Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಭಯಾನಕ ಕಾಯಿಲೆ!, ಸ್ವೀಡನ್‌ನಲ್ಲಿ ಮಕ್ಕಳು ಮಲಗಿದರೆ ಎದ್ದೇಳಲ್ಲ!
ಕೆಲವೊಂದು ಕಾಯಿಲೆ ಹಾಗು ಅನಾರೋಗ್ಯಗಳು ತುಂಬಾ ವಿಚಿತ್ರವೆಂದಿಸಿಸುವುದು. ಈ ವಿಭಾಗದಲ್ಲೇ ನೀವು ಇಂತಹ ಹಲವಾರು ವಿಚಿತ್ರ ಕಾಯಿಲೆಗಳ ಬಗ್ಗೆ ಓದಿರಬಹುದು. ಇಂತಹ ಮತ್ತೊಂದು ವಿಚಿತ್ರ ಕಾಯಿಲೆ ಬಗ್ಗೆ ನಿಮಗೆ ಇಂದು ತಿಳಿಸಿಕೊಡಲಿದ್ದೇವೆ. ಇದು ತುಂಬಾ ವಿಚಿತ್ರ ಹಾಗೂ ಅಪರೂಪದಲ್ಲಿ ಅಪರೂಪದ ಕಾಯಿಲೆಯಾಗಿದೆ. ಇದನ್ನು 'ರಾಜೀನಾಮೆ ಸಿಂಡ್ರೊಮ್' ಅಥವಾ 'ವಿಷಣ್ಣತೆ ಸಿಂಡ್ರೊಮ್' ಎಂದು ಕರೆಯಲಾಗುತ್ತದೆ.
ಇದು ತುಂಬಾ ವಿಚಿತ್ರ ಕಾಯಿಲೆಯಾಗಿದೆ. ಇಲ್ಲಿ ಮಕ್ಕಳು ನಿದ್ರೆಗೆ ಬಿದ್ದರೆ ಅವರು ಮತ್ತೆ ಎಚ್ಚರಗೊಳ್ಳುವುದೇ ಇಲ್ಲ. ಗಂಟೆಗಟ್ಟಲೆ, ತಿಂಗಳುಗಳು ಮತ್ತು ವರ್ಷಗಟ್ಟಲೆ ಕೂಡ ನಿದ್ರೆಯಲ್ಲೇ ಇರಬಹುದು. ಈ ರಾಜೀನಾಮೆ ರೋಗದ ಬಗ್ಗೆ ಇಂದು ಎಲ್ಲೆಡೆಯಲ್ಲಿ ತುಂಬಾ ಚರ್ಚೆಯಾಗುತ್ತಿದೆ.
ಇಂತಹ ಸಮಸ್ಯೆಯು ಹೆಚ್ಚಾಗುತ್ತಿರುವ ಸ್ವೀಡನ್ ನಲ್ಲಿ ಮಕ್ಕಳ ಬಗ್ಗೆ ಅನುಕಂಪ ಉಂಟಾದರೆ ಪೋಷಕರು ಆಶ್ರಯ ಬಸುತ್ತಿದ್ದಾರೆ. ಈ ಕಾಯಿಲೆಯು ಸ್ವೀಡನ್ ನಲ್ಲಿ ಮಾತ್ರ ಇದೆ. ವರದಿಯ ಪ್ರಕಾರ ನೂರಾರು ಮಕ್ಕಳು ಇಂತಹ ರೋಗದಿಂದ ಬಳಲುತ್ತಿದ್ದಾರೆ. ಇದನ್ನು ರಾಜೀನಾಮೆ ಸಿಂಡ್ರೊಮ್ ಎಂದು ಕರೆಯಲಾಗುತ್ತದೆ. 2000ನೇ ಇಸವಿಯಿಂದ 2005ರ ಇಸವಿ ತನಕ ಇಂತಹ ಸಮಸ್ಯೆ ಇರುವ ಮಕ್ಕಳನ್ನು ಆಸ್ಪತ್ರಗೆ ಕರೆತರಲು ಆರಂಭಿಸಿದರು. 8ರಿಂದ 15ರ ಹರೆಯದ ಸುಮಾರು 400 ಮಕ್ಕಳಿಗೆ ಈ ಸಮಸ್ಯೆಇತ್ತು.

