For Quick Alerts
ALLOW NOTIFICATIONS  
For Daily Alerts

ಈ ಜ್ಯೋತಿಷ್ಯ ಟಿಪ್ಸ್ ಅನುಸರಿಸಿ, ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…!

|

ಲಾಭ ಗಳಿಸಿ ಜೀವನದಲ್ಲಿ ಮುಂದೆ ಬರುವ ಸಲುವಾಗಿ ಎಲ್ಲರೂ ತಮ್ಮದೇ ಆದ ವ್ಯಾಪಾರ, ವ್ಯವಹಾರ ಆರಂಭಿಸುವುದು ಸಹಜ. ಆದರೆ ಕೆಲ ಬಾರಿ ಅನೇಕರು ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಜೀವನದಲ್ಲಿ ನೊಂದುಕೊಳ್ಳುತ್ತಾರೆ. ತಾವು ಮಾಡುತ್ತಿರುವ ವ್ಯಾಪಾರದ ಬಗೆಗಿನ ಅನುಭವದ ಕೊರತೆ ಅಥವಾ ಸೂಕ್ತ ಮಾರುಕಟ್ಟೆಯ ಜ್ಞಾನ ಇರದ ಕಾರಣಗಳಿಂದ ಹಲವಾರು ಬಾರಿ ನಷ್ಟಕ್ಕೀಡಾಗಬೇಕಾಗುತ್ತದೆ. ಇದೊಂದು ಕಡೆಯಾದರೆ ಅನೇಕ ಬಾರಿ ಅದೃಷ್ಟ ಕೈ ಹಿಡಿಯದ ಕಾರಣದಿಂದ ಸಹ ನಷ್ಟವುಂಟಾಗುವ ಸಾಧ್ಯತೆ ಇರುವುದನ್ನು ಅಲ್ಲಗಳೆಯಲಾಗದು.

ಜ್ಯೋತಿಷ್ಯದಲ್ಲಿ ಹೇಳಲಾಗಿರುವ ಕೆಲ ಕ್ರಮಗಳನ್ನು ಅನುಸರಿಸುವ ಮೂಲಕ ವ್ಯಾಪಾರದಲ್ಲಿ ಲಾಭ ಗಳಿಸುವ ಅದೃಷ್ಟ ನಿಮ್ಮದಾಗಿಸಿಕೊಳ್ಳಬಹುದು. ಜ್ಯೋತಿಷ್ಯ ಶಾಸ್ತ್ರದ ಯಾವೆಲ್ಲ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಕೆಲ ಟಿಪ್ಸ್ ಹೀಗಿವೆ...

ಮೊದಲು ಬೆಲ್ಲ ತಿನ್ನಿ!

ಮೊದಲು ಬೆಲ್ಲ ತಿನ್ನಿ!

ಯಾರನ್ನಾದರೂ ಭೇಟಿ ಮಾಡಲು ಹೋಗುವ ಮುನ್ನ ಅಥವಾ ಪ್ರವಾಸಕ್ಕೆ ಹೊರಡುವ ಮೊದಲು ಸ್ವಲ್ಪ ಬೆಲ್ಲವನ್ನು ತಿನ್ನಿ. ಅಥವಾ ಸಕ್ಕರೆ ಬೆರೆಸಿದ ಮೊಸರನ್ನು ಬಾಯಿಗಿಟ್ಟುಕೊಳ್ಳಿ. ವ್ಯಾಪಾರ ಅಭಿವೃದ್ಧಿಗೆ ಕಪ್ಪು ಬಣ್ಣದ ಆಕಳನ್ನು ಮನೆಯಲ್ಲಿ ಸಾಕುವುದು ಶುಭಕರ ಎಂದು ನಂಬಲಾಗಿದೆ. ಇದು ಸಾಧ್ಯವಾಗದಿದ್ದರೆ ಪ್ರತಿ ಬುಧವಾರ ಆಕಳಿಗೆ ಹುಲ್ಲು ಅಥವಾ ಮತ್ತಾವುದೇ ಆಹಾರ ತಿನ್ನಿಸಿದರೆ ಹಣಕಾಸು ಪರಿಸ್ಥಿತಿ ಸುಧಾರಿಸುವುದು.

