ಯಾವ್ಯಾವ ರಾಶಿಯವರು ಹೇಗೆಲ್ಲಾ ಅಪಾರ್ಥ ಮಾಡಿಕೊಳ್ಳುತ್ತಾರೆ ನೋಡಿ.

Posted By: Divya pandit Pandit
Subscribe to Boldsky

ಕೆಲವೊಮ್ಮೆ ಎಷ್ಟೇ ಸೂಕ್ತ ರೀತಿಯ ವರ್ತನೆ ಹಾಗೂ ಕಾಳಜಿಯಿಂದ ಇದ್ದರೂ ಕೆಲವು ಸಂಗತಿಗಳು ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ನಾವು ಸರಿಯಾಗಿದ್ದರೂ ನಮ್ಮವರೂ ಎನಿಸಿಕೊಂಡವರು ಕೆಲವೊಮ್ಮೆ ನಮಗೆ ದ್ರೋಹ ಬಗೆಯುತ್ತಿದ್ದಾರೆ ಅಥವಾ ನಾವು ಅವರ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿದ್ದೇವೆಯೇ? ಎನ್ನುವುದು ಅರ್ಥವಾಗುವುದಿಲ್ಲ. ಇದಕ್ಕೆ ಕಾರಣ ಕೇವಲ ನಮ್ಮ ಮಾನಸಿಕ ಸ್ಥಿತಿಯು ಕಾರಣವಲ್ಲ. ನಾವು ನಮ್ಮ ರಾಶಿಚಕ್ರದ ದೂಷಣೆ ಮಾಡಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ನಂಬಿಕೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ವ್ಯಕ್ತಿಯ ಬಗ್ಗೆ ಅಥವಾ ವಿಚಾರದ ಕುರಿತು ನಂಬಿಕೆಯನ್ನು ಕಳೆದುಕೊಂಡೆವು ಎಂದರೆ ಅಲ್ಲಿ ಅನುಮಾನಗಳು ಹಾಗೂ ಅಪಾರ್ಥಗಳು ತಲೆ ದೂರುತ್ತಲೇ ಇರುತ್ತವೆ. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರನ್ನು ಜನರು ವಿಭಿನ್ನ ರೀತಿಯ ಅಪಾರ್ಥಗಳಿಂದ ನೋಡುತ್ತಾರೆ ಎನ್ನುತ್ತದೆ. ಆ ಅಪಾರ್ಥಗಳ ಪರಿ ಏನು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ.

ಮೇಷ:

ಮೇಷ:

ಮೇಷ ರಾಶಿಯವರನ್ನು ಜನರು ಅತ್ಯಂತ ಶಾಂತವಾದ ಸ್ವಭಾವ ಹಾಗೂ ತಣ್ಣನೆಯ ಹೃದಯ ಹೊಂದಿರುವ ವ್ಯಕ್ತಿಗಳು ಎಂದು ಅಂದುಕೊಳ್ಳುತ್ತಾರೆ. ನಿಮಗೆ ಯಾವುದೇ ಅಹಿತಕರವಾದ ಭಾವ ಇರುವುದಿಲ್ಲ ಎನ್ನುವುದನ್ನು ಜನರು ತಪ್ಪಾಗಿ ಗ್ರಹಿಸುತ್ತಾರೆ. ಚಿಕ್ಕ ಪುಟ್ಟ ವಿಚಾರಗಳಿಗೆ ಕಾಳಜಿ ತೋರದ ವ್ಯಕ್ತಿಗಳು. ಹಾಗೂ ಸಾಮಾನ್ಯವಾಗಿ ಕಣ್ಣೀರು ಹಾಕದ ವ್ಯಕ್ತಿಗಳು ಎಂದು ಅಂದುಕೊಳ್ಳುತ್ತಾರೆ. ಆದರೆ ನೀವು ನಿಮ್ಮ ಬಗ್ಗೆ ಹೆಚ್ಚು ಚಿಂತಿಸದೆ ಇತರ ಚಿಕ್ಕ ಪುಟ್ಟ ವಿಚಾರಗಳಿಗೂ ಚಿಂತಿಸುವ ವ್ಯಕ್ತಿ ಗಳಾಗಿರುತ್ತೀರಿ.