ಈ ಸಮಸ್ಯೆಯಿಂದ ಬಳಲುವ ಮಕ್ಕಳು
ಇಂತಹ ಸಮಸ್ಯೆಯಿಂದ ಬಳಲುವ ಮಕ್ಕಳು ದೀರ್ಘ ಕೋಮಾದಂತಹ ಸ್ಥಿತಿಗೆ ಹೋಗುವರು. ಇಲ್ಲಿ ಇವರು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುವರು. ಇವರು ಏನೂ ಮಾತನಾಡಲ್ಲ, ತಿನ್ನಲ್ಲ ಮತ್ತು ಕಣ್ಣು ಕೂಡ ತೆರೆಯಲ್ಲ. ಈ ಮಕ್ಕಳಿಗೆ ಹನಿಪೈಪ್ ಮೂಲಕ ಆಹಾರ ನೀಡಲಾಗುವುದು. ಇದೇ ಆ ಮಕ್ಕಳನ್ನು ಜೀವಂತವಾಗಿಡುವುದು. ಇಂತಹ ಹಲವಾರು ಮಕ್ಕಳ ಬಗ್ಗೆ ವರದಿಯಾಗಿದೆ ಮತ್ತು ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ಹಾಸಿಗೆಯಲ್ಲೇ ಇರುವ ಮಕ್ಕಳಿದ್ದಾರೆ.
ನಿರಾಶ್ರಿತರಿಗೆ ಮಾತ್ರ ಹೀಗೆ ಆಗುತ್ತಲಿದೆ....
ಈ ಬಗ್ಗೆ ಅಧ್ಯಯನ ನಡೆಸುತ್ತಿರುವಂತಹ ವೈದ್ಯರು ಕಂಡುಕೊಂಡಿರುವ ಅಂಶವೆಂದರೆ ಯುರೋಪ್ ನ ಪೂರ್ವ ಭಾಗದ ನಿರಾಶ್ರಿತರಿಗೆ ಸಮಗ್ರ ಸಮಾಜಕ್ಕೆ ಬಂದಾಗ ಮಾತ್ರ ಇಂತಹ ಸಮಸ್ಯೆಯು ಕಂಡುಬರುವುದು. ಸಣ್ಣ ಮಕ್ಕಳಿಗೆ ಕೆಲವೊಂದು ಕಠಿಣ ನಿಯಮಗಳನ್ನು ಪಾಲಿಸಬೇಕಾಗಿರುವ ಕಾರಣದಿಂದಾಗಿ ತಮ್ಮ ಕುಟುಂಬವನ್ನು ಪೋಷಿಸುವಂತಹ ಯಾವುದೇ ರೀತಿಯ ಪ್ರೋತ್ಸಾಹ ಸಿಗದೆ ಇರುವಾಗ ಅವರ ಅಂತಃಪ್ರಜ್ಞೆಯು ಕುಸಿಯುವುದು.
ಮಕ್ಕಳಿಗೆ ನಿಜವಾಗಿಯೂ ಆಗುವುದೇನು?
ತಮ್ಮ ಕುಟುಂಬಗಳನ್ನು ದೇಶದಿಂದ ಹೊರಹಾಕಲಾಗುವುದು ಎಂದು ತಿಳಿದಂತಹ ನೂರಾರು ಕುಟುಂಬಗಳ ಮಕ್ಕಳು ಇಂತಹ ಪರಿಸ್ಥಿತಿ ತಲುಪಿದ್ದಾರೆ. ಇಂತಹ ಪರಿಸ್ಥಿತಿಗೆ ಸಿಲುಕಿರುವಂತಹ ಮಕ್ಕಳು ಯಾವುದೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲ್ಲ, ಕಡಿಮೆ ಮಾತನಾಡುವರು ಮತ್ತು ಅಂತಿಮವಾಗಿ ಹೊರಜಗತ್ತಿನಿಂದ ತಮ್ಮೆಲ್ಲಾ ಸಂಬಂಧವನ್ನು ಕಡಿದುಕೊಳ್ಳುವರು.
ವೈದ್ಯರು ಹೇಳುವುದೇನು?
ತಜ್ಞರ ಪ್ರಕಾರ ಮನುಷ್ಯನ ಅಂತಃಪ್ರಜ್ಞೆಯಿರುವಂತಹ ಮೆದುಳಿನ ಒಂದು ಭಾಗವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದು. ಇದರಿಂದ ಮಕ್ಕಳ ಪೋಷಕರು ಅವರಿಗೆ ಪೈಪ್ ಮೂಲಕ ಆಹಾರ ನೀಡಬೇಕಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯಿಂದ ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಇದುವರೆಗೆ ವರದಿಯಾಗಿಲ್ಲ. ಇಂತಹ ಇನ್ನಷ್ಟು ವಿಚಿತ್ರ ಸಮಸ್ಯೆಗಳ ಬಗ್ಗೆ ನೀವು ಓದಲು ಬಯಸುವಿರಾದರೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications











