ಯಾವ್ಯಾವ ರಾಶಿಯವರು ಹೇಗೆಲ್ಲಾ ಬೇಸರಗೊಳ್ಳುತ್ತಾರೆ ನೋಡಿ

Posted By: Hemanth
Subscribe to Boldsky

ಸುತ್ತಲು ಸಂಭ್ರಮವಿದ್ದರೂ ನಿಮಗೆ ಅದರಲ್ಲಿ ಭಾಗಿಯಾಗಲು ಮನಸ್ಸೇ ಬರುತ್ತಿಲ್ಲವೇ? ಭಾಗಿಯಾದರೂ ನಿಮ್ಮ ಮನಸ್ಸಿಗೆ ಅದನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ. ಯಾವಾಗಲೂ ನಿಮಗೆ ನಿರಾಶೆಯೇ ಕಾಡುತ್ತಲಿರುವುದು ಮತ್ತು ಸಂತೋಷವಾಗಿರಲು ಸಾಧ್ಯವೇ ಆಗುತ್ತಿಲ್ಲವೆಂದಾದರೆ ಇದಕ್ಕೆ ಪ್ರಮುಖ ಕಾರಣ ನಿಮ್ಮ ರಾಶಿ ಚಕ್ರ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತೀ ಸಲ ಒಂದೊಂದು ರಾಶಿ ಚಕ್ರವು ಬೇಸರಗೊಳ್ಳುವುದು ಮತ್ತು ನಿರಾಶೆ ಅನುಭವಿಸುವುದು. ಅವರವರ ರಾಶಿಚಕ್ರದ ಮೂಲಕ ದುರ್ಬಲತೆ ಹಾಗೂ ಶಕ್ತಿಯನ್ನು ಹೇಳಬಹುದಾಗಿದೆ. ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವಾಗ ಬೇಸರಗೊಳ್ಳಲಿದ್ದೀರಿ ಎನ್ನುವುದನ್ನು ನೀವು ಈ ಲೇಖನ ಮೂಲಕ ತಿಳಿಯಿರಿ....

ವೃಷಭ(ಎಪ್ರಿಲ್ 20-ಮೇ20)

ವೃಷಭ(ಎಪ್ರಿಲ್ 20-ಮೇ20)

'ನಾನು ನಗುವಾಗ ಯಾರು ಕೂಡ ಅದನ್ನು ಗಮನಿಸುವುದಿಲ್ಲ'

ಇವರು ವೈಯಕ್ತಿಕವಾಗಿ ತಮ್ಮ ಶ್ರೇಷ್ಠ ಕೆಲಸ ಮಾಡಿದರೂ ಅದನ್ನು ಯಶಸ್ಸೆಂದು ಪರಿಗಣಿಸದೆ ಇರುವಾಗ ಬೇಸರಗೊಳ್ಳುವರು. ಇವರ ಮೊಂಡುತನವು ಇವರನ್ನು ಯಾವಾಗಲೂ ವಿಫಲವಾಗದಂತೆ ಮಾಡುವುದು.

ಮಿಥುನ (ಮೇ21-ಜೂನ್ 20)

ಮಿಥುನ (ಮೇ21-ಜೂನ್ 20)

`ನಾನು ವೇಗವಾಗಿ ಮಾತನಾಡಿದಾಗ ಬೇಸರವು ಮಾಯವಾಗುವುದು'

ಈ ರಾಶಿಯವರು ಸುತ್ತಲಿನ ಬದಲಾವಣೆಗಳನ್ನು ನಿಭಾಯಿಸಬಲ್ಲರು. ಇದು ಅತಿಯಾದಾಗ ಅವರು ಕೂಡ ಎಲ್ಲವೂ ತಮ್ಮ ಕೈಮೀರಿ ಹೋಗುತ್ತಿದೆ ಎಂದು ಭಾವಿಸುವರು. ಆದರೆ ಇದರಿಂದಾಗಿ ಅವರು ತುಂಬಾ ನಿರಾಶೆ ಅಥವಾ ಬೇಸರಗೊಳ್ಳುವುದಿಲ್ಲ.

ಕರ್ಕಾಟಕ(ಜೂನ್ 21-ಜುಲೈ22)

ಕರ್ಕಾಟಕ(ಜೂನ್ 21-ಜುಲೈ22)

`ನನ್ನ ಆಪ್ತರು ತೊಂದರೆಗೊಳಗಾಗುವುದನ್ನು ನೋಡಲಾರೆ'

ಇವರು ನಿಧಾನವಾಗಿ ಶಮನವಾಗುವವರು ಎನ್ನುವ ಮಾತಿದೆ. ಆಪ್ತರನ್ನು ಕಳೆದುಕೊಳ್ಳುವ ಸ್ಥಳ ಅಥವಾ ಪರಿಸ್ಥಿತಿಯಲ್ಲಿ ಇವರನ್ನು ಬಿಟ್ಟುಬಿಟ್ಟರೆ ಆಗ ಇವರು ಖಂಡಿತವಾಗಿಯೂ ಖಿನ್ನತೆಗೆ ಜಾರುವರು.

