ಯಾವ್ಯಾವ ರಾಶಿಯವರು ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ ನೋಡಿ...

Posted By: Deepu
Subscribe to Boldsky

ನಾವು ನಮ್ಮ ಭಾವನೆಗಳನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತೇವೆ. ಕೋಪಗೊಳ್ಳುವುದರ ಮೂಲಕ, ಸಂತೋಷ ಗೊಳ್ಳುವುದರ ಮೂಲಕ, ನಿರ್ಲಿಪ್ತತೆಯ ಮೂಲಕ, ಚಿಂತೆಯ ಮೂಲಕ ಹೀಗೆ ಅನೇಕ ವಿಧಗಳಲ್ಲಿ ವರ್ತಿಸುತ್ತೇವೆ. ಸನ್ನಿವೇಶಕ್ಕೆ ತಕ್ಕಂತೆ ವರ್ತಿಸುವುದು ಮನುಷ್ಯನ ಸಹಜ ಗುಣ ಆದರೆ ಸಹಜತೆಯ ಸಂದರ್ಭದಲ್ಲೂ ಕೆಲವೊಮ್ಮೆ ಅತೀರೇಖವಾಗಿ ಅಥವಾ ಯಾವುದೇ ಬಗೆಯ ಭಾವನೆಯನ್ನು ವ್ಯಕ್ತಪಡಿಸದೆ ಇರುವುದರ ಮೂಲಕ ಇತರರ ಗಮನ ಸೆಳೆಯುವ ಸಾಧ್ಯತೆಗಳಿರುತ್ತವೆ.

ವ್ಯಕ್ತಿಗಳು ತಮ್ಮ ರಾಶಿ ಚಕ್ರದ ಅನುಸಾರವಾಗಿಯೇ ತಮ್ಮ ವರ್ತನೆಯನ್ನು ತೋರುತ್ತಾರೆ. ಅಂತಹ ವರ್ತನೆಗಳನ್ನು ವೈಯಕ್ತಿಕವಾಗಿ ರೂಢಿಸಿಕೊಳ್ಳಲು ಪೂರಕವಾದಂತಹ ಸನ್ನಿವೇಶಗಳನ್ನು ಅವರು ಅನುಭವಿಸಿರುತ್ತಾರೆ. ಅದಕ್ಕೆ ಕಾರಣ ಗ್ರಹಗತಿಗಳು ಹಾಗೂ ರಾಶಿಚಕ್ರಗಳು ಎನ್ನಬಹುದು. ಸಮಾಜದಲ್ಲಿ ವ್ಯಕ್ತಿಯ ವರ್ತನೆಯಿಂದಲೇ ಆತನ ಗುಣಮಟ್ಟವನ್ನು ಅಳೆಯಲಾಗುತ್ತದೆ ಎನ್ನುವುದು ಸ್ಪಷ್ಟ. ನೀವು ಎಂತಹ ವರ್ತನೆ ಹಾಗೂ ಭಾವನೆಯನ್ನು ಹೊಂದಿದ್ದೀರಾ? ಅದರಿಂದ ಸಮಾಜದಲ್ಲಿ ಯಾವ ಸ್ಥಾನವನ್ನು ನೀವು ಪಡೆದುಕೊಳ್ಳುವಿರಿ? ಎನ್ನುವುದನ್ನು ತಿಳಿಯಲು ಮುಂದಿರುವ ರಾಶಿಚಕ್ರದ ವಿವರಣೆಯನ್ನು ಅರಿಯಿರಿ....

