ದೇಹದ ಈ 8 ಸ್ಥಳಗಳಲ್ಲಿ ಮಚ್ಚೆ ಇದ್ದವರಿಗೆ, ಜೀವನದಲ್ಲಿ ಕಷ್ಟ, ಹಣದ ಸಮಸ್ಯೆ ಬರಬಹುದು!

Posted By: Deepu
Subscribe to Boldsky

ಪ್ರತಿಯೊಬ್ಬರ ಶರೀರದ ಮೇಲೂ ಕೆಲವಾದರೂ ಮಚ್ಚೆಗಳಿರುತ್ತವೆ. ಕೆಲವು ಹುಟ್ಟಿನಿಂದಲೇ ಬಂದಿದ್ದರೆ (ಇವುಗಳಿಗೆ ಹುಟ್ಟುಮಚ್ಚೆ ಎಂದು ಕರೆಯುತ್ತಾರೆ) ಉಳಿದವು ಹುಟ್ಟಿದಾಗ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿದ್ದು ದೊಡ್ಡವರಾಗುತ್ತಿದ್ದಂತೆ ಗಾತ್ರದಲ್ಲಿ ಬೆಳೆದು ಬಳಿಕ ಕಾಣಿಸಿಕೊಳ್ಳುತ್ತವೆ. ಕೆಲವು ಸೌಂದರ್ಯವನ್ನು ಹೆಚ್ಚಿಸಿದರೆ ಕೆಲವು ಇರಬಾರದ ಸ್ಥಳದಲ್ಲಿದ್ದು ಸೌಂದರ್ಯವನ್ನು ಕುಂದಿಸುತ್ತದೆ. ಹೆಚ್ಚಿನವರಿಗೆ ಮುಖದ ಮೇಲಿನ ಮಚ್ಚೆಯ ಬಗ್ಗೆ ಅಸಹನೆ ಇದ್ದು ಇದನ್ನು ನಿವಾರಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ

ಆದರೆ ಹಿರಿಯರು ಮಚ್ಚೆಗಳಿದ್ದರೆ ಒಳ್ಳೆಯದು ಮತ್ತು ಮಚ್ಚೆಗಳು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತವೆ ಎಂದು ನಂಬಿದ್ದಾರೆ. ಹಲವು ಜ್ಯೋತಿಷಿಗಳೂ ಮಚ್ಚೆಯ ಸ್ಥಾನವನ್ನು ನೋಡಿ ಹಲವು ವಿಷಯಗಳನ್ನು ತಿಳಿಸಬಲ್ಲರು. ಕೆಲವರು ಈ ಮಚ್ಚೆಗಳು ಸಮೃದ್ಧಿ ಮತ್ತು ಐಶ್ವರ್ಯದ ಪ್ರತೀಕವೆಂದೂ ನಂಬುತ್ತಾರೆ.

ಬೆರಳುಗಳ ಮೇಲಿನ ಮಚ್ಚೆ- ಜಾತಕವನ್ನೇ ಬಿಚ್ಚಿಡುತ್ತದೆ!

ಸಾಮುದ್ರಿಕಾ ಶಾಸ್ತ್ರದಲ್ಲಿ ವಿವರಿಸುವ ಸಂಗತಿಗಳ ಪ್ರಕಾರ ವ್ಯಕ್ತಿಯ ದೇಹದ ಕೆಲವೊಂದು ಭಾಗಗಳಲ್ಲಿರುವ ಮಚ್ಚೆಗಳು ಆತನಲ್ಲಿ ಧನಸಂಗ್ರಹವಾಗದಿರಲು ಪ್ರಬಲ ಕಾರಣವಾಗಿರುತ್ತದೆ. ಈ ವ್ಯಕ್ತಿಗಳು ಎಷ್ಟುಗಳಿಸಿದರೂ ವಿವರಿಸಲಾಗದ ಖರ್ಚುಗಳು ಆವರಿಸಿ ಗಳಿಕೆಯನ್ನಷ್ಟೂ ಕಬಳಿಸಿ ಬಿಡುವುದರಿಂದ ಉಳಿತಾಯ ಮರೀಚಿಕೆಯೇ ಆಗಿ ಹೋಗುತ್ತದೆ. ಈ ತೊಂದರೆಗಳಿಂದ ವ್ಯಕ್ತಿಗೆ ಬಿಡುಗಡೆಯೇ ಇಲ್ಲ ಎಂದೆನ್ನಿಸುತ್ತದೆ. ಬನ್ನಿ, ಈ ಮಚ್ಚೆಗಳಿರುವ ಅಂಗಗಳು ಯಾವುವು ಎಂಬುದನ್ನು ನೋಡೋಣ.....

ಎಡಗಣ್ಣಿನ ಹುಬ್ಬಿನ ಮೇಲಿನ ಮಚ್ಚೆ

ಎಡಗಣ್ಣಿನ ಹುಬ್ಬಿನ ಮೇಲಿನ ಮಚ್ಚೆ

ಒಂದು ವೇಳೆ ಎಡಗಣ್ಣಿನ ಹುಬ್ಬಿನ ಕೂದಲಡಿಯಲ್ಲಿ ಅಡಗಿರುವ ಮಚ್ಚೆ ಇದ್ದರೆ ಅಥವಾ ಕೊಂಚವೇ ಹೊರಭಾಗಕ್ಕೆ ಚಾಚಿಕೊಂಡಂತಿದ್ದರೆ ಈ ವ್ಯಕ್ತಿಗಳು ಹೆಚ್ಚು ಕಾಮಾಸಕ್ತರಾಗಿದ್ದು ಈ ಆಸಕ್ತಿಯನ್ನು ತಣಿಸಲು ಹೆಚ್ಚಿನ ಹಣವನ್ನು ಪೋಲು ಮಾಡುವವರಾಗಿರುತ್ತಾರೆ. ಇದೇ ಕಾರಣಕ್ಕೆ ಇವರ ಜೀವನದಲ್ಲಿ ಮುಖ್ಯ ಕಾರ್ಯಗಳಿಗೆ ಹಣವಿಲ್ಲದೇ ಆರ್ಥಿಕ ಮುಗ್ಗಟ್ಟನ್ನು ಎದುರಿಸುವಂತಾಗುತ್ತದೆ. ಆದರೂ ಈ ಆಸಕ್ತಿ ತಣಿಯುವ ಪ್ರಯತ್ನಗಳು ನಡೆಯದೇ ಇದ್ದರೆ ಶೀಘ್ರದಲ್ಲಿಯೇ ದಿವಾಳಿಯಾಗುವುದು ಖಚಿತ.

ಮೂಗಿನ ಪಕ್ಕದಲ್ಲಿರುವ ಮಚ್ಚೆ

ಮೂಗಿನ ಪಕ್ಕದಲ್ಲಿರುವ ಮಚ್ಚೆ

ಮೂಗಿನ ಯಾವುದೇ ಪಕ್ಕದಲ್ಲಿ ಮಚ್ಚೆ ಇರುವ ವ್ಯಕ್ತಿಗಳಿಗೆ ಹಲವಾರು ಕಷ್ಟಗಳು ಎದುರಾಗುತ್ತವೆ. ಆದರೆ ಜೀವಮಾನವಿಡೀ ಈ ಕಷ್ಟಗಳು ಇರುತ್ತವೆ ಎಂದು ಈ ವ್ಯಕ್ತಿಗಳು ಕೊರಗಬೇಕಾಗಿಲ್ಲ. ಹೆಚ್ಚಿನ ಕಷ್ಟಗಳು ಈ ವ್ಯಕ್ತಿಗಳ ವಿವಾಹದ ಬಳಿಕ ಸುಗಮವಾಗುತ್ತವೆ ಹಾಗೂ ಮುಂದಿನ ಜೀವನ ಸುಖಕರವಾಗುತ್ತದೆ. ಆದರೆ ವಿವಾಹದವರೆಗೂ ಈ ವ್ಯಕ್ತಿಗಳು ಕೊಂಚ ಹೆಚ್ಚೇ ಕಷ್ಟಪಡಬೇಕಾಗುತ್ತದೆ.

ಇನ್ನು ಈ ಭಾಗದಲ್ಲಿ ಮಚ್ಚೆ ಇದ್ದಲ್ಲಿ ಅದು ಸಂಗಾತಿಯ ಜೊತೆಗೆ ಅನ್ಯೋನ್ಯ ಸಂಬಂಧವನ್ನು ಸೂಚಿಸುತ್ತದೆ ಮತ್ತು ಅವಿನಾಭಾವ ಬಾಂಧವ್ಯವನ್ನು ಸಹ ಸೂಚಿಸುತ್ತದೆ. ಮಹಿಳೆಯರಿಗೆ ಈ ಮಚ್ಚೆ ಕಂಡು ಬಂದರೆ ಅವರು ಇಡೀ ಜೀವನ ಸಂತೋಷದಿಂದ ಕಳೆಯುತ್ತಾರೆ.

