ಈ ರಾಶಿಚಕ್ರದವರು ಅಪಾಯಕಾರಿ ಸ್ವಭಾವದವರು-ಸರ್ವಾಧಿಕಾರಿಯಂತೆ ವರ್ತಿಸುವರು!

Posted By: Deepu
Subscribe to Boldsky

ತಪ್ಪು ಮಾಡುವುದು ಸಹಜ. ಹಾಗೆಯೇ ಆ ತಪ್ಪಿನ ಅರಿವಾದಾಗ ಮತ್ತೆ ಮತ್ತೆ ಅದೇ ತಪ್ಪನ್ನು ಎಸಗಬಾರದು. ಹೌದು, ತಿಳಿಯದೇ ಮಾಡಿದ ತಪ್ಪಿಗೆ ಕ್ಷಮೆಯಿರುತ್ತದೆ. ಅದೇ ತಿಳಿದು ತಿಳಿದು ಮಾಡುವ ತಪ್ಪುಗಳನ್ನು ತಪ್ಪು ಎನ್ನುವುದಿಲ್ಲ. ಬದಲಿಗೆ ಅದು ಅಪರಾಧ ಎನಿಸಿಕೊಳ್ಳುವುದು. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದಾಗ ಅದು ಅಪಾಯಕಾರಿ ವಿಚಾರ ಎನಿಸಿಕೊಳ್ಳುವುದು.

ಎಫ್ ಬಿ ಐ ನಡೆಸಿರುವ ಕೆಲವು ಸಂಶೋಧನೆಗಳ ಆಧಾರದ ಮೇಲೆ ಪ್ರತಿಯೊಂದು ರಾಶಿಚಕ್ರದವರಲ್ಲೂ ಅಪಾಯಕಾರಿ ಗುಣಗಳು ಇರುತ್ತವೆ. ಅದರಲ್ಲೂ ಕೆಲವು ರಾಶಿಚಕ್ರದವರಲ್ಲಿ ಅಂತಹ ಗುಣಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗಿದೆ. ನಿಮಗೂ ನಿಮ್ಮ ರಾಶಿಚಕ್ರವು ಅಪಾಯಕಾರಿ ವಿಚಾರದಲ್ಲಿ ಯಾವ ಸ್ಥಾನವನ್ನು ಪಡೆದುಕೊಳ್ಳುವುದು ಎನ್ನುವುದನ್ನು ತಿಳಿದುಕೊಳ್ಳುವ ಬಯಕೆ ಇದ್ದರೆ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ...

ಕರ್ಕ

ಕರ್ಕ

ಎಫ್ ಬಿ ಐ ದಾಖಲೆಯ ಪ್ರಕಾರ ಇದು ಅತ್ಯಂತ ಪ್ರಾಣಾಂತಿಕ ರಾಶಿಚಕ್ರ. ಈ ರಾಶಿಯವರು ಮಾನಸಿಕ ಸ್ಥಿರತೆಯನ್ನು ಹೊಂದಿರುತ್ತಾರೆ. ಎಫ್ ಬಿ ಐ ಅಧ್ಯಯನದ ಪ್ರಕಾರ ಭಾವಾವೇಶದ ಅಪರಾಧಗಳು ಆಗಾಗ ಬದ್ಧವಾಗಿರುತ್ತವೆ. ಪ್ರತಿಬಾರಿ ಇವರು ತಮ್ಮ ಅಗತ್ಯಗಳಿಗೆ ಇತರರನ್ನು ಬಲಿಪಶುವನ್ನಾಗಿ ಮಾಡುತ್ತಾರೆ. ಹಾಗಾಗಿ ಇವರನ್ನು ಒಂದು ಅಪರಾಧಿ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುವುದು.

ವೃಷಭ

ವೃಷಭ

ಈ ರಾಶಿಚಕ್ರದವರು ಹೆಚ್ಚು ಉದ್ವೇಗಕ್ಕೆ ಒಳಗಾಗುತ್ತಾರೆ ಎನ್ನಲಾಗುವುದು. ಇವರು ಸ್ವಾಮ್ಯ ಸೂಚಕ ಮತ್ತು ಮೊಂಡುತನದವರು ಎನ್ನಬಹುದು. ನೈಸರ್ಗಿಕವಾಗಿಯೇ ನಾಯಕತ್ವ ಗುಣವನ್ನು ಹೊಂದಿರುವ ಇವರು ಉಗ್ರ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಇತರರ ಮೇಲೆ ಅಧಿಕ ಪ್ರಮಾಣದ ಒತ್ತಡವನ್ನು ಹೇರುತ್ತಾರೆ.