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಈ ರಾಶಿಯವರು ತಮ್ಮ ದೌರ್ಬಲ್ಯವನ್ನು ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ಅವರು ದುಃಖದಲ್ಲಿದ್ದರೆ ಅದು ಕೋಪ ಅಥವಾ ಹತಾಶೆಯಂತೆ ಕಾಣುತ್ತದೆ. ಇವರಿಗೆ ಹೆಚ್ಚು ಧೈರ್ಯವಿರುವುದರಿಂದ ತಮ್ಮ ಭಾವನೆಯನ್ನು ಮರೆಮಾಚುವ ಪ್ರಯತ್ನವನ್ನು ಮಾಡುವುದಿಲ್ಲ. ಹಾಗೊಮ್ಮೆ ಯಾರಾದರೂ ಅವರನ್ನು ಕೋಪಕ್ಕೆ ಒಳಗಾಗುವಂತೆ ಮಾಡಿದ್ದರೆ ಅವರನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಇವರು ತಮ್ಮದೇ ಆದ ಭಾವನೆಯೊಂದಿಗೆ ವ್ಯವಹರಿಸಲು ಇಷ್ಟಪಡುವುದಿಲ್ಲ. ಅವರು ಅಗಾಧವಾದ ಭಾವನೆಗಳನ್ನು ಅನುಭವಿಸುತ್ತಿದ್ದರೆ ಬೇರೆಯವರ ಸಹಾಯವನ್ನು ಬಯಸದೆ ತಮ್ಮನ್ನು ತಾವೇ ಸಾಂತ್ವಾನ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನೊಂದೆಡೆ ತಮ್ಮ ಭಾವನೆಯನ್ನು ಮರೆಮಾಚುವ ಪ್ರಯತ್ನ ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ಭೀಕರವಾದದ್ದು ಸಂಭವಿಸುವ ಸಾಧ್ಯತೆಗಳಿವೆ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇವರು ಸಾಮಾಜಿಕವಾಗಿ ಬೆರೆಯುತ್ತಾರೆ. ಸಮಾಜದಲ್ಲಿ ಇತರರನ್ನು ತಲುಪಲು ಸುಲಭವಾಗಿ ಇವರಿಗೆ ಅಸಾಧ್ಯವೆನಿಸಿದರೆ ಬಹಳ ಬೇಸರಕ್ಕೆ ಒಳಗಾಗುತ್ತಾರೆ. ಇವರು ಕಣ್ಮುಂದೆ ಏನು ತೋರುತ್ತದೆಯೋ ಅದರಂತೆ ಯೋಚಿಸುತ್ತಾರೆ. ಯಾವುದನ್ನು ಕಲ್ಪನೆ ಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ ನಿಮಗೆ ನಿಮ್ಮ ಬೇಸರ ಖಿನ್ನತೆಗೆ ಕಾರಣವಾಗಬಹುದು.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇವರು ಅತ್ಯಂತ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಇವರು ಭಾವನಾತ್ಮಕವಾಗಿಯೇ ವ್ಯವಹರಿಸಲು ಮುಂದಾಗುತ್ತಾರೆ. ಆದರೆ ಕೆಲವು ವಿಚಾರದಲ್ಲಿ ಇತರರ ಭಾವನೆಗೆ ಅಡ್ಡಿ ಉಂಟಾಗುತ್ತಿದೆ ಎಂದಾಗ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವುದಿಲ್ಲ. ಇವರಿಗೆ ಬೇಸರ ಎನಿಸಿದಾಗ ಬಹುಬೇಗ ಮರೆಮಾಚುತ್ತಾರೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಇವರು ಬೆಂಕಿಯಂತೆ ಉತ್ಸಾಹ ತೋರುತ್ತಾರೆ. ಇವರ ಉತ್ಸಾಹವನ್ನು ತೋರುವುದರಲ್ಲಿ ಯಾವುದೇ ಹಿಂಜರಿಕೆ ಇರುವುದಿಲ್ಲ. ಇವರು ಬಲವಾದ ಭಾವನೆಯಿಂದಲೇ ಇತರೊಂದಿಗೆ ವ್ಯವಹರಿಸುತ್ತಾರೆ. ಕಷ್ಟದ ಸಮಯದಲ್ಲೂ ಸ್ವಯಂ ಕೇಂದ್ರಿಕೃತರಾಗಿಯೇ ವರ್ತಿಸುತ್ತಾರೆ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇವರು ತಮ್ಮ ಭಾವನೆಯನ್ನು ವ್ಯಕ್ತಪಡಿಸುವಲ್ಲಿ ಅತ್ಯಂತ ಪ್ರಾಯೋಗಿಕವಾಗಿ ವರ್ತಿಸುತ್ತಾರೆ. ಬಹಳ ಸುಂದರವಾಗಿ ತಮ್ಮ ಭಾವನೆಯನ್ನು ನಿರ್ವಹಿಸಬಲ್ಲರು. ಇವರು ಅನೇಕ ವಿಚಾರಗಳನ್ನು ಭಾವನಾತ್ಮಕವಾಗಿಯೇ ನಿರ್ಧರಿಸುತ್ತಾರೆ. ಇವರು ಆಳವಾದ ಭಾವನೆಯಲ್ಲಿಯೇ ಇರುತ್ತಾರೆ ಎನ್ನಬಹುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇವರು ತಮ್ಮ ಭಾವನೆಯನ್ನು ವ್ಯಕ್ತಪಡಿಸುವಲ್ಲಿ ಗೊಂದಲಕ್ಕೆ ಒಳಗಾಗುತ್ತಾರೆ ಅಥವಾ ಬಹಳ ಕಷ್ಟಪಡುತ್ತಾರೆ. ಇತರರು ಹೇಗೆ ಭಾವನಾತ್ಮಕವಾಗಿ ಇರುತ್ತಾರೆ ಎನ್ನುವುದರ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಇವರು ಯಾವುದೇ ತೊಂದರೆಗೆ ಎಡೆಮಾಡಲು ಬಯಸುವುದಿಲ್ಲ. ನಿರುತ್ಸಾಹಕ್ಕೆ ಒಳಗಾದ ಇವರ ಭಾವನೆಗಳು ಹಿಮ್ಮುಖವಾಗಬಹುದು. ಇವರ ವೈಯಕ್ತಿಕ ಸಂಬಂಧಗಳಲ್ಲಿ ಹೆಚ್ಚು ಹಾನಿಯುಂಟಾಗುವ ಸಾಧ್ಯತೆಗಳಿರುತ್ತವೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಇವರು ಭಾವನೆಗಳು ಮತ್ತು ಚಿತ್ತಸ್ಥಿತಿಗಳನ್ನು ತಮ್ಮ ಶತ್ರುಗಳು ಸ್ಫೋಟಿಸುವಂತೆ ಅಗಾಧವಾಗಿ ಪರಿಣಮಿಸಬಹುದು. ಅವರ ಬಲವಾದ ಭಾವನೆಗಳನ್ನು ಹೇಗೆ ನಿಭಾಯಿಸುವುದು ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ಇವರಲ್ಲಿ ಭಾಷ್ಪಶೀಲ ಮತ್ತು ಪ್ರಕ್ಷುಬ್ಧ ಭಾವನೆಗಳ ಸಂಯೋಜನೆ ಇದೆ. ಮತ್ತೊಂದೆಡೆ ಇವರು ಪ್ರತಿಕಾರ ತೀರಿಸಿಕೊಳ್ಳಲು ಬಯಸುತ್ತಾರೆ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಇವರು ಸಾಕಷ್ಟು ಉತ್ಸಾಹವನ್ನು ಹೊಂದಿದ್ದಾರೆ. ಇತರ ಚಿಹ್ನೆಗಳಂತೆ ಅದನ್ನು ಅವರು ತೋರಿಸಿಕೊಳ್ಳುವುದಿಲ್ಲ. ಒಂದೇ ಪರಿಸ್ಥಿತಿಯಲ್ಲಿ ಅನೇಕ ಭಾವನೆಗಳನ್ನು ಅನುಭವಿಸಬಹುದು. ಅವರು ಖಿನ್ನತೆಗೂ ಒಳಗಾಗಬಹುದು. ಅದನ್ನು ಇತರರು ಅರ್ಥಮಾಡಿಕೊಳ್ಳರು. ಇವರ ಕೋಪ ಉಗಿಯನ್ನು ಸ್ಫೋಟಿಸಬಹುದು.