Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಗರ್ಭಿಣಿಯರ ಕನಸಲ್ಲಿ ಕಪ್ಪೆ ಬಂದರೆ ಹೀಗೂ ಆಗುವುದು ನೋಡಿ...
ಗಾಢ ನಿದ್ರೆಯಲ್ಲಿ ಇದ್ದಾಗ ಕಾಣುವ ಕನಸು ಮೇಲ್ನೋಟಕ್ಕೆ ಕಾಲ್ಪನಿಕ ಅನಿಸಬಹುದು. ಆದರೆ ಪ್ರತಿಯೊಂದು ಕನಸಿಗೂ ಅದರದ್ದೇ ಆದ ವಿಶೇಷ ಅರ್ಥಗಳಿವೆ. ನಮ್ಮ ಉಪಪ್ರಜ್ಞೆಯ ಮನಸ್ಸಿನಲ್ಲಿ ನಡೆಯುವ ವಿಷಯಗಳನ್ನು ನಾವು ಕನಸು ಕಾಣುತ್ತೇವೆ. ಕೆಲವೊಮ್ಮೆ ಕಂಡ ಕನಸುಗಳು ನಿಜ ಜೀವನದಲ್ಲೂ ನಡೆಯುತ್ತವೆ. ಆ ಕ್ಷಣ ಒಮ್ಮೆ ನಮಗೆ ಆಶ್ಚರ್ಯ ಎನಿಸಬಹುದು. ಆದರೆ ಅದು ವಾಸ್ತವಕ್ಕೆ ಹತ್ತಿರವಾಗಿರುತ್ತದೆ.
ಹೌದು, ಸ್ವಪ್ನ ಶಾಸ್ತ್ರದ ಪ್ರಕಾರ ಸುಪ್ತ ಮನಸ್ಸಿನಲ್ಲಿ ನಡೆಯುವ ಕೆಲವು ವಿಚಾರಗಳು ನಿಜ ಜೀವನಕ್ಕೆ ಹತ್ತಿರವಾಗಿರುತ್ತವೆ. ಅದರಲ್ಲೂ ಗರ್ಭಿಣಿಯರಾಗಿದ್ದಾಗ ಅಥವಾ ಕೆಲವು ವಿಶೇಷ ಸನ್ನಿವೇಶದಲ್ಲಿ ಕಾಣುವಂತಹ ಕನಸು ನಿಜವಾಗುತ್ತವೆ ಎನ್ನಲಾಗುವುದು. ಕನಸಿನಲ್ಲಿ ಬರುವ ಕೆಲವು ವ್ಯಕ್ತಿ, ವಸ್ತು, ಪ್ರಾಣಿ, ಪ್ರದೇಶಗಳು, ಹೂವು, ಹಣ್ಣು ಹೀಗೆ ಕೆಲವು ಪ್ರಮುಖ ವಿಚಾರಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅವುಗಳಿಗೆ ಪ್ರತ್ಯೇಕವಾದ ಅರ್ಥಗಳೇ ಇವೆ ಎಂದು ಹೇಳಲಾಗುವುದು. ಅವು ಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನು ಸೂಕ್ಷ್ಮವಾಗಿ ತಿಳಿಸುತ್ತವೆ ಎನ್ನಲಾಗುವುದು. ಗರ್ಭಿಣಿಯರ ಕನಸಲ್ಲಿ ಕಪ್ಪೆ ಹಾಗೂ ಹಾವು ಕಂಡು ಬಂದರೆ ಯಾವೆಲ್ಲಾ ಅರ್ಥವನ್ನು ನೀಡುತ್ತದೆ ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕು ಎಂದಾದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ....
