For Quick Alerts
ALLOW NOTIFICATIONS  
For Daily Alerts

ಅಚ್ಚರಿ ಲೋಕ: ಮತ್ಸ್ಯ ಮಗುವಿಗೆ ಜನ್ಮ ನೀಡಿದ ಮಹಿಳೆ!

By Deepu
|

ಮತ್ಸ್ಯಕನ್ಯೆ ಸಿಕ್ಕಿದ್ದಾಳೆ ಎನ್ನುವ ಫೋಟೋಗಳು, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಇದನ್ನು ನಂಬುವುದು ತುಂಬಾ ಕಷ್ಟದ ಕೆಲಸ. ಆದರೆ ಕೆಲವೊಮ್ಮೆ ಇಂತಹ ಘಟನೆಗಳನ್ನು ನಂಬಲೇಬೇಕಾಗುವುದು. ಯಾಕೆಂದರೆ ಮಹಿಳೆಯೊಬ್ಬಳು ಮತ್ಸ್ಯಶಿಶುವಿಗೆ ಜನ್ಮ ನೀಡಿದ ಸುದ್ದಿಯಿದು. ಇದನ್ನು ನೀವು ಕೂಡ ಕೇಳಿರಬಹುದು.

ಈ ಸುದ್ದಿ ನಿಜ. ಮಹಿಳೆಯು ಗರ್ಭಿಣಿಯಾಗಿದ್ದಾಗ ಯಾವುದೇ ರೀತಿಯ ಔಷಧಿ ತೆಗೆದುಕೊಳ್ಳದೆ, ವೈದ್ಯರ ಸಲಹೆ ಪಡೆಯದೇ ಇರುವುದೇ ಇದಕ್ಕೆ ಕಾರಣವೆಂದು ತಿಳಿದುಬಂದಿದೆ. ಭಾರತದಲ್ಲಿ ಇಂತಹ ಮತ್ಸ್ಯಶಿಶು ಹುಟ್ಟಿದರೆ ಏನಾಗಬಹುದು ಎಂದು ನೀವೊಮ್ಮೆ ಯೋಚಿಸಿ. ಈ ಚಿತ್ರವು ಎಲ್ಲರನ್ನು ಅಚ್ಚರಿಗೀಡು ಮಾಡುತ್ತಲೇ ಇದೆ. ಇಂತಹ ಅಪರೂಪ ಹಾಗೂ ಅಚ್ಚರಿಯ ಘಟನೆ ಬಗ್ಗೆ ನೀವು ಓದಲು ತಯಾರಾಗಿರಿ..

ಮಗು ಭಾರತದಲ್ಲೇ ಜನಿಸಿದೆ....

ಮಗು ಭಾರತದಲ್ಲೇ ಜನಿಸಿದೆ....

ಮತ್ಸ್ಯಶಿಶುವು ಕೊಲ್ಕತ್ತಾದಲ್ಲಿ ಜನಿಸಿದೆ. ಒಂದಕ್ಕೊಂದು ಅಂಟಿಕೊಂಡಿರುವ ಕಾಲುಗಳು ಇರುವ ಮಗುವಿಗೆ ಮಹಿಳೆಯು ಜನ್ಮ ನೀಡಿದಾಗ ವೈದ್ಯರು ಕೂಡ ಒಂದು ಕ್ಷಣ ನಿಬ್ಬೆರಗಾದರು. ಇದು ತುಂಬಾ ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಹೇಳಲಾಗುತ್ತದೆ.

ಈ ವಿಚಿತ್ರಕ್ಕೆ ಏನು ಹೇಳುವರು....

ಈ ವಿಚಿತ್ರಕ್ಕೆ ಏನು ಹೇಳುವರು....

ಈ ವಿಚಿತ್ರಕ್ಕೆ ವೈದ್ಯಕೀಯ ಲೋಕದಲ್ಲಿ `ಮೆರ್ಮೆಡ್ ಸಿಂಡ್ರಾಮ್' ಅಥವಾ `ಸಿರೆನೊಮೆಲಿಯಾ' ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ನಡೆದಿರುವ ಎರಡನೇ ಘಟನೆ ಮತ್ತು ವಿಶ್ವದಲ್ಲೇ ಐದನೇಯದ್ದು ಎಂದು ವರದಿಗಳು ಹೇಳಿವೆ.