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇವರು ತಮ್ಮ ಭಾವನೆಯನ್ನು ಅತ್ಯುತ್ತಮ ರೀತಿಯಲ್ಲಿ ಪಡೆದುಕೊಳ್ಳಲು ಇಷ್ಟಪಡುವುದಿಲ್ಲ. ಇವರು ಆದಷ್ಟು ನೈಜತೆಯಲ್ಲಿ ಇರಲು ಬಯಸುವವರು. ಇವರು ಸಕಾರಾತ್ಮಕ ರೀತಿಯಲ್ಲಿ ಪ್ರಪಂಚವನ್ನು ನೋಡುತ್ತಾರೆ. ಇವರು ಪ್ರಾಯೋಗಿಕ ಮತ್ತು ವಿಶ್ಲೇಷಣಾತ್ಮಕ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇವರು ಚಿಕ್ಕ ಪುಟ್ಟ ವಿಷಯಗಳನ್ನು ವಿಶೇಷವಾಗಿ ಪರಿಗಣಿಸುತ್ತಾರೆ. ಇವರು ಕೆಲವೊಮ್ಮೆ ಪರಿಪೂರ್ಣತೆಯೊಂದಿಗೂ ಸಮಸ್ಯೆಯನ್ನು ಹೊಂದುತ್ತಾರೆ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಈ ರಾಶಿಯವರು ಆಳವಾದ ಭಾವನೆಯನ್ನು ಹೊಂದಿದ್ದಾರೆ. ಇವರ ಭಾವನೆಯನ್ನು ಹೇಗೆ ವ್ಯಕ್ತಪಡಿಸಬೇಕು ಎನ್ನುವುದು ಅವರಿಗೆ ತಿಳಿಯುವುದಿಲ್ಲ. ಅಸಮಧಾನಗೊಂಡಾಗ ದೂರ ಪ್ರಯಾಣ ಬೆಳೆಸಲು ಇಷ್ಟಪಡುತ್ತಾರೆ. ಜೊತೆಗೆ ಸ್ನೇಹಿತರೊಂದಿಗೆ ಸಾಮಾಜಿಕವಾಗಿರಲು ಪ್ರಯತ್ನಿಸುತ್ತಾರೆ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇವರು ಸ್ವಂತ ಬುದ್ಧಿಯನ್ನು ಉಪಯೋಗಿಸುತ್ತಾರೆ. ಇವರು ತಮ್ಮ ಭಾವನೆಯನ್ನು ಪೋಷಿಸುವ ಮತ್ತು ಅದರಲ್ಲಿಯೇ ತಲ್ಲೀನತೆ ಹೊಂದುವ ಚಟುವಟಿಕೆಯನ್ನು ತೋರುತ್ತಾರೆ. ಖಿನ್ನತೆ ಮತ್ತು ಆತಂಕ ಇವರನ್ನು ನಾಶಪಡಿಸುತ್ತದೆ. ತಮ್ಮ ಭಾವನೆಯನ್ನು ಆರೋಗ್ಯಕರ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ತಮ್ಮ ಭಾವನೆಯನ್ನು ಬೇರೆಡೆಗೆ ತಿರುಗಿಸಲು ಮತ್ತು ಭಾವನಾತ್ಮಕವಾಗಿ ಸ್ಥಗಿತವನ್ನು ಹೊಂದಲು ಪ್ರಯತ್ನಿಸುತ್ತಾರೆ.

English summary

how-you-express-emotions-based-on-your-zodiac

Here are some of the ways in which the individuals of zodiac signs express their emotions in the way that is very particular to their zodiac sign. Some people are like open books, they're easy to get to read, while others are like top secrets, who would not show emotions regularly. So, check out on how each zodiac sign helps understand a person's quality and trait in a better way and know how your zodiac reflects your mood and emotions.