ಗುರುವಾರದ ರಾಶಿ ಭವಿಷ್ಯ: ಯಾವ್ಯಾವ ರಾಶಿಯವರ ಇಂದಿನ ಭವಿಷ್ಯ ಹೇಗಿದೆ ನೋಡಿ...

Posted By: Deepu
Subscribe to Boldsky

ಇರುವುದೊಂದೇ ಜೀವನ. ಆ ಜೀವನ ಎನ್ನುವುದು ಸಿಗುವುದು ಕೆಲವೇ ದಿನ. ಅದರೊಳಗೆ ತಿಳಿಯದೇ ಕಳೆಯುವ ಬಾಲ್ಯ, ಗೊತ್ತಿಲ್ಲದೆ ಜಾರುವ ಹರೆಯ, ಕರೆಯದೆ ಬರುವ ಮುದಿತನ ಎಲ್ಲವೂ ಅಡಗಿರುತ್ತದೆ. ಈ ಎಲ್ಲಾ ಹಂತದಲ್ಲೂ ಉತ್ತಮವಾದ ವರ್ತನೆ ಹಾಗೂ ಸಾರ್ಥಕ ಎನ್ನುವಂತಹ ಕೆಲಸ ಮಾಡುವುದರ ಮೂಲಕ ಜೀವನವನ್ನು ಅನುಭವಿಸುತ್ತ ಬಾಳುವುದೇ ಬದುಕು.

ಹಾಗಾಗಿ ಅಮೂಲ್ಯವಾದ ಬದುಕನ್ನು ದುರುಪಯೋಗಕ್ಕೆ ಬಳಸಿಕೊಳ್ಳದೆ ಧಾನ-ಧರ್ಮ, ಕರ್ತವ್ಯ, ನಿಷ್ಠೆ, ಪ್ರೀತಿ-ಸ್ನೇಹ ಎನ್ನುವುದರ ಮೂಲಕ ಸುಂದರಗೊಳಿಸಿಕೊಂಡು ಬಾಳಿ ಎನ್ನುವುದೇ ನಮ್ಮ ಆಶಯ. ಗುರುವಾರವಾದ ಇಂದು ಹಲವರ ಬದುಕಲ್ಲಿ ಅದೃಷ್ಟವನ್ನು ಹಾಗೂ ಕೆಲವರ ಬದುಕಲ್ಲಿ ಕಷ್ಟವನ್ನು ತಂದೊಡ್ಡಬಹುದು. ಯಾವುದಕ್ಕೂ ಹೆದರದೆ ನಿಮ್ಮ ಗುರಿಯೆಡೆಗೆ ಹೆಜ್ಜೆಯಿಡಿ. ನಿಮ್ಮ ಭವಿಷ್ಯ ಯಾವ ಪತದಲ್ಲಿ ಕರೆದೊಯ್ಯುವುದು ಎನ್ನುವುದನ್ನು ಮುಂಚಿತವಾಗಿ ನೀವು ತಿಳಿದು ಕೊಳ್ಳಬೇಕು ಎಂದು ಬಯಸುವುದಾದರೆ ಈ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ...   

ಮೇಷ

ಮೇಷ

ಇಂದು ನಿಮಗೆ ನೆಮ್ಮದಿಯ ದಿನ. ಮನೆಯಲ್ಲಿ ಎಲ್ಲರಿಂದಲೂ ಪ್ರೀತಿ ಸಹಕಾರ ದೊರೆಯುವುದು. ದೇವರ ಕೃಪೆ ಇಂದು ನಿಮ್ಮ ಮೇಲೆ ಇರುವುದು. ಮಕ್ಕಳಿಂದ ಶುಭ ಸುದ್ದಿ. ಸ್ನೇಹಿತರಿಂದ ಸಕಾರಾತ್ಮಕ ನೆರವು ದೊರೆಯುವುದು. ನೀವು ಅಂದುಕೊಂಡದ್ದನ್ನು ಸುಲಭವಾಗಿ ಪಡೆಯುವಿರಿ. ನಿಮ್ಮ ಗುರಿಯನ್ನು ತಲುಪಿರುವ ಖುಷಿ ನಿಮ್ಮದಾಗಲಿದೆ. ಉತ್ತಮ ಭವಿಷ್ಯಕ್ಕಾಗಿ ಗಣೇಶನ ಆರಾಧನೆ ಹಾಗೂ ಗುರುವಿನ ಸ್ಮರಣೆ ಮಾಡಿ. ಇನ್ನು ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಚಿಂತಿಸುವ ಅಗತ್ಯವಿಲ್ಲ. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗೆ ಗಣೇಶ ಮತ್ತು ದೇವಿಯ ಉಪಾಸನೆ ಮಾಡಿ.