ಬೆಳ್ಳಿಯ ನಾಣ್ಯಗಳನ್ನು ಇಟ್ಟುಕೊಳ್ಳಿ!

ಬೆಳ್ಳಿಯ ನಾಣ್ಯಗಳನ್ನು ಇಟ್ಟುಕೊಳ್ಳಿ!

ನಿಮ್ಮ ಜೇಬಿನಲ್ಲಿ ಯಾವಾಗಲೂ ಎರಡು ಬೆಳ್ಳಿಯ ನಾಣ್ಯಗಳನ್ನು ಇಟ್ಟುಕೊಳ್ಳುವುದು ಅದೃಷ್ಟ ಸೆಳೆಯುವ ಇನ್ನೊಂದು ದಾರಿಯಾಗಿದೆ. ನಿಮ್ಮೊಂದಿಗೆ ಕೆಂಪು ಬಣ್ಣದ ಕರವಸ್ತ್ರ ಯಾವಾಗಲೂ ಇಟ್ಟುಕೊಳ್ಳಿ. ಇನ್ನು ಮನೆಯಲ್ಲಿರುವ ಯಾವುದೇ ಬೆಳ್ಳಿ ಸಾಮಾನಿಗೆ ನಲ್ಲಿ ಇರದಂತೆ ನೋಡಿಕೊಳ್ಳಿ. ಮನೆಯಲ್ಲಿ ನೀರು ಅಥವಾ ಹಾಲು ಕುಡಿಯಲು ಬೆಳ್ಳಿ ಲೋಟ ಬಳಸಿ.

ಶ್ವಾನಗಳಿಗೆ ಊಟ ಹಾಕಿ

ಶ್ವಾನಗಳಿಗೆ ಊಟ ಹಾಕಿ

ಸಾಧ್ಯವಾದಾಗಲೆಲ್ಲ ಶ್ವಾನಗಳಿಗೆ ಊಟ ಹಾಕುವುದು ಉತ್ತಮ. ಆಲದ ಮರದ ಬೇರುಗಳಿಗೆ ನೀರು ಹಾಕಿ. ನಿಮ್ಮ ಮನೆಯಲ್ಲಿ ಬಾವಿ ಇದ್ದರೆ ಅದರ ಮೇಲೆ ಮುಚ್ಚಳ ಹಾಕಿ ಮುಚ್ಚುವುದು ಬೇಡ.

ತಾಯಿಯ ಆಶೀರ್ವಾದ

ತಾಯಿಯ ಆಶೀರ್ವಾದ

ಎಲ್ಲದಕ್ಕೂ ತಾಯಿಯ ಆಶೀರ್ವಾದ ಬೇಕೇ ಬೇಕು. ನಿಮ್ಮ ತಾಯಿಯ ಆಶೀರ್ವಾದ ಪಡೆದು ಆಕೆ ನೀಡಿದ ಅಕ್ಕಿ ಅಥವಾ ಬೆಳ್ಳಿ ಸಾಮಾನುಗಳನ್ನು ಯಾವಾಗಲೂ ನಿಮ್ಮ ಜೊತೆಗಿಟ್ಟುಕೊಳ್ಳಿ.

ಕೆಂಪು ಬಣ್ಣ

ಕೆಂಪು ಬಣ್ಣ

ಹೋಳಿ ಹಬ್ಬದಂದು ಸ್ವಲ್ಪ ಕೆಂಪು ಬಣ್ಣವನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ, ಇದನ್ನು ನಿಮ್ಮ ವ್ಯಾಪಾರದ ಸ್ಥಳದಲ್ಲಿ ಅಥವಾ ಮನೆಯ ಲಾಕರ್‌ನಲ್ಲಿರಿಸಿ. ಇದು ನಿಮ್ಮ ವ್ಯಾಪಾರದದ ಏಳಿಗೆಗೆ ಕಾರಣವಾಗುತ್ತದೆ.

