Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಊರಿನಲ್ಲಿ ಮದುವೆಯಾದ ನಂತರ ವಧು ಐದು ದಿನಗಳ ಕಾಲ ನಗ್ನವಾಗಿರಬೇಕು!!
ಕೆಲವೊಂದು ಧರ್ಮ, ಜಾತಿ ಹಾಗೂ ಜನಾಂಗಕ್ಕೆ ಅನುಗುಣವಾಗಿ ವಿಚಿತ್ರ ಆಚರಣೆಗಳನ್ನು ನಾವು ನೋಡುತ್ತೇವೆ. ಇದರಲ್ಲಿ ಪ್ರಮುಖವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಯು ಕೆಲವೊಂದು ಸಂಪ್ರದಾಯಗಳನ್ನು ಪಾಲಿಸಬೇಕಾಗುತ್ತದೆ. ಈ ಲೇಖನದಲ್ಲಿ ಒಂದು ವಿಚಿತ್ರ ಆಚರಣೆ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಇಲ್ಲಿ ವಿವಾಹಿತ ಮಹಿಳೆಯು ಐದು ದಿನಗಳ ಕಾಲ ನಗ್ನವಾಗಿರಬೇಕು ಮತ್ತು ಯಾವುದೇ ಲೈಂಗಿಕ ಚಟುವಟಿಕೆ ಅಥವಾ ದೈಹಿಕ ಸಂಪರ್ಕದಿಂದ ಆಕೆ ದೂರವಿರಬೇಕು. ಇದನ್ನು ಹೊರತುಪಡಿಸಿ ಭಾರತದಲ್ಲಿ ವಿವಾಹದ ವೇಳೆ ಆಚರಣೆಯಲ್ಲಿರುವಂತಹ ಕೆಲವೊಂದು ವಿಚಿತ್ರ ಆಚರಣೆಗಳ ಬಗ್ಗೆ ನೀವು ತಿಳಿಯಿರಿ....

ಮದುವೆ ಬಳಿಕ ಮಹಿಳೆಯು ಐದು ದಿನ ನಗ್ನವಾಗಿರಬೇಕು
ಹಿಮಾಚಲ ಪ್ರದೇಶದ ಜನರು ತುಂಬಾ ದೀರ್ಘಕಾಲದಿಂದ ಈ ವಿಚಿತ್ರ ಆಚರಣೆಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ವಧು ಐದು ದಿನಗಳ ಕಾಲ ನಗ್ನವಾಗಿರಬೇಕೆಂಬ ಕಠಿಣ ನಿಯಮವಿದೆ. ಈ ವೇಳೆ ಮಹಿಳೆಯರು ಪತಿ ಜತೆಗೆ ದೈಹಿಕ ಸಂಪರ್ಕದಲ್ಲಿ ಪಾಲ್ಗೊಳ್ಳುವಂತಿಲ್ಲ.

ವಧುವಿನ ಕಾಲು ತೊಳೆದ ನೀರು ಅಥವಾ ಹಾಲು ಕುಡಿಯುವುದು!
ಗುಜರಾತ್ ನಲ್ಲಿ ಈ ವಿಚಿತ್ರ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ವಧುವಿನ ಮಾವ ಹಾಲು ಮತ್ತು ಜೇನುತುಪ್ಪದಿಂದ ವಧುವಿನ ಕಾಲನ್ನು ತೊಳೆಯುವರು. ಈ ವಿಚಿತ್ರ ಆಚರಣೆಯ ವಿಶೇಷವೆಂದರೆ ಈ ನೀರು ಅಥವಾ ಹಾಲನ್ನು ಆತ ಕುಡಿಯಬೇಕು.