ಎಡಗಾಲಿನ ಮೇಲಿನ ಮಚ್ಚೆ

ಎಡಗಾಲಿನ ಮೇಲಿನ ಮಚ್ಚೆ

ಎಡಗಾಲಿನ ಯಾವುದೇ ಭಾಗದ ಮೇಲೆ ಮಚ್ಚೆ ಇರುವ ವ್ಯಕ್ತಿಗಳಿಗೆ ಸದಾ ವಿವರಿಸಲಾಗದ ಖರ್ಚುಗಳು ಎದುರಾಗುತ್ತಾ ಇರುತ್ತವೆ. ಈ ಖರ್ಚನ್ನು ಕಡಿಮೆ ಮಾಡಲು, ಆದಾಯವನ್ನು ಉಳಿಸಲು ಎಷ್ಟು ಕಷ್ಟಪಟ್ಟರೂ ಕಡೆಯದಾಗಿ ಉಳಿತಾಯ ಹೆಚ್ಚೂಕಡಿಮೆ ಸೊನ್ನೆಯೇ ಆಗಿರುತ್ತದೆ.

ಎಡ ಹಸ್ತದ ಮೇಲೆ ಇರುವ ಮಚ್ಚೆ

ಎಡ ಹಸ್ತದ ಮೇಲೆ ಇರುವ ಮಚ್ಚೆ

ಎಡಹಸ್ತದ ಮೇಲೆ ಮಚ್ಚೆ ಇದ್ದರೆ, ಅದರಲ್ಲೂ ವಿಶೇಷವಾಗಿ ಮುಷ್ಟಿಕಟ್ಟಿದ ಬಳಿಕವೂ ಮಚ್ಚೆ ಕಾಣುವಂತಿದ್ದರೆ, ಈ ವ್ಯಕ್ತಿಗಳು ಸದಾ ತೀವ್ರ ಹಣದ ಮುಗ್ಗಟ್ಟನ್ನು ಅನುಭವಿಸುತ್ತಿರುತ್ತಾರೆ. ಆದರೆ ಕಾಕತಾಳೀಯವೆಂಬಂತೆ ಈ ವ್ಯಕ್ತಿಗಳಿಗೆ ಹಣದ ಮುಗ್ಗಟ್ಟು ಎಷ್ಟು ಎದುರಾದರೂ ಹಣ ಸದಾ ಹೊಂದಿಕೆಯಾಗುತ್ತದೆ. ಈ ವ್ಯಕ್ತಿಗಳಿಗೆ ಖರ್ಚನ್ನು ಕಡಿಮೆ ಮಾಡುವುದೇ ಕಷ್ಟಕರವಾದ ವಿಷಯವಾಗಿರುತ್ತದೆ. ಒಂದು ವೇಳೆ ಬಲ ಹಸ್ತದ ಮೇಲೆ ಮಚ್ಚೆ ಇದ್ದರೆ, ಅದರಲ್ಲೂ ಹಸ್ತದ ಮೇಲ್ಭಾಗದಲ್ಲಿ (ಬೆರಳುಗಳ ಬುಡದಲ್ಲಿ) ಇದ್ದರೆ ಇವರಿಗೂ ಸದಾ ಧನದ ಆದಾಯ ನಿಯಮಿತವಾಗಿದ್ದು ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸು ಹುಡುಕಿಕೊಂಡು ಬರುತ್ತದೆ.

ಎಡಗೆನ್ನೆಯ ಮೇಲಿನ ಮಚ್ಚೆ

ಎಡಗೆನ್ನೆಯ ಮೇಲಿನ ಮಚ್ಚೆ

ಎಡಗೆನ್ನೆಯ ಮೇಲೆ ಸ್ಪಷ್ಟವಾಗಿ ಕಾಣಿಸುವ ಮಚ್ಚೆ ಇರುವ ವ್ಯಕ್ತಿಗಳು ಅತಿ ಹೆಚ್ಚು ಆದಾಯ ಇರುವವರಾಗಿದ್ದರೂ ಇದಕ್ಕೆ ಸರಿಸಮನಾದ ಖರ್ಚುಗಳೂ ಇರುವ ಕಾರಣ ಉಳಿತಾಯ ಮಾಡಲು ಅಸಫಲರಾಗುತ್ತಾರೆ.