ಇಷ್ಟ ದೇವರನ್ನು ಮನದಲ್ಲಿ ಭಕ್ತಿಯಿಂದ ನೆನೆಯಿರಿ

ಇಷ್ಟ ದೇವರನ್ನು ಮನದಲ್ಲಿ ಭಕ್ತಿಯಿಂದ ನೆನೆಯಿರಿ

ಮನೆಯಿಂದ ಕೆಲಸಕ್ಕೆ ಹೊರಡುವ ಮುನ್ನ ನಿಮ್ಮ ಇಷ್ಟ ದೇವರನ್ನು ಮನದಲ್ಲಿ ಭಕ್ತಿಯಿಂದ ನೆನೆಯಿರಿ. ಹೊರಡುವಾಗ ಸುಮಧುರ ಸುಗಂಧ ದ್ರವ್ಯ ಸಿಂಪಡಿಸಿಕೊಳ್ಳಿ.

 ಪೊರಕೆ ಜನರಿಗೆ ಕಾಣದಂತೆ ದೂರ ಇಡಿ

ಪೊರಕೆ ಜನರಿಗೆ ಕಾಣದಂತೆ ದೂರ ಇಡಿ

ಮನೆಯಲ್ಲಿ ಹಾಗೂ ವ್ಯಾಪಾರದ ಸ್ಥಳದಲ್ಲಿ ಪೊರಕೆ ಜನರಿಗೆ ಕಾಣದಂತೆ ದೂರ ಇಡಬೇಕು. ಇದರಿಂದ ನಿಮ್ಮ ವ್ಯಾಪಾರದಲ್ಲಿ ಸಕಾರಾತ್ಮಕ ಬದಲಾವಣೆ ಆಗುವುದು. ಅಲ್ಲದೆ ನೀವು ಇಷ್ಟ ಪಡುವ ಸಾಧಕರೊಬ್ಬರ ಫೋಟೊವನ್ನು ವ್ಯಾಪಾರ ಸ್ಥಳದಲ್ಲಿ ಗೋಡೆಗೆ ನೇತು ಹಾಕಿ. ಆ ಸಾಧಕರ ಬಗ್ಗೆ ಮತ್ತಷ್ಟು ತಿಳಿದುಕೊಂಡು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಯತ್ನಿಸಿ. ಇದರಿಂದ ನಿಮ್ಮ ಸಂಪೂರ್ಣ ವ್ಯಕ್ತಿತ್ವಕ್ಕೆ ಹೊಸ ಮೆರುಗು ಬರುತ್ತದೆ.

ಸೂರ್ಯ ಮುಳುಗುವ ಹೊತ್ತಿನಲ್ಲಿ ಮಲಗಬಾರದು

ಸೂರ್ಯ ಮುಳುಗುವ ಹೊತ್ತಿನಲ್ಲಿ ಮಲಗಬಾರದು

ಹೌದು, ಸೂರ್ಯ ಮುಳುಗುವ ಹೊತ್ತಿನಲ್ಲಿ ಮಲಗಬಾರದು. ಇದು ಜೀವನದಲ್ಲಿ ಅಶುಭ ತರುತ್ತದೆ. ಸಂಜೆ ಹೊತ್ತು ದೇವರ ಮುಂದೆ ದೀಪ ಬೆಳಗಿಸಿ ಕೈ ಮುಗಿಯುವುದು ಶುಭಕರ.