ಮೇಷ:

ಮೇಷ:

ನಿಮ್ಮ ಮೃದುವಾದ ಸ್ವಭಾವವನ್ನು ಯಾವ ಸಂದರ್ಭದಲ್ಲಿ ತೋರಿಸಬೇಕು, ಯಾವ ಸಂದರ್ಭದಲ್ಲಿ ತೋರಿಸಬಾರದು ಎನ್ನುವುದನ್ನು ತಿಳಿದಿರುವ ಬುದ್ಧಿವಂತ ವ್ಯಕ್ತಿಗಳು. ನೀವು ಭಾವನಾತ್ಮಕವಾದ ಅಥವಾ ಪ್ರೀತಿಯಿಂದ ಕೂಡಿರುವ ವ್ಯಕ್ತಿತ್ವ ಅಲ್ಲ ಎಂದು ಜನರು ಭಾವಿಸುತ್ತಾರೆ. ಅಂತೆಯೇ ಇತರರ ಭಾವನೆಯ ಬಗ್ಗೆ ನೀವು ಕಾಳಜಿ ಹೊಂದಿಲ್ಲ ಎಂದು ಜನರು ಅಂದುಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ನೀವು ಇತರರ ಭಾವನೆಗೆ ಬೆಲೆಕೊಡುವ ವ್ಯಕ್ತಿಗಳು. ಇತರರ ಭಾವನೆಯನ್ನು ಬಳಸಿಕೊಂಡು ನಿಮ್ಮ ಕೆಲಸ ನಿರ್ವಹಿಸಲು ನೀವು ಇಷ್ಟಪಡುವುದಿಲ್ಲ. ನಿಮ್ಮ ಕಾಳಜಿವಹಿಸುವ ವ್ಯಕ್ತಿಗೆ ನೀವೂ ಸಹ ಉತ್ತಮ ಕಾಳಜಿಯಿಂದ ನೋಡುವಿರಿ.

ಮಿಥುನ

ಮಿಥುನ

ಈ ರಾಶಿಯವರನ್ನು ಜನರು ನಕಲಿ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗಳು ಎಂದು ಭಾವಿಸಿರುತ್ತಾರೆ. ಹೊಸ ಸಂಗತಿಗಳನ್ನು ಪ್ರಯತ್ನಿಸುತ್ತಿರುವಾಗ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಇವರ ಭಾವೋದ್ರೇಕ ಸ್ವಭಾವವು ಒಂದೇ ವಿಷಯವನ್ನು ಕೇಂದ್ರಿಕರಿಸುತ್ತದೆ ಎಂದು ತಪ್ಪಾಗಿ ಗ್ರಹಿಸುತ್ತಾರೆ. ನೀವು ಬೇಸರಗೊಂಡಾಗ ವಿಷಯಗಳನ್ನು ಮತ್ತು ಜನರನ್ನು ಬಿಟ್ಟುಬಿಡುವ ಮೂಡಿ ಸ್ವಭಾವದವರು ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ನೀವು ಸುತ್ತಲಿನ ಹೊಸ ವಿಷಯಗಳನ್ನು ಅನ್ವೇಷಿಸುವ ಹಾಗೂ ಥ್ರಿಲ್ ಆಗಿರುವ ಸ್ವಭಾವವನ್ನು ಹೊಂದಿರುತ್ತೀರಿ.

ಕರ್ಕ

ಕರ್ಕ

ನೀವು ಅತ್ಯಂತ ಸೂಕ್ಷ್ಮ ಮನಃಸ್ಥಿತಿಯವರು ಹಾಗೂ ನೀವು ಸಂಬಂಧದಲ್ಲಿ ಯಾವುದೇ ಸ್ವಾಭಿಮಾನವನ್ನು ಹೊಂದಿಲ್ಲ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ನೀವು ಸ್ವಯಂ ನೀತಿವಂತರಾಗಿರುತ್ತೀರಿ. ಸಂಬಂಧವನ್ನು ನಿಭಾಯಿಸುವಲ್ಲಿ ಅತ್ಯುತ್ತಮ ರೀತಿಯಲ್ಲಿ ಪಾತ್ರವಹಿಸುತ್ತೀರಿ.

ಸಿಂಹ

ಸಿಂಹ

ನೀವು ಅತಿಯಾದ ಸ್ವಾಭಿಮಾನ ಹಾಗೂ ಆತ್ಮವಿಶ್ವಾಸವನ್ನು ಹೊಂದಿರುವ ವ್ಯಕ್ತಿಗಳು ಎಂದು ತಪ್ಪಾಗಿ ಭಾವಿಸುತ್ತಾರೆ. ನೀವು ಅತ್ಯಂತ ಸ್ವತಂತ್ರ ಸ್ವಭಾವ ಹೊಂದಿದವರು ಎಂದು ಜನರು ಅಂದುಕೊಳ್ಳುತ್ತಾರೆ. ಈ ಎಲ್ಲಾ ವಿಚಾರದಿಂದಲೂ ನೀವು ನೀವು ವಿರುದ್ಧವಾದ ಸಂಗತಿಯನ್ನು ಹೊಂದಿದವರಾಗಿರುತ್ತೀರಿ. ನಿಮ್ಮ ಅಗತ್ಯಗಳನ್ನು ಜನರು ಅಪಾರ್ಥ ಮಾಡಿಕೊಳ್ಳುತ್ತಾರೆ.