ಸಿಂಹ(ಜುಲೈ23-ಆಗಸ್ಟ್ 23)

ಸಿಂಹ(ಜುಲೈ23-ಆಗಸ್ಟ್ 23)

`ದಯವಿಟ್ಟು. ನನಗೆ ಸಂಬಂಧಿಸಿದನ್ನು ಮುಟ್ಟಬೇಡಿ'

ಈ ರಾಶಿಚಕ್ರದವರು ಅಧಿಕಾರವಿಲ್ಲದೆ ಇರುವಾಗ ಅಥವಾ ಯಾವುದೇ ಒಂದು ಹುದ್ದೆಯನ್ನು ಇವರು ಕಳಕೊಂಡಾಗ ತುಂಬಾ ಬೇಸರಗೊಳ್ಳುವರು. ತಮ್ಮ ಸ್ಥಾನಮಾನವನ್ನು ಕಿತ್ತುಕೊಳ್ಳುವುದನ್ನು ದ್ವೇಷಿಸುವರು. ಇದರ ಪರಿಣಾಮ ಅವರು ಬೇಸರಗೊಳ್ಳುವರು.

ಕನ್ಯಾ(ಆಗಸ್ಟ್ 24-ಸಪ್ಟೆಂಬರ್ 23)

ಕನ್ಯಾ(ಆಗಸ್ಟ್ 24-ಸಪ್ಟೆಂಬರ್ 23)

'ದಯವಿಟ್ಟು ಈ ಗೊಂದಲ ನಿವಾರಣೆ ಮಾಡಿ, ನನಗೆ ಬೇಸರವಾಗುತ್ತಿದೆ'

ಈ ರಾಶಿಯವರು ಇಕ್ಕಟ್ಟುಗಳನ್ನು ನಿಯಂತ್ರಿಸುವವರು ಎನ್ನಲಾಗುತ್ತದೆ. ಇನ್ನೊಂದು ಕಡೆಯಲ್ಲಿ ಈ ರಾಶಿಯವರು ತಮ್ಮ ಸುತ್ತಲು ತುಂಬಾ ಸ್ವಚ್ಛ ಹಾಗೂ ವ್ಯವಸ್ಥಿತವಾಗಿರಬೇಕೆಂದು ಬಯಸುವರು. ಯಾವುದೇ ಗೊಂದಲದಲ್ಲಿ ಸಿಲುಕಿದರೆ ಆಗ ಇವರು ತುಂಬಾ ಬೇಸರ ಹಾಗೂ ಕೋಪಗೊಳ್ಳುವರು.

ತುಲಾ: (ಸಪ್ಟೆಂಬರ್ 24-ಅಕ್ಟೋಬರ್ 23)

ತುಲಾ: (ಸಪ್ಟೆಂಬರ್ 24-ಅಕ್ಟೋಬರ್ 23)

`ಇದು ನನ್ನ ಪಾರ್ಟಿ, ನನಗೆ ಬೇಕೆಂದರೆ ಅಳುತ್ತೇನೆ ಮತ್ತು ಮರುದಿನ ಸಂತೋಷವಾಗಿರುವೆ.'

ತುಲಾ ರಾಶಿಯವರ ಸ್ಫೂರ್ತಿ ಕೆಡಿಸುವಂತಹ ವಿಷಯಗಳು ತುಂಬಾ ಕಡಿಮೆ. ಅದಾಗ್ಯೂ, ಹಾಗೇನಾದರೂ ಆದರೂ ಅದು ಕೇವಲ ಒಂದು ಕ್ಷಣ ಮಾತ್ರ. ಈ ರಾಶಿಯವರಿಗೆ ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತಿಳಿದಿದೆ.

ವೃಶ್ಚಿಕ(ಅ.24-ನ.22)

ವೃಶ್ಚಿಕ(ಅ.24-ನ.22)

`ನಾನು ಅಂಚಿನಲ್ಲಿದ್ದೇನೆ, ನನ್ನನ್ನು ಮುಂದೆ ದೂಡಬೇಡಿ'

ಈ ರಾಶಿಯವರು ಜೀವನದ ಕತ್ತಲ ಭಾವನಾ ಲೋಕದಲ್ಲಿ ವಾಸಿಸಲು ತಿಳಿದಿರುವರು. ಇವರು ತುಂಬಾ ಕ್ಷುಲ್ಲಕವಾಗಿರುವ ವಿಚಾರದಲ್ಲೂ ವಾಸಿಸುವರು. ಇದನ್ನು ಹೊರತುಪಡಿಸಿ, ಇವರು ಬೇಗನೆ ಬೇಸರಗೊಳ್ಳುವರು ಮತ್ತು ಇದರಿಂದ ಅವರ ಜೀವನದ ಮೇಲೆ ಸಂಪೂರ್ಣ ಪರಿಣಾಮ ಬೀರುವುದು.