ಶ್ರೀಯಂತ್ರ ಹಾಗೂ ತೆಂಗಿನಕಾಯಿ

ಶ್ರೀಯಂತ್ರ ಹಾಗೂ ತೆಂಗಿನಕಾಯಿ

ವ್ಯಾಪಾರ ಸ್ಥಳ ಅಥವಾ ಅಂಗಡಿಯಲ್ಲಿ ದೇವರ ಪೂಜೆ ಮಾಡುವ ಜಾಗದಲ್ಲಿ ಶ್ರೀ ಯಂತ್ರ ಹಾಗೂ ಏಕಾಕ್ಷಿ ತೆಂಗಿನಕಾಯಿಯನ್ನು ಇಟ್ಟು ಪ್ರತಿದಿನ ಶ್ರದ್ಧೆಯಿಂದ ಪೂಜೆ ಮಾಡಿ.

 ರವಿವಾರ 2 ಬಾರಿ ಗಾಯತ್ರಿ ಮಂತ್ರ ಜಪಿಸಿ

ರವಿವಾರ 2 ಬಾರಿ ಗಾಯತ್ರಿ ಮಂತ್ರ ಜಪಿಸಿ

ಪ್ರತಿ ರವಿವಾರ ಪಾತ್ರೆಯೊಂದರಲ್ಲಿ ಗಂಗಾಜಲ ತುಂಬಿಸಿ ಅದನ್ನು ಕೈಯಲ್ಲಿ ಹಿಡಿದು 12 ಬಾರಿ ಗಾಯತ್ರಿ ಮಂತ್ರ ಜಪಿಸಿ. ಪ್ರತಿ ಬಾರಿ ಮಂತ್ರ ಜಪಿಸುವಾಗ ಮೃದುವಾಗಿ ಪಾತ್ರೆಯನ್ನು ತಟ್ಟಿ.

ಕೆಂಪು ವಸ್ತ್ರದಲ್ಲಿ ಕಟ್ಟಿದ ತೆಂಗಿನಕಾಯಿ

ಕೆಂಪು ವಸ್ತ್ರದಲ್ಲಿ ಕಟ್ಟಿದ ತೆಂಗಿನಕಾಯಿ

ಕೆಂಪು ವಸ್ತ್ರದಲ್ಲಿ ಕಟ್ಟಿದ ತೆಂಗಿನಕಾಯಿಯನ್ನು ವ್ಯಾಪಾರದ ಸ್ಥಳದಲ್ಲಿ ಇಟ್ಟು ಪೂಜೆ ಸಲ್ಲಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. 10 ಗ್ರಾಂ ನಷ್ಟು ಕರ್ಪೂರ ಹಾಗೂ ಅಷ್ಟೇ ಪ್ರಮಾಣದ ಕುಂಕುಮವನ್ನು ಮಿಶ್ರಣ ಮಾಡಿ ಇದನ್ನು ಬೆಂಕಿಯಿಂದ ಉರಿಸಿ. ಇದರಿಂದ ದೊರಕುವ ಬೂದಿಯನ್ನು ಕಾಗದದ ಚಿಕ್ಕ ಪೊಟ್ಟಣ ಮಾಡಿ ಲಾಕರ್‌ನಲ್ಲಿ ಇಡಿ. ಪ್ರತಿದಿನ ಇದನ್ನು ನಿಮ್ಮ ಕಣ್ಣು ಹಣೆಗೆ ಒತ್ತಿಕೊಂಡು ದೇವರ ಪ್ರಾರ್ಥನೆ ಮಾಡಿ. ಇದು ವ್ಯಾಪಾರದ ವೃದ್ಧಿಗೆ ಸಹಾಯ ಮಾಡುತ್ತದೆ. ದಿನವೆಲ್ಲ ಶುಭವಾಗಿರಲು ಅಂಗಡಿ ತೆರೆದ ತಕ್ಷಣ ಎರಡೂ ಬದಿಗಳಲ್ಲಿ