ಧನು: ನವೆಂಬರ್ 22-ಡಿಸೆಂಬರ್ 21

ಧನು: ನವೆಂಬರ್ 22-ಡಿಸೆಂಬರ್ 21

ಈ ರಾಶಿಚಕ್ರದವರು ಕೋಪಗೊಂಡಾಗ ಸ್ಥಿರವಾದ ಮತ್ತು ಕ್ಷಮಿಸದವರಾಗಿ ವರ್ತಿಸುವರು. ಇದು ಅವರಿಗೆ ತುಂಬಾ ಕಠಿಣ ಸ್ವಭಾವ ಎನ್ನಬಹುದು. ಇವರು ಇತರರನ್ನು ನೋಯಿಸಲು ಇಷ್ಟಪಡುವುದಿಲ್ಲ. ಆದರೆ ಇವರನ್ನು ಕಳ್ಳತನದಿಂದ ಬಂಧಿಸಲ್ಪಡುವ ಸಾಧ್ಯತೆಗಳಿವೆ. ಕಾನೂನಿನಿಂದ ತಪ್ಪಿಸಿಕೊಳ್ಳುವ ಮಾರ್ಗದಲ್ಲಿ ಇವರು ನಿಲ್ಲುತ್ತಾರೆ. ಕುಖ್ಯಾತ ಅಪರಾಧಿಗಳ ಪಟ್ಟಿಯಲ್ಲಿ ಇವರು ಮೊದಲ ಸ್ಥಾನದಲ್ಲಿ ಇರುತ್ತಾರೆ.

ಮೇಷ

ಮೇಷ

ಹಠಮಾರಿ ವ್ಯಕ್ತಿಗಳಾದ ಇವರು ಅಪಾಯಕಾರಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಾಲ್ಕನೇ ಶ್ರೇಯಾಂಕದಲ್ಲಿ ನಿಲ್ಲುತ್ತಾರೆ. ಜೀವನದಲ್ಲಿ ಸ್ಪರ್ಧಾತ್ಮಕ ಚಟುವಟಿಕೆಯಿಂದ ತಪ್ಪಿಸಿಕೊಳ್ಳಲು ಅಕ್ರಮ ವೃತ್ತಿಜೀವನವನ್ನು ಕುಡುಕುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇವರ ಅಧಿಕಾರವನ್ನು ಪ್ರಶ್ನಿಸುವವರನ್ನು ದ್ವೇಷಿಸುತ್ತಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ.

ಮಕರ

ಮಕರ

ಮರಣ ದಂಡನೆಯ ಅಪರಾಧಗಳಂತಹ ಅಪರಾಧವನ್ನು ಈ ರಾಶಿಚಕ್ರದವರು ಕೈಗೊಳ್ಳುವ ಸಾಧ್ಯತೆಗಳಿರುತ್ತವೆ. ಇವರು ಅತ್ಯಂತ ಅಪಾಯಕಾರಿ ವ್ಯಕ್ತಿಗಳು. ತಮ್ಮ ತಪ್ಪುಗಳನ್ನು ಕಂಡುಹಿಡಿಯಲು ಸಾಧ್ಯವಾಗದಂತೆ ನೋಡಿಕೊಳ್ಳುತ್ತಾರೆ. ಇವರು ಅಸುರಕ್ಷಿತವ್ಯಕ್ತಿಗಳು ಎನ್ನುವುದು ಅವರಿಗೆ ತಿಳಿದಿದ್ದರೂ ಇವರು ತಪ್ಪನ್ನು ಎಸಗುತ್ತಾರೆ.

ಕನ್ಯಾ

ಕನ್ಯಾ

ಈ ರಾಶಿಚಕ್ರದವರು ಬುದ್ಧಿವಂತರಾಗಿರುತ್ತಾರೆ. ಹಾಗೆಯೇ ಅಪರಾಧಿ ಗುಣಗಳು ಅಧಿಕವಾಗಿರುತ್ತದೆ. ಹ್ಯಾಕಿಂಗ್, ಕಳ್ಳತನ, ಮೋಸ, ವಂಚನೆ ಮಾಡುವಂತಹ ಕೆಲಸದಲ್ಲಿ ಹೆಚ್ಚು ಒಲವನ್ನು ತೋರುತ್ತಾರೆ. ಸಂಪತ್ತಿನ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದುವರು. ಅಪರಾಧಿ ಕೃತ್ಯಗಳಿಗೆ ಸುಳಿವು ಸಿಗದಂತೆ ಮಾಡುತ್ತಾರೆ. ಹೆಚ್ಚಾಗಿ ಕಳ್ಳತನ ಮಾಡುವುದರಲ್ಲಿ ಭಾಗಿಯಾಗಿರುತ್ತಾರೆ.

ತುಲಾ

ತುಲಾ

ಈ ರಾಶಿಯವರು ಸಾಮಾನ್ಯವಾಗಿ ಎಂದಿಗೂ ಕಾನೂನು ವಿರುದ್ಧವಾದ ಕೆಲಸದಲ್ಲಿ ತೊಡಗಿಕೊಳ್ಳುವುದಿಲ್ಲ. ಆದರೆ ಬ್ಯಾಂಕಿಂಗ್ ಹಗರಣದಲ್ಲಿ ಅಥವಾ ವಿತ್ತೀಯ ಲಾಭಗಳೊಂದಿಗೆ ತೊಡಗಿಸಿಕೊಳ್ಳುವಲ್ಲಿ ಹೆಚ್ಚು ಒಲವು ತೋರುತ್ತಾರೆ. ಔಷಧಿಗಳಿಗೆ ಸಂಬಂಧಿಸಿದ ಅಪರಾಧಗಳಲ್ಲಿ ಅವರು ಭಾಗಿಯಾಗುತ್ತಾರೆ. ತಮ್ಮ ಅಪರಾಧಗಳನ್ನು ಮಾಡಲು ದೊಡ್ಡ ಸಂಸ್ಥೆಯ ಹಿಂದೆ ಮರೆಮಾಡಲು ಸಾಧ್ಯತೆಗಳಿವೆ.

ಮೀನ

ಮೀನ

ಈ ವ್ಯಕ್ತಿಗಳು ತಮ್ಮ ಗೌಪ್ಯ ವಿಚಾರಗಳನ್ನು ಮರೆಮಾಚುತ್ತಾರೆ. ಅಲ್ಲದೆ ಅಪರಾಧಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆಇವರು ಮಾದಕ ದ್ರವ್ಯಗಳ ದುರುಪಯೋಗ ಮಾಡಬಹುದು. ಅಲ್ಲದೆ ಸರಣಿ ಕೊಲೆಗಾರರಾಗಿಯೂ ರೂಪುಗೊಳ್ಳುವ ಸಾಧ್ಯತೆಗಳಿವೆ. ಇವರು ಉದ್ವಿಘ್ನರಾದಾಗ ಅಪಾಯಕಾರಿ ವ್ಯಕ್ತಿಗಳಾಗಿ ತಿರುಗುವರು.

ವೃಶ್ಚಿಕ

ವೃಶ್ಚಿಕ

ಈ ರಾಶಿಚಕ್ರದವರು ಅಸೂಯೆ ಮತ್ತು ಆಕ್ರಮಣಶೀಲ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ತಪ್ಪಾದ ಸಂದರ್ಭದಲ್ಲಿ ಭೀಕರವಾಗಿ ವರ್ತಿಸಬಹುದು. ಈ ವ್ಯಕ್ತಿಗಳು ಹಿಂಸೆ ಮಾಡುವುದರಲ್ಲಿ ಹೆಚ್ಚು ಆನಂದವನ್ನು ಅನುಭವಿಸುತ್ತಾರೆ. ಕುತಂತ್ರದ ಸ್ವಭಾವವನ್ನು ಹೊಂದಿರುವ ಈ ವ್ಯಕ್ತಿಗಳು ಅನೇಕ ಸಮಸ್ಯೆಗಳನ್ನು ಬಹಳ ಸುಲಭವಾಗಿ ತಳ್ಳಿಹಾಕುವ ಸಾಮಥ್ರ್ಯವನ್ನು ಹೊಂದಿರುತ್ತಾರೆ.

