Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಿಯಲ್ ಸ್ಟೋರಿ: ಮಾವನ ಹಿಂಸೆಯ ವಿಡಿಯೋ ಮಾಡಿ, ಸರಿಯಾಗಿ ಬುದ್ಧಿ ಕಲಿಸಿದ ಸೊಸೆ!
ಇಂದು ಏನೇ ಸಮಸ್ಯೆಗಳು ಬಂದರೂ ಅದನ್ನು ಹೇಳಿಕೊಳ್ಳಲು ಒಂದು ವೇದಿಕೆ ಎನ್ನುವುದು ಇದೆ. ಅದೇ ಸಾಮಾಜಿಕ ಜಾಲತಾಣ. ಸಾಮಾಜಿಕ ಜಾಲತಾಣದಲ್ಲಿ ಏನೇ ಬಂದರೂ ಅದನ್ನು ಹಂಚಿಕೊಳ್ಳುವ ಮಂದಿ ತುಂಬಾ ಜನರಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿಯೆಂದರೆ ಮಾವನೊಬ್ಬ ತನ್ನ ಸೊಸೆಯನ್ನು ಶೋಷಿಸುತ್ತಾ ಇದ್ದ.
ಆದರೆ ಆತನ ಬಗ್ಗೆ ಇಂತಹ ಆರೋಪವನ್ನು ಮನೆಯವರು ಒಪ್ಪಲು ತಯಾರು ಇರಲಿಲ್ಲ. ಇದಕ್ಕಾಗಿ ಸೊಸೆ ತನ್ನ ಮಾವನ ಕೃತ್ಯದ ಬಗ್ಗೆ ವೀಡಿಯೋ ಮಾಡಿ ಮನೆಯವರಿಗೆ ತೋರಿಸಿದ ಬಳಿಕ ಅವರು ಆಕೆಯನ್ನು ನಂಬಿದರು. ಮುಂದೆ ಏನಾಯಿತು? ನೀವೇ ಓದಿ......

ಇದು ನಡೆದಿರುವುದು ಭಾರತದಲ್ಲಿ....
ಈ ಘಟನೆಯು ನಮ್ಮದೇ ದೇಶದಲ್ಲಿ ನಡೆದಿರುವುದು. ಮಾವ ತನ್ನ ಸೊಸೆಯನ್ನು ಶೋಷಿಸುತ್ತಾ ಇದ್ದ. ತುಂಬಾ ಸಮಯದಿಂದಲೂ ಇದು ನಡೆಯುತ್ತಲೇ ಇತ್ತು.

ಇದು ನಡೆದಿರುವುದು ಭಾರತದಲ್ಲಿ....
ಹೆಸರು ಹೇಳಲು ಬಯಸದ ಮಹಿಳೆಯು ತನ್ನ ಮಾವ ನಡೆಸುತ್ತಿರುವ ಕೃತ್ಯದ ಬಗ್ಗೆ ಕುಟುಂಬದವರಿಗೆ ಹೇಳಿದಳು. ಆದರೆ ಅವರು ಮಾತ್ರ ಇದನ್ನು ನಂಬಲು ತಯಾರು ಇರಲಿಲ್ಲ. ಇದನ್ನು ನೋಡಿ ಆಕೆಗೆ ಅಚ್ಚರಿಯಾಯಿತು.

ಆಕೆ ಮನೆಬಿಟ್ಟು ಹೋದಳು
ತನ್ನ ಅತ್ತೆ ಮನೆಯವರು ಇದನ್ನು ನಂಬದೇ ಇದ್ದ ಕಾರಣದಿಂದ ಆಕೆ ಮನೆಬಿಟ್ಟು ತಾಯಿ ಮನೆಗೆ ಹೋದಳು. ಅಲ್ಲಿ ಆಕೆಗೆ ಬಹುದೊಡ್ಡ ಆಘಾತ ಕಾದಿತ್ತು. ಯಾಕೆಂದರೆ ಆಕೆಯ ಮನೆಯವರೇ ತನ್ನ ಮಾವನ ನೀಚ ಕೃತ್ಯ ನಂಬಲು ತಯಾರಿರಲಿಲ್ಲ.

ಆಕೆಗೆ ಹೀಗೆ ಹೇಳಲಾಯಿತು...
ಅವರು ನಿನ್ನನ್ನು ಮಗಳ ರೀತಿಯಲ್ಲಿ ಪ್ರೀತಿಸುತ್ತಿದ್ದಾರೆ ಮತ್ತು ಅವರ ಬಗ್ಗೆ ಇಂತಹ ನಕಾರಾತ್ಮಕ ಯೋಚನೆ ಮಾಡುವುದು ಸರಿಯಲ್ಲವೆಂದು ಎರಡು ಕುಟುಂಬದವರು ಆಕೆಗೆ ತಿಳಿ ಹೇಳಿದರು. ತಾಯಿ ಮನೆಯಿಂದ ಕೆಲವು ದಿನಗಳ ಬಳಿಕ ಮರಳಿದಾಗ ಆಕೆಯನ್ನು ಮತ್ತೆ ಪೀಡಿಸಲಾಯಿತು.

ಕ್ರಮ ತೆಗೆದುಕೊಳ್ಳಲು ಮುಂದಾದಳು....
ತಾನು ಹೀಗೆ ಇದ್ದರೆ ಆಗಲ್ಲವೆಂದು ಯೋಚಿಸಿದ ಆಕೆ ಇದನ್ನು ಸಾಬೀತು ಮಾಡಲು ನಿರ್ಧರಿಸಿದಳು. ಮಾವ ತನ್ನನ್ನು ಶೋಷಿಸುವ ವೇಳೆ ಅದರ ವೀಡಿಯೋ ಮಾಡಲು ನಿರ್ಧರಿಸಿದಳು. ಇದರ ಬಳಿಕ ಅದನ್ನು ಕುಟುಂಬ ಸದಸ್ಯರಿಗೆ ತೋರಿಸಿದಳು. ಬಳಿಕ ಪೊಲೀಸರು ಆತನನ್ನು ಬಂಧಿಸಿದರು.
ಆಕೆಯನ್ನು ಯಾರೂ ನಂಬಲಿಲ್ಲ ಯಾಕೆ?
ವೀಡಿಯೋ ನೋಡಿದ ಬಳಿಕ ಆ ವ್ಯಕ್ತಿ ಎಷ್ಟು ಕಟುಕ ಎಂದು ತಿಳಿದುಬರುವುದು. ಆದರೆ ಯಾರೂ ಸಾಕ್ಷ್ಯ ನೀಡುವ ಮೊದಲು ಆಕೆಯನ್ನು ಯಾಕೆ ನಂಬಲಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ನಿಮ್ಮ ಅನಿಸಿಕೆಯೇನು?
ನಾವು ಚಿಂತಿಸುವ ರೀತಿ ಮತ್ತು ಮನಸ್ಥಿತಿ ಬದಲಾಯಿಸಲು ಸಮಯ ಬಂದಿದೆಯಾ? ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications
