ರಾಶಿ ಭವಿಷ್ಯ: ಮಗು ಗರ್ಭದಲ್ಲಿರುವಾಗಲೇ ಅದರ ಜಾತಕ ತಿಳಿಯಿರಿ!

Posted By: hemanth
Subscribe to Boldsky

ಹಿಂದಿನ ಕಾಲದಲ್ಲಿ ಮಗು ಹುಟ್ಟಿದ ಬಳಿಕ ಜಾತಕ ತಯಾರಿಸುತ್ತಾ ಇದ್ದರು. ಆದರೆ ಈಗ ಆಗಲ್ಲ, ಮಗು ಯಾವ ದಿನ ಹುಟ್ಟುತ್ತದೆ ಎಂದು ಮೊದಲೇ ಹೇಳಿರುವ ಕಾರಣದಿಂದಾಗಿ ಮಗುವಿನ ನಡತೆ ಬಗ್ಗೆ ಅದು ಗರ್ಭದಲ್ಲಿರುವಾಗಲೇ ತಿಳಿದುಕೊಳ್ಳಬಹುದು. ಮಗು ಹುಟ್ಟುವ ಮೊದಲೇ ಅದರ ಜಾತಕವನ್ನು ನೀವು ತಿಳಿಯಬಹುದು ಎಂದು ಆಧುನಿಕ ಯುಗದ ಜ್ಯೋತಿಷಿಗಳು ಹೇಳುತ್ತಾರೆ. ನಿಮ್ಮ ಹೆರಿಗೆಯ ದಿನ ಯಾವುದೆಂದು ತಿಳಿದುಕೊಂಡ ಬಳಿಕ ನೀವು ಅದರ ಬಗ್ಗೆ ವಿವಿರವಾಗಿ ತಿಳಿದುಕೊಳ್ಳಬಹುದು.

ಮೇಷ: ಮಾ.21-ಎಪ್ರಿಲ್ 19

ಮೇಷ: ಮಾ.21-ಎಪ್ರಿಲ್ 19

ಈ ರಾಶಿಯಲ್ಲಿ ಹುಟ್ಟುವ ಮಕ್ಕಳು ತಮ್ಮ ತಂದೆತಾಯಿಗೆ ದೊಡ್ಡ ಸಂಪತ್ತು. ಇವರು ತುಂಬಾ ಕ್ರಿಯಾತ್ಮಕವಾಗಿರುವರು ಮತ್ತು ಬುದ್ದಿವಂತರಾಗಿರುವರು. ಕ್ರೀಡೆಯಲ್ಲೂ ಇವರು ಮುಂದಿರುವರು. ತಂದೆತಾಯಿಗೆ ದೊಡ್ಡ ಚಿಂತೆಯ ವಿಷಯವೆಂದರೆ ಈ ಮಕ್ಕಳು ಸುಲಭವಾಗಿ ಮಲಗುವುದಿಲ್ಲ ಮತ್ತು ಇವರಿಗೆ ಪದೇ ಪದೇ ಉತ್ತೇಜನ ಬೇಕಾಗುತ್ತದೆ.

ವೃಷಭ: ಎಪ್ರಿಲ್ 20-ಮೇ 20

ವೃಷಭ: ಎಪ್ರಿಲ್ 20-ಮೇ 20

ವೃಷಭ ರಾಶಿಯ ಮಕ್ಕಳು ತುಂಬಾ ಮೊಂಡುತನ ಹೊಂದಿರುವರು. ಇವರು ಬೇರೆಯವರ ಹೆಸರನ್ನು ತಪ್ಪಾಗಿ ಹೇಗೆ ಹೇಳುವುದು ಎಂದು ಕಲಿಸಿಕೊಡುವರು. ಈ ಮಕ್ಕಳಿಗೆ ಹೆಚ್ಚಿನ ಆರಾಮ ಮತ್ತು ಭದ್ರತೆ ಬೇಕಾಗಿರುವುದು. ಇವರ ಬೇಡಿಕೆಗಳು ಈಡೇರದೆ ಇದ್ದಾಗ ತುಂಬಾ ಹಠವಾದಿಗಳಾಗುವರು.

ಮಿಥುನ: ಮೇ 21-ಜೂ. 20

ಮಿಥುನ: ಮೇ 21-ಜೂ. 20

ನಿಮ್ಮ ಹೆರಿಗೆಯ ದಿನಾಂಕವು ಇದೊರಳಗಿದ್ದರೆ ಆಗ ನೀವು ತುಂಬಾ ಕಠಿಣ ಸಮಯ ಎದುರಿಸಬೇಕಾಗುತ್ತದೆ. ಇವರು ತುಂಬಾ ತಮಾಷೆ, ತುಂಟ ಮಕ್ಕಳು ಮತ್ತು ಇವರು ಯಾವುದೇ ವೇಳಾಪಟ್ಟಿಗೆ ಹೊಂದಿಕೊಂಡು ಹೋಗಲ್ಲ ಮತ್ತು ನಿಮ್ಮ ನಿರೀಕ್ಷೆಯನ್ನು ಮಣ್ಣುಪಾಲು ಮಾಡುವರು.