ಕನ್ಯಾ

ಕನ್ಯಾ

ನೀವು ವಿನೋದವನ್ನು ಹೊಂದಿರದ ನಿರಸ ಹೊಂದಿರುವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಎಂದು ಜನರು ಭಾವಿಸುತ್ತಾರೆ. ಎಲ್ಲಾ ಕೆಲಸವು ನಿಮಗೊಂದು ಆಟವಾಗಿದೆ. ಒಂದೇ ಸಮಯದಲ್ಲಿ ಎಲ್ಲಾ ಕೆಲಸವನ್ನು ಮಾಡಿ ಮುಗಿಸುವ ಮನಸ್ಸನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇತರರು ತಮಾಷೆ ಮಾಡುವುದನ್ನು ನೀವು ಇಷ್ಟ ಪಡದ ವ್ಯಕ್ತಿಗಳು ಎಂದು ಹೇಳುತ್ತಾರೆ. ನೀವು ಇತರರ ಸಂತೋಷವನ್ನು ಕಂಡು ಬೇಸರ ಪಟ್ಟುಕೊಳ್ಳುವ ವ್ಯಕ್ತಿತ್ವ ನಿಮ್ಮದಾಗಿರುವುದಿಲ್ಲ. ಎಲ್ಲಿಯೇ ಇದ್ದರೂ ನೀವು ಸಂತೋಷವನ್ನು ಹೊಂದುವ ಸ್ವಭಾವ ನಿಮ್ಮದಾಗಿರುತ್ತದೆ.

ತುಲಾ

ತುಲಾ

ನೀವೊಬ್ಬ ಲಾಭವನ್ನು ಪಡೆದುಕೊಳ್ಳುವ ವ್ಯಕ್ತಿ ಎಂದು ಜನರು ಭಾವಿಸುತ್ತಾರೆ. ಸದಾ ನಿಮ್ಮ ಸ್ವಂತ ವಿಚಾರಕ್ಕಾಗಿಯೇ ಕೆಲಸ ಮಾಡುತ್ತೀರಿ. ಇತರರ ಬಗ್ಗೆ ಅಷ್ಟಾಗಿ ಕಾಳಜಿ ಇಲ್ಲದ ವ್ಯಕ್ತಿ ಎಂದು ತಿಳಿದುಕೊಳ್ಳುವರು. ಆದರೆ ನೀವು ಎಲ್ಲರಿಗೂ ಸಮಾನತೆಯನ್ನು ನೀಡುವ ವ್ಯಕ್ತಿತ್ವ ಹೊಂದಿದವರಾಗಿರುತ್ತೀರಿ.

ವೃಶ್ಚಿಕ

ವೃಶ್ಚಿಕ

ಭಾವನೆಯನ್ನು ಸುಲಭವಾಗಿ ಮರೆಮಾಚುವಂತಹ ಗಗಟ್ಟಿ ಮನಸ್ಸನ್ನು ಹೊಂದಿರುವ ವ್ಯಕ್ತಿ ಎಂದು ಜನರು ಅಂದುಕೊಳ್ಳುತ್ತಾರೆ. ನಿಮ್ಮ ನೋವನ್ನು ನೀವು ಸಹಿಸಿಕೊಳ್ಳುವಂತಹ ಉತ್ತಮ ಗುಣವನ್ನು ಹೊಂದಿದವರಾಗಿರುತ್ತೀರಿ. ನೀವು ಇತರರಿಗೆ ನೋವನ್ನು ಉಂಟುಮಾಡದ ವ್ಯಕ್ತಿತ್ವ ಆಗಿರುತ್ತದೆ. ಆದರೆ ಜನರು ಅದನ್ನು ಅಪಾರ್ಥ ಮಾಡಿಕೊಳ್ಳುವರು.