ಗೋಮಾತೆಗೆ ಬಾಳೆ ಹಣ್ಣು ತಿನ್ನಿಸಿ

ಗೋಮಾತೆಗೆ ಬಾಳೆ ಹಣ್ಣು ತಿನ್ನಿಸಿ

ಪ್ರತಿ ಗುರುವಾರ ಗೋಮಾತೆಗೆ ಬಾಳೆ ಹಣ್ಣು ತಿನ್ನಿಸುವುದರಿಂದ ಜೀವನದಲ್ಲಿ ಏಳಿಗೆ ಕಾಣಲು ಸಾಧ್ಯವಾಗುತ್ತದೆ. ಪ್ರತಿ ಸೋಮವಾರ ಶಿವಲಿಂಗಕ್ಕೆ ಶುದ್ಧ ಜಲದಿಂದ ಅಭಿಷೇಕ ಮಾಡಿದರೆ ದೇವರ ಕೃಪಾಕಟಾಕ್ಷ ನಿಮ್ಮದಾಗಿಸಿಕೊಳ್ಳಬಹುದು.

 ಪಕ್ಷಿಗಳಿಗೆ ಧಾನ್ಯ

ಪಕ್ಷಿಗಳಿಗೆ ಧಾನ್ಯ

ಏಳು ರೀತಿಯ ಧಾನ್ಯಗಳನ್ನು ಮಿಶ್ರಣ ಮಾಡಿ ಪಕ್ಷಿಗಳಿಗೆ ತಿನ್ನಲು ಇಡಿ. ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ಬಲ ಪಾದದ ಹೆಬ್ಬೆರಳಿನ ಕುಂಕುಮದಿಂದ ನಿಮ್ಮ ಹಣೆಗೆ ತಿಲಕವಿಟ್ಟುಕೊಂಡು ಭಕ್ತಿಯಿಂದ ಪ್ರಾರ್ಥಿಸಿದರೆ ವ್ಯಾಪಾರ ವ್ಯವಹಾರದಲ್ಲಿನ ಅಡಚಣೆಗಳನ್ನು ನಿವಾರಿಸಬಹುದು.

ಉಪವಾಸ ವ್ರತ ಕೈಗೊಳ್ಳಿ

ಉಪವಾಸ ವ್ರತ ಕೈಗೊಳ್ಳಿ

ನಿಮ್ಮ ಆರೋಗ್ಯ ಚೆನ್ನಾಗಿದ್ದಲ್ಲಿ ಶನಿವಾರದಂದು ಉಪವಾಸ ವೃತ ಕೈಗೊಂಡು ಇಷ್ಟ ದೇವರನ್ನು ಪ್ರಾರ್ಥನೆ ಮಾಡಿ. ಜಗತ್ತಿನ ಎಲ್ಲ ಶಕ್ತಿಯ ಮೂಲವಾದ ಸೂರ್ಯದೇವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ. ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯ ದುಡಿಮೆಯೇ ಸೂರ್ಯ ದೇವರನ್ನು ಒಲಿಸಿಕೊಳ್ಳುವ ಮಾರ್ಗಗಳಾಗಿವೆ. ನಂಬಿಕೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಲ್ಲಿ ಸೂರ್ಯ ದೇವರ ಆಶೀರ್ವಾದದಿಂದ ಸಕಲ ಏಳಿಗೆ ಸಾಧ್ಯ. ಬೆಲ್ಲ ಹಾಗೂ ಹಳದಿ ಹೂ ಹಾಕಿ ಪೂರ್ವ ದಿಕ್ಕಿಗೆ ಮುಖ ಮಾಡಿ ಸೂರ್ಯ ದೇವರಿಗೆ ಸಮರ್ಪಿಸಿಪ್ರತಿದಿನ ಬೆಳಗ್ಗೆ 8 ಗಂಟೆಗೆ ಮುನ್ನ ಶುದ್ಧ ನೀರಿನಲ್ಲಿ ಬೆಲ್ಲ ಹಾಗೂ ಹಳದಿ ಹೂ ಹಾಕಿ ಪೂರ್ವ ದಿಕ್ಕಿಗೆ ಮುಖ ಮಾಡಿ ಸೂರ್ಯ ದೇವರಿಗೆ ಸಮರ್ಪಿಸಿ. ಈ ಸಂದರ್ಭದಲ್ಲಿ 108 ಬಾರಿ ಗಾಯತ್ರಿ ಮಂತ್ರ ಹೇಳಿ. ರವಿವಾರದಿಂದ ಆರಂಭಿಸಿ ಇದನ್ನು ಸತತ 11 ದಿನಗಳ ಮಾಡಿದರೆ ಉನ್ನತಿ ಲಭಿಸುತ್ತದೆ. ಅಂಗಡಿಯ ಬಾಗಿಲ ಮೇಲೆ ಸ್ವಸ್ತಿಕ ಚಿತ್ರ ಬರೆಯಿರಿ. ಸ್ವಸ್ತಿಕವು ಅದೃಷ್ಟವನ್ನು ತರುವ ಸಂಕೇತವಾಗಿದೆ.

