Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮೈಮೇಲೆ ಈ 8 ಸ್ಥಳಗಳಲ್ಲಿ ಮಚ್ಚೆ ಇದ್ದವರಿಗೆ, ಸ್ವಲ್ಪ ಹಣದ ಸಮಸ್ಯೆ ಕಾಡುತ್ತದೆಯಂತೆ!
ನಾವು ಉಪಯೋಗಿಸುವ ವಸ್ತು, ವಾಹನ, ಆಹಾರ ಸೇರಿದಂತೆ ಇನ್ನಿತರ ವಿಚಾರಗಳಿಗೆ ಅನುಗುಣವಾಗಿ ಆರ್ಥಿಕ ಸ್ಥಿತಿ ಹೇಗಿದೆ? ಎನ್ನುವುದನ್ನು ಊಹಿಸುವುದು ಸಹಜ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ವ್ಯಕ್ತಿ ಎಲ್ಲವನ್ನೂ ಉನ್ನತ ದರ್ಜೆಯಲ್ಲಿ ಇರುವುದನ್ನೇ ಬಯಸುತ್ತಾನೆ. ಅದೇ ಕೊಂಚ ಆರ್ಥಿಕ ಸ್ಥಿತಿ ಸಮಾಧಾನಕರವಾಗಿದ್ದರೆ ಎಂತಹದ್ದೇ ಆದರೂ ಹೊಂದಲು ಸಿದ್ಧನಾಗಿರುತ್ತಾನೆ ಎನ್ನುವುದು ಲೋಕ-ರೂಢಿಯ ಚಿಂತನೆಗಳು. ಹಾಗಾಗಿ ಪ್ರತಿಯೊಬ್ಬರು ವ್ಯಕ್ತಿಯ ಶ್ರೀಮಂತಿಕೆಯನ್ನು ಆತ ಬಳಸುವ ವಸ್ತುಗಳನ್ನು ನೋಡಿ ಊಹಿಸುತ್ತಾರೆ.
ಜ್ಯೋತಿಷ್ಯ ಹಾಗೂ ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ದೇಹದ ಅಂಗಾಂಗಗಳು ಹಾಗೂ ಅವರ ಮೈ ಮೇಲೆ ಇರುವ ಮಚ್ಚೆಗಳನ್ನು ನೋಡುವುದರ ಮೂಲಕ ಆರ್ಥಿಕ ಸ್ಥಿತಿ ಹಾಗೂ ಹಣದ ವ್ಯವಹಾರಗಳನ್ನು ಊಹಿಸಲಾಗುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಅವನು/ಅವಳು ಯಾರೇ ಆಗಿದ್ದರೂ ಅವರ ಮೈ ಮೇಲೆ ಪ್ರಮುಖವಾಗಿ ಎಂಟು ಜಾಗಗಳ ಮೇಲಿನ ಮಚ್ಚೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರಮುಖ ಅಂಗಗಳ ಮೇಲಿರುವ ಮಚ್ಚೆಗಳು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಹಾಗೂ ಯಶಸ್ಸನ್ನು ನಿರ್ಧರಿಸುತ್ತವೆ ಎಂದು ಹೇಳಲಾಗುವುದು. ನಿಮಗೂ ನಿಮ್ಮ ಆರ್ಥಿಕ ಸ್ಥಿತಿ ಹಾಗೂ ದೇಹದ ಮೇಲಿರುವ ಮಚ್ಚೆಗಳನ್ನು ಆದರಿಸಿ ಆರ್ಥಿಕ ಸ್ಥಿತಿ ಹೇಗಿದೆ? ಎನ್ನುವುದನ್ನು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ...
ಎಡ ಕೆನ್ನೆಯ ಮೇಲಿನ ಮಚ್ಚೆ
ವ್ಯಕ್ತಿಯ ಎಡ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅವರು ಜೀವನದಲ್ಲಿ ದೊಡ್ಡ ಮೂಲದ ಆದಾಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಅಲ್ಲದೆ ಇವರಿಗೆ ಸಾಕಷ್ಟು ಉಳಿತಾಯ ಮಾಡಲು ಕಷ್ಟವಾಗುವುದು.