ವೃಷಭ

ವೃಷಭ

ನಿಮಗೆ ಆರ್ಥಿಕವಾಗಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವ್ಯವಸ್ಥೆ ಕುಸಿಯುವುದು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡದಿರಿ. ನಿಮ್ಮವರೇ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ಕಪ್ಪು ಬಟ್ಟೆಯ ಧಾರಣೆಯನ್ನು ಮಾಡದಿರಿ. ಸ್ತ್ರೀಯರ ಮಾತನ್ನು ಧಿಕ್ಕರಿಸದಿರಿ. ಹಾಗೊಮ್ಮೆ ಧಿಕ್ಕರಿಸಿದರೆ ಅಪಜಯ ಉಂಟಾಗುವುದು. ವಿದ್ಯಾರ್ಥಿಗಳಿಗೂ ಅಪಜಯ ಉಂಟಾಗುವುದು. ಹತ್ತಾರು ಸಮಸ್ಯೆಗಳು ಒಮ್ಮೆಲೇ ಕೈಗೂಡಿ ಬರುವ ಸಾಧ್ಯತೆ ಇದೆ. ಆದ್ದರಿಂದ ಇವರು ಗಣೇಶನ ಆರಾಧನೆ ಹಾಗೂ ಗುರುವಿನ ಪ್ರಾರ್ಥನೆ ಮಾಡಿ. ಇನ್ನು ಆಸ್ತಿ ವಿಚಾರದಲ್ಲಿ ಬಂಧು ಮಿತ್ರರ ನಡುವೆ ಕಲಹ ಉಂಟಾಗಬಹುದು. ಆರ್ಥಿಕ ಸ್ಥಿತಿಯಲ್ಲಿ ಹಿನ್ನೆಡೆ ಉಂಟಾಗುವುದರಿಂದ ಬೇರೆಯವರಲ್ಲಿ ಕೈಚಾಚುವ ಸ್ಥಿತಿ ಎದುರಾಗಬಹುದು. ಚಿಕ್ಕ ಪುಟ್ಟ ವ್ಯಾಪಾರಿಗಳಿಗೂ ವ್ಯಾಪಾರದಲ್ಲಿ ಅಡಚಣೆ ಉಂಟಾಗಬಹುದು. ಅರಳಿ ಮರವನ್ನು ಸುತ್ತುವುದರ ಮೂಲಕ ಸಮಸ್ಯೆಯನ್ನು ದೂರಾಗಿಸಬಹುದು. ಜೀವನದಲ್ಲಿ ಪ್ರಗತಿಗಾಗಿ ಶಿವನ ಆರಾಧನೆ ಮಾಡಿ.

ಮಿಥುನ

ಮಿಥುನ

ಸಮಾಧಾನಕರವಾದ ಬದುಕನ್ನು ನೀವು ಕಾಣುವಿರಿ. ಮನೆ ಮಠಗಳನ್ನು ಮಾಡಿಕೊಳ್ಳಬೇಕು ಎನ್ನುವ ನಿಮ್ಮ ಕನಸು ನನಸಾಗುವುದು. ಸ್ಥಿರಾಸ್ತಿಯಿಂದ ಲಾಭ ಉಂಟಾಗುವುದು. ಸುಂದರಮಯವಾದ ನಿಮ್ಮ ಹೊಸ ಜೀವನ ಆರಂಭವಾಗುವುದು. ಆಪ್ತರು ಇದಕ್ಕೆ ಸಹಾಯ ಮಾಡುವರು. ಪ್ರೇಮಿಗಳಿಗೆ ಪ್ರೇಮ ವೈಫಲ್ಯ ಉಂಟಾಗುವ ಸಾಧ್ಯತೆಗಳಿವೆ. ಸ್ತ್ರೀಯರು ಆದಷ್ಟು ಜಾಗ್ರತರಾಗಿರಬೇಕು. ಮೋಸಗಾರರ ಬಲೆಗೆ ಬೀಳುವ ಸಾಧ್ಯತೆ ಇದೆ. ನಿಮ್ಮ ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