ಸಿಂಹ

ಸಿಂಹ

ಬಹುಪಾಲಲು ಧನಾತ್ಮಕ ಲಕ್ಷಣವನ್ನು ಹೊಂದಿದ್ದರೂ ಈ ವ್ಯಕ್ತಿಗಳು ಮಾನಸಿಕವಾಗಿ ಗೊಂದಲಕ್ಕೆ ಅಥವಾ ಒತ್ತಡಕ್ಕೆ ಒಳಗಾದ ಸಂದರ್ಭದಲ್ಲಿ ವಿಚಿತ್ರವಾಗಿ ವರ್ತಿಸಬಹುದು. ಇವರು ಸಿಟ್ಟಿನಲ್ಲಿರುವಾಗ ವಿಷಯಗಳು ಕೆಟ್ಟದಾಗಿ ಬದಲಾವಣೆ ಹೊಂದುತ್ತದೆ. ವಿಶೇಷವಾಗಿ ಅವರು ಅಪೇಕ್ಷಿತ ಗಮನವನ್ನು ಪಡೆದುಕೊಂಡಿರುವುದಿಲ್ಲ ಎಂದು ಹೇಳಬಹುದು. ಬೆಂಕಿಯ ಸಂಕೇತವನ್ನು ಹೊಂದಿರುವ ಇವರು ಕೆಟ್ಟಗುಣಗಳನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ. ಅಲ್ಲದೆ ಕುಖ್ಯಾತ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.

ಕುಂಭ

ಕುಂಭ

ಇವರು ಯಾರಿದಂಲಾದರೂ ಬಲಿಪಶುವಾಗುವ ತನಕ ಉತ್ತಮ ವರ್ತನೆಯನ್ನು ತೋರುತ್ತಾರೆ. ಅದೇ ಅವರು ಸೇಡು ತೀರಿಸಿಕೊಳ್ಳಲು ಹೊರಟರೆ ಬಹಳ ಅಪಾಯಕಾರಿಯಾಗಿ ವರ್ತಿಸುತ್ತಾರೆ. ಬುದ್ಧಿವಂತರೂ ಹಾಗೂ ಕುಶಲತೆಯನ್ನು ಹೊಂದಿರುವ ಈ ವ್ಯಕ್ತಿಗಳು ಮಹಾನ್ ಹ್ಯಾಕರ್ಸ್ ಎಂದು ಹೇಳಲಾಗುತ್ತದೆ.

ಮಿಥುನ

ಮಿಥುನ

ಈ ವ್ಯಕ್ತಿಗಳು ಕನಿಷ್ಠ ಅಪಾಯಕಾರಿ ಚಿಹ್ನೆಯವರು. ಇವರು ಅಪರಾಧ, ಮೋಸ ಹಾಗೂ ಕಳ್ಳತನಗಳಂತಹ ಕೆಲಸದಲ್ಲಿ ತಮ್ಮನ್ನು ಹೆಚ್ಚು ಕೇಂದ್ರಬಿಂದುವಾಗಿ ತೊಡಗಿಸಿಕೊಳ್ಳುತ್ತಾರೆ. ಈ ರಾಶಿಯವರ ಋಣಾತ್ಮಕ ಲಕ್ಷಣವೆಂದರೆ ಆತಂಕ ಹೊಂದದೇ ಇರುವುದು ಮತ್ತು ಅಸಂಗತತೆಯನ್ನು ಒಳಗೊಂಡಿರುತ್ತದೆ. ಒಟ್ಟಾರೆಯಾಗಿ ಈ ರಾಶಿಚಕ್ರದವರು ಅಷ್ಟಾಗಿ ಅಪಾಯಕಾರಿಗಳಾಗಿರುವುದಿಲ್ಲ.

English summary

most-dangerous-zodiac-signs-which-zodiac-tops-the-list

Can you imagine which is the most dangerous zodiac sign, the individuals of which are known to do the maximum number of crimes? Well, to understand it in a better way, the FBI has released a list of the most dangerous zodiac signs. These signs are known to be listed based on the data of the prisoners and the crimes that they have done as per the records! Check out at what number is your zodiac sign present at when it comes to being dangerous.