ಗವನ್ನು ತನ್ನ ಮಾರ್ಮಾಂಗಕ್ಕೆ ಕಟ್ಟಿ ಹಗ್ಗದ ಇನ್ನೊಂದು ತುದಿಯನ್ನು ಚಿಕ್ಕ ಪಿಕಪ್ ಟ್ರಕ್ ಒಂದಕ್ಕೆ ಕಟ್ಟಿ ಕೆಲವೊಮ್ಮೆ ಹಿಮ್ಮುಖನಾಗಿ, ಕೆಲವೊಮ್ಮೆ ಮುಮ್ಮುಖನಾಗಿ ನಡೆಯುತ್ತಾ ಟ್ರಕ್ ಚಲಿಸುವಂತೆ ಮಾಡುವಾಗ ಛಾಯಾಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ.

Image Courtesy

ಹುರುದುಂಬಿಸಿದ ಜನತೆ

ಹುರುದುಂಬಿಸಿದ ಜನತೆ

ಸಹಸ್ರಾರು ಜನರ ನಡುವೆ ನಡೆಯುತ್ತಿರುವ ಈ ಕ್ರಿಯೆ ಎಲ್ಲರ ಅಚ್ಚರಿಗೆ ಕಾಣವಾದರೂ ಎಲ್ಲರ ಆಕರ್ಷಣೆಯ ಕೇಂದ್ರವೂ ಆಗಿತ್ತು. ಈ ನಗ್ನ ಸಾಧು ಆ ಸಮಯದಲ್ಲಿ ಕೇವಲ ಮಣಿಗಳ ಸರ ಮತ್ತು ಪಾದುಕೆಗಳನ್ನು ಧರಿಸಿದ್ದ. ಹಾಗೂ ಕೈಗಳನ್ನು ಉಪಯೋಗಿಸದೆಯೇ ಹಗ್ಗವನ್ನು ಹಿಂದಕ್ಕೆ ಜಗ್ಗುತ್ತಾ ಟ್ರಕ್ ಮುಂದುವರೆಯುವಂತೆ ಮಾಡುತ್ತಿದ್ದ.

ಇಂತಹ ಕ್ರಿಯೆಗಳು ಇಲ್ಲಿ ಅಪರೂಪವಲ್ಲ

ಇಂತಹ ಕ್ರಿಯೆಗಳು ಇಲ್ಲಿ ಅಪರೂಪವಲ್ಲ

ಈ ಮೇಳದಲ್ಲಿ ಇಂತಹ ವಿಚಿತ್ರ ಹಾಗೂ ಮುಜುಗರ ತರಿಸುವ ನೂರಾರು ಚರ್ಯೆಗಳು ನಡೆಯುತ್ತಲೇ ಇರುತ್ತವೆ. 2014 ರಲ್ಲಿ ಭಾರವಾದ ಕಲ್ಲನ್ನು ಮರ್ಮಾಂಗದಿಂದ ಎತ್ತುತ್ತಿದ್ದ ವಿಡಿಯೋವೊಂದನ್ನು ಬಹಳ ಹೆಚ್ಚಿನ ಜನ ವೀಕ್ಷಿಸಿದ್ದರು.

Image courtesy

English summary

naked-sadhu-who-pulled-truck-using-his-penis

People can go to any extent when they try to prove their dedication and love for anything. This is a true incident that happened in India, where an Indian sadhu decided to prove to the world about his dedication and to justify his devotion for the Lord. This incident happened in a Magh Mela in Allahabad; where sadhus from all over the world meet up and and worship for the next 45 days. Check out the unusual story of the baba who decided to justify his dedication and love by pulling a truck using his penis.