ಕರ್ಕ

ಕರ್ಕ

ಪಂಚಮ ಶನಿ ನಿಮ್ಮನ್ನು ಬಿಟ್ಟಿರುವುದರಿಂದ ಇದೀಗ ನಿಮಗೆ ನಿರಾಳವಾದ ಬದುಕು ಪ್ರಾಪ್ತಿಯಾಗುವುದು. ಆರ್ಥಿಕ ಕ್ಷೇತ್ರವು ಬಲಗೊಳ್ಳುವುದು. ಸರ್ಕಾರಿ ಉದ್ಯಮವು ಅನುಕೂಲ ತಂದುಕೊಡುವುದು. ನಿಮ್ಮ ಸುಂದರ ಕನಸುಗಳು ನನಸಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣವು ನಿಮಗೆ ದೊರೆಯಲಿದೆ. ಬಂಧು ಮಿತ್ರರಿಂದ ಅನುಕೂಲ ಉಂಟಾಗುವುದು. ವಿದ್ಯಾರ್ಥಿಗಳಿಗೂ ಯಶಸ್ಸು ದೊರೆಯುವುದು. ಆಸ್ತಿಗಳಿಂದ ಉತ್ತಮ ಲಾಭ ಉಂಟಾಗುವುದು. ಯಶಸ್ವಿ ಬದುಕಿಗಾಗಿ ಕುಲದೇವರ ಸ್ಮರಣೆ ಮತ್ತು ಗಣೇಶನ ಆರಾಧನೆ ಮಾಡಿ. ಇನ್ನು ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ ದೊರೆಯುವುದು. ಸ್ಥಿರಾಸ್ತಿಯಿಂದ ಲಾಭ ದೊರೆಯುವುದು. ರೈತರಿಗೆ ನೆಮ್ಮದಿ ದೊರೆಯುವುದು. ವಿವಾಹದ ವಿಳಂಬ ದೂರವಾಗುವುದು. ಅವಿವಾಹಿತರಿಗೆ ವಿವಾಹ ಯೋಗ. ಹಿರಿಯರು ದೂರದ ಪ್ರಯಾಣ ಕೈಗೊಳ್ಳುವ ಅವಕಾಶಗಳಿವೆ.

ಸಿಂಹ

ಸಿಂಹ

ಇಂದು ನಿಮಗೆ ಅಷ್ಟು ಶುಭಕರವಲ್ಲದ ದಿನ ಎಂತಲೇ ಹೇಳಬಹುದು. ಇಲ್ಲ ಸಲ್ಲದ ಅಪವಾದಗಳು ನಿಮ್ಮ ಬೆನ್ನೇರುವ ಸಾಧ್ಯತೆಯಿದೆ. ಮನಸ್ಸಿಗೆ ಕಿರಿಕಿರಿ ಉಂಟಾಗುವುದು. ಮಿತ್ರರಿಂದ ದ್ರೋಹ ಉಂಟಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಅನಾನುಕೂಲ ಉಂಟಾಗುವುದು. ನೀವು ವಿವೇಚನಯುತವಾಗಿ ನಡೆದುಕೊಂಡರೆ ಭಗವಂತನು ನಿಮ್ಮ ಸಮಸ್ಯೆಗಳನ್ನು ನಿವಾರಿಸುವನು. ಸಾಲ ನೀಡುವುದು, ಪಡೆಯುವುದು ಅಥವಾ ಜಾಮೀನು ನೀಡುವ ಕೆಲಸಕ್ಕೆ ಮುಂದಾಗದಿರಿ. ಯಶಸ್ವಿ ಬದುಕಿಗಾಗಿ ನರಸಿಂಹ ದೇವರ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಇಂದು ಅಷ್ಟು ಉತ್ಕೃಷ್ಟವಾದ ದಿನವಲ್ಲ. ಸಾಮಾನ್ಯವಾದ ದಿನ ಎನ್ನಬಹುದು. ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಬಂಧು ಮಿತ್ರರ ಸಹಕಾರವು ದೊರೆಯುವುದು. ಮಕ್ಕಳಿಂದ ಶುಭವಾರ್ತೆ ಲಭಿಸುವುದು. ದೂರದ ಸ್ಥಳಗಳಿಗೆ ಅನಿವಾರ್ಯವಾಗಿ ಪ್ರಯಾಣ ಕೈಗೊಳ್ಳಬೇಕಾಗುವುದು. ಹಿರಿಯರು ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡುವ ಉದ್ದೇಶಕ್ಕೆ ಸ್ನೇಹಿತರೊಡನೆ ಚರ್ಚೆ ನಡೆಸುವರು. ರಕ್ತದೊತ್ತಡ, ಮಧುಮೇಹ ಇದ್ದವರು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ವ್ಯಾಪಾರ ವಹಿವಾಟಿನಲ್ಲಿ ಸಾಧಾರಣ ಲಾಭ ಉಂಟಾಗುವುದು. ಹೆಚ್ಚಿನ ಅನುಕೂಲಕ್ಕೆ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