 ಮಗುವಿನ ಲಿಂಗವು ಒಂದು ರಹಸ್ಯವಾಗಿಯೇ ಉಳಿಯಿತು!

ಮಗುವಿನ ಲಿಂಗವು ಒಂದು ರಹಸ್ಯವಾಗಿಯೇ ಉಳಿಯಿತು!

ಮಗುವಿನ ಲಿಂಗ ಪತ್ತೆ ಮಾಡಲು ಸಾಧ್ಯವಾಗಲಿಲ್ಲವೆಂದು ತಿಳಿದುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಮಗು ಹುಟ್ಟುವುದು ತುಂಬಾ ಅಪರೂಪದಲ್ಲಿ ಅಪರೂಪ. ಬೆಳವಣಿಗೆಯಾಗದ ಮೂತ್ರಪಿಂಡದ ಕುಳಿಗಳು ಮತ್ತು ಬೆರೆತುಕೊಂಡಿರುವ ಕಾಲುಗಳಿಂದಾಗಿ ಮಗುವಿನ ಲಿಂಗ ಪತ್ತೆ ಸಾಧ್ಯವಾಗಿಲ್ಲ. ಮಗು ಜನಿಸಿದ ನಾಲ್ಕು ಗಂಟೆಗಳಲ್ಲಿ ಮೃತಪಟ್ಟಿದೆ ಎಂದು ವರದಿಗಳು ತಿಳಿಸಿವೆ.

ವೈದ್ಯರು ಹೇಳುವ ಪ್ರಕಾರ...

ವೈದ್ಯರು ಹೇಳುವ ಪ್ರಕಾರ...

ಮಗುವಿನ ದೇಹದ ಮೇಲಿನ ಭಾಗವು ಸಾಮಾನ್ಯವಾಗಿ ಬೆಳವಣಿಗೆ ಆಗಿತ್ತು. ಆದರೆ ದೇಹದ ಕೆಳಗಿನ ಭಾಗ ಅಂದರೆ ಸೊಂಟದಿಂದ ಕೆಳಗಿನ ಭಾಗದಲ್ಲಿ ಕಾಲುಗಳು ಬೆರೆತುಕೊಂಡಿದ್ದವು. ದೇಹದ ಕೆಳಗಿನ ಭಾಗವು ಸಂಪೂರ್ಣವಾಗಿ ಬೆಳವಣಿಗೆಯಾಗಿರಲಿಲ್ಲವೆಂದು ವೈದ್ಯರು ಹೇಳಿದ್ದಾರೆ.

ಈ ಪರಿಸ್ಥಿತಿ ಬರಲು ಕಾರಣವೇನು?

ಈ ಪರಿಸ್ಥಿತಿ ಬರಲು ಕಾರಣವೇನು?

ಗರ್ಭದಲ್ಲಿರುವ ಮಗುವಿಗೆ ತಾಯಿಯಿಂದ ಸರಿಯಾದ ಪೋಷಕಾಂಶಗಳು ಸಿಗದೆ ಇರುವುದು ಮತ್ತು ರಕ್ತಸಂಚಾರ ಸರಿಯಾಗಿ ಆಗದೆ ಇದ್ದರೆ ಮಗುವಿನಲ್ಲಿ ಇಂತಹ ವಿಕಲತೆಗಳು ಕಂಡುಬರುವುದು. ಇಂತಹ ಮಗುವು ಬದುಕಿ ಉಳಿಯುವುದಿಲ್ಲ. ಹೆಚ್ಚಿನ ಸಮಯದಲ್ಲಿ ಗರ್ಭಪಾತ ಮಾಡಿಸಲಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

English summary

Can You Believe A Woman Gave Birth To A 'Mermaid Baby'?

Have you heard about the case of a woman who ended up giving birth to a mermaid baby? Well it is true! This is the result of lack of medical consultation that the woman had never undergone throughout her pregnancy and it resulted in this... So, check out on what happened to the case of the mermaid baby who was born in India. The pictures of the baby will leave you baffled, as this is such a rare phenomenon. Read on to know more about this bizarre case.
Story first published: Thursday, March 8, 2018, 20:33 [IST]
X
Desktop Bottom Promotion