ದೇವಿಗೆ ತುಪ್ಪದ ದೀಪ

ದೇವಿಗೆ ತುಪ್ಪದ ದೀಪ

ಸಂಪತ್ತಿನ ದೇವಿ ಶ್ರೀ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಪ್ರತಿ ಶುಕ್ರವಾರ ದೇವಿಗೆ ತುಪ್ಪದ ದೀಪಗಳನ್ನು ಹಚ್ಚಿ ಪೂಜೆ ಮಾಡಿ. ವ್ಯಾಪಾರದಲ್ಲಿ ನಷ್ಟವಾಗುತ್ತಿದ್ದರೆ ಪ್ರತಿ ಬಾರಿ ಸ್ಟಾಕ್ ತರಿಸುವಾಗ ಅದರೊಂದಿಗೆ ಕೆಲ ಆಟಿಕೆಗಳನ್ನು ತರಿಸಿ ಅವುಗಳನ್ನು ಮಕ್ಕಳಿಗೆ ಆಟವಾಡಲು ನೀಡಿ. ಇದು ವ್ಯಹಾರದಲ್ಲಿ ಅಭಿವೃದ್ಧಿ ತರುವುದು.

ಕಠಿಣ ಪರಿಶ್ರಮ

ಕಠಿಣ ಪರಿಶ್ರಮ

ಯಾವಾಗಲೂ ವ್ಯಾಪಾರ, ವ್ಯವಹಾರದ ಏಳಿಗೆಗೆ ನಿಮ್ಮ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಜೊತೆಗಿರಬೇಕಾಗುತ್ತದೆ ಎಂಬುದು ತಿಳಿದಿರಲಿ. ಹೀಗಾಗಿ ನಿಮ್ಮ ಎಲ್ಲ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಂತಾಗಲು ಈ ಮೇಲೆ ತಿಳಿಸಿದ ಸುಲಭ ಹಾಗೂ ಸರಳವಾದ ಜ್ಯೋತಿಷ್ಯ ಶಾಸ್ತ್ರ ಆಧಾರಿತ ಟಿಪ್ಸ್‌ಗಳನ್ನು ಅನುಸರಿಸಿ ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳಲು ಮರೆಯಬೇಡಿ.

English summary

Getting success in Business by using these astrology tips

If you are a businessman then getting profit in business is definitely your first priority. But do you think so that getting success in that much easier? No, it’s very difficult to achieve, there are lots of factors matter behind to achieve success like efforts, hard work, willpower, and most important Destiny.If someone have bad luck than no matter how much hard work he will do, he only gets failure only. But by using of astrology a person can easily boost up his destiny and can earn lots of profit in business.
Story first published: Friday, July 27, 2018, 18:19 [IST]
X
Desktop Bottom Promotion