ತುಲಾ

ತುಲಾ

ಇಂದು ನಿಮಗೆ ದೇವರು ಜಯವನ್ನು ನೀಡುತ್ತಾನೆ. ಮನಸ್ಸಿನ ಕಾಮನೆಗಳು ಪೂರ್ಣಗೊಳ್ಳುವುದು. ಸುಖಪ್ರದವಾದ ಜೀವನವನ್ನು ಪಡೆದುಕೊಳ್ಳುವಿರಿ. ವಿವಾಹದ ಅಡೆತಡೆಗಳು ದೂರವಾಗುವುದು. ಸುಂದರ ಜೀವನಕ್ಕೆ ಬೇಕಾದ ಅನುಕೂಲಗಳು ನಿಮಗೆ ಲಭ್ಯವಾಗುವುದು. ನಿಮ್ಮ ನಿರ್ದಿಷ್ಟ ಗುರಿಯನ್ನು ನೀವು ತಲುಪಲಿದ್ದೀರಿ. ಬಂಧು ಮಿತ್ರರ ಸಹಕಾರ ದೊರೆಯುವುದು. ಇನ್ನು ಅನೇಕ ದಿನಗಳಿಂದ ಕಂಡ ಕನಸು ನನಸಾಗುವುದು. ಹೊಸ ಉದ್ಯೋಗಗಳು ದೊರೆಯುವ ಸಾಧ್ಯತೆ ಇದೆ. ಕಪ್ಪು ಬಟ್ಟೆಯನ್ನು ಧರಿಸದಿರಿ. ಮನೆಯಿಂದ ಹೊರಡುವಾಗ ಗಣೇಶನ ಪ್ರಸಾದವನ್ನು ಪಡೆದು ಹೊರಡಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಇಂದು ನಿಮಗೆ ಅಷ್ಟು ಅನುಕೂಲಕರವಾದ ದಿನವಲ್ಲ ಎಂದೇ ಹೇಳಬೇಕು. ಅವಮಾನಗಳು ಉಂಟಾಗುವ ಸಾಧ್ಯತೆಗಳು ಇವೆ. ಬಂಧು ಮಿತ್ರರಲ್ಲಿ ವೈಮನಸ್ಸು ಮತ್ತು ಕಿರಿ ಕಿರಿ ಉಂಟಾಗುವ ಸಾಧ್ಯತೆಗಳಿವೆ. ಹಲವಾರು ದಿನಗಳಿಂದ ಮಾಡಿಕೊಂಡಿದ್ದ ಯೋಜನೆಗಳು ಕೈತಪ್ಪಿ ಹೋಗುವ ಸಾಧ್ಯತೆಗಳಿವೆ. ಮಕ್ಕಳಿಂದ ಕಿರಿಕಿರಿ ವಾತಾವರಣ ಸೃಷ್ಟಿಯಾಗುವುದು. ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗದು. ವಾಹನಗಳ ಚಾಲನೆ ಮತ್ತು ಪ್ರಯಾಣದಿಂದ ಆಘಾತ ಉಂಟಾಗುವ ಸಾಧ್ಯತೆಗಳಿವೆ. ಉತ್ತಮ ಭವಿಷ್ಯಕ್ಕಾಗಿ ಹನುಮಂತನ ಪ್ರಾರ್ಥನೆ ಮಾಡಿ.

ಧನು

ಧನು

ನೀವು ಹೆಚ್ಚು ಜಾಗರೂಕರಾಗಿರಬೇಕು. ಮನೆಯಲ್ಲಿ ಕಿರಿಕಿರಿ ವಾತಾವರಣ ಉಂಟಾಗುವುದು. ಕಪ್ಪು ಬಟ್ಟೆಯನ್ನು ಧರಿಸದಿರುವುದು ಸೂಕ್ತ. ಮಾಡದ ತಪ್ಪಿಗೆ ಶಿಕ್ಷೆ ಪಡೆಯಬೇಕಾಗುವುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಸೋಲು, ವಿಪರೀತವಾದ ಆಯಾಸ ಹಾಗೂ ಆರೋಗ್ಯದಲ್ಲಿ ಏರು ಪೇರು ಉಂಟಾಗುವ ಸಾಧ್ಯತೆಗಳಿವೆ. ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮತ್ತು ಕುಲದೇವರ ಪ್ರಾರ್ಥನೆ ಮಾಡಿ.

ಮಕರ

ಮಕರ

ನಿಮಗೆ ಒಳ್ಳೆಯ ದಿನ. ಮನೆಯಲ್ಲಿ ಉತ್ತಮ ವಾತಾವರಣ ದೊರೆಯುವುದು. ಮನಸ್ಸಿನ ನೆಮ್ಮದಿಗೆ ಕುಲದೇವರ ಪ್ರಾರ್ಥನೆ ಮಾಡುವುದು ಸೂಕ್ತ. ಆರ್ಥಿಕವಾಗಿ ಅನುಕೂಲಕರ ದಿನ ಎಂದು ಹೇಳಬಹುದು. ಕೃಷಿಗೆ ಸಂಬಂಧಿಸಿದ ಉತ್ಪನ್ನಗಳ ಉತ್ಪಾದನೆಯಲ್ಲಿ ಲಾಭ ಗಳಿಸುವಿರಿ. ಸ್ಟೀಲ್ ಉದ್ಯಮದಲ್ಲಿ ಸಂಪೂರ್ಣ ಲಾಭ ಉಂಟಾಗದು. ಬಟ್ಟೆ ವ್ಯಾಪಾರದಲ್ಲಿ ಪ್ರಗತಿ ಹಾಗೂ ಹೊಲಿಗೆ ಕೆಲಸದಲ್ಲಿ ಸಂಪೂರ್ಣ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಕುಂಬ

ಕುಂಬ

ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವರು. ಕೆಲವು ಮಾನಸಿಕ ಬಯಕೆಗಳು ನೆರವೇರುವುದು. ಸುಂದರವಾದ ಕನಸು ನನಸಾಗುವುದು. ಅನಿರೀಕ್ಷಿತ ಹಣಗಳು ಮರು ಪಾವತಿ ಕಾಣುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಕ್ಕೆ ಇದ್ದ ಅಡೆತಡೆಗಳು ದೂರಾಗುವುದು. ಸಂತೋಷಕರವಾದ ಪ್ರಗತಿಯನ್ನು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಮೀನ

ಮೀನ

ಇಂದು ನಿಮಗೆ ಶುಭಕರವಾದ ದಿನ. ಉದ್ಯೋಗದಲ್ಲಿ ಲಾಭ ಹಾಗೂ ಮಕ್ಕಳಿಂದ ಶುಭ ಸುದ್ದಿಯನ್ನು ಕೊಡುವರು. ವೈಜ್ಞಾನಿಕ ಕ್ಷೇತ್ರದಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ವಿದೇಶ ಯಾನದ ಕನಸು ನನಸಾಗುವುದು. ಎಲ್ಲಾ ಬಗೆಯ ಉದ್ಯೋಗದಲ್ಲೂ ಲಾಭ ದೊರೆಯುವುದು. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅನುಕೂಲ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

English summary

Horoscopes: which Zodiac Sign's get good news today

Astrology is practised all over the world and is known as a science of the stars and other celestial planets and their influence on our lives. For many, their daily horoscopes are very important to them, as it gives an insight in the happenings of the day.