ಧನು(ನ.23-ಡಿ.22)

ಧನು(ನ.23-ಡಿ.22)

`ಅದು ಅಷ್ಟೊಂದು ತಮಾಷೆಯಾ ವಿಷಯವೇ?'

ಧನು ರಾಶಿಯವರು ತಮ್ಮ ಆಲೋಚನೆಗಳ ಬಗ್ಗೆ ಸಂದೇಹ ಹೊಂದಿರುವವರು ಎನ್ನಲಾಗುತ್ತದೆ. ಇನ್ನೊಂದು ಕಡೆಯಲ್ಲಿ ಇವರು ಭೂಮಿ ಮೇಲಿನ ಎಲ್ಲಾ ವಿಷಯಗಳ ಬಗ್ಗೆಯೂ ತಮಾಷೆ ಮಾಡಿ ಆನಂದಿಸುವರು. ತುಂಬಾ ಹಾಸ್ಯದ ಪರಿಸ್ಥಿತಿ ಅಥವಾ ವ್ಯಕ್ತಿಯು ಇವರ ಮನಸ್ಥಿತಿಯನ್ನು ಸರಿಪಡಿಸಲು ಆಗದೇ ಇರುವಾಗ ತುಂಬಾ ಬೇಸರಗೊಳ್ಳುವರು.

ಮಕರ: (ಡಿ.23-ಜ.20)

ಮಕರ: (ಡಿ.23-ಜ.20)

`ನನ್ನ ಐದು ವರ್ಷದ ಯೋಜನೆಗೆ ಏನಾಗಿದೆ?'

ತುಂಬಾ ಕಠಿಣ ಪರಿಶ್ರಮಿಯಾಗಿರುವ ಈ ರಾಶಿಯವರು, ತಮ್ಮ ದೀರ್ಘ ಕಾಲದ ಯೋಜನೆಗಳು ತಾವು ಯೋಜಿಸಿದಂತೆ ನಡೆಯದೇ ಇದ್ದಾಗ ಬೇಸರಗೊಳ್ಳುವರು. ಇವರ ಪ್ರೀತಿಪಾತ್ರರು ಬೆಂಬಲ ನೀಡದೆ ಇರುವಾಗ ಇವರು ತುಂಬಾ ಬೇಸರಗೊಳ್ಳುವರು ಅಥವಾ ಖಿನ್ನತೆಗೆ ಒಳಗಾಗುವರು.

ಕುಂಭ(ಜ.21-ಫೆ.18)

ಕುಂಭ(ಜ.21-ಫೆ.18)

`ಭೂಮಿಯನ್ನು ನಿಲ್ಲಿಸಿ, ನನಗೆ ಹೊರನಡೆಯಲಿಕ್ಕಿದೆ'

ಈ ರಾಶಿಯವರು ಯಾವಾಗಲೂ ಅಲೆಮಾರಿಗಳಾಗಿರಲು ಬಯಸುವರು. ಇವರು ಬಂಧನದಲ್ಲಿ ಸಿಲುಕಲು ಬಯಸುವುದಿಲ್ಲ ಮತ್ತು ಒತ್ತಾಯಪೂರ್ವಕವಾಗಿ ಹೀಗೆ ಮಾಡಿದರೆ ಆಗ ಇವರು ಭಾವನಾತ್ಮಕವಾಗಿ ಸಿಡಿಯುವ ಸಾಧ್ಯತೆಗಳಿವೆ ಮತ್ತು ಇದರಿಂದಾಗಿ ಅವರು ಸ್ಪೂರ್ತಿ ಕುಂದುವುದು.

ಮೀನ(ಫೆ.19-ಮಾ.20)

ಮೀನ(ಫೆ.19-ಮಾ.20)

`ನಾನು ಪದೇ ಪದೇ ಅದೇ ತಪ್ಪುಗಳನ್ನು ಯಾಕೆ ಮಾಡುತ್ತಾ ಇರುತ್ತೇನೆ?'

ಈ ರಾಶಿಯವರು ತಮ್ಮದೇ ಆದ ಸಂಬಂಧವನ್ನು ನಾಶ ಮಾಡಬಲ್ಲರು ಮತ್ತು ಬಳಿಕ ಇದಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳುವರು. ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಾಗದೆ ಇರುವಾಗ ಇವರು ತುಂಬಾ ನೊಂದುಕೊಳ್ಳುವರು.

English summary

Different Ways In Which Zodiac Signs Feel Sad

Do you feel that there is something that is bringing down your spirit? A reason which is not letting you stay happy can be something that is related to your zodiac sign! According to astrology, there are times when each zodiac sign will get sad or feel low. This something that defines each individual's weaknesses based on his/her zodiac. Find out more about the things that can bring down your spirits based on your zodiac sign.