ಕರ್ಕಾಟಕ: ಜೂನ್ 21-ಜುಲೈ 22

ಕರ್ಕಾಟಕ: ಜೂನ್ 21-ಜುಲೈ 22

ನಿಮ್ಮ ಮಗವು ಬೆಳೆಯಲು ಹಿಂದೇಟು ಹಾಕುತ್ತಿರಬಹುದು. ಈ ರಾಶಿಯ ಮಕ್ಕಳು ತುಂಬಾ ಒಳ್ಳೆಯವರು. ಇವರು ತುಂಬಾ ಶಾಂತ ಮತ್ತು ಹೆಚ್ಚಿನ ತೊಂದರೆ ನೀಡುವುದಿಲ್ಲ. ಇವರು ಬೆಳೆದರೂ ಅವರ ಶಾಂತ ಗುಣವು ಬದಲಾಗುವುದಿಲ್ಲ. ಇವರು ಯಾವಾಗಲೂ ಮನೆಯಲ್ಲಿ ನಿಮಗೆ ನೆರವಾಗುವಂತಹ ಕೆಲಸ ಮಾಡುತ್ತಲಿರುವರು. ಇವರು ಅಮ್ಮನ ಮಗ/ಮಗಳಾಗಿರುವರು.

ಸಿಂಹ: ಜುಲೈ 23- ಆ.23

ಸಿಂಹ: ಜುಲೈ 23- ಆ.23

ಈ ರಾಶಿಯಲ್ಲಿ ಮಗುವಿನ ನಿರೀಕ್ಷೆಯಿದ್ದರೆ ಆಗ ನೀವು ಇನ್ನು ಮುಂದೆ ವಿಶ್ರಾಂತಿ ಎನ್ನುವುದನ್ನು ಮರೆತುಬಿಡುವುದು ಒಳ್ಳೆಯದು. ಮಗು ಹುಟ್ಟಿದ ದಿನದಿಂದ ಅದು ಎಲ್ಲರ ಆಕರ್ಷಣೆಯಾಗಿರುವುದು ಮತ್ತು ಅದು ಇದಕ್ಕೆ ಹೊಂದಿಕೊಳ್ಳುವುದು. ಇವರಿಗೆ ಸತತ ಉತ್ತೇಜನ ಮತ್ತು ಮಮತೆ ಬೇಕಾಗುವುದು. ಇವರು ದೊಡ್ಡ ನಾಟಕಕಾರಾಗಿರುವ ಕಾರಣ ದಿನವಿಡಿ ಇವರನ್ನು ಗಮನಿಸಬೇಕು.

ಕನ್ಯಾ: ಎಪ್ರಿಲ್ 24-ಸೆ.23

ಕನ್ಯಾ: ಎಪ್ರಿಲ್ 24-ಸೆ.23

ನಿಮ್ಮ ಮಗುವಿನ ಜನನ ಈ ರಾಶಿಯ ದಿನದಲ್ಲಿ ಆಗುವುದಿದ್ದರೆ ಆಗ ನೀವು ಸಿಂಹ ರಾಶಿಯಲ್ಲಿ ಹುಟ್ಟುವ ಮಕ್ಕಳ ತಾಯಂದಿರಂತೆ ಚಿಂತೆ ಮಾಡಬೇಕಾಗಿಲ್ಲ. ಈ ಮಕ್ಕಳು ಉತ್ತಮ ನಡತೆಯ ಮತ್ತು ಇತರ ಮಕ್ಕಳಿಗಿಂತ ಹೆಚ್ಚು ಶಿಸ್ತನ್ನು ಪಾಲಿಸುವರು. ಆದರೆ ಇವರು ಸ್ವಲ್ಪ ಮಟ್ಟಿಗೆ ಹಠವಾದಿಗಳು. ಇವರು ಇಷ್ಟಪಡದೆ ಇರುವ ಯಾವುದೇ ವಸ್ತುವಿನ ಬಗ್ಗೆ ತಮ್ಮ ಅತೃಪ್ತಿ ತೋರಿಸುವರು.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ಈ ರಾಶಿಯಲ್ಲಿ ಹುಟ್ಟುವ ಮಕ್ಕಳ ತಂದೆತಾಯಿ ದೊಡ್ಡ ಅದೃಷ್ಟ ಮಾಡಿರುವರು. ಯಾಕೆಂದರೆ ಇವರು ನೈತಿಕತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವರು. ಇವರು ತಮ್ಮ ಪೋಷಕರು ಬಯಸಿದಂತೆ ಯಾವುದನ್ನು ಮಾಡುವುದಿಲ್ಲ. ಆದರೆ ಇದು ಅವರ ನಂಬಿಕೆ ಮತ್ತು ಯೋಚನೆಗೆ ವಿರುದ್ಧವಾಗಿರುವುದು. ಈ ಮಕ್ಕಳು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಲವಾರು ಆಯ್ಕೆಗಳನ್ನು ತೆಗೆದುಕೊಳ್ಳುವರು.