ಕೆಳ ತುಟಿಯ ಕೆಳಗಿರುವ ಮಚ್ಚೆ
ವ್ಯಕ್ತಿಯ ಕೆಳ ತುಟಿಯ ಕೆಳಗೆ ಮಚ್ಚೆಯಿದ್ದರೆ ಸಾಮಾನ್ಯವಾಗಿ ವ್ಯಕ್ತಿ ಹಣದ ಬಿಕ್ಕಟ್ಟನ್ನು ಎದುರಿಸುವನು ಎಂದು ಹೇಳಲಾಗುವುದು.
ಎಡ ಪಾದದ ಮೇಲಿರುವ ಮಚ್ಚೆ
ನಿಮ್ಮ ಎಡ ಪಾದದ ಮೇಲೆ ಮಚ್ಚೆಯಿದ್ದರೆ ಪ್ರೌಢಾವಸ್ಥೆಯ ನಂತರ ತೀವ್ರವಾದ ಹಣ ನಿರ್ವಹಣೆಯ ಬಿಕ್ಕಟ್ಟನ್ನು ಅನುಭವಿಸುವರು ಎನ್ನುವುದನ್ನು ಸೂಚಿಸುತ್ತದೆ. ಖರ್ಚುಗಳನ್ನು ನಿವಾರಿಸಿಕೊಳ್ಳಲು ಸ್ವಲ್ಪ ಕಷ್ಟ ಎನಿಸಬಹುದು.
ಎಡ ಕಾಲಿನ ಮೇಲಿರುವ ಮಚ್ಚೆ
ಎಡ ಕಾಲಿನ ಮೇಲೆ ಮಚ್ಚೆಯನ್ನು ಹೊಂದಿದ್ದರೆ ಅವರಿಗೆ ವಿವರಿಸಲಾಗದಂತಹ ಖರ್ಚು ಅಥವಾ ಹಣದ ಹೊರ ಹರಿವನ್ನು ಕಾಣಬೇಕಾಗುವುದು. ಉಳಿತಾಯ ಮಾಡಲು ಸಾಕಷ್ಟು ಕಷ್ಟಪಡುವರು. ಆದರೂ ಕೊನೆಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುವರು.
ತೋರು ಬೆರಳಿನ ಮೇಲಿರುವ ಮಚ್ಚೆ
ತೋರು ಬೆರಳಿನ ಮೇಲೆ ಕಲೆಯನ್ನು ಹೊಂದಿದ್ದರೆ ಆಂತರಿಕವಾಗಿ ವ್ಯಕ್ತಿ ಹಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವನು. ಕೆಲವು ಸಂದರ್ಭದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲಾ... ಎನ್ನುವಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು.
ಗುರು ಪರ್ವದ ಮೇಲೆ ಮಚ್ಚೆ
ಅಂಗೈಯಲ್ಲಿರುವ ಗುರು ಪರ್ವದ ಮೇಲೆ ಮಚ್ಚೆಯನ್ನು ಹೊಂದಿದ್ದರೆ ಕಷ್ಟದ ಸಮಯದಲ್ಲಿ ಹಣವು ನಿಮ್ಮ ಕೈಯಲ್ಲಿ ಇರುವುದಿಲ್ಲ ಎಂದು ತೋರುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮಗೆ ಸಹಾಯ ಮಾಡಲು ಬಂದವರ ಜೊತೆ ಸೌಮ್ಯವಾದ ವರ್ತನೆಯನ್ನು ತೋರಬೇಕಾಗುವುದು. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ವ್ಯಕ್ತಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುವುದು.
ಎಡ ಹುಬ್ಬಿನ ಮೇಲೆ ಮಚ್ಚೆ
ಎಡ ಹುಬ್ಬಿನ ಒಳಗೆ ಅಥವಾ ಸ್ವಲ್ಪ ಕಾಣುವಂತೆ ಕಲೆಗಳು ಇರಬಹುದು. ಹೀಗೆ ಇರುವವರು ಲೈಂಗಿಕ ಆನಂದ ಹೊಂದಬೇಕೆನ್ನುವ ಆಸೆಯ ದೌರ್ಬಲ್ಯವನ್ನು ಹೊಂದಿರುತ್ತಾರೆ. ಇವರು ಪ್ರಮುಖ ಕಾರಣಗಳಿಗೆ ಹಣದ ಬಿಕ್ಕಟ್ಟನ್ನು ಎದುರಿಸುವರು. ಆನಂದವನ್ನು ಪಡೆಯಲು ಸಾಕಷ್ಟು ದುರಾಸೆಗೆ ಒಳಗಾಗುತ್ತಾರೆ. ಯಾವುದೇ ಸಮಯದಲ್ಲಾದರೂ ದಿವಾಳಿಯಾಗಬಹುದು.
ಎಡತೋಳಿನ ಮೇಲಿರುವ ಮಚ್ಚೆ
ಎಡತೋಳಿನ ಮೇಲೆ ಕಲೆಯನ್ನು ಹೊಂದಿರುವ ವ್ಯಕ್ತಿಗಳು ಆರೋಗ್ಯದ ಬಗ್ಗೆ ಸಾಕಷ್ಟು ಜಾಗರೂಕರಾಗಿರಬೇಕು. ಏಕೆಂದರೆ ಇವರು ಹೆಚ್ಚು ಹಣವನ್ನು ರೋಗಗಳ ನಿವಾರಣೆಗೆ ಅಥವಾ ಚಿಕಿತ್ಸೆಗಾಗಿಯೇ ವ್ಯಯಿಸಬೇಕಾಗುವುದು.
ಮದುವೆಯ ನಂತರ ಯಶಸ್ಸನ್ನು ಸೂಚಿಸುವ ಮಚ್ಚೆಗಳು
ಮಚ್ಚೆಗಳು ಅದೃಷ್ಟ, ಸಂಪತ್ತು, ಆರ್ಥಿಕ ಸ್ಥಿತಿ, ಸಂಗಾತಿ, ಸಂಬಂಧ ಹೀಗೆ ವಿವಿಧ ವಿಷಯಗಳಲ್ಲಿ ಅದೃಷ್ಟ ಹಾಗೂ ದುರಾದೃಷ್ಟಗಳನ್ನು ಹೇಗೆ ತರುತ್ತವೆ ಎನ್ನುವುದನ್ನು ನೋಡಿದ್ದೇವೆ. ಇದೀಗ ಮಚ್ಚೆಗಳ ಪ್ರಭಾವದಿಂದ ವಿವಾಹದ ನಂತರ ಹೇಗೆ ಯಶಸ್ಸನ್ನು ಹೊಂದುತ್ತೇವೆ ಎನ್ನುವುದನ್ನು ತಿಳಿದುಕೊಳ್ಳಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...
ಮೂಗಿನ ಪಕ್ಕದಲ್ಲಿ ಇರುವ ಮಚ್ಚೆ
ಮೂಗಿನ ಪಕ್ಕದಲ್ಲಿ ಕಲೆಯನ್ನು ಹೊಂದಿದ್ದರೆ ಇಂತಹವರು ಐಷಾರಾಮಿ ಜೀವನವನ್ನು ಅನುಭವಿಸುವರು. ಇವರ ಎಲ್ಲಾ ಕನಸುಗಳು ಪೂರೈಸುತ್ತವೆ. ವಿವಾಹದ ನಂತರ ಇವರು ಯಾವುದೇ ವಿಚಾರದಲ್ಲಿ ತಮ್ಮ ಇಷ್ಟದಂತೆ ಆಗಬೇಕೆಂದು ಬಯಸಿದರೂ ಅದರ ಬಗ್ಗೆ ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಬೇಕಾಗುವುದು.
ಬಲ ಕೆನ್ನೆಯ ಮೇಲೆ ಮಚ್ಚೆ
ಬಲ ಕೆನ್ನೆಯ ಮೇಲೆ ಮಚ್ಚೆಯನ್ನು ಹೊಂದಿದ್ದರೆ ವಿವಾಹದ ನಂತರ ಅವರ ಅದೃಷ್ಟವು ಹಠಾತ್ ಬದಲಾವಣೆಯನ್ನು ಕಾಣುತ್ತದೆ. ಹಣಕಾಸಿನ ಕೊರತೆಯನ್ನು ಸಹ ಇವರು ಎದುರಿಸಬೇಕಾಗುವುದು. ವಿವಾಹದ ವಿಚಾರವನ್ನು ಮುಂದಕ್ಕೆ ದೂಡುವುದು ಒಳಿತು.
ಎರಡು ಹುಬ್ಬುಗಳ ಮಧ್ಯೆ ಮಚ್ಚೆ
ಎರಡು ಹುಬ್ಬುಗಳು ಸೇರುವ ಸ್ಥಳದಲ್ಲಿ ಮಚ್ಚೆ ಇದ್ದರೆ ಇವರು ವಿವಾಹದ ನಂತರ ಸಾಕಷ್ಟು ಯಶಸ್ಸನ್ನು ಸಾಧಿಸುತ್ತಾರೆ. ಮದುವೆಗು ಮುಂಚೆ ಇವರು ಎಲ್ಲಾ ಕೆಲಸಗಳಿಗೂ ಸಾಕಷ್ಟು ಪರಿಶ್ರಮವನ್ನು ವಹಿಸಬೇಕಾಗುವುದು.
ವಿವಾಹ ರೇಖೆಯ ಮೇಲೆ ಮಚ್ಚೆ
ವಿವಾಹ ರೇಖೆಯ ಮೇಲೆ ಕೆಂಪು ಮಚ್ಚೆಯಿದ್ದರೆ ಸಂಗಾತಿಯೊಂದಿಗೆ ಯಶಸ್ವಿ ಮತ್ತು ಫಲಪ್ರದ ಸಂಬಂಧಗಳನ್ನು ಹೊಂದಿರುತ್ತಾರೆ ಎನ್ನುವುದನ್ನು ಸಂಕೇತಿಸುತ್ತದೆ. ವಿವಾಹ ರೇಖೆಯ ಮೇಲೆ ಕಪ್ಪು ಮಚ್ಚೆಯನ್ನು ಹೊಂದಿದ್ದರೆ ಕೆಂಪು ಮಚ್ಚೆಯ ವಿರುದ್ಧವಾದ ಫಲವನ್ನು ನೀಡುತ್ತದೆ.
ಅಂಗೈನಲ್ಲಿ ಮಚ್ಚೆ
ಅಂಗೈನಲ್ಲಿ ಮಚ್ಚೆಯನ್ನು ಹೊಂದಿದ್ದರೆ ವ್ಯಕ್ತಿಯು ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಿಗೆ ಪ್ರಯಾಣ ಬೆಳೆಸುವಂತಹ ಯೋಗವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಮದುವೆಯ ನಂತರ ಇದರ ಪರಿಣಾಮವು ಯಶಸ್ಸಿನ ಜೀವನದ ಸುಳಿವನ್ನು ನೀಡುತ್ತದೆ. ವಿವಾಹದ ನಂತರ ಇವರಿಗೆ ಯಶಸ್ಸಿನ ಬಾಲಿಲು ತೆರೆಯುವುದು ಎಂದು ಹೇಳಲಾಗುವುದು.
ಶುಕ್ರ ಪರ್ವದ ಮೇಲೆ ಮಚ್ಚೆ
ಅಂಗೈಯಲ್ಲಿ ಇರುವ ಶುಕ್ರ ಪರ್ವದ ಮೇಲೆ ಮಚ್ಚೆಯಿದ್ದರೆ ವಿವಾಹದ ನಂತರ ವ್ಯಕ್ತಿ ಅತ್ಯಂತ ಸುಖಕರವಾದ ಲೈಂಗಿಕ ಜೀವನವನ್ನು ಹೊಂದಿರುತ್ತಾನೆ ಎಂದು ಹೇಳಲಾಗುವುದು. ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ವಿವಾಹದ ನಂತರ ಹೆಚ್ಚಿನ ಯಶಸ್ಸು ದೊರೆಯುವುದು.