ಧನು

ಧನು

ಎಲ್ಲವನ್ನೂ ನೀವು ವಿಂಗಡಿಸುವಿರಿ ಎಂದು ಜನರು ಅಂದುಕೊಳ್ಳುವರು. ಇತರರ ವಿಚಾರದಲ್ಲಿ ತುಂಬಾ ಸುಲಭವಾಗಿ ತೀರ್ಮಾನ ನೀಡುವಿರಿ ಎಂದು ಭಾವಿಸುತ್ತಾರೆ. ನೀವು ಜನರು ಅಂದುಕೊಂಡಂತೆ ಇರುವುದಿಲ್ಲ. ಪ್ರಾಮಾಣಿಕ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತೀರಿ.

ಮಕರ

ಮಕರ

ನೀವು ತಿಳಿಯದೆ ಇರುವ ವ್ಯಕ್ತಿಯನ್ನು ಸಹ ಚೆನ್ನಾಗಿ ಅರ್ಥಮಾಡಿಕೊಳ್ಳುವರು ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಜೀವನದಲ್ಲಿ ಉತ್ತಮ ದೃಷ್ಟಿಕೋನವನ್ನು ಹೊಂದಿರುವಿರಿ ಎಂದು ಅಂದುಕೊಳ್ಳುತ್ತಾರೆ. ನಿಮ್ಮನ್ನು ಅಸಭ್ಯ ಮತ್ತು ಸೊಕ್ಕಿನ ವ್ಯಕ್ತಿ ಎಂದು ಅಂದುಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ನೀವು ನಿಮ್ಮದೇ ಆದ ನಿರೀಕ್ಷೆ ಹಾಗೂ ಕೆಲಸದಲ್ಲಿ ತಲ್ಲೀನರಾಗಿರುವಿರಿ. ನಿಮ್ಮ ಕೆಲಸಕ್ಕಾಗಿ ಜನರನ್ನು ನಿರ್ಣಯಿಸುವ ವ್ಯಕ್ತಿಗಳು ನೀವಾಗಿರುವುದಿಲ್ಲ.

ಕುಂಭ

ಕುಂಭ

ನೀವು ಭಾವನಾತ್ಮಕವಾಗಿರುವುದನ್ನು ಜನರು ತಪ್ಪಾಗಿ ಗ್ರಹಿಸುತ್ತಾರೆ. ನೀವು ಪ್ರೀತಿಯನ್ನು ಹೊಂದಿದ್ದರೂ ಅದನ್ನು ಹೇಳಲು ಇಷ್ಟಪಡುವುದಿಲ್ಲ. ಗೌಪ್ಯತೆಯೊಂದಿಗೆ ಪ್ರೀತಿಯ ಭಾವನೆಗೆ ಚಿಕಿತ್ಸೆ ನೀಡುತ್ತಾರೆ ಎಂದು ಜನರು ಅಂದುಕೊಳ್ಳುತ್ತಾರೆ. ನೀವು ಪ್ರೀತಿಯನ್ನು ಅನುಭವಿಸುತ್ತಿದ್ದರೆ ಜನರು ಆಶ್ಚರ್ಯ ಪಡುತ್ತಾರೆ.

ಮೀನ

ಮೀನ

ನಿಮ್ಮ ಮೇಲೆ ಎಲ್ಲಾ ಬಗೆಯ ಧೋರಣೆಯನ್ನು ಹೇರಬಹುದು ಎಂದು ಜನರು ತಪ್ಪಾಗಿ ಗ್ರಹಿಸುತ್ತಾರೆ. ನೀವು ಹಿಂಸೆಗೆ ಒಳಗಾಗಿ ಅವಮಾನವನ್ನು ಅನುಭವಿಸುತ್ತೀರಿ ಎಂದು ಜನರು ತಪ್ಪು ಅರ್ಥವನ್ನು ಮಾಡಿಕೊಳ್ಳುತ್ತಾರೆ. ಆದರೆ ನೀವು ತಪ್ಪು ವಿಚಾರದಿಂದ ದೂರ ಸರಿಯುವಿರಿ. ಉತ್ತಮ ಯೋಚನೆಗಳೊಂದಿಗೆ ಮುಂದೆ ಸಾಗುವಿರಿ.

English summary

Is This How People Misunderstand You Based On Your Zodiac?

When you think why you are often misjudged or misunderstood even when you are right, then you need to realise that this could be due to your zodiac sign. Yes, you read it right! Blame your zodiac sign if you are believed to be misunderstood or misjudged. The characteristics that define you as per your zodiac sign may be a reason to backfire at you. Check out on what are the different ways as per your zodiac sign on how you can be misunderstood.