ಕಪ್ಪೆಯನ್ನು ದಾಟಿರುವುದು
ಗರ್ಭಿಣಿಯ ಕನಸಲ್ಲಿ ಆಕೆ ನಡೆದು ಸಾಗುತ್ತಿರುವಾಗ ಕಪ್ಪೆಯನ್ನು ದಾಟಿ ಮುಂದೆ ಹೋಗುತ್ತಿದ್ದಾಳೆ ಎಂದು ಕಂಡರೆ ಅದು ಸಾಮಾನ್ಯವಾಗಿ ಆತಂಕಕ್ಕೆ ಸಂಬಂಧಿಸಿದ ಕನಸುಗಳಾಗಿರುತ್ತವೆ. ಕಪ್ಪೆಗಳು ಕನಸಿನಲ್ಲಿ ಆಕಾಶದಿಂದ ಕೆಳಗೆ ಇಳಿಯುತ್ತಿವೆ. ಅವುಗಳನ್ನು ಆಕೆ ದಾಟಿ ಮುಂದೆ ಹೋಗುತ್ತಿದ್ದಾಳೆ ಎಂದು ಕನಸು ಕಂಡರೆ, ತನ್ನದೇ ರೀತಿಯಲ್ಲಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾಳೆ ಎಂದು ಅರ್ಥವಾಗುತ್ತದೆ.
ಕಪ್ಪೆಯನ್ನು ಹಿಡಿದಿರುವುದು
ಗರ್ಭಿಣಿಯಾಗಿದ್ದಾಗ ಕಪ್ಪೆಯನ್ನು ನೀವು ಕೈಯಲ್ಲಿ ಹಿಡಿದಿರುವ ಹಾಗೆ ಕನಸು ಕಂಡರೆ, ಪೋಷಕರಾಗುವ ಜವಾಬ್ದಾರಿಯನ್ನು ಪೂರೈಸಲು ನೀವು ಉತ್ಸುಕರಾಗಿದ್ದಾರೆ ಎಂದು ಅರ್ಥವಾಗುತ್ತದೆ. ಗರ್ಭಿಣಿಯಾಗುವುದಕ್ಕೆ ಮುಂಚೆ ಈ ಕನಸನ್ನು ಕಂಡರೆ ಇದೇ ಅರ್ಥ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ.
ಬಾಯಿಯ ಮೇಲೆ ಕಪ್ಪೆ ಇದ್ದರೆ!
ಗರ್ಭಿಣಿಯ ಕನಸಲ್ಲಿ, ಆಕೆಯ ಬಾಯಿಯ ಮೇಲೆ ಕಪ್ಪೆ ಇರುವುದನ್ನು ಕಂಡರೆ ಅದೊಂದು ವಿಲಕ್ಷಣ ಹಾಗೂ ಅಪರೂಪದ ಕನಸು ಎಂದು ಹೇಳಲಾಗುತ್ತದೆ. ಈ ಕನಸನ್ನು ಕಂಡರೆ ಆಕೆ ಗರ್ಭಧಾರಣೆಯ ಬಗ್ಗೆ ಭಯವನ್ನು ಹೊಂದಿದ್ದಾಳೆ ಹಾಗೂ ಧ್ವನಿಯ ಅನಾರೋಗ್ಯವನ್ನು ಅನುಭವಿಸುತ್ತಿದ್ದಾಳೆ ಎನ್ನುವ ಅರ್ಥವನ್ನು ನೀಡುವುದು.
ಕಪ್ಪೆ ನೀರಿನಲ್ಲಿ ಇದ್ದರೆ
ನೀರಿನಲ್ಲಿ ಕಪ್ಪೆ ಇರುವಂತೆ ಕನಸು ಕಂಡರೆ ಅದು ಅತ್ಯಂತ ಫಲವತ್ತತೆಗೆ ಸಂಬಂಧಿಸಿದ ವಿಚಾರವನ್ನು ಸೂಚಿಸುತ್ತದೆ. ನೀರಿನಲ್ಲಿ ಕಪ್ಪೆ ಇರುವುದನ್ನು ಕಂಡರೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವು ಆರೋಗ್ಯವಾಗಿರುವುದು ಎನ್ನುವುದನ್ನು ಸೂಚಿಸುತ್ತದೆ.