ತುಟಿಗಳ ಕೆಳಭಾಗದಲ್ಲಿರುವ ಮಚ್ಚೆ

ತುಟಿಗಳ ಕೆಳಭಾಗದಲ್ಲಿರುವ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಇರುವವರು ಸಾಮಾನ್ಯವಾಗಿ ಸದಾ ಹಣದ ಮುಗ್ಗಟ್ಟಿನಲ್ಲಿಯೇ ಇರುತ್ತಾರೆ. ಅಷ್ಟೇ ಅಲ್ಲದೆ ಈ ಭಾಗದಲ್ಲಿ ಮಚ್ಚೆ ಇದ್ದವರ ಸಂಗಾತಿ ಅವರೊಂದಿಗೆ ಅಂದುಕೊಂಡಂತೆ ಪ್ರೀತಿಯಿಂದ ನಡೆದುಕೊಳ್ಳುವುದಿಲ್ಲ ಹಾಗು ಅನುಕಂಪ ತೋರುವುದಿಲ್ಲ. ಅಲ್ಲದೆ ಗಂಡ-ಹೆಂಡತಿಯರ ನಡುವಿನ ನಂಬಿಕೆಯನ್ನು ಉಂಟು ಮಾಡುವ ಯಾವುದೇ ಸಂಗತಿಗಳು ನಡೆಯುವುದಿಲ್ಲ.

ತೋರುಬೆರಳಿನ ಮೇಲೆ ಇರುವ ಮಚ್ಚೆ

ತೋರುಬೆರಳಿನ ಮೇಲೆ ಇರುವ ಮಚ್ಚೆ

ಒಂದು ವೇಳೆ ತೋರುಬೆರಳಿನ ಒಳಭಾಗದಲ್ಲಿ, ಅಂದರೆ ಮಡಚುವ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಹಣದ ಕುರಿತಾಗಿ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೂ ಸಂದರ್ಭಗಳಲ್ಲಿ ಇವರು ಒಪ್ಪೊತ್ತಿನ ಊಟಕ್ಕೂ ಹಣವಿಲ್ಲದ ಸ್ಥಿತಿಯನ್ನು ಎದುರಿಸುತ್ತಾರೆ.

ಎಡಕಂಕುಳಲ್ಲಿರುವ ಮಚ್ಚೆ

ಎಡಕಂಕುಳಲ್ಲಿರುವ ಮಚ್ಚೆ

ಒಂದು ವೇಳೆ ಎಡಗೈ ಎತ್ತಿದಾಗ ಕಂಕುಳ ಅಥವಾ ಇದರ ಸುತ್ತಮುತ್ತ ಮಚ್ಚೆ ಇದ್ದರೆ ಈ ವ್ಯಕ್ತಿಗಳು ತಮ್ಮ ಗಳಿಕೆಯ ಬಗ್ಗೆ ಅತಿ ಹೆಚ್ಚು ಜಾಗರೂಕರಾಗಿರಬೇಕಗುತ್ತದೆ. ಏಕೆಂದರೆ ಈ ವ್ಯಕ್ತಿಗಳಿಗೆ ವೈದ್ಯಕೀಯ ವೆಚ್ಚ ಸದ ತೂಗುಕತ್ತಿಯಂತೆ ತೂಗುತ್ತಿದ್ದು ಯಾವಾಗ ಬೀಳುತ್ತದೆ ಎಂದು ಹೇಳಲಾಗುವುದಿಲ್ಲ. ಒಮ್ಮೆ ಬಿದ್ದಾಗ ಜೀವಮಾನದ ಗಳಿಕೆಯನ್ನೆಲ್ಲಾ ಕ್ಷಣದಲ್ಲಿ ಖಾಲಿ ಮಾಡುವಂತಿರುತ್ತದೆ.

English summary

Moles meaning on these 8 areas on your body

According to the knowledge of Samudrika Shastra, presence of moles in these 8 areas of body indicate that the person will fail to accumulate desired wealth, as he/she would experience inescapable expenses. In short, money won’t stick around for them; they will constantly face money-related problems.