ವಧು ಸರ್ಕಸ್ ಮಾಡಬೇಕು!
ಬಿಹಾರದ ಹೆಚ್ಚಿನ ಕಡೆಗಳಲ್ಲಿ ಈ ಸಂಪ್ರದಾಯವು ಸಾಮಾನ್ಯವಾಗಿದೆ. ಇಲ್ಲಿ ವಧು ತಲೆ ಮೇಲೆ ಮಣ್ಣಿನ ಮಡಕೆಯನ್ನಿಟ್ಟು ಅದನ್ನು ಬ್ಯಾಲೆನ್ಸ್ ಮಾಡಬೇಕು. ಅತ್ತೆಯು ಈ ಮಡಕೆಗಳನ್ನು ವಧುವಿನ ತಲೆ ಮೇಲಿಡುವರು. ಹಿರಿಯರ ಆಶೀರ್ವಾದ ಪಡೆಯಲು ವಧು ಕೆಳಗೆ ಬಗ್ಗಬೇಕು. ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವಳು ಎನ್ನುವುದೇ ಈ ಆಚರಣೆಯ ಉದ್ದೇಶ.

ಮನಸ್ಸು ಬದಲಾಯಿಸುವುದು
ಈ ಸಂಪ್ರದಾಯವು ತಮಿಳುನಾಡಿನ ಬ್ರಾಹ್ಮಣರಲ್ಲಿದೆ. ಈ ತಮಾಷೆಯ ಸಂಪ್ರದಾಯದಲ್ಲಿ ವರನು ಕೊನೆಯ ಕ್ಷಣದಲ್ಲಿ ತನ್ನ ಮನಸ್ಸು ಬದಲಾಯಿಸಿ ಮದುವೆಯಾಗಲು ನಿರಾಕರಿಸುತ್ತಾನೆ. ಇದರ ಬಳಿಕ ವಧುವಿನ ಸೋದರರು ಅಥವಾ ತಂದೆ ಆತನನ್ನು ಸನ್ಯಾಸಿಯಾಗುವುದು ಬೇಡ, ನೀವು ಸಂಸಾರಿಯಾಗು ಎಂದು ಮನವೊಲಿಸುವರು.

ವರನ ತಾಯಿ ಮದುವೆಗೆ ಹಾಜರಾಗದಿರುವುದು...
ಬಂಗಾಳದಲ್ಲಿ ಆಚರಣೆಯಲ್ಲಿರುವ ವಿಚಿತ್ರ ಸಂಪ್ರದಾಯದ ಪ್ರಕಾರ ವರನ ತಾಯಿ ಮದುವೆ ಸಂದರ್ಭದಲ್ಲಿ ಹಾಜರಾಗಲು ಅನುಮತಿಯಿಲ್ಲ. ಮಗನ ಸಂತೋಷದ ಜೀವನಕ್ಕಾಗಿ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ.

ಓಡಿಹೋಗುವ ಸಂಪ್ರದಾಯ
ಕೆಲವೊಂದು ಆದಿವಾಸಿ ಸಮುದಾಯಗಳಲ್ಲಿ ಈ ಸಂಪ್ರದಾಯವು ಆಚರಣೆಯಲ್ಲಿದೆ. ನವವಿವಾಹಿತ ವಧು ಒಂದು ವರ್ಷದ ಕಾಲ ತುಂಬಾ ನಿಗೂಢ ಜಾಗದಲ್ಲಿ ವಾಸಿಸಬೇಕು. ಈ ವೇಳೆ ಆಕೆ ಬೇರೆಯವರೊಂದಿಗೆ ಮಾತನಾಡುವಂತಿಲ್ಲ ಮತ್ತು ಹೊರಗಡೆ ಹೋಗುವಂತಿಲ್ಲ. ವರ್ಷದ ಬಳಿಕ ಸಮುದಾಯದ ಹಿರಿಯರು ಮದುವೆಯನ್ನು ಅನುಮೋದಿಸುವರು. ಈ ವೇಳೆ ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ನಡೆಯುತ್ತದೆ.



Click it and Unblock the Notifications