ವೃಶ್ವಿಕ: ಅ.24-ನ.22

ವೃಶ್ವಿಕ: ಅ.24-ನ.22

ಈ ರಾಶಿಯಲ್ಲಿ ಹುಟ್ಟಿದ ಮಕ್ಕಳನ್ನು ಪೋಷಿಸಲು ತಂದೆತಾಯಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಶ್ರಮ ಬೇಕಾಗುವುದು. ಇನ್ನೊಂದು ಬದಿಯಲ್ಲಿ ಇವರು ತುಂಬಾ ಜಾಣ, ಹಠಮಾರಿ. ಇವರು ಬೆಳೆಯುತ್ತಾ ಇರುವಂತೆ ಇವರಲ್ಲಿ ನಾಯಕತ್ವದ ಗುಣಗಳು ಬೆಳೆಯುವುದು.

ಧನು: ನ.23-ಡಿ.22

ಧನು: ನ.23-ಡಿ.22

ಈ ರಾಶಿಯಲ್ಲಿ ಹುಟ್ಟುವ ಮಕ್ಕಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಜೀವನದಲ್ಲಿ ಬೆಳೆಸುವುದು ಮುಖ್ಯ. ಪೋಷಕರಾಗಿ ನೀವು ಇವರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಇವರು ಹೊರಗಿನ ಆಟಗಳನ್ನು ಇಷ್ಟಪಡುವರು. ಇವರು ತಾವು ಮಾಡುವಂತಹ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಶಕ್ತಿಯ ಖರ್ಚು ಮತ್ತು ಸ್ವತಂತ್ರವಾಗಿ ಉಳಿಯುವುದು ಹೇಗೆ ಎಂದು ಕಲಿತುಕೊಳ್ಳುವರು.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಈ ರಾಶಿಯವರು ತುಂಬಾ ಪ್ರೌಢರಾಗಿರುವಂತೆ ವರ್ತಿಸುವರು. ಇವರು ತಮ್ಮ ವಯಸ್ಸಿಗಿಂತ ಹೆಚ್ಚಿನ ಪ್ರೌಢಿಮೆ ತೋರಿಸುವರು. ಇವರಿಗೆ ವೇಳಾಪಟ್ಟಿ ನೀಡಿದರೆ ಅವರು ಅದನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವುದನ್ನು ನೀವು ನೋಡಿರಬಹುದು.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ಈ ರಾಶಿಯ ಮಕ್ಕಳನ್ನು ಪಾಲನೆ ಮಾಡುವುದು ತುಂಬಾ ಸುಲಭ. ಈ ಮಕ್ಕಳು ತುಂಬಾ ಕಿರಿಕಿರಿ ಅಥವಾ ಆಕ್ರಮಣಕಾರಿಯಾಗಿರುವುದಿಲ್ಲ. ಪೋಷಕರಾಗಿ ನೀವು ಅವರನ್ನು ತುಂಬಾ ವಿಚಿತ್ರವೆಂದು ಭಾವಿಸಬಹುದು. ಆದರೆ ಅವರು ಪ್ರತಿಯೊಬ್ಬರ ಬಗ್ಗೆ ತುಂಬಾ ಕಾಳಜಿ ವಹಿಸುವರು. ಯಾವುದೇ ಸಮಯದಲ್ಲಿ ಅವರು ಬೇರೆಯವರಿಗೆ ಸವಾಲೊಡ್ಡಬಲ್ಲರು.

ಮೀನ: ಫೆ.19-ಮಾ.20

ಮೀನ: ಫೆ.19-ಮಾ.20

ಈ ಮಕ್ಕಳು ತುಂಬಾ ಸೂಕ್ಷ್ಮವಾಗಿರುವರು. ಇವರು ತುಂಬಾ ಭಾವನಾತ್ಮಕ ಜೀವಿಗಳು. ಇವರು ತಮ್ಮ ಸುತ್ತಲಿನ ಜನರನ್ನು ಅರ್ಥ ಮಾಡಿಕೊಂಡು ಅವರ ಉದ್ದೇಶವೇನೆಂದು ತಿಳಿದುಕೊಳ್ಳೂವರು. ಇನ್ನೊಂದು ಬದಿಯಲ್ಲಿ ಇವರಿಗೆ ತಮ್ಮದೇ ಆದ ಭಾವನೆಗಳಿರುವುದು. ಕೆಲವು ಸಲ ತಾಳ್ಮೆ ಕಳೆದುಕೊಳ್ಳಬಹುದು. ಪೋಷಕರಾಗಿ ನೀವು ಇದರ ಕಡೆ ಗಮನಹರಿಸಬೇಕು.

English summary

expecting-a-baby-know-about-your-baby-s-personality-even-before-they-are-born

For couples who are expecting their babies, there's good news, as you would not have to wait much, since we've got astrology for all the predictions! For eg, Capricorn-born kids are the old souls. They are surprisingly wise beyond their young age. Handling these kids gets easy for the parents, while the Leos on the other hand are equally troublesome.