ಕಪ್ಪೆ ಹಾರುತ್ತಿರುವುದು
ಕನಸಿನಲ್ಲಿ ಕಪ್ಪೆ ಹಾರುತ್ತಿರುವ ಹಾಗೆ ಕಂಡರೆ, ತನ್ನ ಮಗು ವಿಭಿನ್ನ ಆಯಾಮಗಳಲ್ಲಿ ಸಂತೋಷವನ್ನು ಅನುಭವಿಸುತ್ತದೆ ಎಂಬ ಆಸೆಯನ್ನು ತಾಯಿ ಹೊಂದಿರುತ್ತಾಳೆ ಎನ್ನುವುದನ್ನು ಸೂಚಿಸುತ್ತದೆ. ತಮ್ಮ ಮಕ್ಕಳ ಭವಿಷ್ಯ ಯಶಸ್ಸಿನಿಂದ ಕೂಡಿರುತ್ತದೆ ಎಂದು ಸಂತೋಷ ಪಡುತ್ತಿರುತ್ತಾರೆ ಎಂದು ಹೇಳಲಾಗುತ್ತದೆ.
ಕಪ್ಪೆ ಜಿಗಿತ
ಕನಸಿನಲ್ಲಿ ಕಪ್ಪೆ ಜಿಗಿಯುತ್ತಿದ್ದಂತೆ ಕಂಡರೆ ಅದು ಭವಿಷ್ಯದ ಅವಕಾಶವನ್ನು ಸೂಚಿಸುತ್ತದೆ. ಪೋಷಕರು ಸವಾಲಿನ ಪಾತ್ರದೊಂದಿಗೆ ಮುಂದೆ ಎದುರಾಗುವ ಬದಲಾವಣೆಗೆ ಮನಸ್ಸನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.
ಅದೇ ರೀತಿ ಗರ್ಭಿಣಿಯರ ಕನಸಿನಲ್ಲಿ ಹಾವಿನ ಕನಸ್ಸು ಬಿದ್ದರೆ
ಇನ್ನು ಕೆಲವೊಮ್ಮೆ ಗರ್ಭಿಣಿಯರಿಗೆ ಕನಸಿನಲ್ಲಿ ಹಾವು ಬರುವುದಕ್ಕೆ ವಿಶೇಷವಾದ ಅರ್ಥವಿದೆ. ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಿಗೆ. ಗರ್ಭಿಣಿಯರಿಗೆ ಹಾವಿನ ಕನಸು ಬಿದ್ದರೆ ಅದು ಮೇಲಿನಿಂದ ಬಂದಿರುವ ಸಂದೇಶವೆಂದು ತಿಳಿಯಬೇಕು. ಗರ್ಭಧಾರಣೆಯ ವೇಳೆ ನಿಮಗೆ ಧನಾತ್ಮಕ ಅಥವಾ ಋಣಾತ್ಮಕವಾಗಿರುವುದು ಏನಾದರೂ ಆಗಬಹುದು.
ಅದೇ ರೀತಿ ಗರ್ಭಿಣಿಯರ ಕನಸಿನಲ್ಲಿ ಹಾವಿನ ಕನಸ್ಸು ಬಿದ್ದರೆ
ಗರ್ಭಿಣಿ ಮಹಿಳೆಯರಿಗೆ ತಮ್ಮ ಕನಸಿನಲ್ಲಿ ಹಸಿರು ಹಾವು ಕಂಡುಬಂದರೆ ಗರ್ಭದಲ್ಲಿರುವ ಭ್ರೂಣವು ಆರೋಗ್ಯವಾಗಿ ಬೆಳವಣಿಗೆಯಾಗುತ್ತಿದೆ ಎಂದು ತಿಳಿದುಕೊಳ್ಳಬಹುದು. ನೀವು ಇದರಿಂದ ತುಂಬಾ ಸಂತೋಷವಾಗಿರಬಹುದು. ಒಂದು ವೇಳೆ ಗರ್ಭಿಣಿಯರಿಗೆ ಕನಸಿನಲ್ಲಿ ಕೆಂಪು ಹಾವು ಕಂಡುಬಂದರೆ ಮುಂಬರುವ ದಿನಗಳಲ್ಲಿ ಸ್ನೇಹಿತರು ಅಥವಾ ಸಂಬಂಧಿಗಳು ಮದುವೆಯಾಗಲಿದ್ದಾರೆ ಎಂದು ಅರ್ಥ ಬರುವುದು. ಇದನ್ನು ಸ್ವಲ್ಪ ವಿಸ್ತಾರವಾಗಿ ನೋಡಿದರೆ ಇದು ಗರ್ಭಿಣಿ ಮಹಿಳೆಯರಿಗೆ ತುಂಬಾ ಅದೃಷ್ಟವೆಂದು ನಂಬಲಾಗಿದೆ.
ಅದೇ ರೀತಿ ಗರ್ಭಿಣಿಯರ ಕನಸಿನಲ್ಲಿ ಹಾವಿನ ಕನಸ್ಸು ಬಿದ್ದರೆ
ಗರ್ಭಿಣಿ ಮಹಿಳೆಗೆ ಕಪ್ಪು ಹಾವು ಅಥವಾ ದೊಡ್ಡ ಹಾವು ಕನಸಿನಲ್ಲಿ ಬಂದರೆ ಆಗ ಆಕೆಗೆ ಗಂಡು ಮಗು ಆಗಲಿರುವ ಸೂಚನೆಯಿದು. ಹಾವು ಬಾವಿಯೊಳಗೆ ಇರುವುದು ಕನಸಿನಲ್ಲಿ ಕಂಡುಬಂದರೆ ಆಗ ಮಗು ದೇವರ ಸಂಪೂರ್ಣ ಆಶೀರ್ವಾದ ಪಡೆದಿದೆ ಎಂದರ್ಥ. ಗರ್ಭಿಣಿ ಮಹಿಳೆಗೆ ತನ್ನ ಕೈಯಲ್ಲಿ ಬಿಳಿ ಹಾವು ಇರುವ ಬಗ್ಗೆ ಕನಸು ಬಿದ್ದರೆ ಆಗ ಆಕೆಗೆ ಹೆಣ್ಣು ಮಗು ಆಗುತ್ತದೆ ಎಂದು ಅರ್ಥ ಕಲ್ಪಿಸಬಹುದು. ಇದು ವಿಚಿತ್ರವಾಗಿದೆ. ಆದರೆ ಜನರು ಇಂತಹ ಸಂಕೇತಗಳನ್ನು ನಂಬುವರು.
ಅದೇ ರೀತಿ ಗರ್ಭಿಣಿಯರ ಕನಸಿನಲ್ಲಿ ಹಾವಿನ ಕನಸ್ಸು ಬಿದ್ದರೆ
ಕನಸಿನಲ್ಲಿ ಮಹಿಳೆಗೆ ಹಾವು ಕಡಿಯುವುದು ಕಂಡುಬಂದರೆ ಇದು ತುಂಬಾ ಫಲಪ್ರದ ಮತ್ತು ಸಂತೋಷವೆಂದು ನಂಬಲಾಗಿದೆ. ಹಾವು ಕಡಿಯವುದು ತುಂಬಾ ಶುಭವೆಂದು ನಂಬುವಂತಹ ಅಪರೂಪದಲ್ಲಿ ಅಪರೂಪದ ಘಟನೆ ಇದು. ಹಾವುಗಳು ಕನಸಿನಲ್ಲಿ ಬಂದರೆ ಅದು ಲೈಂಗಿಕ ಶಕ್ತಿಯ ಪ್ರತೀಕವೆಂದು ನಂಬಲಾಗುತ್ತದೆ. ಕನಸಿನಲ್ಲಿ ನಿಮ್ಮ ಜತೆ ಹಾವು ಹೊರಲಾಡಿದರೆ ಅಥವಾ ಉದ್ರೇಕಿಸುವಂತಹ ಭಂಗಿಯಲ್ಲಿ ಕಂಡುಬಂದರೆ ಇದಕ್ಕೆ ಬೇರೆ ಹಲವಾರು ರೀತಿಯ ಕಾರಣಗಳು ಇವೆ.